For Quick Alerts
ALLOW NOTIFICATIONS  
For Daily Alerts

ಮೈಗ್ರೇನ್ ಉಂಟುಮಾಡುವ ಆಹಾರಗಳಿಗೆ ಗುಡ್‌ ಬೈ ಹೇಳಿ

By Jaya subramanya
|

ಮಾನವನಿಗೆ ಉಂಟಾಗುತ್ತಿರುವ ಕಾಯಿಲೆಗಳು ಇಂದು ಲೆಕ್ಕವಿಲ್ಲದಷ್ಟಾಗಿದೆ. ಅಸಮತೋಲನ ಆಹಾರ, ಶಿಸ್ತಿಲ್ಲದ ಜೀವನ ಕ್ರಮ ಈ ರೋಗಗಳು ಮೂಲವಾಗಿದೆ. ಬಿಡುವಿಲ್ಲದ ಜೀವನ ಕ್ರಮ ಮತ್ತು ಅನಾರೋಗ್ಯಕರ ಆಹಾರ ಸೇವನೆ ನಮ್ಮಲ್ಲಿ ರೋಗನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತಿದ್ದು ನಮ್ಮ ದೇಹಲ್ಲಿರಬೇಕಾದ ಮೂಲ ಇಂಧನವನ್ನೇ ಇದು ಕರಗಿಸುತ್ತಿದೆ. ಸಾಮಾನ್ಯ ಕಾಯಿಲೆಗಳೇ ಇಂದು ಜೀವಹಿಂಡುವ ರೋಗಗಳಾಗಿ ನರಕ ಯಾತನೆಯನ್ನು ನೀಡುತ್ತಿವೆ. ಅಂತಹುದೇ ಪಟ್ಟಿಗೆ ಸೇರಿಸಬಹುದಾದ ಕಾಯಿಲೆ ಎಂದೆನಿಸಿದೆ ಮೈಗ್ರೇನ್. ಬೆಳ್ಳಂಬೆಳಗ್ಗೆ ಕಾಡುವ ಮೈಗ್ರೇನ್ ತಲೆನೋವಿಗೆ ಪರಿಹಾರವೇನು?

ಇತ್ತೀಚಿನ ಅಧ್ಯಯನದ ಪ್ರಕಾರ 5 ಮಹಿಳೆಯರಲ್ಲಿ ಒಬ್ಬರು ಮತ್ತು 10 ಪುರುಷರಲ್ಲಿ ಒಬ್ಬರು ಮೈಗ್ರೇನ್‌ ದಾಳಿಗೆ ತುತ್ತಾಗುತ್ತಿದ್ದಾರೆ ಎಂದಾಗಿದೆ. ನಾವು ಇದನ್ನೊಂದು ಸಾಮಾನ್ಯ ತಲೆನೋವು ಎಂದು ಅವಗಣನೆ ಮಾಡುವುದೇ ಇದು ತೀವ್ರವಾಗಲು ಕಾರಣವಾಗಿದೆ. ವಿಶ್ವದ ವೈದ್ಯಕೀಯ ಅಸೌಖ್ಯ ಪಟ್ಟಿಯಲ್ಲಿ ಮೈಗ್ರೇನ್ 20 ನೇ ಸ್ಥಾನವನ್ನು ಅಲಂಕರಿಸಿದೆ ಎಂದರೆ ಇದರ ಶಕ್ತಿ ಹೇಗಿದೆ ಎಂಬುದನ್ನು ನೀವೇ ಊಹಿಸಿ. ಅದೂ ಅಲ್ಲದೆ ಈ ಕಾಯಿಲೆ ಕಾಡುವ ವಯಸ್ಸು 25-55 ಆಗಿದೆ. ತೀವ್ರ ಮಂದ ತಲೆನೋವು ಮತ್ತು ಬೆಳಕಿನ ಸಂವೇದನೆ ಇದರ ಲಕ್ಷಣವಾಗಿದೆ. ತಲೆಗೆ ಸುತ್ತಿಗೆಯಿಂದ ಬಡಿದಂತಹ ಅನುಭವವಾಗುತ್ತಿದೆ ಎಂಬುದು ಇದನ್ನು ಅನುಭವಿಸುತ್ತಿರುವವರ ವೇದನೆಯ ಮಾತು. ಮೈಗ್ರೇನ್ ತಲೆನೋವು ನಿಮ್ಮನ್ನು ಬೆನ್ನುಬಿಡದೇ ಕಾಡುತ್ತಿದೆಯೇ?

ಮೈಗ್ರೇನ್‌ಗೆ ಚಿಕಿತ್ಸೆಯೇ ಇಲ್ಲವೇ ಎಂಬುದು ನಿಮ್ಮ ಮನಸ್ಸಿನಲ್ಲಿ ಸುಳಿಯಬಹುದು. ಈ ರೋಗಕ್ಕೂ ಚಿಕಿತ್ಸೆಯಿದೆ ಆದರೆ ಇದರಿಂದ ಮತ್ತೊಂದು ರೀತಿಯ ಪರಿಣಾಮಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆಯಾಸ, ನಿದ್ದೆ ಇಲ್ಲದಿರುವುದು, ವಾಕರಿಕೆ, ವೇಗವಾಗಿ ಬಡಿಯುತ್ತಿರುವ ಹೃದಯ ಮುಂತಾದವು. ಅಂತೆಯೇ ಇದು ಉಂಟಾಗಲು ಕಾರಣ ಆಹಾರ, ಒತ್ತಡ, ಮಲಗುವ ವಿಧಾನದಲ್ಲಿ ಉಂಟಾಗುತ್ತಿರುವ ವ್ಯತ್ಯಾಸ ಇತರೆ. ಅಮೀನೊ ಆಸಿಡ್, ತೈರಮಿನ್ ಮತ್ತು ಫೆನೆಲೆತೈಲಮೈನ್ ಒಳಗೊಂಡಿರುವ ಆಹಾರ ಪದಾರ್ಥಗಳನ್ನು ನೀವು ತ್ಯಜಿಸಲೇಬೇಕಾಗುತ್ತದೆ.

ಇಂದಿನ ಲೇಖನದಲ್ಲಿ ನಿಮಗೆ ತಲೆನೋವನ್ನು ಉಂಟುಮಾಡುವ ಆಹಾರ ಪದಾರ್ಥಗಳ ಪಟ್ಟಿಯನ್ನು ನೀಡುತ್ತಿದ್ದು ಇವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡುವುದರಿಂದ ಮೈಗ್ರೇನ್ ಅನುಭವಿಸುವಿಕೆಯನ್ನು ನಿವಾರಿಸಿಕೊಳ್ಳಹುದು. ರೋಗಗಳು ಬಂದ ನಂತರ ಅವುಗಳಿಗೆ ಪರಿಹಾರವನ್ನು ಮಾಡಿಕೊಳ್ಳುವ ಬದಲಿಗೆ ಅವುಗಳು ನಮ್ಮ ದೇಹಕ್ಕೆ ಬರದಂತೆ ನೋಡಿಕೊಳ್ಳುವುದು ಉತ್ತಮವಲ್ಲವೇ?

ಕೆಫೇನ್

ಕೆಫೇನ್

ತಲೆನೋವೆಂದರೆ ಕೆಲವರಿಗೆ ಕಾಫಿ ಕುಡಿಯುವ ಅಭ್ಯಾಸ ಇರುತ್ತದೆ. ಆದರೆ ಕಾಫಿಯಲ್ಲಿರುವ ಕೆಫೇನ್ ಅಷ್ಟು ಒಳ್ಳೆಯದಲ್ಲ. ಇದರ ಪ್ರಮಾಣ 200 ಮಿಲಿಗ್ರಾಮ್‌ಗಿಂತ ಹೆಚ್ಚಾಯಿತು ಎಂದಾದಲ್ಲಿ ಮೈಗ್ರೇನ್ ಉಂಟಾಗುತ್ತದೆ. ಆದ್ದರಿಂದ ಕಾಫಿ ಇಲ್ಲವೇ ಕೆಫೇನ್ ಸೇವನೆಯನ್ನು ಕಡಿಮೆ ಮಾಡಿ ಮೈಗ್ರೇನ್ ಹತ್ತಿರ ಸುಳಿಯದಂತೆ ನೋಡಿಕೊಳ್ಳಿ.

ಚೀಸ್

ಚೀಸ್

ಹಳೆಯ ಚೀಸ್ ಸೇವನೆಗೆ ರುಚಿಯಾಗಿದ್ದರೂ ನಿಮಗೆ ಮೈಗ್ರೇನ್ ಇದೆ ಎಂದಾದಲ್ಲಿ ಅದನ್ನು ಸೇವಿಸಲೇಬಾರದು. ಹಳೆಯ ಚೀಸ್‌ನಲ್ಲಿರುವ ಪ್ರೊಟೀನ್‌ಗಳಲ್ಲಿ ಥೈರಾಮಿನ್ ರಚನೆಗೊಂಡಿರುತ್ತದೆ. ಆದ್ದರಿಂದ ಹಳೆಯ ಚೀಸ್ ತಲೆನೋವನ್ನು ಉಂಟುಮಾಡುವುದು ಖಂಡಿತ.

ಸಂಸ್ಕರಿಸಿದ ಮಾಂಸ

ಸಂಸ್ಕರಿಸಿದ ಮಾಂಸ

ಈ ಮಾಂಸವು ಹೆಚ್ಚಿನ ಪ್ರಮಾಣದ ನಿಟ್ರೈಟ್ಸ್ ಮತ್ತು ನೈಟ್ರೇಟ್ಸ್‌ಗಳನ್ನು ಒಳಗೊಂಡಿರುವುದರಿಂದ ಇದು ಮೈಗ್ರೇನ್‌ ಉಂಟಾಗಲು ಕಾರಣವಾಗುತ್ತದೆ. ಬೇಕನ್, ಸಾಸೇಜ್‌ಗಳು, ಪೆಪ್ಪರೋನಿಯನ್ನು ಆದಷ್ಟು ಕಡಿಮೆ ಮಾಡಿಕೊಂಡು ತಲೆನೋವನ್ನು ನಿವಾರಿಸಿಕೊಳ್ಳಿ.

ಚಾಕಲೇಟ್

ಚಾಕಲೇಟ್

ಚಾಕಲೇಟ್ ಹೆಚ್ಚು ಪ್ರಮಾಣದ ಫೆನೆಲೆತೈಲಮೈನ್ ಅನ್ನು ಒಳಗೊಂಡಿರುತ್ತದೆ. ಮೈಗ್ರೇನ್ ಉಂಟುಮಾಡುವ ಮುಖ್ಯ ಆಸಿಡ್ ಇದಾಗಿರುವುದರಿಂದ ಇದನ್ನು ಸೇವಿಸದಿರಿ.

ಐಸ್ ಕ್ರೀಮ್

ಐಸ್ ಕ್ರೀಮ್

ಐಸ್ ಕ್ರೀಮ್ ಸೇವಿಸಿದ ನಂತರ ಮೈಗ್ರೇನ್ ಉಂಟಾಗುತ್ತಿದೆ ಎಂಬುದು ಹೆಚ್ಚಿನವರ ಆಪಾದನೆಯಾಗಿದೆ. ಮೆದುಳನ್ನು ಐಸ್ ಕ್ರೀಮ್ ಘನೀಭವಿಸುವುದರಿಂದಾಗಿ ಇದನ್ನು ಸೇವಿಸಿದ ನಂತರ ಮೈಗ್ರೇನ್ ಉಂಟಾಗುತ್ತದೆ.

ಮದ್ಯಪಾನ

ಮದ್ಯಪಾನ

ಮೈಗ್ರೇನ್‌ ಅನ್ನು ಉಂಟುಮಾಡುವ ಶಕ್ತಿಯುತ ಅಂಶವಾಗಿದೆ ಮದ್ಯಪಾನ. ಕೆಂಪು ವೈನ್, ಬೀರ್ ಮೊದಲಾದವುಗಳು ಡೀಹೈಡ್ರೇಶನ್ ಅನ್ನು ಉಂಟುಮಾಡಿ ತೀವ್ರ ತಲೆನೋವಿಗೆ ಕಾರಣವಾಗುತ್ತದೆ. ಮೈಗ್ರೇನ್ ಅನ್ನು ತಡೆಗಟ್ಟಲು ಈ ಆಹಾರ ಪದಾರ್ಥಗಳನ್ನು ಸೇವಿಸುವ ಮುನ್ನ ಸಾಕಷ್ಟು ಬಾರಿ ಯೋಚಿಸುವುದು ಒಳ್ಳೆಯದು.

English summary

Foods That Are Instigating Your Migraine Headache

According to a recent study, 1 in 5 women and 1 in 10 men have migraine, that's how common it is. Most of us make the mistake of considering it a typical headache, but that is farther from the truth. Migraine headache ranks in the top 20 of the world's most disabling medical illnesses. And the worst thing about this disorder is that it strikes people in their peak productive years
Story first published: Friday, April 15, 2016, 20:17 [IST]
X
Desktop Bottom Promotion