For Quick Alerts
ALLOW NOTIFICATIONS  
For Daily Alerts

ಇನ್ನು ಅನಾನಸ್ ಹಣ್ಣಿನ ಒಳತಿರುಳನ್ನು ತಿಪ್ಪೆಗೆ ಎಸೆಯಬೇಡಿ...

By Suma
|

ಹಣ್ಣುಗಳೆಂದರೆ ಪೌಷ್ಟಿಕಾಂಶದ ಆಗರ ಎಂಬುದು ಎಲ್ಲರಿಗೂ ತಿಳಿದ ವಿಷಯ. ಆದರೆ ಕೆಲವು ಹಣ್ಣುಗಳನ್ನು ನೀವು ಸೇವಿಸುವಾಗ ಅದರ ಸಿಪ್ಪೆ, ಒಳಗಿರುವ ಬೀಜ, ಗಡುಸಾದ ತಿರುಳುಗಳು, ನಾರಿನ ಅಂಶಗಳನ್ನು ಹೊರತೆಗೆದು ಉಳಿದ ಹಣ್ಣಿನ ಭಾಗವನ್ನಷ್ಟೇ ಸೇವಿಸುತ್ತೀರಿ. ಹೌದು! ನಾವು ಸೇವಿಸುವ ಹಣ್ಣುಗಳಲ್ಲಿ ಅದರ ಯಾವುದಾದರೂ ಒಂದು ಭಾಗವನ್ನು ಅನುಪಯುಕ್ತವೆಂದು ತಿಳಿದು ಸೇವಿಸದೇ ಎಸೆದುಬಿಡುತ್ತೀವಿ. ಇದು ಮಾನವನ ಸಹಜ ಗುಣವಾಗಿದ್ದು, ತಿಳುವಳಿಕೆಯ ಕೊರತೆಯೇ ಸಹ ಇದಕ್ಕೆ ಕಾರಣ. ಆದರೆ ನಾವು ಅನುಪಯುಕ್ತವೆಂದು ತಿಳಿದು ಹಣ್ಣಿನ ಭಾಗವನ್ನು ಎಸೆಯುವ ಮುನ್ನ ಒಮ್ಮೆ ಎಚ್ಚರವಹಿಸಿ.

Do not throw away the pineapple core! Here’s why

ಏಕೆಂದರೆ, ನಮಗೆ ಅದು ಅನುಪಯುಕ್ತ ಎಂದು ತಿಳಿದಿದ್ದು, ನಿಜವಾಗಿಯೂ ಅದು ನಿಮಗೆ ಉಪಯುಕ್ತವಾಗಬಹುದು. ಈ ಪ್ರಕ್ರಿಯೆಗೆ ನಿಮ್ಮ ತಿಳಿವಳಿಕೆಯ ಕೊರತೆಯೇ ಕಾರಣ. ನಿಜ, ನಾವಿಂದು ಅನಾನಸ್ ಹಣ್ಣಿನ ಬಗ್ಗೆ ಮಾತನಾಡುತ್ತಿದ್ದೀವಿ. ಅನಾನಸ್ ಹಣ್ಣಿನಲ್ಲಿ ಉಪಯುಕ್ತವಾಗುವ ಎಲ್ಲಾ ಭಾಗವನ್ನು ನೀವು ಸೇವಿಸುತ್ತೀರಾ? ಒಮ್ಮೆ ನೀವು ಹಿಂದೆ ಸೇವಿಸಿದ ಚಿತ್ರಣವನ್ನು ನೆನಪು ಮಾಡಿಕೊಳ್ಳಿ. ಅನಾನಸ್ ಹಣ್ಣಿನ ಒಳ ತಿರುಳನ್ನು ನೀವು ಎಸೆದಿದ್ದು ನೆನಪಾಯಿತೇ? ಅನಾನಸ್ ಹಣ್ಣಿನ ತಿರುಳು ನಮ್ಮ ಆರೋಗ್ಯಕ್ಕೆ ಹೇಗೆ ಉಪಯುಕ್ತ ಎಂಬುದನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

ಕೆಲವು ಹಣ್ಣುಗಳ ಒಳ ತಿರುಳುಗಳು, ಸಿಪ್ಪೆಗಳು ನಮ್ಮ ದೇಹಕ್ಕೆ ಅವಶ್ಯಕ ಪೌಷ್ಟಿಕಾಂಶದ ಸತ್ವಗಳನ್ನು ನೀಡುತ್ತವೆಂಬುದು ನಿಮಗೆ ಗೊತ್ತೇ. ಈ ಭಾಗಗಳು ಒಂದು ಹಣ್ಣಿನಿಂದ ಸಿಗುವ ಪೌಷ್ಟಿಕಾಂಶಗಳಿಗೆ ಸಮ. ಈ ಭಾಗಗಳನ್ನು ನಿರ್ಲಕ್ಷಿಸಿದರೆ ಪೂರ್ಣ ಪ್ರಮಾಣದಲ್ಲಿ ಪೌಷ್ಟಿಕಾಂಶಗಳನ್ನು ಹೊಂದಲು ಸಾಧ್ಯವಾಗುವುದಿಲ್ಲ. ಅನಾನಸ್ ಸಾಮಾನ್ಯವಾಗಿ ಹೆಚ್ಚು ಕ್ಯಾಲೋರಿ ಅಂಶವನ್ನು ಹೊಂದಿದ್ದು, ಅದರಲ್ಲಿ ಉಪಯುಕ್ತವಾಗುವ ಪೌಷ್ಟಿಕಾಂಶ ಸತ್ವಗಳೂ ಸಹ ಅಡಗಿವೆ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು ಎಂದು ಅರೋಗ್ಯ ತಜ್ಞರು ಅಭಿಪ್ರಾಯ ಪಡುತ್ತಾರೆ.

ಅನಾನಸ್ ಹಣ್ಣಿನ ಒಳತಿರುಳಿನ ಉಪಯೋಗ
ಅನಾನಸ್ ಒಳಗೆ ಮಧ್ಯದಲ್ಲಿರುವ ತಿರುಳು ಹೆಚ್ಚು ಗಡುಸಾಗಿದ್ದು, ಹಣ್ಣಿನ ಭಾಗಕ್ಕಿಂತ ಸ್ವಲ್ಪ ಕಹಿಯಾಗಿರುತ್ತದೆ. ಆದರೆ ಅದನ್ನು ಹೊರತೆಗೆಯಬೇಡಿ. ಈ ಒಳಭಾಗದಲ್ಲಿ ನಾರಿನ ಆಂಶವು ಹೇರಳವಾಗಿದ್ದು, ನಿಮ್ಮ ಜೀರ್ಣಕ್ರಿಯೆಯ ವ್ಯವಸ್ಥೆಯನ್ನು ಸದೃಢವಾಗಿಸುತ್ತದೆ. ಇದರಲ್ಲಿ ಬ್ರೋಮ್ ಲೈನ್ ಎಂಬ ಪ್ರೊಟಿಯೋಲಿಟಿಕ್ ಎನ್ಸೈಮ್ ಇದ್ದು, ಇದರ ರಕ್ತ ಹೆಪ್ಪುಗಟ್ಟುವಿಕೆಯ ಗುಣಲಕ್ಷಣದಿಂದ ನಿಮ್ಮ ರಕ್ತವು ಹೆಪ್ಪುಗಟ್ಟಲು ಸಹಕಾರಿಯಾಗಲಿದೆ. ಗಾಯ ವಾಸಿ ಮಾಡಲು ಮತ್ತು ಚರ್ಮದ ಸಮಸ್ಯೆಗಳನ್ನು ನಿವಾರಿಸಲು ಅವಶ್ಯಕವಿರುವ ಉರಿಯೂತ ನಿರೋಧಕ ಸತ್ವವು ಇದರಲ್ಲಿ ಅಡಗಿದೆ.

ಹಣ್ಣಿನ ಭಾಗಕ್ಕಿಂತ ಈ ಭಾಗದಲ್ಲಿ ಬ್ರೋಮ್ ಲೈನ್ ಸತ್ವವು ಅಧಿಕವಾಗಿದ್ದು, ನಿಮ್ಮ ದೇಹಕ್ಕೆ ಹೆಚ್ಚು ಸಹಕಾರಿಯಾಗಲಿದೆ. ಹಣ್ಣಿನಲ್ಲಿರುವಂತೆ ಈ ಭಾಗದಲ್ಲಿಯೂ ಸಹ ವಿಟಮಿನ್ ಸಿ ಸತ್ವವು ಹೇರಳವಾಗಿದ್ದು, ಇದು ರೋಗ ನಿರೋಧಕ ಸತ್ವದ ಅಂಶವಾಗಿದೆ. ಸುಗಮವಾಗಿ ಉಸಿರಾಡಲು, ಆಸ್ತಮಾ ನಿವಾರಣೆಗೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಬ್ರೋಮ್ ಲೈನ್ ಸತ್ವವು ಮಹತ್ವದ ಪಾತ್ರ ವಹಿಸುತ್ತದೆ. ಜೊತೆಗೆ ಈ ಭಾಗದಲ್ಲಿ ಮ್ಯಾಂಗನೀಸ್ ಸತ್ವವು ಸಹ ಹೇರಳವಾಗಿದ್ದು, ನಿಮ್ಮ ಮೂಳೆಗಳನ್ನು ದೃಢವಾಗಿರಿಸಲು ಮತ್ತು ಬೊಜ್ಜಿನ ಮಟ್ಟವನ್ನು ಸಮತೋಲನದಲ್ಲಿರಿಸಲು ಹೆಚ್ಚು ನೆರವಾಗುತ್ತದೆ.

ಅನಾನಸ್‌ನ ಒಳ ತಿರುಳನ್ನು ಸೇವಿಸುವ ಬಗೆ
ನೀವು ಮಾಡಬೇಕಿರುವುದು ಇಷ್ಟೇ, ಹಣ್ಣಿನೊಂದಿಗೆ ಈ ಭಾಗವನ್ನೂ ಸಹ ಸೇವಿಸುವುದು. ಅನಾನಸ್ ಹಣ್ಣನ್ನು ಸಣ್ಣಗಾತ್ರದಲ್ಲಿ ಹೋಳು ಮಾಡಿದಾಗ ಅದರ ಮಧ್ಯದ ಗಡುಸಿನ ಭಾಗವೂ ಸಹ ಸಣ್ಣ ಗಾತ್ರದಲ್ಲಿರುವುದರಿಂದ ಹೆಚ್ಚು ಕಹಿಯ ಅನುಭವವಾಗುವುದಿಲ್ಲ ಮತ್ತು ಅಗೆದಾಗ ಹೆಚ್ಚು ಕಷ್ಟವೆನಿಸುವುದಿಲ್ಲ. ಅದರ ಕಹಿಯನ್ನು ಮರೆಸಲು ಹಣ್ಣಿನ ಸಮೇತ ಪಾನೀಯ ತಯಾರಿಸಿ ಸೇವಿಸಿರಿ. ಇದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.

English summary

Do not throw away the pineapple core! Here’s why

If you have a core slicer at home, trash it now instead of throwing away the pineapple core. Peels, pith, seeds or core of certain fruits pack more nutrition, or at least as much as the fruit or vegetable does. Discarding them is like letting nutrition go down the drain. Pineapples are known to be high-calorie fruits but they also contain a host of vital nutrients and hence can be consumed in small proportion suggest health expert
Story first published: Saturday, January 23, 2016, 18:54 [IST]
X
Desktop Bottom Promotion