For Quick Alerts
ALLOW NOTIFICATIONS  
For Daily Alerts

ಸಿಗರೇಟು ಬಿಟ್ಟ ಬಳಿಕ, ಆರೋಗ್ಯ ಹೇಗಿರುತ್ತೆ ನೋಡಿ

By Super
|

"ಧೂಮಪಾನ ಬಿಡುವುದು ಬಹಳ ಸುಲಭ ರಾಯರೇ, ಎಷ್ಟೋ ಸಲ ನಾನೇ ಬಿಟ್ಟಿದ್ದೀನಿ" ಇದು ಬೀಚಿಯವರ ಒಂದು ನಗೆಹನಿ. ಧೂಮಪಾನ ಒಂದು ವ್ಯಸನ. ಇದನ್ನು ಬಿಡುವುದು ಅಷ್ಟು ಸುಲಭವಲ್ಲ. ಅಲ್ಲದೇ ಇದನ್ನು ಒಮ್ಮೆಲೇ ಬಿಡಲೂ ಬಾರದು. 'ಧೂಮಪಾನ ಬಿಟ್ಟು ಬಿಡಿ'-ಇದು ಪ್ರತಿ ಧೂಮಪಾನಿಗೂ ಅವರ ಆಪ್ತರು, ಹಿತೈಷಿಗಳು, ಹಿರಿಯರು, ಗುರುಗಳು ಮತ್ತು ಅಭಿಮಾನಿಗಳು ಹೇಳುವ ಸಲಹೆ. ಆದರೆ ವೈದ್ಯರು ಮಾತ್ರ ಒಂದೇ ಪದದಲ್ಲಿ 'ಸಿಗರೇಟು ಬಿಡಿ' ಎಂದು ಅಜ್ಞಾಪಿಸುವುದಿಲ್ಲ! ಏಕೆಂದರೆ ಇದು ಸಾಧ್ಯವಲ್ಲದ ಮಾತು. ಏಕೆಂದರೆ ಹಲವು ವರ್ಷಗಳ ಧೂಮಸೇವನೆಯಿಂದ ಧೂಮಪಾನಿಯ ದೇಹ ಮತ್ತು ಮನಸ್ಸು ಇದಕ್ಕೆ ಒಗ್ಗಿಕೊಂಡಿದ್ದು ಇದರಿಂದ ಥಟ್ಟನೇ ಹೊರಬರುವುದು ಅಪಾಯಕಾರಿಯಾಗಿದೆ. ವೈದ್ಯರು ಈ ಸ್ಥಿತಿಯನ್ನು "dependence" ಎಂದು ಕರೆಯುತ್ತಾರೆ.

ಧೂಮಪಾನ ವ್ಯಸನವಾದರೂ, ಇದರಿಂದ ಹೊರಬರಲು ಕೇವಲ ಧೂಮಪಾನಿಯ ಧೃಡಸಂಕಲ್ಪಕ್ಕೆ ಮಾತ್ರ ಸಾಧ್ಯ. ಅಂತೆಯೇ ಒಮ್ಮೆ ಧೂಮಪಾನಿ ಇದರಿಂದ ಹೊರಬರಲು ದೃಢಸಂಕಲ್ಪ ಮತ್ತು ದೃಢನಿಶ್ಚಯ ಹೊಂದಿದ ಬಳಿಕ ವೈದ್ಯರಿಗೆ ಮುಂದಿನ ಕೆಲಸ ಸುಲಭವಾಗುತ್ತದೆ. ಏಕೆಂದರೆ ಧೂಮಪಾನವನ್ನು ಒಮ್ಮೆಲೇ ಬಿಟ್ಟರೆ ದೇಹ ಹಲವು ಪ್ರಕೋಪಗಳನ್ನು ವ್ಯಕ್ತಪಡಿಸುತ್ತದೆ. ಇದಕ್ಕೆ ವೈದ್ಯರು withdrawal symptoms ಎಂದು ಕರೆಯುತ್ತಾರೆ. ಸಿಗರೇಟಿಲ್ಲದೇ ಬದುಕಲಾರೆ ಎಂಬಂತೆ ವರ್ತಿಸುವುದು, ಅತೀವ ತಲೆನೋವು, ವಾಂತಿ, ಎದೆಯಲ್ಲಿ ನೋವು, ಮೈಯೆಲ್ಲಾ ಬೆವರುವಿಕೆ, ರಕ್ತದ ಒತ್ತಡದಲ್ಲಿ ಅತೀವವಾದ ಏರುಪೇರು, ವಿಪರೀತ ಸುಸ್ತು, ಧ್ವನಿಪೆಟ್ಟಿಗೆ ದುರ್ಬಲವಾಗಿ ಧ್ವನಿಯೇ ಹೊರಬರದಂತಾಗುವುದು, ಸತತ ಕೆಮ್ಮು ಇತ್ಯಾದಿಗಳು ಇದರ ಲಕ್ಷಣಗಳಾಗಿವೆ. ನೈಸರ್ಗಿಕವಾಗಿ ಧೂಮಪಾನವನ್ನು ತ್ಯಜಿಸುವ ಸರಳ ವಿಧಾನಗಳು

ಇದನ್ನು ತಡೆಯಲು ದೇಹ ಮತ್ತು ಮನಸ್ಸನ್ನು ನಿಧಾನವಾಗಿ ಇದರಿಂದ ಹೊರಬರುವಂತೆ ಮಾಡಬೇಕು. ಅಂದರೆ ನಿತ್ಯ ಸೇದುವ ಪ್ರಮಾಣವನ್ನು ನಿಧಾನವಾಗಿ ತಗ್ಗಿಸುತ್ತಾ, ಎರಡು ಸಿಗರೇಟುಗಳ ನಡುವಣ ಅಂತರವನ್ನು ಹೆಚ್ಚಿಸುತ್ತಾ ನಿಧಾನವಾಗಿ ದೇಹ ಮತ್ತು ಮನಸ್ಸನ್ನು ಇದರಿಂದ ಹೊರಬರುವಂತೆ ಓಲೈಸಿಕೊಳ್ಳಬೇಕು. ಬನ್ನಿ ಧೂಮಪಾನ ಬಿಟ್ಟ ಬಳಿಕ ಏನೇನಾಗುತ್ತದೆ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

30 ನಿಮಿಷಗಳ ಬಳಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ

30 ನಿಮಿಷಗಳ ಬಳಿಕ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರುತ್ತದೆ

ಧೂಮಪಾನ ಬಿಟ್ಟ ಬಳಿಕ ಧೂಮಪಾನಕ್ಕೆ ಮನಸ್ಸಾದರೂ ಆಗ ಸಿಗರೇಟು ಸೇದದೇ ಇದ್ದರೆ ಉದ್ವೇಗದ ಕಾರಣ ರಕ್ತದೊತ್ತಡ ಕೊಂಚ ಹೆಚ್ಚುತ್ತದೆ. ಆದರೆ ದೃಢಸಂಕಲ್ಪ ಹೊಂದಿರುವ ಧೂಮಪಾನಿ ಇದಕ್ಕೆ ಬಗ್ಗದೇ ಸುಮ್ಮನಿದ್ದುಬಿಟ್ಟರೆ ಸರಿ, ಕೇವಲ ಮೂವತ್ತು ನಿಮಿಷಗಳಲ್ಲಿ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.

ಒಂಬತ್ತು ಗಂಟೆಗಳ ಬಳಿಕ ಆಮ್ಲಜನಕದ ಮಟ್ಟ ಏರುತ್ತದೆ

ಒಂಬತ್ತು ಗಂಟೆಗಳ ಬಳಿಕ ಆಮ್ಲಜನಕದ ಮಟ್ಟ ಏರುತ್ತದೆ

ಪ್ರತಿ ಬಾರಿ ಧೂಮಪಾನ ಮಾಡಿದಾಗಲೂ ಶ್ವಾಸಕೋಶದ ಮೂಲಕ ಕಾರ್ಬನ್ ಮಾನಾಕ್ಸೈಡ್ ಎಂಬ ವಿಷಾನಿಲ ರಕ್ತಕ್ಕೆ ಸೇರುತ್ತದೆ. ಇದು ಪೂರ್ಣವಾಗಿ ಹೊರಬರಲು ಒಟ್ಟು ಒಂಭತ್ತು ಘಂಟೆಗಳಾದರೂ ಬೇಕು. ಅಂದರೆ ಒಂಭತ್ತು ಘಂಟೆಗಳ ಇದರ ಪ್ರಭಾವ ಇಲ್ಲವೆನ್ನುವಷ್ಟು ಕಡಿಮೆಯಾಗಿರುತ್ತದೆ. ಪೂರ್ಣಪ್ರಮಾಣದಲ್ಲಿ ಹೊರಹೋಗಲು ಒಂದು ದಿನವೇ ಬೇಕಾಗಬಹುದು.

2 ದಿನಗಳ ನಂತರ ರುಚಿ ಮತ್ತು ಪರಿಮಳ ಏನೆಂದು ಅರ್ಥವಾಗುತ್ತದೆ

2 ದಿನಗಳ ನಂತರ ರುಚಿ ಮತ್ತು ಪರಿಮಳ ಏನೆಂದು ಅರ್ಥವಾಗುತ್ತದೆ

ಧೂಮಪಾನದ ಕಡೆಯ ಸಿಗರೇಟನ್ನು ಸೇದಿದ ಬಳಿಕ ಎರಡು ದಿನಗಳವರೆಗೆ ಧೂಮಪಾನಿಯ ರಕ್ತದಲ್ಲಿ ನಿಕೋಟಿನ್ ಪ್ರಮಾಣ ಉಳಿದಿರುತ್ತದೆ. ಇದು ಕ್ರಮೇಣ ಕಡಿಮೆಯಾಗುತ್ತಾ ಎರಡು ದಿನಗಳ ಬಳಿಕ ಪೂರ್ಣವಾಗಿ ಹೊರಹೋಗುತ್ತದೆ. ಇದು ಹೃದಯಾಘಾತದ ಸಂಭವವನ್ನು ಕಡಿಮೆಗೊಳಿಸುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

2 ದಿನಗಳ ನಂತರ ರುಚಿ ಮತ್ತು ಪರಿಮಳ ಏನೆಂದು ಅರ್ಥವಾಗುತ್ತದೆ

2 ದಿನಗಳ ನಂತರ ರುಚಿ ಮತ್ತು ಪರಿಮಳ ಏನೆಂದು ಅರ್ಥವಾಗುತ್ತದೆ

ಯಾವಾಗ ನಿಕೋಟಿನ್ ಹೊರಹೋಯಿತೋ, ಧೂಮಪಾನಿಯ ಮೂಗು ಪರಿಮಳವನ್ನು ಗ್ರಹಿಸಲು ಶಕ್ತವಾಗುತ್ತದೆ. ನಾಲಿಗೆಯ ರುಚಿಯೂ ಹಿಂದೆ ಬರುತ್ತದೆ. ಧೂಮಪಾನದ ಕಾರಣ ತಾನು ಇದುವರೆಗೆ ಏನನ್ನು ಕಳೆದುಕೊಂಡಿದ್ದೆ ಎಂಬುದು ಧೂಮಪಾನಿಗೆ ಈಗ ಅರ್ಥವಾಗುತ್ತದೆ.

3 ದಿನಗಳ ಬಳಿಕ ಪೂರ್ಣ ಉಸಿರು ಎಳೆದುಕೊಳ್ಳಲು ಸಾಧ್ಯವಾಗುತ್ತದೆ

3 ದಿನಗಳ ಬಳಿಕ ಪೂರ್ಣ ಉಸಿರು ಎಳೆದುಕೊಳ್ಳಲು ಸಾಧ್ಯವಾಗುತ್ತದೆ

ಮೂರು ದಿನಗಳ ಬಳಿಕ ಶ್ವಾಸಕೋಶ ಮತ್ತು ಶ್ವಾಸನಾಳಗಳು ಸಡಿಲಗೊಂಡು ಇನ್ನಷ್ಟು ವಿಸ್ತಾರಕ್ಕೆ ಹಿಗ್ಗಲು ಸಾಮರ್ಥ್ಯ ಪಡೆಯುತ್ತವೆ. ಇದು ಹೆಚ್ಚಿನ ಆಮ್ಲಜನಕ ನೀಡಲು ನೆರವಾಗುತ್ತದೆ. ಹೆಚ್ಚಿನ ಆಮ್ಲಜನಕ ನಿತ್ಯದ ಚಟುವಟಿಕೆಯನ್ನು ಆಹ್ಲಾದಕರವಾಗಿಸುತ್ತದೆ. ಇದುವರೆಗೆ ಈ ಚುರುಕುತನ ಎಲ್ಲಿ ಹೋಗಿತ್ತು ಎಂದು ಧೂಮಪಾನಿ ಹಪಹಪಿಸುವಂತೆ ಮಾಡುತ್ತದೆ.

ಎರಡು ವಾರಗಳ ಬಳಿಕ ರಕ್ತಸಂಚಾರ ಉತ್ತಮಗೊಳ್ಳುತ್ತದೆ

ಎರಡು ವಾರಗಳ ಬಳಿಕ ರಕ್ತಸಂಚಾರ ಉತ್ತಮಗೊಳ್ಳುತ್ತದೆ

ಎರಡು ವಾರಗಳಿಂದ ಸುಮಾರು ಹತ್ತು ವಾರಗಳ ಅವಧಿಯಲ್ಲಿ ನಿಧಾನವಾಗಿ ರಕ್ತಸಂಚಾರ ಉತ್ತಮಗೊಳ್ಳುತ್ತಾ ಹೋಗುತ್ತದೆ. ಹೃದಯಬಡಿತ ಹೆಚ್ಚುತ್ತದೆ. ಇದು ದೇಹಕ್ಕೆ ಹೆಚ್ಚಿನ ಶಕ್ತಿ ಮತ್ತು ಉತ್ಸಾಹವನ್ನು ತುಂಬುತ್ತದೆ. ಸಿಗರೇಟು ಬಿಟ್ಟ ನಂತರ ಮರಗಟ್ಟಿದ್ದ ಮನಸ್ಸು ಅರಳಿ ಹೂವಾಗುತ್ತದೆ. ಕೊಂಚ ದೂರಕ್ಕೂ ಕಾರು ತೆಗೆದುಕೊಂಡು ಹೋಗುತ್ತಿದ್ದವರು ಈಗ ಎಷ್ಟೋ ದೂರ ನಡೆದೇ ಹೋಗಿ ಬರುವಷ್ಟು ಆರೋಗ್ಯದಿಂದ ಕಳಕಳಿಸುತ್ತಾರೆ.

ತಿಂಗಳ ಬಳಿಕ ಶ್ವಾಸಕೋಶ ಇನ್ನಷ್ಟು ಉತ್ತಮಗೊಳ್ಳುತ್ತದೆ

ತಿಂಗಳ ಬಳಿಕ ಶ್ವಾಸಕೋಶ ಇನ್ನಷ್ಟು ಉತ್ತಮಗೊಳ್ಳುತ್ತದೆ

ನಮ್ಮ ದೇಹದ ಅಂಗಗಳಲ್ಲಿ ಅತಿ ನಿಧಾನವಾಗಿ ರಿಪೇರಿಗೊಳ್ಳುವ ಅಂಗಗಳಲ್ಲಿ ಶ್ವಾಸಕೋಶವೂ ಒಂದು ಧೂಮಪಾನದಿಂದ ಹೊರಬಂದ ಎಂಟರಿಂದ ಒಂಭತ್ತು ತಿಂಗಳ ಅವಧಿಯ ಬಳಿಕ ಇದರ ಕ್ಷಮತೆ 15 ಶೇಖಡಾದಷ್ಟು ಉತ್ತಮಗೊಳ್ಳುತ್ತದೆ. ಇದರಿಂದ ಶ್ವಾಸಸಂಬಂಧಿ ರೋಗಗಳು, ಕೆಮ್ಮು, ಕಫ, ಉಸಿರು ತೆಗೆದುಕೊಳ್ಳಲು ಕಷ್ಟವಾಗುವುದು ಮೊದಲಾದ ತೊಂದರೆಗಳೆಲ್ಲಾ ನಿಧಾನಕ್ಕೆ ಕಡಿಮೆಯಾಗುತ್ತಾ ಹೋಗುತ್ತವೆ.

ವರ್ಷದ ಬಳಿಕ ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ

ವರ್ಷದ ಬಳಿಕ ಹೃದಯಾಘಾತದ ಸಂಭವ ಕಡಿಮೆಯಾಗುತ್ತದೆ

ಧೂಮಪಾನರಹಿತ ಜೀವನದ ಒಂದು ಸಂವತ್ಸರ ಕಳೆಯುವಷ್ಟರಲ್ಲಿ ಹೃದಯಾಘಾತದ ಸಂಭವತೆ ಶೇಖಡಾ ಐವತ್ತಕ್ಕಿಂತಲೂ ಕಡಿಮೆಯಾಗುತ್ತದೆ. ರಕ್ತನಾಳಗಳು ತಮ್ಮ ಸಾಮಾನ್ಯ ಸ್ಥಿತಿಯತ್ತ್ತಬಹುತೇಕ ಮರಳಿರುತ್ತವೆ. ಇದು ಆರೋಗ್ಯವನ್ನು ಇನ್ನಷ್ಟು ವೃದ್ಧಿಸುತ್ತದೆ.

ಐದು ವರ್ಷಗಳ ಬಳಿಕ ಹೆದರಿಕೆ ತಪ್ಪುತ್ತದೆ

ಐದು ವರ್ಷಗಳ ಬಳಿಕ ಹೆದರಿಕೆ ತಪ್ಪುತ್ತದೆ

ಐದು ವರ್ಷಗಳ ಬಳಿಕ ದೇಹಕ್ಕೆ ಧೂಮಪಾನದ ಮೂಲಕ ಎದುರಾಗಬಹುದಾಗಿದ್ದ ಎಲ್ಲಾ ಸಾಧ್ಯತೆಗಳು ಇಲ್ಲವಾಗುತ್ತವೆ. ಮೆದುಳು ಮತ್ತು ಹೃದಯ ಈ ಭಯದಿಂದ ಮುಕ್ತವಾಗಿ ಹೆಚ್ಚು ಸಕ್ಷಮವಾಗುತ್ತವೆ. ಒಂದು ವೇಳೆ ಉತ್ತಮ ಆಹಾರ, ನಿಯಮಿತ ವ್ಯಾಯಮ, ಒತ್ತಡವಿಲ್ಲದ ದಿನಚರಿಯನ್ನು ರೂಢಿಸಿಕೊಂಡರೆ ಇತರ ಕಾರಣದಿಂದ ಬರಬಹುದಾದ ಈ ಸಾಧ್ಯತೆಗಳು ಸಹಾ ಇಲ್ಲವಾಗುತ್ತವೆ.

10 ವರ್ಷಗಳ ಬಳಿಕ ಶ್ವಾಸಕೋಶದ ಕ್ಯಾನ್ಸರ್ ನ ಹೆದರಿಕೆ ತಪ್ಪುತ್ತದೆ

10 ವರ್ಷಗಳ ಬಳಿಕ ಶ್ವಾಸಕೋಶದ ಕ್ಯಾನ್ಸರ್ ನ ಹೆದರಿಕೆ ತಪ್ಪುತ್ತದೆ

ಹತ್ತು ವರ್ಷಗಳ ಬಳಿಕ ಶ್ವಾಸಕೋಶದ ಕ್ಯಾನ್ಸರ್ ಆವರಿಸುವ ಸಾಧ್ಯತೆ ಇಲ್ಲವಾಗುತ್ತದೆ. ಮುಂದಿನ ಹತ್ತು ವರ್ಷಗಳ ಕಾಲ ನಿಮ್ಮ ಶ್ವಾಸಕೋಶ ಸುಸ್ಥಿತಿಯಲ್ಲಿರುವ ಬಗ್ಗೆ ಯಾವುದೇ ಅನುಮಾನ ಉಳಿಯುವುದಿಲ್ಲ.

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

* ಧೂಮಪಾನ ಬಿಡುವ ಬಗ್ಗೆ ದೃಢಸಂಕಲ್ಪವೊಂದೇ ನಿಮ್ಮನ್ನು ಈ ಕೆಸರಿನಿಂದ ಮೇಲೆತ್ತಬಲ್ಲುದು.

* ವೈದ್ಯರ ಸಲಹೆಯ ಹೊರತಾಗಿ ಬೇರೆ ಯಾವ ವಿಧಾನವನ್ನೂ ಅನುಸರಿಸಬೇಡಿ, ಯಾರು ಹೇಳಿದ ಮಾತನ್ನೂ ಕೇಳಬೇಡಿ.

* ಧೂಮಪಾನದ ಬದಲು ಚ್ಯೂಯಿಂಗ್ ಗಮ್ ತಿನ್ನುವುದು ಒಂದು ಪರ್ಯಾಯ ವಿಧಾನವಾದರೂ ಇದನ್ನೂ ಚಟವಾಗಿಸಿಕೊಳ್ಳಬೇಡಿ. ಸಿಗರೇಟು ಬಿಟ್ಟವರು ಚ್ಯೂಯಿಂಗ್ ಗಮ್ ಗೆ ವ್ಯಸನಿಗಳಾಗಿರುವುದನ್ನು ಸಮೀಕ್ಷೆಗಳು ದೃಢೀಕರಿಸಿವೆ

* ಧೂಮಪಾನ ಬಿಟ್ಟು ಗುಟ್ಕಾ ಮತ್ತಿತರ ಅಪಾಯಕಾರಿ ವಸ್ತುಗಳನ್ನು ಸೇವಿಸಲು ಹೋಗಬೇಡಿ, ಇದು ಸಿಗರೇಟಿಗಿಂತ ಹೆಚ್ಚು ಮಾರಕವಾಗಿವೆ.

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

* ಧೂಮಪಾನ ಆವರಿಸಲು ನಿಮ್ಮ ದುರ್ಬಲ ಮನಸ್ಸೇ ಕಾರಣ. ಧೂಮಪಾನಕ್ಕೆ ಯಾವಾಗ ಮನಸ್ಸಾಗುತ್ತದೆಯೋ ಆಗೆಲ್ಲಾ ಇದನ್ನೊಂದು ಎದುರಾಳಿಯಂತೆ ಪರಿಗಣಿಸಿ ಅದನ್ನು ಸೋಲಿಸಲು ಪಣ ತೊಡಿ. ನಾನು ಸೋಲಲಾರೆ, ನಿನೆಗೆ ತಲೆಬಾಗಲಾರೆ ಎಂದು ಎದೆ ತಟ್ಟಿ ನಿಲ್ಲಿ. ಇದೇ ನಿಜವಾದ ಸ್ಥೈರ್ಯ. ಸಿಗರೇಟನ್ನು ಗೆಲ್ಲಲು ಸಾಧ್ಯವಾಯಿತೋ, ಜೀವನದ ಯಾವುದೇ ಸವಾಲನ್ನು ನೀವು ಎದುರಿಸಲು ಸಮರ್ಥರಾಗುತ್ತೀರಿ.

* ಸಾಧ್ಯವಿದ್ದಷ್ಟು ಹೊತ್ತು ಸಂಗಾತಿ, ಮಕ್ಕಳ, ಆಪ್ತರ, ಅಭಿಮಾನಿಗಳ ನಡುವೆ ಕಳೆಯಿರಿ. ಇದರಿಂದ ನಿಮ್ಮ ಮನಸ್ಸು ಧೂಮಪಾನದತ್ತ ಹೊರಳುವುದು ತಪ್ಪುತ್ತದೆ.

* ಧೂಮಪಾನಕ್ಕೆ ಮನಸ್ಸಾದಾಗಲೆಲ್ಲಾ ತಪ್ಪುದಂಡ ಎಂದು ಕೊಂಚ ಹಣವನ್ನು ಡಬ್ಬಿಗೆ ಹಾಕಿ ಕ್ಷಮಾಪಣೆ ಕೇಳಿಕೊಳ್ಳಿ. ಇದಕ್ಕೆ ನಿಮ್ಮ ಮನೆದೇವರು, ಇಷ್ಟದೇವರು ಅಥವಾ ನಿಮಗೆ ಆಪ್ತರಾದವರನ್ನು ಸಾಕ್ಷಿಯಾಗಿಸಿ.

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

* ಚೈನ್ ಸ್ಮೋಕರ್ ಗಳಿಗೆ ಧೂಮಪಾನದಿಂದ ಹೊರಬರಲು ವರ್ಷಗಟ್ಟಲೆ ಸಮಯ ಹಿಡಿಯಬಹುದು. ಆದರೆ ತಾಳ್ಮೆಯಿರಲಿ.

* ಯಾರೊಂದಿಗೂ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ದೇಹದ ಪ್ರಕೃತಿ ಬೇರೆಬೇರೆಯಾಗಿರುತ್ತದೆ. ಕೇವಲ ವೈದ್ಯರ ಸಲಹೆ ಮತ್ತು ವೈದ್ಯಕೀಯ ಪರೀಕ್ಷೆಗಳಿಂದ ನಿರೂಪಿತವಾದ ಅಂಕಿ ಅಂಶಗಳನ್ನೇ ನಂಬಿರಿ.

* ಸಾಮಾನ್ಯವಾಗಿ ಬೀಡಿ ಸೇದುವವರು ತಾವು ಬೀಡಿ ಬಿಟ್ಟರೆ ಬೀಡಿ ಕಟ್ಟುವವರ ಮನೆ ಹೇಗೆ ನಡೆಯುತ್ತದೆ ಎಂಬ ಮೊಂಡುವಾದವನ್ನು ಇಡುತ್ತಾರೆ. ಅದರ ಚಿಂತೆ ನಿಮಗೆ ಬೇಡ. ನಿಮ್ಮ ಆರೋಗ್ಯ ಹಾಳಾದಾಗ ಬೀಡಿ ಕಟ್ಟುವ ಮನೆಯವರು ಬಂದು ನಿಮಗೆ ತಮ್ಮ ಶ್ವಾಸಕೋಶವನ್ನು ದಾನ ಮಾಡುವುದಿಲ್ಲ! ಅವರ ಮನೆಯ ಸ್ಥಿತಿಗೆ ದೇವರು ಬೇರೆ ದಾರಿಯನ್ನು ತೋರಿಸಿಯೇ ಇರುತ್ತಾನೆ.

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

ಧೂಮಪಾನ ಬಿಡುವವರಿಗೆ ಕೆಲವು ಕಿವಿಮಾತುಗಳು

ಇಪ್ಪತ್ತು ವರ್ಷಗಳ ಹಿಂದೆ ಮರದ ಬಾಚಣಿಗೆ ಮಾಡುತ್ತಿದ್ದ ಗ್ರಾಮ ಕಲಾಕಾರರು ಈಗ ಎಲ್ಲಿದ್ದಾರೆ ತೋರಿಸುತ್ತೀರಾ? ಪ್ಲಾಸ್ಟಿಕ್ ಬಾಚಣಿಗೆ ಬಂದ ಮೇಲೆ ಮರದ ಬಾಚಣಿಗೆ ಮಾಡುವವರಿಗೆ ಬೇಡಿಕೆಯೇ ಇಲ್ಲದಾಗಿ ಅವರೆಲ್ಲಾ ಈಗ ಬೇರೆ ಉದ್ಯೋಗಗಳನ್ನು ಕಂಡುಕೊಂಡಿದ್ದಾರೆ. ಬೀಡಿ ಕಾರ್ಮಿಕರೂ ಬೇರೆ ಉದ್ಯೋಗ ಪಡೆದುಕೊಳ್ಳಬಹುದು. ಆದರೆ ಹಾಳಾದ ನಿಮ್ಮ ಶ್ವಾಸಕೋಶವನ್ನು ಯಾರು ಕೊಡುತ್ತಾರೆ? ಯೋಚನೆ ಮಾಡಿ..

English summary

What Happens To Your Body When You Stop Smoking

"Quit smoking", is that everyday thing that most smokers are advised from their near and dear ones. To be honest, it is really difficult to quit smoking for some, as they mentally and physically become addicted to it over a period of time. In medical terms this is called "dependence". If you want to live and enjoy a happy life, you have to take the decision for your best. Have a look at what happens to your body when you quit smoking.
X
Desktop Bottom Promotion