For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕಸಿ ಮಾಡಿಸಿದವರ ಆಹಾರ ಪದ್ಧತಿ ಹೀಗಿರಲಿ

By Suma
|

ಈಗಿನ ವೈದ್ಯಕೀಯ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಯಾಗುತ್ತಿದ್ದು, ಈ ಯುಗವನ್ನು ವೈದ್ಯಕೀಯ ಪರ್ವ ಎಂದೇ ಕರೆಯಲಾಗುತ್ತಿದೆ. ಈ ಕ್ಷೇತ್ರದಲ್ಲಿ ವಿಸ್ಮಯಕಾರಿ ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಿದ್ದು, ಈ ಕ್ಷೇತ್ರದ ಬೆಳವಣಿಗೆಗೆ ಸರ್ಕಾರಗಳೂ ಸಹ ಪಣತೊಟ್ಟಿವೆ. ಈ ನಿಟ್ಟಿನಲ್ಲಿ ಅಂಗಾಂಗಗಳ ಕಸಿ ಪ್ರಕ್ರಿಯೆಯು ಇತ್ತೀಚಿನ ಆವಿಷ್ಕಾರಗಳಲ್ಲಿ ಮುಂಚೂಣಿಯಲ್ಲಿದೆ. ದೇಹದ ಕ್ಷೀಣವಾದ ಅನೇಕ ಸೂಕ್ಷ್ಮವಾದ ಅಂಗಾಂಗಗಳನ್ನು ಅತ್ಯಂತ ಚಾತುರ್ಯತೆಯಿಂದ ಕಸಿ ಮಾಡುವ ಕಾರ್ಯ ಜರುಗುತ್ತಿದೆ. ಕಿಡ್ನಿ ನೋವಿನ ರೋಗ ಲಕ್ಷಣಗಳೇನು? ಇದಕ್ಕೆ ಪರಿಹಾರವೇನು?

ಇದಕ್ಕೆ ಭಾರತವೂ ಹೊರತಾಗಿಲ್ಲ. ಇವುಗಳಲ್ಲಿ ಮೂತ್ರಪಿಂಡವನ್ನು ಕಸಿ ಮಾಡುವುದೂ ಸಹ ಒಂದಾಗಿದೆ. ಹೀಗಾಗಿ ಮೂತ್ರಪಿಂಡವನ್ನು ಕಸಿ ಮಾಡಿಸಿದವರು ಅತೀ ಜಾಗರೂಕತೆಯಿಂದ ಅವರ ಆರೋಗ್ಯವನ್ನು ಹೆಚ್ಚು ಆರೈಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಮೂತ್ರಪಿಂಡವನ್ನು ಕಸಿ ಮಾಡಿಸಿದ ಜನರಲ್ಲಿ ಅತಿಯಾದ ಔಷಧಿಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿಯು ಕ್ಷೀಣಿಸಿರುತ್ತದೆ. ಕಸಿ ಮಾಡಿದ ಅಂಗಾಂಗವನ್ನು ದೇಹವು ಸ್ವೀಕರಿಸುವಂತೆ ಈ ಔಷಧಿಗಳು ಒತ್ತಡ ಹೇರುತ್ತವೆ. ಈ ಔಷಧಿಗಳ ಸೇವನೆಯಿಂದ ಜನರಲ್ಲಿ ಸೋಂಕಿನ ಅಪಾಯ ಹೆಚ್ಚಾಗುವಂತೆ ಮಾಡುತ್ತದೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ಆದ್ದರಿಂದ ಈ ರೀತಿಯ ಜನರು ತೊಂದರೆಗಳಿಂದ ದೂರವಿರಲು ಕಟ್ಟುನಿಟ್ಟಿನ ಆಹಾರ ಶೈಲಿಯನ್ನು ಅನುಸರಿಸಲೇಬೇಕು. ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವವರು ಸಾಮಾನ್ಯವಾಗಿ ಮಧುಮೇಹಿಗಳು, ಅಧಿಕ ರಕ್ತದೊತ್ತಡ ಇರುವವರು, ಹೃದಯ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವವರಾಗಿರುತ್ತಾರೆ. ಆದ್ದರಿಂದ ನಿಯಂತ್ರಿತ ಆಹಾರ ಪದ್ಧಿತಿಯನ್ನು ಅನುಸರಿಸುವುದು ಖಡ್ಡಾಯವಾಗಿದೆ. ಅದಲ್ಲದೇ ರೋಗ ನಿರೋಧಕ ಅಂಶವನ್ನು ತಗ್ಗಿಸಲು ಬಳಸುವ ಔಷಧಿಗಳ ಸೇವನೆಯಿಂದ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಮಸ್ಯೆಗಳು ಸಂಭವಿಸುವ ಅಪಾಯ ಹೆಚ್ಚಿರುತ್ತದೆ...

ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಸೇವನೆ

ಹೆಚ್ಚು ಪ್ರೊಟೀನ್ ಯುಕ್ತ ಆಹಾರ ಸೇವನೆ

ಮೂತ್ರಪಿಂಡ ಕಸಿ ಮಾಡಿದ ನಂತರ, ದೇಹವು ಹೆಚ್ಚು ಪ್ರೊಟೀನ್ ಸತ್ವಗಳನ್ನು ನಿರೀಕ್ಷಿಸುತ್ತದೆ. ಇದರಿಂದ ಕಸಿ ಪ್ರಕ್ರಿಯೆಯು ಗಾಯವನ್ನು ನಿವಾರಿಸಲು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಪ್ರೊಟೀನ್ ಸತ್ವದ ಆಹಾರವನ್ನು ಹೆಚ್ಚು ಸೇವಿಸುವುದನ್ನು ನಿಯಂತ್ರಿಸಬಾರದು. ಇದಲ್ಲದೇ ಡಯಾಲಿಸಿಸ್ ಪ್ರಕ್ರಿಯೆಗೆ ಒಳಪಟ್ಟಿರುವ ರೋಗಿಗಳಲ್ಲಿ ಪ್ರೊಟೀನ್ ಸತ್ವದ ಕೊರತೆಯಿರುತ್ತದೆ. ಮೂತ್ರಪಿಂಡ ಕಸಿಯಾದ ನಂತರ ಹೆಚ್ಚು ಪ್ರೊಟೀನ್ ಸತ್ವದ ಸೇವನೆಯು ನಿಮ್ಮ ಆರೋಗ್ಯಕ್ಕೆ ಹೆಚ್ಚು ಉಪಯುಕ್ತ.

ಹಸಿ ಹಣ್ಣುಗಳನ್ನು ಸೇವಿಸದಿರುವುದು ಒಳಿತು

ಹಸಿ ಹಣ್ಣುಗಳನ್ನು ಸೇವಿಸದಿರುವುದು ಒಳಿತು

ಮೂತ್ರಪಿಂಡ ಕಸಿ ಮಾಡಿಸಿದವರು ಹಸಿ ಹಣ್ಣುಗಳನ್ನು ಸೇವಿಸಿದರೆ, ಇದರಲ್ಲಿರುವ ಸೋಂಕು ಬಹುಬೇಗ ಅವರನ್ನು ಆವರಿಸುತ್ತದೆ. ಆದರೂ ಸಹ, ಈ ಹಣ್ಣುಗಳನ್ನು ಬೇಯಿಸಿದ ರೂಪದಲ್ಲಿ ಸೇವಿಸಿದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ದೂರವಾಗಿ, ನಿಮಗೆ ಸೋಂಕು ಸಂಭವಿಸುವ ಅಪಾಯವನ್ನು ತಡೆಯುತ್ತದೆ.

ಮೊಸರನ್ನು ನಿಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳಿ

ಮೊಸರನ್ನು ನಿಮ್ಮ ಆಹಾರ ಶೈಲಿಯಲ್ಲಿ ಅಳವಡಿಸಿಕೊಳ್ಳಿ

ಮೊಸರಿನಲ್ಲಿ ಒಳ್ಳೆಯ ಗುಣಮಟ್ಟದ ಪ್ರೊಟೀನ್ ಸತ್ವವಿದ್ದು, ಇದರಲ್ಲಿ ಕಸಿಯಿಂದ ಉಂಟಾದ ಸಮಸ್ಯೆಯು ನಿವಾರಣೆಯಾಗುತ್ತದೆ. ಆದ್ದರಿಂದ ಮೊಸರನ್ನು ಯಥೇಚ್ಛವಾಗಿ ಬಳಸಿ. ಉಳಿಯಾದ ಪದಾರ್ಥಗಳಾದ ಲಿಂಬೆ ಮತ್ತು ಹುಣಸೇಹಣ್ಣನ್ನು ಸೇವಿಸುವುದು ಹೆಚ್ಚು ನೆರವಾಗುತ್ತದೆ. ಆದರೆ ದ್ರಾಕ್ಷಿ ಸೇವನೆಯಿಂದ ದೂರವಿರಿ. ದ್ರಾಕ್ಷಿ ಸೇವನೆಯಿಂದ ನಿಮ್ಮ ರೋಗ ನಿರೋಧಕ ಶಕ್ತಿ ಕುಗ್ಗಿಸುವ ಔಷಧಿಗಳೊಂದಿಗೆ ಪ್ರತಿಕ್ರಯಿಸಿ ಮೂತ್ರಪಿಂಡ ಸಮಸ್ಯೆಯ ನಿವಾರಣೆಗೆ ಅಡ್ಡಿಪಡಿಸುತ್ತದೆ.

ಬೀಜವಿರುವ ಹಣ್ಣು/ತರಕಾರಿಗಳನ್ನು ನಿಯಂತ್ರಿಸದಿರಿ

ಬೀಜವಿರುವ ಹಣ್ಣು/ತರಕಾರಿಗಳನ್ನು ನಿಯಂತ್ರಿಸದಿರಿ

ಬೀಜಯುಕ್ತಗಳಾದ ಟೊಮೆಟೊ, ಬದನೆಕಾಯಿ, ಬೆಂಡೆಕಾಯಿ, ಸೀಬೆಹಣ್ಣು, ಕಲ್ಲಂಗಡಿಯಂತಹ ಹಣ್ಣುಗಳ ಸೇವನೆಯು ಉಪಯುಕ್ತವಾಗಿದ್ದು, ಕಸಿ ಮಾಡಿಸಿದ ನಂತರ ಸೇವಿಸಿದರೆ ಉತ್ತಮವಾದ ಆಹಾರವಾಗಲಿದ್ದು, ಇವುಗಳಲ್ಲಿ ಬಯೋಕೆಮಿಕಲ್ ಸತ್ವಗಳಾದ ಎಲೆಕ್ಟ್ರೊಲೈಟ್ಸ್ ಮತ್ತು ಬೊಜ್ಜಿನ ಅಂಶಗಳು ಸಮತೋಲನದಲ್ಲಿರಲಿವೆ.

ಬೀಜವಿರುವ ಹಣ್ಣು/ತರಕಾರಿಗಳನ್ನು ನಿಯಂತ್ರಿಸದಿರಿ

ಬೀಜವಿರುವ ಹಣ್ಣು/ತರಕಾರಿಗಳನ್ನು ನಿಯಂತ್ರಿಸದಿರಿ

ಅಲ್ಲದೇ ರಕ್ತದಲ್ಲಿ ಪೊಟಾಷಿಯಮ್ ಸತ್ವಗಳು ರಕ್ತದಲ್ಲಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಆದರೆ ನೀವು ಮೂತ್ರಪಿಂಡದಲ್ಲಿ ಕಲ್ಲಿರುವ ಸಮಸ್ಯೆಯಿಂದ ಬಳಲುತ್ತಿದ್ದರೆ, ಇವುಗಳಿಂದ ದೂರವಿರಿ.

English summary

Diet tips every kidney transplant patient should follow

Post kidney transplant, most people have a low immunity due to the powerful medications that are prescribed to avoid rejection of the organ. These medications tend to make the patients more prone to infections and hence, following strict dietary guidelines is necessary to avoid any complication. Also, as most people suffering from kidney failure are diabetic, hypertensive or suffer from heart disease, dietary control is mandatory. Moreover, the use of immunosuppressive drugs can increase your risk of diabetes, hypertension or heart disease.
Story first published: Monday, January 25, 2016, 19:24 [IST]
X
Desktop Bottom Promotion