For Quick Alerts
ALLOW NOTIFICATIONS  
For Daily Alerts

'ವಿಟಮಿನ್ ಡಿ' ಮಹಿಳೆಯರಲ್ಲೇ ಹೆಚ್ಚು! ಏನಿದರ ಗುಟ್ಟು?

By Vani Naik
|

ಅಧ್ಯಯನದ ಪ್ರಕಾರ, ಯಾವ ಹೆಂಗಸರು ಜನನ ನಿಯಂತ್ರಣ ಗುಳಿಗೆಗಳನ್ನು ಅಥವಾ ಇನ್ಯಾವುದೇ ಈಸ್ಟ್ರೋಜನ್ ಒಳಗೊಂಡಿರುವ ಗರ್ಭನಿರೋಧಕಗಳ್ನು ಲೈಂಗಿಕ ಹಾಗು ಸಂತಾನೋತ್ಪತ್ತಿ ಬೆಳವಣಿಗೆಗೆ ಉಪಯೋಗಿಸುತ್ತಾರೋ, ಅವರಲ್ಲಿ ವಿಟಮಿನ್ "ಡಿ"ಯ ಪ್ರಮಾಣ ವೃದ್ಧಿಸುತ್ತದೆ.

ಸಂಶೋಧನೆಗಳ ಪ್ರಕಾರ, ಗರ್ಭನಿರೋಧಕ ಗುಳಿಗೆಯನ್ನು ತೆಗೆದುಕೊಳ್ಳುವ ಮಹಿಳೆಯರಿಗೂ ಹಾಗು ತೆಗೆದುಕೊಳ್ಳದೇ ಇರುವ ಮಹಿಳೆಯರಿಗೂ ಕಾಲೋಚಿತ ಬಿಸಿಲಿಗೆ ಒಡ್ಡಿದಾಗ, ಈಸ್ಟ್ರೋಜನ್ ತೆಗೆದುಕೊಳ್ಳುವವರಲ್ಲಿ 20 ಪ್ರತಿಶತ ಹೆಚ್ಚು 25-ಹೈಡ್ರಾಕ್ಸಿಲ್ ವಿಟಮಿನ್ ಡಿ ಪ್ರಮಾಣ ಕಂಡು ಬಂದಿತು.

Here Is The Secret Of Vitamin D For Women!

ಹೀಗೆಂದು ಯುಎಸ್ಎ, ನಾರ್ತ್ ಕ್ಯಾರೋಲಿನದ "ದ ನ್ಯಾಷನಲ್ ಇನ್ಸಟಿಟ್ಯೂಟ್ ಆಫ್ ಎನ್ವಿರೋನ್ಮೆಟಲ್ ಹೆಲ್ತ್ ಸಾಯಿನ್ಸ್" ನ ಪ್ರಮುಖ ಲೇಖಕ ಕ್ವೇಕರ್ ಇ. ಹಾರ್ಮನ್ ಹೇಳಿದ್ದಾರೆ.

ಹಾಗೆಯೇ, ಗರ್ಭನಿರೋಧಕ ಗುಳಿಗೆಗಳನ್ನು ತೆಗೆದುಕೊಳ್ಳದೇ ಹೋದಾಗ, ಅಂತಹವರ ವಿಟಮಿನ್ "ಡಿ" ಯ ಪ್ರಮಾಣ ಕುಸಿಯುತ್ತದೆ ಎಂದು ಹಾರ್ಮನ್ ಹೇಳಿದರು. ವಿಟಮಿನ್ ಡಿ ಕೊರತೆಯನ್ನು ಸೂಚಿಸುವ ಲಕ್ಷಣಗಳು

ಮಹಿಳೆಯರು, ಗರ್ಭ ಧರಿಸಲು ಇಚ್ಛಿಸಿ ಈಸ್ಟ್ರೋಜನ್ ಇರುವ ಗರ್ಭನಿರೋಧಕ ಗುಳಿಗೆಗಳ ಸೇವನೆಯನ್ನು ನಿಲ್ಲಿಸಿದರೆ, ಅವರಲ್ಲಿ ವಿಟವಿನ್ "ಡಿ" ಯ ಕೊರತೆ ಕಂಡುಬರುವ ಸಾಧ್ಯತೆ ಇರುತ್ತದೆ. ಹೀಗೆಂದು ಸಂಶೋಧನಕಾರರು ಕ್ಲಿನಿಕಲ್ ಎಂಡೋಕ್ರಿನಾಲೋಜಿ ಆಂಡ್ ಮೆಟಬಾಲಿಜಮ್ ಹೊರಡಿಸಿದ ಪತ್ರಿಕೆಯ ಪ್ರಕಟಣೆಯಲ್ಲಿ ಪ್ರಕಟಗೊಂಡಿತ್ತು.

ಯಾವ ಮಹಿಳೆಯರು ಗರ್ಭನಿರೋಧಕಗಳ ಬಳಕೆಯನ್ನು ನಿಲ್ಲಿಸಲಿಚ್ಛಿಸುತ್ತಾರೋ, ಅವರು ತಮ್ಮೊಳಗೆ ಸರಿಯಾದ ಪ್ರಮಾಣದಲ್ಲಿ ವಿಟಮಿನ್ "ಡಿ" ಯ ಪೂರೈಕೆ ಇದೆಯೋ ಎಂದು ಗರ್ಭಧಾರಣೆಗೆ ಮುಂಚೆ ಖಚಿತಪಡಿಸಿಕೊಳ್ಳುವುದು ಹೆಚ್ಚು ಸೂಕ್ತ ಎಂದು ಹಾರ್ಮನ್ ಅಭಿಪ್ರಾಯಪಟ್ಟರು. ದೇಹದಲ್ಲಿನ 10 ಪ್ರತಿಶತ ವಿಟಮಿನ್ "ಡಿ" ಪೂರೈಕೆ, ಸೇವಿಸೋ ಮೀನು, ಹಾಲು ಇತ್ಯಾದಿ ಆಹಾರದಿಂದ ಒದಗುತ್ತದೆ. ಆರೋಗ್ಯದ ಲವಲವಿಕೆಗೆ, ವಿಟಮಿನ್ ಡಿ ಅತ್ಯವಶ್ಯಕ

ಗರ್ಭಾವಸ್ಥೆಯಲ್ಲಿರುವ ಮಹಿಳೆಯರಲ್ಲಿ, ಬ್ರೂಣದ ಎಲಬುಗೂಡು ರಚನೆಯಾಗಲು ಹೆಚ್ಚು ಪ್ರಮಾಣದಲ್ಲಿ ವಿಟಮಿನ್ "ಡಿ" ಉತ್ಪತ್ತಿಯಾಗುತ್ತಿರುತ್ತದೆ. ಇದರಿಂದಾಗಿ, ಗರ್ಭಾವಸ್ಥೆಯಲ್ಲಿರುವ ಹೆಂಗಸರಲ್ಲಿ ವಿಟಮಿನ್ "ಡಿ" ಯ ಕೊರತೆ ಕಂಡುಬರುವ ಅಪಾಯವಿರುತ್ತದೆ ಎಂದು "ಎಂಡೋಕ್ರಿನ್ ಸೊಸೈಟಿಸ್ ಕ್ಲಿನಿಕಲ್ ಪ್ರಕ್ಟೀಸ್ ಗೈಡ್ಲೈನ್ ಆನ್ ವಿಟಮಿನ್ ಡಿ ಡಿಫೀಶಿಯೆನ್ಸಿ" ಅಭಿಪ್ರಾಯಪಟ್ಟಿದೆ.

ಈ ಅಧ್ಯಯನಕ್ಕೆ, ತಂಡವು ಸುಮಾರು 23 ರಿಂದ 34ರ ವಯಸ್ಸಿನ 1662, ಆಫ್ರಿಕನ್ ಮತ್ತು ಅಮೇರಿಕನ್ಮ ಹಿಳೆಯರ ಮಾಹಿತಿಯನ್ನು ಪರಿಶೀಲಿಸಿತು.

ಐಎಎನ್ಎಸ್ ಮಾಹಿತಿ

English summary

Here Is The Secret Of Vitamin D For Women!

Women who use birth-control pills or other contraceptives containing oestrogen, hormone important for sexual and reproductive development in females, are likely to improve their vitamin D levels, a study says.
X
Desktop Bottom Promotion