For Quick Alerts
ALLOW NOTIFICATIONS  
For Daily Alerts

ನಮ್ಮ ಕರ್ನಾಟಕದ ಹಳ್ಳಿಯ ಸೊಗಡು 'ರಾಗಿಯ ಪವರ್'

By Manu
|

ರಾಗಿ ತಿಂದವ ನಿರೋಗಿ ಎಂಬುದೊಂದು ಕನ್ನಡದ ಗಾದೆ. ಆದರೆ ಕರ್ನಾಟಕದಲ್ಲಿರುವ ಬಹುತೇಕ ಜನರು ರಾಗಿ ಎಂದರೆ ಮುಖ ಸಿಂಡರಿಸಿಕೊಳ್ಳುತ್ತಾರೆ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರಿಗೆ ಕೆಲವು ಆಹಾರಗಳು ಎಂದರೆ ಆ ಆಹಾರವನ್ನು ಪ್ರಮುಖವಾಗಿ ಸೇವಿಸುವ ಜನರಿಂದಾಗಿಯೇ ತೊಂದರೆಯಾಗುತ್ತದೆ. ಉದಾಹರಣೆಗೆ ಒಂದು ವರ್ಗದ ಜನರು ಬಿಳಿಯ ಈರುಳ್ಳಿ ತಿನ್ನುತ್ತಾರೆ, ನಾವು ಅದನ್ನು ತಿನ್ನಕೂಡದು ಎಂದು ಇತರ ವರ್ಗದ ಜನರು ನಂಬಿಕೊಂಡು ಬಂದಿದ್ದಾರೆ.

ರಾಗಿಯನ್ನು ಸಾಮಾನ್ಯವಾಗಿ ಶ್ರಮವಹಿಸಿ ದುಡಿಯುವ ವರ್ಗದವರು ಪ್ರಮುಖವಾಗಿ ಬಳಸುವ ಕಾರಣ ತಾವು ಅವರ ಗುಂಪಿಗೆ ಸೇರಬಾರದು ಎಂಬ ಏಕಮಾತ್ರ ಯೋಚನೆಯ ಕಾರಣದಿಂದ ರಾಗಿ ಕರ್ನಾಟಕದಲ್ಲಿ ಹೆಚ್ಚು ಮಾರಾಟವಾಗುತ್ತಿಲ್ಲ. ಆದರೆ ಒಂದು ಬಾರಿ ಈ ಮನಃಸ್ಥಿತಿಯನ್ನು ಬದಲಿಸಿ ಒಂದು ಬದಲಾವಣೆಗಾಗಿಯಾದರೂ ರಾಗಿ ತಿಂದರೆ ಹೇಗೆ ಎಂದು ಮನಸ್ಸು ಮಾಡಿದಿರೋ, ಆಗ ರಾಗಿಯ ಅದ್ಭುತ ಶಕ್ತಿಯ ಬಗ್ಗೆ ತಿಳಿಯುತ್ತಾ ಹೋಗುತ್ತದೆ.

ದುಬಾರಿ ಜಿಮ್ಮುಗಳಿಗೆ ಅಪಾರ ಹಣ ತೆತ್ತು ಶ್ರಮಿಸಿ, ಅವರು ಹೇಳಿದ ಪ್ರೋಟೀನು, ಕ್ಯಾಲೋರಿಗಳನ್ನೂ ದುಬಾರಿ ಶುಲ್ಕ ತೆತ್ತು ಖರೀದಿಸಿ ಪಡೆದ ಆರೋಗ್ಯ ಮತ್ತು ಮೈಕಟ್ಟಿಗೂ ಉತ್ತಮ ಆರೋಗ್ಯ ಹಾಗೂ ಮೈಕಟ್ಟನ್ನು ಹೆಚ್ಚಿನ ಶ್ರಮವಿಲ್ಲದೇ ಊಟದಲ್ಲಿ ಕೇವಲ ರಾಗಿಯ ಮುದ್ದೆಯನ್ನು ಅಥವಾ ರಾಗಿ ಜ್ಯೂಸ್ ಅನ್ನು ಅಳವಡಿಸಿಕೊಳ್ಳುವ ಮೂಲಕ ಪಡೆಯಬಹುದು. ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...

ಅಕ್ಕಿ, ಗೋಧಿಗಿಂತಲೂ ಹೆಚ್ಚು ಪೌಷ್ಠಿಕವಾಗಿರುವ ರಾಗಿಯನ್ನು ಬೆಳೆಯುವ ರಾಷ್ಟ್ರಗಳಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ. ಅದರಲ್ಲೂ ಸಿಂಹಪಾಲನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ಇತ್ತೀಚೆಗೆ ರಾಗಿಯ ಗುಣವನ್ನು ಕಂಡುಕೊಂಡ ಪಾಶ್ಚಾತ್ಯ ರಾಷ್ಟ್ರಗಳು ಇದರ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿವೆ. ಆದರೆ ನಾವು, ಭಾರತೀಯರು, ನಮ್ಮ ಸಂಕುಚಿತ ವಿಚಾರಗಳಿಂದಾಗಿ ಇದರಿಂದ ದೂರವೇ ಇದ್ದೇವೆ. ರಾಗಿಯನ್ನು ಬಳಸದೇ ಇದ್ದವರಿಗೆ ಇದರ ಪ್ರಯೋಜನಗಳು ಏನು ಎಂದೂ ತಿಳಿದಿರುವುದಿಲ್ಲ. finger millet ಎಂದು ಆಂಗ್ಲಭಾಶೆಯಲ್ಲಿ ಕರೆಯುವ ರಾಗಿಗೆ ಹಿಂದಿನಲ್ಲಿ ನಾಚ್ನಿ ಎಂದೂ ಕರೆಯುತ್ತಾರೆ. ಅತ್ಯಂತ ವೈಪರೀತ್ಯ ಹವಾಮಾನದಲ್ಲಿಯೂ ಸುಲಭವಾಗಿ ಬೆಳೆಯುವ ರಾಗಿ ವರ್ಷಗಟ್ಟಲೇ ಕೆಡದೇ ಸಂಗ್ರಹಿಸಿಡಬಹುದು. ಅರಿಯಿರಿ ಹಳ್ಳಿಯ ಸೊಗಡು 'ರಾಗಿ ಮುದ್ದೆಯ' ಮಹಾತ್ಮೆ

ಕಡಿಮೆ ಮಳೆ ಬರುವ ಒಣಪ್ರದೇಶದಲ್ಲಿಯೂ ಬೆಳೆಬಹುದು. ಉತ್ತಮ ಆರೋಗ್ಯಕ್ಕೆ ಬರೆಯ ಒಂದೆರಡು ಬಗೆಯ ಧಾನ್ಯಗಳಿಗೆ ನಮ್ಮ ಆಹಾರವನ್ನು ಮೀಸಲಿಡದೇ ವಿವಿಧ ಧಾನ್ಯಗಳನ್ನು ಸೇವಿಸುವುದು ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ಅಂತೆಯೇ ನಿಮ್ಮ ಆಹಾರದಲ್ಲಿ ಅಕ್ಕಿ, ಗೋಧಿ, ರಾಗಿ, ನವಣೆ, ಚಿಯಾ ಬೀಜಗಳು, ಅಗಸೆ ಬೀಜಗಳು (flax seeds), ಓಟ್ಸ್ ಮೊದಲಾದವುಗಳೆಲ್ಲಾ ಇರುವಂತೆ ನೋಡಿಕೊಳ್ಳುವ ಮೂಲಕ ಈ ಎಲ್ಲಾ ಆಹಾರಗಳ ಪ್ರಯೋಜನವನ್ನು ದೇಹ ಪಡೆಯುತ್ತದೆ. ರಾಗಿಯನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಂಡರೆ ಸಿಗುವ ಪ್ರಯೋಜನಗಳ ಬಗ್ಗೆ ಕೆಲವು ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ..

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ಇಚ್ಛಿಸುವವರಿಗೆ ರಾಗಿ ಒಂದು ಉತ್ತಮವಾದ ಪರ್ಯಾಯವಾಗಿದೆ. ಏಕೆಂದರೆ ಇದರಲ್ಲಿರುವ ಟ್ರಿಪ್ಟೋಫಾನ್ ಎಂಬ ಪೋಷಕಾಂಶ ಹೊಟ್ಟೆ ತುಂಬಿದಂತಿರುವ ಭಾವನೆಯನ್ನು ಮೂಡಿಸಿ ದಿನದಲ್ಲಿ ಹೆಚ್ಚು ತಿನ್ನದೇ ಇರುವಂತೆ ನೋಡಿಕೊಳ್ಳುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಅಲ್ಲದೇ ಇದರಲ್ಲಿರುವ ಕರಗದ ನಾರು ಮತ್ತು ನೀರಿನ ಪ್ರಮಾಣ ಹೊಟ್ಟೆಯನ್ನು ಹೆಚ್ಚು ಕಾಲ ತುಂಬಿದಂತಿಡುತ್ತದೆ. ಅಲ್ಲದೇ ಇವನ್ನು ಅರಗಿಸಿಕೊಳ್ಳಲು ಹೆಚ್ಚಿನ ಕೊಬ್ಬು ಬಳಕೆಯಾಗುವ ಮೂಲಕ ತೂಕ ಕಳೆದುಕೊಳ್ಳಲೂ ಸಾಧ್ಯವಾಗುತ್ತದೆ.

ಮೂಳೆಗಳನ್ನು ದೃಢಗೊಳಿಸುತ್ತದೆ

ಮೂಳೆಗಳನ್ನು ದೃಢಗೊಳಿಸುತ್ತದೆ

ರಾಗಿಯಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ ಇದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಡಿ ಈ ಕ್ಯಾಲ್ಸಿಯಂ ತನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುತ್ತದೆ. ತನ್ಮೂಲಕ ಮೂಳೆಗಳು ದೃಢಗೊಳ್ಳಲು ಮತ್ತು ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಎದುರಾಗುವ osteoporosis ಎಂಬ ಸ್ಥಿತಿಯಿಂದಲೂ ರಕ್ಷಿಸುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ರಾಗಿಯಲ್ಲಿರುವ ಅಮೈನೋ ಆಮ್ಲಗಳು ರಕ್ತದಲ್ಲಿ ಸೇರಿದ ಬಳಿಕ ರಕ್ತನಾಳಗಳ ಒಳಗೆ ಅಂಟಿಕೊಂಡಿದ್ದ ಕೆಟ್ಟ ಕೊಲೆಸ್ಟ್ರಾಲ್ ಎಂಬ ಜಿಡ್ಡನ್ನು ಸಡಿಲಗೊಳಿಸಲು ನೆರವಾಗುತ್ತದೆ. ಅಲ್ಲದೇ ಒಂದು ವೇಳೆ ಯಾವುದೋ ಕಾರಣದಿಂದ ರಕ್ತ ಹೆಪ್ಪುಗಟ್ಟಿದ್ದರೆ ಇದನ್ನು ಕರಗಿಸಿ ವಿಸರ್ಜಿಸಲು ನೆರವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ನೆರವಾಗುತ್ತದೆ

ಅಷ್ಟೇ ಅಲ್ಲ, ರಾಗಿಯಲ್ಲಿರುವ ಮೀಥಿಯೋನೈನ್ ಮತ್ತು ಲಿಸೈಥಿನ್ ಎಂಬ ಪೋಷಕಾಂಶಗಳು ಯಕೃತ್ ನಲ್ಲಿ ಸಂಗ್ರಹವಾಗಿದ್ದ ಕೊಬ್ಬನ್ನು ಕರಗಿಸಲೂ ನೆರವಾಗುತ್ತವೆ.

ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ

ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ

ಮಧುಮೇಹ ಆವರಿಸಿದೆ ಎಂದು ಖಚಿತವಾದ ಬಳಿಕ ರೋಗಿಗಳಿಗೆ ಸಕ್ಕರೆ ಮತ್ತು ಸಕ್ಕರೆ ಇರುವ ಎಲ್ಲಾ ಆಹಾರಗಳ ಮೇಲೆ ಕಡಿವಾಣ ಬೀಳುತ್ತದೆ. ಇದರಲ್ಲಿ ಅಕ್ಕಿ, ಗೋಧಿಗಳೂ ಸೇರಿವೆ. ಹಾಗಾದರೆ ಮಧುಮೇಹಿಗಳು ಏನನ್ನು ಸೇವಿಸಬೇಕು ಎಂಬ ಪ್ರಶ್ನೆಗೆ ಆರೋಗ್ಯಕರ ಉತ್ತರ ಎಂದರೆ ರಾಗಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ

ಮಧುಮೇಹಿಗಳಿಗೆ ಉತ್ತಮ ಆಹಾರವಾಗಿದೆ

ಇದರಲ್ಲಿ ಸಕ್ಕರೆ ಅತಿ ಕಡಿಮೆ ಪ್ರಮಾಣದಲ್ಲಿದ್ದು ಹೆಚ್ಚಿನ ಪ್ರಮಾಣದಲ್ಲಿ ಕರಗದ ನಾರು ಮತ್ತು ಪಾಲಿಫಿನಾಲ್ ಗಳು ಎಂಬ ಪೋಷಕಾಂಶಗಳಿವೆ. ಇವು ಮಧುಮೇಹಿಗಳಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೊಳಿಸಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ. ಆದ್ದರಿಂದ ಮಧುಮೇಹಿಗಳು ರಾಗಿಯಿಂದ ಮಾಡಿದ ಖಾದ್ಯಗಳನ್ನು ತಮ್ಮ ಪ್ರಮುಖ ಆಹಾರವಾಗಿ ಸೇವಿಸಲು ಪ್ರಾರಂಭಿಸಿದರೆ ಮಧುಮೇಹ ಸದಾ ನಿಯಂತ್ರಣದಲ್ಲಿರುತ್ತದೆ.

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತದೆ

ಉತ್ತಮ ಆರೋಗ್ಯಕ್ಕೆ ನಮ್ಮ ಜೀರ್ಣಕ್ರಿಯೆಯೂ ಉತ್ತಮವಾಗಿರಬೇಕು. ರಾಗಿಯ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಹಿಂದಿನ ಆಹಾರಕ್ರಮದ ಮೂಲಕ ಎದುರಾಗಿದ್ದ ಅಜೀರ್ಣ ಮತ್ತಿತರ ತೊಂದರೆಗಳನ್ನು ರಾಗಿಯ ಸೇವನೆಯ ಮೂಲಕ ನಿವಾರಿಸಬಹುದು. ರಾಗಿಯಲ್ಲಿರುವ ಕಗರದ ನಾರು ಕರುಳುಗಳಲ್ಲಿ ಆಹಾರ ಸುಲಭವಾಗಿ ಸಾಗಲು, ವಿಸರ್ಜಿಸಲು ಮತ್ತು ದೊಡ್ಡಕರುಳಿನಲ್ಲಿ ನೀರನ್ನು ಹೀರಿಕೊಳ್ಳಲು ಸಹಕರಿಸುತ್ತದೆ. ಮಲಬದ್ಧತೆಯ ತೊಂದರೆ ಇದ್ದವರಿಗಂತೂ ರಾಗಿ ಹೇಳಿ ಮಾಡಿಸಿದ ಆಹಾರವಾಗಿದೆ.

ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ

ಥೈರಾಯ್ಡ್ ಸಮಸ್ಯೆಗಳಿಂದ ಬಳಲುತ್ತಿದ್ದರೆ

ಹೌದು, ರಾಗಿ ಮುದ್ದೆಯ ಆರೋಗ್ಯಕಾರಿ ಪ್ರಯೋಜನವೆಂದರೆ ನಿಮ್ಮ ಥೈರಾಯ್ಡ್ ಅನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ಹೈಪೋಥೈರಾಯ್ಡ್‌ನಿಂದ ಬಳಲುತ್ತಿರುವವರಿಗೆ ಇದು ಉತ್ತಮ.

ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ

ರಕ್ತಹೀನತೆಯ ವಿರುದ್ಧ ಹೋರಾಡುತ್ತದೆ

ರಾಗಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣದ ಅಂಶವಿದೆ. ಇದು ರಕ್ತದಲ್ಲಿರುವ ಹೀಮೋಗ್ಲೋಬಿನ್ ಪ್ರಮಾಣವನ್ನು ಹೆಚ್ಚಿಸಲು ನೆರವಾಗುತ್ತದೆ. ಆದ್ದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳಿಗೆ ರಾಗಿ ಸೇವನೆ ಉತ್ತಮ ಪರಿಹಾರವಾಗಿದೆ. ಅಲ್ಲದೇ ಇದರಲ್ಲಿರುವ ವಿಟಮಿನ್ ಸಿ ಈ ಕಬ್ಬಿಣವನ್ನು ರಕ್ತ ಹೀರಿಕೊಳ್ಳಲು ನೆರವಾಗುತ್ತದೆ. ಒಂದು ವೇಳೆ ರಾಗಿಯನ್ನು ಮೊಳಕೆ ಬರಿಸಿ ಸೇವಿಸಿದರೆ ಇದರಲ್ಲಿರುವ ವಿಟಮಿನ್ ಸಿ ಪ್ರಮಾಣ ಹೆಚ್ಚುತ್ತದೆ ಹಾಗೂ ಹೆಚ್ಚಿನ ಪ್ರಮಾಣದ ಕಬ್ಬಿಣ ರಕ್ತ ಸೇರಲು ಸಾಧ್ಯವಾಗುತ್ತದೆ.

ರಾಗಿ ಮುದ್ದೆಯ ರೆಸಿಪಿ

ರಾಗಿ ಮುದ್ದೆಯ ರೆಸಿಪಿ

ಸರಳವಾಗಿ ಮಾಡಬಹುದಾದ ರಾಗಿಮುದ್ದೆಯ ರೆಸಿಪಿಗಾಗಿ ಈ ಲೇಖನ ಓದಿ-- ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...

English summary

Eat Ragi And Stay Strong

The health benefits of eating ragi are still unknown to many of you. Ragi is popularly known as Nachni, and it is a hardy crop, which can withstand high altitudes and rough weather. To grow ragi, you don’t need to take much effort. It can sustain rough weather and less rainfall. Karnataka is the highest ragi-producing state in India. Here are some of the health benefits of eating ragi. Have a look.
X
Desktop Bottom Promotion