Just In
Don't Miss
- Finance
ತಿಂಗಳಲ್ಲಿ ಮೊದಲ ಬಾರಿಗೆ ಪೆಟ್ರೋಲ್ ಬೆಲೆಯಲ್ಲಿ ಇಳಿಕೆ
- Movies
ಬಿಗ್ ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಜೊತೆ ಸಲ್ಮಾನ್ ಖಾನ್!
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಆತಂಕವನ್ನು ನಿಯಂತ್ರಿಸಲು ನಿತ್ಯದ 'ಆಹಾರ ಪಥ್ಯ' ಹೀಗಿರಲಿ....
ಕಾಲ ಬದಲಾಗುತ್ತಿರುವಂತೆ ಮನುಷ್ಯನ ಹಿತಿಮಿತಿಗಳು ಕೂಡ ಬದಲಾಗುತ್ತಾ ಹೋಗುತ್ತದೆ. ಅದರಲ್ಲೂ ಈ ಸ್ಮಾರ್ಟ್ ಫೋನ್ ಯುಗದಲ್ಲಿ ಉಸಿರಾಡಲು ಸಮಯವಿಲ್ಲದಂತೆ ಕೆಲಸ ಮಾಡಬೇಕಾದ ಒತ್ತಡವಿದೆ. ಕಚೇರಿ, ಮನೆ ಹೀಗೆ ಪ್ರತಿಯೊಂದು ಕಡೆಯೂ ಒತ್ತಡವೇ ಇರುವ ಕಾರಣದಿಂದಾಗಿ ಮನುಷ್ಯ ಹಲವಾರು ರೀತಿಯ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುತ್ತಾನೆ.
ಇದರಲ್ಲಿ ಆತಂಕವು ಒಂದಾಗಿದೆ. ವ್ಯಕ್ತಿಯೊಬ್ಬನಲ್ಲಿ ಆತಂಕವು ಯಾವ ರೀತಿ ಹಾಗೂ ಯಾವ ಸಮಯದಲ್ಲಿ ಬರಬಹುದು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅತಿಯಾದ ಒತ್ತಡದಿಂದಾಗಿ ಹೆಚ್ಚಾಗಿ ಆತಂಕವು ಉಂಟಾಗುತ್ತದೆ. ಆದರೆ ಒತ್ತಡವನ್ನು ಕಡಿಮೆ ಮಾಡಿಕೊಂಡು ಆರಾಮವಾಗಿರಲು ಹಲವಾರು ರೀತಿಯ ಉಪಾಯಗಳಿವೆ.
ಕೆಲವೊಂದು ಸಲ ಪರಿಸ್ಥಿತಿಯು ಕೈತಪ್ಪಿ ಹೋಗುತ್ತಿದೆಯಲ್ಲಾ ಎನ್ನುವ ಒತ್ತಡವು ನಮ್ಮಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡುತ್ತದೆ. ಇದರಿಂದಾಗಿ ದೇಹ ಮತ್ತು ಮೆದುಳಿನ ಮೇಲೆ ಮತ್ತಷ್ಟು ಒತ್ತಡ ಬೀಳುವುದು. ಆತಂಕಕ್ಕೆ ಒಳಗಾಗಿರುವ ರೋಗಿಗಳಲ್ಲಿ ಗುಣಪಡಿಸಲು ಹಲವಾರು ರೀತಿಯ ವಿಧಾನಗಳಿವೆ.
ವಿಶೇಷ ತಜ್ಞರು ಈ ನಿಟ್ಟಿನಲ್ಲಿ ನೆರವಾಗಬಲ್ಲರು. ಇದರಲ್ಲಿ ಪರಿಣತಿಯನ್ನು ಪಡೆದುಕೊಂಡಿರುವವರು ಇದರ ಲಕ್ಷಣಗಳನ್ನು ತಿಳಿದುಕೊಂಡು ಚಿಕಿತ್ಸೆ ನೀಡುತ್ತಾರೆ. ಕೆಲವೊಂದು ಸಲ ಆತಂಕ ನಿವಾರಣೆಗೆ ನೈಸರ್ಗಿಕವಾದ ಆಹಾರ ಪದಾರ್ಥಗಳನ್ನು ಸೇವಿಸಲು ಕೂಡ ಶಿಫಾರಸ್ಸು ಮಾಡುತ್ತಾರೆ. ಆತಂಕವನ್ನು ಪರಿಹರಿಸುವ ಸ್ವಾಭಾವಿಕ ಮಾರ್ಗಗಳು
ಹೌದು, ಆಹಾರ ಪಥ್ಯದ ಕಡೆ ಗಮನಹರಿಸಿಕೊಂಡರೆ ಆತಂಕವನ್ನು ನಿವಾರಿಸಬಹುದಾಗಿದೆ. ಹಲವಾರು ರೀತಿಯ ಆಹಾರಗಳು ಆತಂಕವನ್ನು ನಿವಾರಿಸುವಲ್ಲಿ ಸಮರ್ಥವಾಗಿದೆ, ಎಂಬುದನ್ನು ಸಂಶೋಧನೆಯೊಂದರಲ್ಲಿ ಸಾಬೀತುಪಡಿಸಲಾಗಿದೆ.
ಕೆಲವೊಮ್ಮೆ ಯಾವುದಾದರೂ ಸಮಸ್ಯೆಗೆ ಸಿಲುಕಿ, ನಾವು ಆಳವಾಗಿ ಯೋಚಿಸಲು ಪ್ರಾರಂಭಿಸುತ್ತೇವೆ, ಆದರೆ ಕೂಡಲೇ ಇದರಿಂದ ಹೊರಬಂದು, ಏನಾದರು ತಿನ್ನುವುದರ ಕಡೆಗೆ ಮನಸ್ಸು ಮಾಡಿ, ಏಕೆಂದರೆ ಊಟ-ತಿಂಡಿಯು ನಿಮ್ಮ ಮನಸ್ಸನ್ನು ವಿಶ್ರಾಂತಿ ಸ್ಥಿತಿಗೆ ತಂದು, ಆತಂಕವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಆತಂಕದ ಸಮಸ್ಯೆಯಿಂದ ಬಳಲುವವರು, ತಾವು ಆತಂಕಕ್ಕೆ ಒಳಗಾದಾಗ ಏನಾದರು ತಿಂಡಿಯನ್ನು ತಿನ್ನುವುದು ಉತ್ತಮ. ಆತಂಕ ಅಥವಾ ಉದ್ವಿಗ್ನತೆಯನ್ನು ನಿಯಂತ್ರಿಸುವುದು ಹೇಗೆ?
ಅದರಲ್ಲೂ ಕೆಲವೊಂದು ಸೂಪರ್ ಫುಡ್‍ಗಳು ಆತಂಕವನ್ನು ಕಡಿಮೆ ಮಾಡುವ ಆಹಾರ ಪದಾರ್ಥಗಳಾಗಿ ಗುರುತಿಸಲ್ಪಟ್ಟಿವೆ. ಗ್ರೀನ್ ಟೀ, ಚಕ್ಕೆ ಮತ್ತು ಬಾಸಿಲ್ ಈ ಪಟ್ಟಿಯಲ್ಲಿ ಸೇರಿದವುಗಳಾಗಿವೆ. ಇದರ ಜೊತೆಗೆ ಬೆಳಗಿನ ಉಪಾಹಾರವನ್ನು ನೀವು ಹೆಚ್ಚಾಗಿ ಸೇವಿಸಿದಲ್ಲಿ, ದಿನಪೂರ್ತಿ ಚೈತನ್ಯಯುತವಾಗಿ ಇರಬಹುದು ಮತ್ತು ಆತಂಕವನ್ನು ನಿಭಾಯಿಸಬಹುದು.
ಬೆರ್ರಿ ಹಣ್ಣುಗಳು ಆ್ಯಂಟಿಆಕ್ಸಿಡೆಂಟ್ ಮತ್ತು ಪೈಥೋನ್ಯೂಟ್ರಿಯಂಟ್ಸ್‌ಗಳಿಂದ ಸಮೃದ್ಧವಾಗಿದ್ದು, ಇದು ಆತಂಕವನ್ನು ನಿವಾರಿಸುವುದು. ವಿಟಮಿನ್ ಗಳಿಂದ ಸಮೃದ್ಧವಾಗಿರುವಂತಹ ಈ ಹಣ್ಣುಗಳನ್ನು ತಿಂದರೆ ಮನಸ್ಸು ತುಂಬಾ ಶಾಂತವಾಗಿರುತ್ತದೆ.
ಬಾದಾಮಿಯಲ್ಲಿ ಕಬ್ಬಿನ ಮತ್ತು ಸತು ಹೇರಳವಾಗಿದೆ. ಇದು ಮೆದುಳನ್ನು ಶಾಂತವಾಗಿರಿಸಿ ಭಾವನೆಗಳನ್ನು ಸಮತೋಲನದಲ್ಲಿಡುತ್ತದೆ. ಅಷ್ಟೇ ಅಲ್ಲದೆ ಕಲೆವೊಮ್ಮೆ ಆತಂಕಕ್ಕೆ ಕಾರಣವಾಗುವಂತಹ ಕೊರ್ಟಿಸೊಲ್ ಹಾರ್ಮೋನು ಮಟ್ಟವನ್ನು ಕಡಿಮೆ ಮಾಡುವಲ್ಲಿ ಚಾಕಲೇಟು ತುಂಬಾ ಪರಿಣಾಮಕಾರಿಯಾಗಿದೆ.