For Quick Alerts
ALLOW NOTIFICATIONS  
For Daily Alerts

ನೈಸರ್ಗಿಕ ಎಣ್ಣೆ: ಸೈನಸ್ ಸಮಸ್ಯೆಗೆ ಶೀಘ್ರ ಪರಿಹಾರ...

ನಮ್ಮ ಮೂಗಿನ ಮೂಳೆ ಮೃದುವಾಗಿದ್ದು ಈ ಮೂಳೆಯ ಹಿಂದೆ, ಎರಡೂ ಕಣ್ಣುಗಳ ನಡುವೆ ಮತ್ತು ಹಣೆಭಾಗದ ಕೊಂಚ ಅಡಿಯಲ್ಲಿ (ಅಂದರೆ ಹುಬ್ಬು ಪ್ರಾರಂಭವಾಗುವ ಕೆಳಗೆ) ಟೊಳ್ಳು ಭಾಗವೊಂದಿದೆ. ಇದೇ ಕುಹರ ಅಥವಾ ಸೈನಸ್ (ಸೈನಸೈಟಿಸ್)....

By Arshad
|

ಸೈನಸ್ (ಸೈನಸೈಟಿಸ್) ಅಥವಾ ಕುಹರ ಎಂದರೆ ನಮ್ಮ ಮೂಗಿನ ಮೇಲ್ಭಾಗ ಮತ್ತು ಹಣೆಯ ನಡುವೆ ಇರುವ ಟೊಳ್ಳುಭಾಗ. ಈ ಭಾಗದಲ್ಲಿ ಸೋಂಕು ಉಂಟಾದರೆ ಭಾರೀ ತಲೆನೋವು ಬರುತ್ತದೆ. ಹೆಚ್ಚಿನ ಸಂದರ್ಭದಲ್ಲಿ ಇದು ಮೈಗ್ರೇನ್ ತಲೆನೋವಿಗೂ ಕಾರಣವಾಗಬಹುದು. ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!

ಇದಕ್ಕೆ ಏನೆಲ್ಲಾ ಮದ್ದು ಮಾಡಿದರೂ ಈ ತಲೆನೋವು ಬಡಪೆಟ್ಟಿಗೆ ಜಗ್ಗುವುದಿಲ್ಲ. ಆದರೆ ಇದಕ್ಕೂ ಮುನ್ನ ಯಾವುದಾದರೂ ಅವಶ್ಯಕ ತೈಲವನ್ನು ಪ್ರಯತ್ನಿಸಿದ್ದೀರಾ? ಹಾಗಾದರೆ ನೈಸರ್ಗಿಕವಾಗಿ ಈ ಕುಹರದ ಸೋಂಕನ್ನು ನೈಸರ್ಗಿಕ ತೈಲದ ಬಳಕೆಯಿಂದ ನಿವಾರಿಸಲು ಇಂದೇ ಪ್ರಯತ್ನಿಸಿ. ಆರೋಗ್ಯ ಟಿಪ್ಸ್: ಸೈನಸ್ ಸಮಸ್ಯೆಯನ್ನು ಸರಳವಾಗಿ ಮೈನಸ್ ಮಾಡಿ!

ಪುದೀನಾ ಎಣ್ಣೆ: (Peppermint oil)

ಪುದೀನಾ ಎಣ್ಣೆ: (Peppermint oil)

ಎರಡು ಕಪ್ ನೀರನ್ನು ಬಿಸಿಮಾಡಿ ಕುದಿಯಲು ಪ್ರಾರಂಭವಾದ ಬಳಿಕ ಎರಡು ಮೂರು ಹನಿ ಪುದೀನಾ ಎಣ್ಣೆಯನ್ನು ಹಾಕಿ. ಈಗ ಇದರಿಂದ ಹೊಮ್ಮುವ ಹಬೆಯನ್ನು ಮೂಗಿನಿಂದ ಪೂರ್ಣವಾಗಿ ಹೀರಿಕೊಳ್ಳಿ. ಒಂದು ನಿಮಿಷದ ಬಳಿಕ ಕೊಂಚ ವಿರಾಮ ನೀಡಿ. ಬಳಿಕ ಮತ್ತೊಮ್ಮೆ ಒಂದು ನಿಮಿಷದ ಕಾಲ ಹಬೆಯನ್ನು ಎಳೆದುಕೊಳ್ಳಿ....

ಪುದೀನಾ ಎಣ್ಣೆ: (Peppermint oil)

ಪುದೀನಾ ಎಣ್ಣೆ: (Peppermint oil)

ಹೀಗೇ ಸುಮಾರು ನಾಲ್ಕರಿಂದ ಐದು ಬಾರಿ ಪುನರಾವರ್ತಿಸಿ. ಪುದಿನಾ ಎಣ್ಣೆಯಲ್ಲಿ ಉರಿಯೂತ ನಿವಾರಕ ಗುಣ, ನೋವು ನಿವಾರಕ ಗುಣ, ಬ್ಯಾಕ್ಟೀರಿಯಾ ನಿವಾರಕ ಹಾಗೂ ಅಲರ್ಜಿನಿವಾರಕ ಗುಣಗಳು ಕುಹರದ ಸೋಂಕನ್ನು ನಿವಾರಿಸಲು ಸಮರ್ಥವಾಗಿದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಇದೊಂದು ಅತಿ ಸಾಮಾನ್ಯವಾಗಿ ಬಳಸಲ್ಪಡುವ ಅವಶ್ಯಕ ತೈಲವಾಗಿದ್ದು ಇದರ ಪರಿಮಳ ಮನಸ್ಸಿಗೂ ದೇಹಕ್ಕೂ ಮುದ ನೀಡುವ ಗುಣ ಹೊಂದಿದೆ. ಇದು ಕುಹರದ ಸೋಂಕನ್ನು ನಿವಾರಿಸಲೂ ನೆರವಾಗುತ್ತದೆ. ಇದರಲ್ಲಿರುವ ಮೋನೋಟರ್ಪೀನ್ ಮತ್ತು ಆಕ್ಸೈಡುಗಳು ಸೋಂಕು ನಿವಾರಕ, ಉರಿಯೂತ ನಿವಾರಕ ಮತ್ತು ಕಟ್ಟಿರುವ ಮೂಗನ್ನು ತೆರೆಯುವ ಗುಣ ಹೊಂದಿದೆ.

ಲ್ಯಾವೆಂಡರ್ ಎಣ್ಣೆ

ಲ್ಯಾವೆಂಡರ್ ಎಣ್ಣೆ

ಇದರಿಂದಾಗಿ ಕುಹರದ ಸೋಂಕು, ಶೀತ, ನೆಗಡಿ, ಗಂಟಲ ಬೇನೆ, ಬಾಯಿಯ ಒಳಭಾಗದ ಸೋಂಕು ಮೊದಲಾದವುಗಳು ಶೀಘ್ರವಾಗಿ ಗುಣವಾಗುತ್ತವೆ. ಇದನ್ನು ಉಪಯೋಗಿಸಲು ಈ ಎಣ್ಣೆಯನ್ನು ನಯವಾಗಿ ಮೂಗಿನ, ಹಣೆಯ ಮೇಲೆ ನಯವಾಗಿ ಮಸಾಜ್ ಮಾಡಬಹುದು ಅಥವಾ ಕುದಿಯುವ ನೀರಿನಲ್ಲಿ ಹಾಕಿ ಇದರ ಹಬೆಯನ್ನೂ ಸೇವಿಸಬಹುದು.

ಟೀ ಟ್ರೀ ಎಣ್ಣೆ (Tea tree oil)

ಟೀ ಟ್ರೀ ಎಣ್ಣೆ (Tea tree oil)

ಇದೊಂದು ತಿಳಿಹಳದಿ ಬಣ್ಣದ ಎಣ್ಣೆಯಾಗಿದ್ದು ಇದರಲ್ಲಿ ವೈರಸ್ ನಿವಾರಕ ಗುಣ, ಬ್ಯಾಕ್ಟೀರಿಯಾ ನಿವಾರಕ ಗುಣ ಹಾಗೂ ಸೋಂಕುನಿವಾರಕ ಗುಣಗಳಿವೆ.

ಟೀ ಟ್ರೀ ಎಣ್ಣೆ (Tea tree oil)

ಟೀ ಟ್ರೀ ಎಣ್ಣೆ (Tea tree oil)

ಇದರ ಕೆಲವು ಹನಿಗಳನ್ನು ಸ್ವಚ್ಛವಾದ ಬಟ್ಟೆಯ ಮೇಲೆ ಚಿಮುಕಿಸಿ ಇದರ ಪರಿಮಳವನ್ನು ಆಘ್ರಾಣಿಸುವ ಮೂಲಕ ಕಟ್ಟಿದ ಮೂಗು ತಕ್ಷಣ ತೆರೆಯುತ್ತದೆ ಹಾಗೂ ಕುಹರದ ಸೋಂಕು ನಿವಾರಿಸಲೂ ನೆರವಾಗುತ್ತದೆ. ವಿಶೇಷವಾಗಿ ಸೈನಸ್ ಸೋಂಕಿನಿಂದ ತಲೆನೋವು ಉಂಟಾಗಿದ್ದರೆ ಈ ವಿಧಾನ ಹೆಚ್ಚು ಸೂಕ್ತವಾಗಿದೆ.

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಕಟ್ಟಿದ ಮೂಗು ತೆರೆಯಲು ನಿಮ್ಮ ಪ್ರಯತ್ನವೆಲ್ಲಾ ವಿಫಲಗೊಂಡಿದ್ದರೆ ಈ ವಿಧಾನವನ್ನು ಪ್ರಯತ್ನಿಸಿ. ಒಂದು ಲೀಟರ್ ನೀರನ್ನು ಬಿಸಿಮಾಡಿ. ಕುದಿಯಲು ಪ್ರಾರಂಭವಾಗುತ್ತಿದ್ದಂತೆಯೇ ಕೆಲವು ಹನಿ ನೀಲಗಿರಿ ಎಣ್ಣೆಯನ್ನು ನೀರಿಗೆ ಹಾಕಿ ಇದರ ಹಬೆಯನ್ನು ಆಘ್ರಾಣಿಸಿ..... ನೀಲಗಿರಿ ತೈಲದಿಂದ ನೂರೆಂಟು ಉಪಯೋಗ

ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಇದರಲ್ಲಿರುವ ಸಿನಿಯೋಲ್ ಎಂಬ ಪೋಷಕಾಂಶ ಒಂದು ಟರ್ಪೆನಾಯ್ಡ್ ಆಕ್ಸೈಡ್ ಆಗಿದ್ದು ಇದರಲ್ಲಿ ಉರಿಯೂತ ನಿವಾರಕ, ಸೋಂಕು ನಿವಾರಕ ಮತ್ತು ಕಟ್ಟಿರುವ ಮೂಗನ್ನು ತೆರೆಯುವ ಗುಣಗಳಿವೆ. ಕಟ್ಟಿರುವ ಮೂಗು ತೆರೆಯುವ ಬಳಿಕ ಕುಹರದ ಸೋಂಕು, ಕೆಮ್ಮು, ಶೀತ ಮತ್ತು ಗಂಟಲಬೇನೆ ಇಲ್ಲವಾಗುತ್ತದೆ.

English summary

Essential oils to fight sinusitis naturally

Tried all the natural remedies from your grandma's medicine cabinet to fight that nagging headache due to sinusitis? Well, this time, invest in some essential oils to help you get rid of sinusitis in a natural way. Try out this natural remedy today.
X
Desktop Bottom Promotion