For Quick Alerts
ALLOW NOTIFICATIONS  
For Daily Alerts

ನಿಮ್ಮ ಡಯಟ್ನಲ್ಲಿ ಕಲ್ಲಂಗಡಿ ಹಣ್ಣನ್ನು ಸೇರಿಸಲು ಸೂಕ್ತವಾದ ಕಾರಣಗಳು

By Lekhaka
|

ಬೇಸಿಗೆಯಲ್ಲಿ ತಿನ್ನಲು ಅತ್ಯುತ್ತಮವಾದ ಹಣ್ಣು ಎಂದರೆ ಕಲ್ಲಂಗಡಿ. ಇದಕ್ಕೆ ಪ್ರಮುಖ ಕಾರಣ ಇದರಲ್ಲಿರುವ ನೀರಿನ ಪ್ರಮಾಣ. ಕಲ್ಲಂಗಡಿಯಲ್ಲಿರುವಷ್ಟು ನೀರಿನ ಪ್ರಮಾಣ ಬೇರಾವ ಹಣ್ಣಿನಲ್ಲೂ ಇಲ್ಲ. ಇದೇ ಕಾರಣಕ್ಕೆ ಇದಕ್ಕೆ water ಎಂಬ ವಿಶೇಷಣ ಸೇರಿಸಿಯೇ watermelon ಎಂದಾಗಿದೆ. ಬರೆಯ ನೀರು ಮಾತ್ರವಲ್ಲ, ಬೇಸಿಗೆಯಲ್ಲಿ ಬಳಲಿದ ದೇಹಕ್ಕೆ ಇದರಲ್ಲಿ ಇನ್ನೂ ಹಲವಾರು ಪೋಷಕಾಂಶಗಳಿದ್ದು ಇಲ್ಲದ ಕೊಬ್ಬು ಮತ್ತು ಕಡಿಮೆ ಇರುವ ಸಕ್ಕರೆ ತೂಕ ಕಡಿಮೆಯಾಗಲೂ ನೆರವಾಗುತ್ತದೆ. ಇದರ ಸೇವನೆ ಮೆದುಳಿಗೂ ಆಹ್ಲಾದತೆ ನೀಡುವ ಮೂಲಕ ಇತರ ಯಾವುದೇ ಆಹಾರವನ್ನು ಸೇವಿಸುವುದಕ್ಕಿಂತ ಹತ್ತು ಪಟ್ಟು ಹೆಚ್ಚಿನ ಸಂತೋಷ ದೊರಕುತ್ತದೆ. ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

ಕಲ್ಲಂಗಡಿಯ ತಿರುಳು ಅಪ್ಪಟ ಕರಗದ ನಾರಾಗಿದ್ದು ಇದರ ರಸದಲ್ಲಿ ಪ್ರೋಟೀನುಗಳು ಮತ್ತು ಪೋಷಕಾಂಶಗಳಿವೆ. ಈ ನಾರನ್ನು ಕರಗಿಸಿಕೊಳ್ಳುವ ಪ್ರಯತ್ನದಲ್ಲಿ ದೇಹಕ್ಕೆ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳಬೇಕಾಗಿ ಬರುತ್ತದೆ. ಅಲ್ಲದೇ ಇದರಲ್ಲಿ ಹೆಚ್ಚಿನ ನೀರು ಇರುವ ಕಾರಣ ಎಷ್ಟು ತಿಂದಲೂ ಇತರ ಆಹಾರಕ್ಕಿಂತ ಕಡಿಮೆ ಪ್ರಮಾಣದ ಸಕ್ಕರೆ ದೊರಕುವ ಕಾರಣ ಮತ್ತು ಇನ್ನೂ ಹೆಚ್ಚಿನದನ್ನು ತಿನ್ನುವುದರಿಂದ ತಡೆಯುವ ಮೂಲಕ ತೂಕ ಏರದಂತೆ ತಡೆಯುತ್ತದೆ ಹಾಗೂ ಇರುವ ತೂಕ ಕಳೆದುಕೊಳ್ಳುವ ಪ್ರಯತ್ನಕ್ಕೆ ಬೆಂಬಲ ದೊರಕುತ್ತದೆ. ಮಧುಮೇಹಿಗಳೂ ಈ ಹಣ್ಣನ್ನು ನಿಯಮಿತ ಪ್ರಮಾಣದಲ್ಲಿ ಸೇವಿಸಬಹುದಾಗಿದ್ದು ಕೊಂಚ ಉಪ್ಪು ಮತ್ತು ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸಿ ತಮ್ಮ ತೂಕವನ್ನು ಇಳಿಸಿಕೊಳ್ಳಲು ಅಗತ್ಯವಾದ ಶಕ್ತಿಯನ್ನು ಪಡೆಯಬಹುದು. ಕಲ್ಲಂಗಡಿ: ಗರ್ಭಿಣಿಯರ ಆರೋಗ್ಯಕ್ಕೆ ಪರ್ಫೆಕ್ಟ್ ಹಣ್ಣು

 

ಕಲ್ಲಂಗಡಿ ಹಣ್ಣನ್ನು ಕತ್ತರಿಸಿಕೊಂಡು ಕೊಂಚ ಉಪ್ಪು ಕಾರದ ಪುಡಿ ಉದುರಿಸಿ ಅಥವಾ ಹಾಗೇ ತಿನ್ನುವುದನ್ನೇ ಹೆಚ್ಚಿನವರು ಇಷ್ಟಪಡುತ್ತಾರೆ. ಆದರೆ ಕಲ್ಲಂಗಡಿಯನ್ನು ತಿನ್ನಲು ಇನ್ನೂ ಹಲವು ವಿಧಾನಗಳಿವೆ. ತಿರುಳನ್ನು ಅರೆದು ಜ್ಯೂಸ್ ಮಾಡುವುದು, ಬೇರೆ ಹಣ್ಣುಗಳ ಒಟ್ಟಿಗೆ ಬೆರೆಸಿ ರಾಸಾಯನ ಮಾಡಿ ತಿನ್ನುವುದು ಇತ್ಯಾದಿ. ಆದರೆ ಹೊರಗೆ ತಿನ್ನುವಾಗ ಜ್ಯೂಸ್ ಮಾತ್ರ ಸೇವಿಸುವುದು ಉತ್ತಮ ಆಯ್ಕೆಯಲ್ಲ. ಏಕೆಂದರೆ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತಿರುಳಿನಿಂದ ಹೊರತೆಗೆಯುವುದು ಪ್ರಯಾಸಕರವಾದ ಕೆಲಸ. ದಾಹ ತಣಿಸುವ, ಕಲ್ಲಂಗಡಿ ಜ್ಯೂಸ್‌+ಕಾಳುಮೆಣಸಿನ ಪುಡಿ!

ಹಾಗಾಗಿ ಜ್ಯೂಸ್ ಅಂಗಡಿಯವರು ಬೀಜದ ಜೊತೆಗೇ ಅರೆದು ಬಿಡುತ್ತಾರೆ. ಆದರೆ ಈ ಬೀಜಗಳು ಜೀರ್ಣಶಕ್ತಿಗೆ ದೊಡ್ಡ ಸವಾಲಾಗಿರುವುದರಿಂದ ಅಜೀರ್ಣತೆ, ಕರುಳಿನ ಹುಣ್ಣು ಮೊದಲಾದ ತೊಂದರೆಗಳು ಎದುರಾಗಬಹುದು. ಆದ್ದರಿಂದ ಎಂದಿಗೂ ಕಲ್ಲಂಗಡಿ ತಿನ್ನುವಾಗ ಬೀಜಗಳನ್ನು ತಿನ್ನದೇ ಇರುವಂತೆ ಎಚ್ಚರ ವಹಿಸಬೇಕು. ಬೇಸಿಗೆಗೆ ತಣುಪಿನ ಪರಿಹಾರದ ಜೊತೆಗೇ ಚೈತನ್ಯವನ್ನೂ ನೀಡಿ ತೂಕವನ್ನೂ ಕಳೆದುಕೊಳ್ಳಲು ನೆರವಾಗುವ ಈ ಅದ್ಭುತ ಹಣ್ಣಿನ ಇತರ ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಈಗ ನೋಡೋಣ....

ಹೊಟ್ಟೆಯನ್ನು ತುಂಬಿದ ಅನುಭವ ನೀಡುತ್ತದೆ

ಹೊಟ್ಟೆಯನ್ನು ತುಂಬಿದ ಅನುಭವ ನೀಡುತ್ತದೆ

ಕಲ್ಲಂಗಡಿ ಹಣ್ಣಿಗೆ ಕೊಂಚವೇ ಕಾಳುಮೆಣಸಿನ ಪುಡಿಯನ್ನು ಉದುರಿಸಿ ತಿಂದರೆ ಇದರ ರುಚಿ ಇನ್ನಷ್ಟು ಹೆಚ್ಚಾಗುತ್ತದೆ ಹಾಗೂ ತೂಕ ಇಳಿಸುವ ವೇಗದಲ್ಲಿ ತೀವ್ರತೆಯನ್ನೂ ಪಡೆಯಬಹುದು. ಇದು ಹೇಗೆಂದರೆ ಕಾಳುಮೆಣಸಿನ ಪುಡಿ ಜೀರ್ಣರಸಗಳನ್ನು ಇನ್ನಷ್ಟು ಪ್ರಚೋದಿಸಿ ಹೆಚ್ಚಿನ ಕೊಬ್ಬನ್ನು ಬಳಸಿಕೊಳ್ಳುವಂತೆ ಮಾಡುತ್ತದೆ. ವಿಶೇಷವಾಗಿ ಸಂಜೆ ಮತ್ತು ರಾತ್ರಿ ಊಟದ ಬಳಿಕ ಸೇವಿಸುವ ಕಲ್ಲಂಗಡಿ-ಕಾಳುಮೆಣಸಿನ ಪುಡಿಯ ಜೋಡಿ ಹೆಚ್ಚಿನ ತೂಕವನ್ನು ಇಳಿಸಲು ತಕ್ಕುದಾಗಿದೆ.

ನೀರಿನ ಕೊರತೆಯನ್ನು ನೀಗಿಸುತ್ತದೆ

ನೀರಿನ ಕೊರತೆಯನ್ನು ನೀಗಿಸುತ್ತದೆ

ಮೊದಲೇ ವಿವರಿಸಿದಂತೆ ಈ ಹಣ್ಣಿನಲ್ಲಿ ಅಪಾರವಾದ ನೀರಿದೆ. ಎಷ್ಟು ಎಂದರೆ ಶೇಖಡಾ ತೊಂಭತ್ತರಷ್ಟು. ನೀರನ್ನೇ ಕುಡಿದರಾಯ್ತಲ್ಲಾ, ಕಲ್ಲಂಗಡಿ ಏಕೆ ತಿನ್ನಬೇಕು ಎಂಬ ಕುಹಕಪ್ರಶ್ನೆಗೆ ಹೀಗೆ ಉತ್ತರ ನೀಡಬಹುದು. ನೀರನ್ನು ಹಾಗೇ ಕುಡಿದರೆ ಇದು ಆರೋಗ್ಯಕ್ಕೆ ಉತ್ತಮ ಸರ್ವಥಾ ಹೌದು. ಆದರೆ ಈ ಪ್ರಮಾಣ ಕೆಲವೇ ನಿಮಿಷಗಳಲ್ಲಿ ಹೀರಲ್ಪಟ್ಟು ಮತ್ತೆ ಬೇಗನೇ ಬಾಯಾರಿಕೆಯಾಗುತ್ತದೆ. ಇದೇ ಕಾರಣಕ್ಕೆ ಹಿಂದಿನವರು ಬರೆಯ ನೀರನ್ನು ಕುಡಿಯದೇ ಒಂದು ತುಂಡು ಬೆಲ್ಲದ ಜೊತೆಗೇ ಸೇವಿಸುತ್ತಿದ್ದರು. ಕಲ್ಲಂಗಡಿ ತಿನ್ನುವುದರಿಂದಲೂ ಇದೇ ರೀತಿಯ ಪ್ರಯೋಜನವಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ನೀರಿನ ಕೊರತೆಯನ್ನು ನೀಗಿಸುತ್ತದೆ
 

ನೀರಿನ ಕೊರತೆಯನ್ನು ನೀಗಿಸುತ್ತದೆ

ಹೊಟ್ಟೆಯಲ್ಲಿ ಕಲ್ಲಂಗಡಿಯ ನಾರಿನಿಂದ ನೀರನ್ನು ಹೀರಿಕೊಳ್ಳಲು ಜೀರ್ಣಾಂಗಗಳು ಕೊಂಚ ಕಷ್ಟಪಡಬೇಕಾಗುತ್ತದೆ. ಪರಿಣಾಮವಾಗಿ ದೇಹಕ್ಕೆ ಒಮ್ಮೆಲೇ ನೀರು ಲಭ್ಯವಾಗದೇ ನಿಧಾನವಾಗಿ ಹೆಚ್ಚು ಹೊತ್ತಿನ ಕಾಲ ಲಭ್ಯವಾಗುತ್ತದೆ. ಇದು ದಿನವಿಡೀ ಚಟುವಟಿಕೆಯಿಂದರಲು ನೆರವಾಗುತ್ತದೆ ಹಾಗೂ ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.

ಊಟದ ಸಾಲಾಡ್ ಗಾಗಿ ಉತ್ತಮ ಆಯ್ಕೆಯಾಗಿದೆ

ಊಟದ ಸಾಲಾಡ್ ಗಾಗಿ ಉತ್ತಮ ಆಯ್ಕೆಯಾಗಿದೆ

ಊಟದ ಜೊತೆ ಹಸಿಯಾಗಿ ಸೇವಿಸಬಹುದಾದ ಸೌತೆ, ಈರುಳ್ಳಿ, ಮೂಲಂಗಿ, ಕ್ಯಾರೆಟ್, ಕೋಸು ಮೊದಲಾದ ತರಕಾರಿಗಳ ಜೊತೆಗೇ ಕಲ್ಲಂಗಡಿಯನ್ನೂ ಸೇರಿಸಿಕೊಳ್ಳಬಹುದು. ಇದರ ಸಿಹಿ ಊಟದ ಸವಿಯನ್ನು ಹೆಚ್ಚಿಸುವ ಜೊತೆಗೇ ಜೀವರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸಲೂ ನೆರವಾಗುತ್ತದೆ. ಪರಿಣಾಮವಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಅನಗತ್ಯ ಕ್ಯಾಲೋರಿಗಳಿಂದ ರಕ್ಷಿಸುತ್ತದೆ

ಅನಗತ್ಯ ಕ್ಯಾಲೋರಿಗಳಿಂದ ರಕ್ಷಿಸುತ್ತದೆ

ಅತಿಹೆಚ್ಚಿನ ನೀರಿನ ಪರಿಣಾಮವಾಗಿ ಒಟ್ಟು ಪ್ರಮಾಣದ ಕಲ್ಲಂಗಡಿಯಲ್ಲಿ ಕಡಿಮೆ ಕ್ಯಾಲೋರಿಗಳೀವೆ. ಅಂದರೆ ಪ್ರತಿ ಬಾರಿ ಸಾಮಾನ್ಯವಾಗಿ ತಿನ್ನುವ ಪ್ರಮಾಣದಲ್ಲಿ ಕೇವಲ 28 ಕ್ಯಾಲೋರಿಗಳಿವೆ. ಇದೇ ಪ್ರಮಾಣದ ಮಾಂಸದ ಅಥವಾ ಮಸಾಲೆಯಾಧಾರಿತ ಆಹಾರವನ್ನು ಸೇವಿಸಿದರೆ ನಮಗೆ ಸಿಗುವ ಕ್ಯಾಲೋರಿಗಳ ಪ್ರಮಾಣ ಸುಮಾರು 250-400ರ ನಡುವೆ ಇರುತ್ತದೆ.

ಇದರ ಮೂರು ಅದ್ಭುತ ಆರೋಗ್ಯಕರ ಪ್ರಯೋಜನಗಳು

ಇದರ ಮೂರು ಅದ್ಭುತ ಆರೋಗ್ಯಕರ ಪ್ರಯೋಜನಗಳು

ತೂಕ ಇಳಿಸಲು ನೆರವಾಗುವ ಜೊತೆಗೇ ಕಲ್ಲಂಗಡಿಯನ್ನು ನಿಯಮಿತವಾಗಿ ಸೇವಿಸುವ ಮೂಲಕ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಲೂ ಸಾಧ್ಯವಿದೆ. ಅಲ್ಲದೇ ಮೂತ್ರಪಿಂಡಗಳಲ್ಲಿ ಕಲ್ಲುಗಳಾಗದಂತೆ ತಡೆಯುತ್ತದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸಿ ಉತ್ತಮ ಸ್ಥಿತಿಯಲ್ಲಿರಲು ನೆರವಾಗುತ್ತದೆ. ಅಷ್ಟೇ ಅಲ್ಲ. ಇದರ ಕೆಂಪು ಬಣ್ಣಕ್ಕೆ ಕಾರಣವಾದ ಲೈಕೋಪೀನ್ ಎಂಬ ಪೋಷಕಾಂಶ ಹೃದಯಕ್ಕೂ ಉತ್ತಮವಾಗಿದ್ದು ಹೃದಯ ಸಂಬಂಧಿ ತೊಂದರೆ ಮತ್ತು ಆಘಾತಗಳಿಂದ ರಕ್ಷಿಸುತ್ತದೆ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

* ಕಲ್ಲಂಗಡಿ ಭಾರವಾಗಿದ್ದಷ್ಟೂ ಉತ್ತಮ

* ಅಂಗಡಿಯವರು ನಿಮ್ಮೆದುರು ಕಲ್ಲಂಗಡಿಯನ್ನು ಕತ್ತರಿಸಿ ಒಂದು ಚೌಕಾಕಾರದ ತುಂಡನ್ನು ತಿಂದು ನೋಡಿಯೇ ಖರೀದಿಸಲು ದುಂಬಾಲು ಬಿದ್ದರೆ ಒಮ್ಮೆಲೇ ಖರೀದಿಸಬೇಡಿ. ಏಕೆಂದರೆ ಈ ತುಂಡು ಅತಿ ಸಿಹಿಯಾಗಿರುತ್ತದೇನೋ ನಿಜ, ಆದರೆ ಮನೆಗೆ ಬಂದ ಮೇಲೆ ನೀವು ರುಚಿ ನೋಡಿದ ಕಲ್ಲಂಗಡಿಯೇ ಸಪ್ಪೆಯಾಗಿರುವುದನ್ನು ನೋಡಿ ಪೆಚ್ಚಾಗುತ್ತೀರಿ.

*ಏಕೆಂದರೆ ಇದನ್ನು ಕತ್ತರಿಸಲು ಉಪಯೋಗಿಸಿದ ಕತ್ತಿಗೆ ಅವರು ಜೇನು ಸವರಿ ಒಣಗಿಸಿ ಅದರಿಂದ ಕತ್ತರಿಸಿರುತ್ತಾರೆ.

*ಕತ್ತರಿಸಿದ ಭಾಗದಲ್ಲಿ ಕೊಂಚ ಜೇನು ಅಂಟಿಕೊಂಡು ಬಂದು ಸಿಹಿಯಾಗಿರಿಸುತ್ತದೆ.ಇದನ್ನು ಪರೀಕ್ಷಿಸಬೇಕೆಂದರೆ ನಿಮ್ಮ ಬಳಿ ಇರುವ ಕತ್ತಿಯನ್ನೇ ಕೊಟ್ಟು ಕತ್ತರಿಸಲು ಹೇಳಿ ಅವರ ಭಾವನೆಯನ್ನು ಗಮನಿಸಿ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

* ಹಣ ಹೆಚ್ಚಾಗುತ್ತದೆ ಎಂಬ ಭಯದಿಂದ ಚಿಕ್ಕದನ್ನು ಆರಿಸಬೇಡಿ. ಸಾಧ್ಯವಾದಷ್ಟು ದೊಡ್ಡದನ್ನೇ ಆರಿಸಿ. ಏಕೆಂದರೆ ದೊಡ್ಡದಾದಷ್ಟೂ ಸಿಹಿ ಹೆಚ್ಚು.

* ತೊಟ್ಟಿನ ಭಾಗದಲ್ಲಿ ಸೂಕ್ಷ್ಮವಾಗಿ ಗಮನಿಸಿ. ಇಲ್ಲಿ ಮರದ ಅಂಟಿನಂತೆ ಅತಿ ತೆಳ್ಳಗೆ ಸ್ರವಿಸಿ ಒಣಗಿದ್ದರೆ ಇದು ಅತ್ಯುತ್ತಮ ಎಂದು ಭಾವಿಸಬಹುದು. ಏಕೆಂದರೆ ಇದು ಒಳಗಣ ಸಕ್ಕರೆ ನೀರಾಗಿ ಹೊರಹರಿದು ಗಟ್ಟಿಯಾದ ಪರಿಯಾಗಿದೆ.

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

ಕಲ್ಲಂಗಡಿಯನ್ನು ಆರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳು:

* ನೈಸರ್ಗಿಕವಾಗಿ ಬಿಸಿಲಿನಲ್ಲಿ ಬೆಳೆದ ಕಲ್ಲಂಗಡಿ ಹಣ್ಣಿನ ಒಂದು ಭಾಗ ನೆಲಕ್ಕೆ ತಾಗಿರುವ ಕಾರಣ ಇಲ್ಲಿ ನಸು ಹಸಿರು ಬಣ್ಣವಾಗಿದ್ದು ಇತರ ಕಡೆ ಗಾಢ ಬಣ್ಣ ಇರುತ್ತದೆ. ಈ ನಸುಹಸಿರು ಬಣ್ಣಕ್ಕೆ field spot ಎಂದು ಕರೆಯುತ್ತಾರೆ. ಹಣ್ಣನ್ನು ತಿರುಗಿಸಿ ನೋಡಿ ಈ ಭಾಗ ಇರುವುದನ್ನು ಖಚಿತಪಡಿಸಿಕೊಳ್ಳಿ. ಎಲ್ಲಾ ಕಡೆ ಒಂದೇ ಬಣ್ಣ ಇದ್ದರೆ ಇದು ಕೃತಕವಾಗಿ ಹಣ್ಣು ಮಾಡಿದ ಕಲ್ಲಂಗಡಿಯಾಗಿರಬಹುದು.

* ಅತಿಹೆಚ್ಚು ಸಿಹಿ ಇದ್ದರೂ ಅನುಮಾನ ಪಡಬೇಕು. ಏಕೆಂದರೆ ಸಿಹಿ ಹೆಚ್ಚಿಸಲು ಖದೀಮ ವ್ಯಾಪಾರಿಗಳು ಇಂಜೆಕ್ಷನ್ ಮೂಲಕ ಅತಿ ಸಾಂದ್ರತೆಯ ಸಕ್ಕರೆಯನ್ನು ಸೇರಿಸಿರುತ್ತಾರೆ.

English summary

Perfect Reason To Add Watermelon To Your Diet

Watermelon, a super summer fruit, should be on top of your list this season. Watermelon has a ton of health benefits, and one of them includes weight loss. watermelon is the perfect fruit to have that can aid in rapid and natural weight loss. Take a look at why we suggest this red juicy summer fruit to burn thy fat:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more