Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ದಿಢೀರನೇ ಕಾಡುವ ವೈರಲ್ ಜ್ವರಕ್ಕೆ- ಪವರ್‌ಫುಲ್ ಮನೆಮದ್ದು
ವೈರಸ್ಸುಗಳು ನಮ್ಮ ಸುತ್ತಮುತ್ತ ಗಾಳಿಯಲ್ಲೆಲ್ಲಾ ಹರಡಿಕೊಂಡಿರುತ್ತವೆ. ಸಾಮಾನ್ಯವಾಗಿ ಇವು ನಮ್ಮನ್ನು ಬಾಧಿಸುವುದಿಲ್ಲ, ಅಥವಾ ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಮೀರಿ ಇವುಗಳ ಧಾಳಿ ನಿಲ್ಲುವುದಿಲ್ಲ. ಆದರೆ ವಾತಾವರಣದಲ್ಲಿ ಬದಲಾವಣೆ ಇವುಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತದೆ. ಇದಕ್ಕೆ ಪ್ರಮುಖ ಕಾರಣ ಗಾಳಿಯಲ್ಲಿ ಹೆಚ್ಚುವ ತೇವಾಂಶ. ಬರೆಯ ಗಾಳಿಯಲ್ಲಿ ಹತ್ತಾರು ವೈರಸ್ಸುಗಳು ಇದ್ದಿದ್ದು ತೇವಾಂಶದ ಕಣದಲ್ಲಿ ಇವು ಲಕ್ಷಗಟ್ಟಲೇ ಸಂಖ್ಯೆಯಲ್ಲಿ ನಮ್ಮ ದೇಹದ ಮೇಲೆ ಧಾಳಿ ಇಡುತ್ತವೆ. ವೈರಲ್ ಜ್ವರ: ಮಾತ್ರೆಯ ಬದಲು, ಮನೆಮದ್ದಿಗೆ ಆದ್ಯತೆ ನೀಡಿ
ಅದರಲ್ಲೂ ಈ ವೈರಸ್ ಹೊಸದಾಗಿದ್ದರೆ ತಕ್ಷಣ ಈ ಧಾಳಿಯಿಂದ ದೇಹವನ್ನು ರಕ್ಷಿಸಲು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ತಕ್ಷಣ ತುರ್ತು ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ. ಇದರಲ್ಲಿ ಪ್ರಮುಖವಾದುದು ದೇಹದ ತಾಪಮಾನವನ್ನು ಏರಿಸಿ ವೈರಸ್ಸುಗಳ ಧಾಳಿಗೆ ಅಡ್ಡಿಯುಂಟುಮಾಡುವುದು. ಜ್ವರ ಶೀತದ ಹುಟ್ಟಡಗಿಸುವ ಪವರ್ ಫುಲ್ ಸೂಪ್...
ಇದೇ ಜ್ವರ. ಇದನ್ನು ಕಡಿಮೆಗೊಳಿಸಲು ಸಾಮಾನ್ಯವಾಗಿ ಔಷಧಿ ಅಂಗಡಿಗಳಲ್ಲಿ ಕೆಲವು ಔಷಧಿಗಳು ಸುಲಭವಾಗಿ ದೊರಕುತ್ತವೆಯಾದರೂ ಕೆಲವು ಅನಿವಾರ್ಯ ಅಡ್ಡಪರಿಣಾಮಗಳನ್ನೂ ಎದುರಿಸಬೇಕಾಗುತ್ತದೆ. ಇದರ ಬದಲಿಗೆ ನಿಸರ್ಗ ನೀಡಿರುವ ಮತ್ತು ನಮ್ಮ ಹಿರಿಯರು ಪ್ರಯತ್ನಿಸಿ ಪ್ರಮಾಣಿಸಿರುವ ಮನೆಮದ್ದುಗಳನ್ನೇಕೆ ಪ್ರಯತ್ನಿಸಬಾರದು? ಮಕ್ಕಳನ್ನು ಕಾಡುವ ಜ್ವರಕ್ಕೆ ನೈಸರ್ಗಿಕ ಚಿಕಿತ್ಸೆಯೇ ಸಾಕು
ಇವು ನಿಮ್ಮ ಅಡುಗೆಮನೆಯಲ್ಲಿ ಸಾಮಾನ್ಯವಾಗಿರುವ ಸಾಮಾಗ್ರಿಗಳಿಂದಲೇ ತಯಾರಿಸಲ್ಪಟ್ಟವಾಗಿದ್ದು ವೈರಲ್ ಜ್ವರವನ್ನೂ ಶೀಘ್ರವಾಗಿ ಇಳಿಸಲು ನೆರವಾಗುತ್ತವೆ. ಕೆಲವು ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪ್ರಸ್ತುತಪಡಿಸಲಾಗಿದ್ದು ಇವುಗಳಲ್ಲಿ ಅತಿ ಸೂಕ್ತವಾದುದನ್ನು ಆರಿಸಿಕೊಳ್ಳಿ:

ಕೊತ್ತಂಬರಿ ಕಾಳಿನ ಟೀ
ಕೊತ್ತಂಬರಿ ಕಾಳು ಅಥವಾ ಧನಿಯ ಕಾಳಿನಲ್ಲಿ ಉತ್ತಮ ಪ್ರಮಾಣದ ಫೈಟೋನ್ಯೂಟ್ರಿಯೆಂಟ್ ಎಂಬ ಪೋಷಕಾಂಶ ಮತ್ತು ವಿವಿಧ ವಿಟಮಿನ್ನುಗಳಿದ್ದು ಇವೆಲ್ಲವೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ. ಅಲ್ಲದೇ ಇದರಲ್ಲಿರುವ ಪ್ರತಿಜೀವಕ ಮತ್ತು ಆವಿಯಾಗುವ ತೈಲಗಳಿದ್ದು ವೈರಸ್ಸುಗಳ ಧಾಳಿಯನ್ನೆದುರಿಸಲು ದೇಹಕ್ಕೆ ಹೆಚ್ಚಿನ ಬಲ ನೀಡುತ್ತದೆ. ಪರಿಣಾಮವಾಗಿ ಜ್ವರ ಶೀಘ್ರವಾಗಿ ಇಳಿಯುತ್ತದೆ.

ಕೊತ್ತಂಬರಿ ಕಾಳಿನ ಟೀ ತಯಾರಿಸುವ ವಿಧಾನ
ಒಂದು ಲೋಟ ನೀರಿಗೆ ಒಂದು ದೊಡ್ಡಚಮಚ ಧನಿಯ ಕಾಳುಗಳನ್ನು ಹಾಕಿ ಕುದಿಸಿ. ಸುಮಾರು ಒಂದು ನಿಮಿಷ ಕುದಿಸಿದ ಬಳಿಕ ಉರಿ ಆರಿಸಿ ತಣಿಯಲು ಬಿಡಿ. ಪೂರ್ಣವಾಗಿ ತಣಿದ ಬಳಿಕ ಇದನ್ನು ಸೋಸಿ ಕೊಂಚ ಹಾಲು ಮತ್ತು ಸಕ್ಕರೆ ಬೆರೆಸಿ ಮತ್ತೊಮ್ಮೆ ಕೊಂಚವೇ ಬಿಸಿ ಮಾಡಿ ಕುಡಿಯಿರಿ. ಜ್ವರ ಹೆಚ್ಚಿದ್ದಾಗ ದಿನಕ್ಕೆ ಮೂರು ಲೋಟ ಕುಡಿಯಿರಿ. ಬಳಿಕವೂ ದಿನಕ್ಕೆರಡು ಲೋಟ ಕುಡಿಯುವ ಮೂಲಕ ಜ್ವರ ಮತ್ತೆ ಏರದಂತೆ ನೋಡಿಕೊಳ್ಳಬಹುದು.

ತುಳಸಿ ಎಲೆಗಳು
ಔಷಧೀಯ ಗುಣಗಳ ಆಗರವೇ ಆಗಿರುವ ತುಳಸಿ ಎಲೆಗಳು ವೈರಲ್ ಜ್ವರವನ್ನೂ ಇಳಿಸಲು ಸಮರ್ಥವಾಗಿವೆ. ಇದರ ಬ್ಯಾಕ್ಟೀರಿಯಾ ನಿವಾರಕ, ಕ್ರಿಮಿನಿವಾರಕ, ಪ್ರತಿಜೀವಕ ಮತ್ತು ಶಿಲೀಂಧ್ರನಿವಾರಕ ಗುಣಗಳು ವೈರಲ್ ಜ್ವರಕ್ಕೆ ಕಾರಣವಾದ ವೈರಸ್ಸುಗಳನ್ನು ಸದೆಬಡಿಯಲು ಮತ್ತು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತವೆ.

ತುಳಸಿ ಎಲೆಗಳ ಟೀ ತಯಾರಿಸುವ ವಿಧಾನ
ಸುಮಾರು ಇಪ್ಪತ್ತರಷ್ಟು ಈಗತಾನೇ ಕೊಯ್ದ ಬಲಿತ ಮತ್ತು ಎಳೆಯ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಲೀಟರ್ ನೀರಿನಲ್ಲಿ ಕುದಿಸಿ. ಈ ನೀರಿಗೆ ಅರ್ಧ ಚಮಚ ಲವಂಗದ ಪುಡಿಯನ್ನು ಸೇರಿಸಿ. ಮಧ್ಯಮ ಉರಿಯಲ್ಲಿ ಈ ನೀರು ಅರ್ಧವಾಗುವವರೆಗೆ ಕುದಿಸಿ. ಬಳಿಕ ಉರಿ ಆರಿಸಿ ತಣಿಸಿ. ಈ ನೀರನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿ ಪ್ರತಿ ಎರಡು ಘಂಟೆಗಳಿಗೊಮ್ಮೆ ಕೊಂಚ ಕೊಂಚವಾಗಿ ಗುಟುಕರಿಸುತ್ತಾ ಹೋಗಿ. ಒಂದು ಅಥವಾ ಎರಡು ದಿನದಲ್ಲಿಯೇ ಜ್ವರ ಬಿಡುತ್ತದೆ.

ಒಣ ಶುಂಠಿಯ ಪುಡಿ
ಹಸಿಶುಂಠಿಯ ಹಲವು ಗುಣಗಳು ಒಣಗಿದ ಬಳಿಕವೂ ಉಳಿದುಕೊಳ್ಳುತ್ತವೆ. ಇದರಲ್ಲಿರುವ ಉರಿಯೂತ ನಿವಾರಕ ಗುಣ, ಉತ್ಕರ್ಷಣ ನಿರೋಧಕ ಮತ್ತು ನೋವು ನಿವಾರಕ ಗುಣ ಒಣಗಿಸಿ ಪುಡಿಮಾಡಿದ ಬಳಿಕವೂ ಉಳಿದುಕೊಳ್ಳುವ ಕಾರಣ ಒಣ ಶುಂಠಿಯ ಪುಡಿ ಸಹಾ ಹಲವು ವ್ಯಾಧಿಗಳನ್ನು ನಿವಾರಿಸಲು ಸಮರ್ಥವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಒಣ ಶುಂಠಿಯ ಪುಡಿ
ಇದರಲ್ಲಿ ವೈರಲ್ ಜ್ವರ ಸಹಾ ಒಂದಾಗಿದ್ದು ಜ್ವರವಿರುವ ರೋಗಿಗೆ ಕೊಂಚ ಒಣ ಶುಂಠಿಯ ಪುಡಿಯನ್ನು ಸಮಪ್ರಮಾಣದ ಜೇನಿನೊಂದಿಗೆ ಬೆರೆಸಿ ಸೇವಿಸುವ ಮೂಲಕ ಜ್ವರ ಶೀಘ್ರವಾಗಿ ಇಳಿಯಲು ನೆರವಾಗುತ್ತದೆ.

ಇದನ್ನು ತಯಾರಿಸುವ ಬಗೆ
ಒಂದು ವೇಳೆ ಒಣ ಶುಂಠಿಯ ಪುಡಿ ಇಲ್ಲದಿದ್ದರೆ ಒಣಶುಂಠಿಯ ತುಂಡುಗಳನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಬೇಯಿಸಿ. ಈ ನೀರು ಕಾಲುಭಾಗವಾದ ಬಳಿಕ ಸಮಪ್ರಮಾಣದ ಜೇನು ಬೆರೆಸಿ ಸೇವಿಸಬಹುದು. ಇನ್ನೊಂದು ವಿಧಾನವೆಂದರೆ ಸಮಪ್ರಮಾಣದಲ್ಲಿ ಒಂದು ಚಿಕ್ಕಚಮಚ ಒಣಶುಂಠಿ, ಅರಿಶಿನ, ಕಾಳುಮೆಣಸಿನ ಪುಡಿ ಮತ್ತು ಕೊಂಚವೇ ಸಕ್ಕರೆ (ಖಾರವನ್ನು ಕಡಿಮೆ ಮಾಡಲು) ಅಥವಾ ಬೆಲ್ಲ ಸೇರಿಸಿ ಒಂದು ಕಪ್ ನೀರಿಗೆ ಸೇರಿಸಿ ಕಲಕಿ ಕುದಿಸಿ. ನೀರು ಅರ್ಧಪ್ರಮಾಣದಷ್ಟಾದ ಬಳಿಕ ಉರಿ ಆರಿಸಿ ತಣಿಸಿ ದಿನಕ್ಕೆ ನಾಲ್ಕು ಬಾರಿ ಒಂದು ಅಥವಾ ಎರಡು ಚಮಚದಷ್ಟು ರೋಗಿಗೆ ತಿನ್ನಿಸಿ. ಇದರಿಂದ ಜ್ವರ ಶೀಘ್ರವಾಗಿ ಇಳಿಯುತ್ತದೆ.



Click it and Unblock the Notifications