For Quick Alerts
ALLOW NOTIFICATIONS  
For Daily Alerts

ಬಾತ್ ರೂಮ್‌ನಲ್ಲಿರುವ ವಸ್ತುಗಳೇ, ಸ್ವಾಸ್ಥ್ಯ ಕೆಡಿಸಬಹುದು!

By Super
|

ನಾವು, ಭಾರತೀಯರು, ಹಲವು ವಿಷಯಗಳಲ್ಲಿ ವಿಶ್ವದ ಅಚ್ಚರಿಗೆ ಕಾರಣರಾಗಿದ್ದೇವೆ. ಇದರಲ್ಲಿ ಕೆಲವು ನಮ್ಮ ಅಭ್ಯಾಸಗಳೂ ಸೇರಿವೆ. ಸಾಮಾನ್ಯವಾಗಿ ವಿದೇಶೀಯರು ಮೂಗು ಮುರಿಯುವ ನಮ್ಮ ಅಭ್ಯಾಸವೆಂದರೆ ಯಾವುದಾದರೊಂದು ವಸ್ತುವನ್ನು ಕಟ್ಟ ಕಡೆಯವರೆಗೂ ಸವೆಯುವವರೆಗೆ ಉಪಯೋಗಿಸುವುದು. ಉದಾಹರಣೆಗೆ ಹವಾಯಿ ಚಪ್ಪಲ್ಲು. ಕೆಲವರ ಮನೆಯಲ್ಲಿ ಇವು ಸವೆದೂ ಸವೆದೂ ಹಿಮ್ಮಡಿ ತೂತಾಗಿ ಉಳಿದ ಭಾಗ ಪೇಪರಿನಷ್ಟು ತೆಳ್ಳಗಾಗಿರುತ್ತದೆ. ಎಷ್ಟೋ ಮನೆಗಳಲ್ಲಿ ಇದೇ ಅಭ್ಯಾಸ ಅವರ ವೈಯಕ್ತಿಕ ನೈರ್ಮಲ್ಯವಸ್ತುಗಳಲ್ಲೂ ಕಾಣಬಹುದು.

Dirtiest items in your bathroom that can make you very sick

ವರ್ಷಗಟ್ಟಲೆ ಉಪಯೋಗಿಸಿ ಹೂವಿನಂತೆ ಅರಳಿದ ಹಲ್ಲುಜ್ಜುವ ಬ್ರಶ್ ಇತ್ಯಾದಿ. ಆದರೆ ನೈರ್ಮಲ್ಯ ಕಾಪಾಡಲು ಈ ವಸ್ತುಗಳ ಬಳಕೆ ನಿಗದಿಪಡಿಸಿ ಕಾಲಕಾಲಕ್ಕೆ ಬಿಸುಟು ಹೊಸದನ್ನು ಬಳಸುವಂತೆ ತಜ್ಞರು ಶಿಫಾರಸ್ಸು ಮಾಡುತ್ತಾರೆ. ಏಕೆಂದರೆ ಇವುಗಳಲ್ಲಿ ಮನೆ ಮಾಡಿಯೇ ಮಾಡುವ ಕ್ರಿಮಿಗಳು ನಿಮ್ಮ ಸ್ವಾಸ್ಥ್ಯವನ್ನು ಕೆಡಿಸಬಹುದು. ಬಾತ್‌ರೂಮ್‌‌ ಸಿಂಪಲ್ ಆಗಿದ್ದರೂ ಪರವಾಗಿಲ್ಲ, ಸ್ವಚ್ಛವಾಗಿರಲಿ

ಹಲ್ಲುಜ್ಜುವ ಬ್ರಶ್
ದಂತವೈದ್ಯರ ಪ್ರಕಾರ ಪ್ರತಿ ತಿಂಗಳಿಗೆ ಹೊಸ ಬ್ರಶ್ ಉಪಯೋಗಿಸುವುದು ಉತ್ತಮ. ಇದಕ್ಕಾಗಿ ದುಬಾರಿ ಬ್ರಶ್ ಏನೂ ಅಗತ್ಯವಿಲ್ಲ, ಒಟ್ಟಾರೆ ನಿಮಗೆ ಸೂಕ್ತವಾದ ಸಾಮಾನ್ಯ ಬ್ರಶ್ ಆದರೂ ಸಾಕು. ಆದರೆ ದುಬಾರಿ ಬ್ರಶ್ ಕೊಂಡು ತಂದಿದ್ದು ಒಂದೇ ತಿಂಗಳಲ್ಲಿ ಎಸೆಯಲು ಮನಸ್ಸಾಗದಿದ್ದರೆ ಎರಡು ತಿಂಗಳಿಗೆ ವಿಸ್ತರಿಸಬಹುದು. ಆದರೆ ಯಾವುದೇ ಕಾರಣಕ್ಕೆ ಕೂದಲುಗಳು ಬಗ್ಗಿದ್ದು ಕಂಡುಬಂದರೆ ತಕ್ಷಣ ಇದನ್ನು ಬದಲಿಸಬೇಕು.

ಬಗ್ಗಿರುವ ಕೂದಲುಗಳು ಎಂದರೆ ಶಿಥಿಲಗೊಂಡ ಪ್ಲಾಸ್ಟಿಕ್ ಆಗಿದ್ದು ಇದರಲ್ಲಿ ಕ್ರಿಮಿಗಳು ಕೂರಲು ಅನುಕೂಲವಾಗುತ್ತದೆ.
ಪ್ರತಿ ಬಾರಿ ಬ್ರಶ್ ಮಾಡಿಕೊಂಡ ಬಳಿಕ ಕೂದಲುಗಳನ್ನು ನೇವರಿಸಿ ನೀರು ಹೊರಹೋಗುವಂತೆ ಮಾಡುವುದೂ ಅವಶ್ಯಕ. ಒಂದು ವೇಳೆ ನಿಮಗೆ ಯಾವುದಾದರೂ ಕಾಯಿಲೆ ಇದ್ದರೆ, ಶೀತವಾದರೂ ಸರಿ, ಗುಣಹೊಂದಿದ ಮರುದಿನವೇ ಹೊಸ ಬ್ರಶ್ ತೆಗೆದುಕೊಳ್ಳಬೇಕು. ಏಕೆಂದರೆ ಈ ಶೀತ ಈ ಬ್ರಶ್ ಮೂಲಕವೇ ಬಂದಿದ್ದಿರಬಹುದು, ಇದು ಮತ್ತೊಮ್ಮೆ ಬರಲೂ ಸಾಧ್ಯವಿದೆ.

ಮೈಯುಜ್ಜುವ ಬ್ರಶ್ ಅಥವಾ ಲೂಫಾ

ಹಿಂದೆಲ್ಲಾ ತೆಂಗಿನ ನಾರಿನ ಮೈಯುಜ್ಜುವ ಬ್ರಶ್ ಗಳು ಬರುತ್ತಿದ್ದವು. ಈಗ ಈ ಸ್ಥಾನವನ್ನು ಮೃದುವಾದ ಲೂಫಾಗಳು ಆಕ್ರಮಿಸಿವೆ. ಆದರೆ ಇವುಗಳ ಒಳಭಾಗದಲ್ಲಿಯೂ ಬ್ಯಾಕ್ಟೀರಿಯಾಗಳು ಕುಳಿತುಕೊಳ್ಳಲು ಬಹಳಷ್ಟು ಜಾಗ ಇರುವ ಕಾರಣ ಇವು ತೆರೆದ ಗಾಯ, ಒಡೆದ ಮೊಡವೆಗಳ ಮೂಲಕ ಮತ್ತೆ ದೇಹ ಸೇರಬಹುದು. ಇವುಗಳ ಬಳಕೆ ಒಂದು ತಿಂಗಳಿಗಿಂತ ಹೆಚ್ಚಿರಬಾರದು. ಅಷ್ಟಕ್ಕೂ ನಿತ್ಯದ ಬಳಕೆಯಿಂದ ಒಂದೇ ತಿಂಗಳಲ್ಲಿ ಇವುಗಳ ಅಂಚುಗಳು ಸವೆಯುವ ಕಾರಣ ಸತ್ತ ಜೀವಕೋಶಗಳನ್ನು ಚರ್ಮದಿಂದ ಹೊರತೆಗೆಯಲು ಅಸಮರ್ಥವಾಗುವ ಕಾರಣ ಬದಲಿಸದೇ ಬೇರೆ ಮಾರ್ಗವಿಲ್ಲ.

ರೇಜರ್ ಬ್ಲೇಡ್
ರೇಜರ್ ಬ್ಲೇಡ್ ಗಳನ್ನು ಸ್ಟೇನ್ ಲೆಸ್ ಸ್ಟೀಲ್ ನಿಂದ ಮಾಡಿರುತ್ತಾರಾದರೂ ಕೆಲವೊಮ್ಮೆ ಈ ಬ್ಲೇಡುಗಳಲ್ಲಿ ನಿಂತಿದ್ದ ನೀರು ಒಣಗುತ್ತಿದ್ದಂತೆಯೇ ಕೊಂಚ ತುಕ್ಕು ಹಿಡಿಸುತ್ತದೆ. ಚರ್ಮವೈದ್ಯರ ಪ್ರಕಾರ ಪ್ರತಿ ಬಾರಿ ಶೇವ್ ಮಾಡಿಕೊಂಡ ಬಳಿಕ ಹರಿತ ಅಂಚುಗಳಲ್ಲಿ ಚರ್ಮದ ಹೊರಪದರದ ಜೀವಕೋಶಗಳು ಅಂಟಿಕೊಂಡಿದ್ದು ಇವು ಸುಲಭವಾಗಿ ತೊಲಗಲಾರವು. ಈ ಭಾಗದಲ್ಲಿ ಬ್ಯಾಕ್ಟೀರಿಯಾಗಳು ಸುಲಭವಾಗಿ ಬೆಳೆಯುತ್ತವೆ ಹಾಗೂ ಅಂಚು ಮೊಂಡಾಗುತ್ತಾ ಹೋಗುತ್ತದೆ.

ಮುಂದಿನ ಶೇವ್‌ನಲ್ಲಿ ಮೊಂಡಾದ ಈ ಅಂಚು ಕೂದಲನ್ನು ಕತ್ತರಿಸದ ಕಾರಣ ಎಲ್ಲರೂ ಹೆಚ್ಚು ಒತ್ತುತ್ತಾರೆ. ಇದು ಚರ್ಮವನ್ನು ಇನ್ನಷ್ಟು ಒತ್ತಡದಿಂದ ಹಿಸಿದು ಗಾಯ ಮಾಡಬಹುದು. ಆದ್ದರಿಂದ ಯಾವುದೇ ಬ್ಲೇಡ್ ಆದರೂ ಐದರಿಂದ ಆರು ಬಾರಿ ಶೇವ್ ಮಾಡಿಕೊಂಡ ಬಳಿಕ ಎಸೆದು ಹೊಸದು ಬಳಸುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಬಾತ್ ರೂಂನಲ್ಲಿ ಅವಶ್ಯಕವಾಗಿ ಇರಬೇಕಾದ ವಸ್ತುಗಳು

ಸ್ನಾನದ ಟವೆಲ್
ನಮ್ಮ ಶೌಚಾಲಯದಲ್ಲಿ ಅತಿ ಹೆಚ್ಚು ಬ್ಯಾಕ್ಟೀರಿಯಾಗಳು ಒಂದೆಡೆ ಸೇರುವ ಸ್ಥಳ ಯಾವುದು ಗೊತ್ತೇ? ಇದೇ ನಮ್ಮ ಟವೆಲ್. ಏಕೆಂದರೆ ನಾವು ಮೈಯುಜ್ಜಿಕೊಂಡ ಬಳಿಕ ಹಾಗೇ ಒಣಗಳು ಹಾಕುತ್ತೇವೆ. ಟವೆಲ್ ದಪ್ಪಗಿರುವ ಕಾರಣ ಹೊರಭಾಗ ಒಣಗಿದರೂ ಒಣಭಾಗ ಹಸಿಯಾಗಿಯೇ ಇದ್ದು ಇವು ಬ್ಯಾಕ್ಟೀರಿಯಾಗಳಿಗೆ ಹನಿಮೂನ್ ತಾಣಗಳಾಗಿವೆ.


ಕೇವಲ ಸಾಮಾನ್ಯ ಬ್ಯಾಕ್ಟೀರಿಯಾಗಳಲ್ಲ, ಅತಿ ಕ್ರೂರ ಬ್ಯಾಕ್ಟೀರಿಯಾಗಳಾದ ಈ-ಕೊಲೈ ಮತ್ತು ಸಾಲ್ಮೋನೆಲ್ಲಾದಂತಹ ಬ್ಯಾಕ್ಟೀರಿಯಾಗಳೂ ದೂರದೂರಿಂದ ಆಗಮಿಸಿ ಹನಿಮೂನ್ ಪ್ಯಾಕೇಜ್ ಆರಂಭಿಸಿಬಿಡುತ್ತವೆ. ಇದನ್ನು ತಡೆಯಲು ಪ್ರತಿ ಮೂರು ದಿನಕ್ಕೊಮ್ಮೆ (ನೀವೂ ಎಲ್ಲರಂತೆ ನಿತ್ಯವೂ ಸ್ನಾನ ಮಾಡುವವರೆಂದೇ ಪರಿಗಣಿಸಿ) ಒಗೆದು ಬಿಡಬೇಕು. ಇದು ಸಾಧ್ಯವಾಗದೇ ಹೋದಲ್ಲಿ ಟವೆಲ್ ಒಣಗಿಸಿದ ಕೆಲವು ಘಂಟೆಗಳ ಬಳಿಕ ಉಲ್ಟಾ ಮಾಡಿ ಒಣಗಿಸಿ ವಾರಕ್ಕೊಮ್ಮೆ ಒಗೆದು ಬಿಡಬೇಕು. ಅಲ್ಲದೇ ಪ್ರತಿ ಮೂರರಿಂದ ನಾಲ್ಕು ತಿಂಗಳಿಗೊಮ್ಮೆ ಹೊಸ ಟವೆಲ್ ಖರೀದಿಸಬೇಕು.
English summary

Dirtiest items in your bathroom that can make you very sick

Wondering what is the shelf life of your loofah or toothbrush? A few products in your bathroom don’t have an expiry date, and it can be tricky to find out for how long they will last. Germs can easily surface in the bathroom, so toss these products at the right time. Here’s when you should dispose off a few of them. If you are using a public toilet, follow this 9-step healthy guide.
Story first published: Monday, June 13, 2016, 20:12 [IST]
X
Desktop Bottom Promotion