For Quick Alerts
ALLOW NOTIFICATIONS  
For Daily Alerts

ಉರಿಬಿಸಿಲಿನ ದಾಹವನ್ನು ತಣಿಸುವ ಟಾಪ್ ಹಣ್ಣುಗಳು

|

ಬೇಸಿಗೆಯಲ್ಲಿ ನಾವು ಬಹುತೇಕ ಮಂದಿ ಗಿರಿಧಾಮಗಳು, ಬೀಚ್‌ಗಳು, ಪೂಲ್ ಪಕ್ಕದ ಸ್ಥಳಗಳು ಮುಂತಾದ ಕಡೆಗಳಲ್ಲಿ ಇರಲು ಬಯಸುತ್ತೇವೆ. ಯಾವಾಗ ಉಷ್ಣಾಂಶವು ತನ್ನ ವಿರಾಟ್ ವಿಶ್ವರೂಪ ದರ್ಶನವನ್ನು ನಮ್ಮ ಮುಂದೆ ತೋರಿಸುತ್ತದೋ, ಆಗ ನಮ್ಮ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ತಲೆದೋರುತ್ತದೆ. ಇದನ್ನು ನಿವಾರಿಸಲು ನಾವು ನೀರಿನಂಶ ಇರುವ ಆಹಾರ ಪದಾರ್ಥಗಳನ್ನೆ ಹೆಚ್ಚಾಗಿ ಸೇವಿಸುತ್ತೇವೆ.

ನಿರ್ಜಲೀಕರಣ ಅಥವಾ ಡಿಹೈಡ್ರೇಷನ್ ಸಮಸ್ಯೆಯು ಮೂತ್ರಪಿಂಡಗಳಲ್ಲಿ ಕಲ್ಲುಗಳನ್ನು ಉಂಟು ಮಾಡುವ ಮೂಲ ಸಮಸ್ಯೆಗಳಲ್ಲಿ ಒಂದಾಗಿದೆ. ಆದ್ದರಿಂದ ಉರಿಯುವ ಸೂರ್ಯನ ಕೆಳಗೆ ಓಡಾಡುವಾಗ ನಾವು ನಿರ್ಜಲೀಕರಣ ಸಮಸ್ಯೆಗೆ ತುತ್ತಾಗದಂತೆ ನಮ್ಮನ್ನು ನಾವು ಕಾಪಾಡಿಕೊಳ್ಳಬೇಕು. ನಮ್ಮ ದೇಹಕ್ಕೆ ಅಗತ್ಯವಾದ ಖನಿಜಾಂಶ, ವಿಟಮಿನ್ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಅದಕ್ಕಾಗಿಯೇ ಬೇಸಿಗೆಯಲ್ಲಿ ಈ ಅಂಶಗಳನ್ನು ಒದಗಿಸುವ ಆಹಾರ ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಬನ್ನಿ ನಿಮಗಾಗಿ ನಾವು ಇಂದು ಬೇಸಿಗೆಯಲ್ಲಿ ಸೇವಿಸಬಹುದಾದ ಟಾಪ್ ಆಹಾರಗಳು ಯಾವುವು ಎಂದು ತಿಳಿಸಿಕೊಡಲಿದ್ದೇವೆ.

Top Foods To Eat In Summer

ಕಲ್ಲಂಗಡಿ
ಇದು ಬೇಸಿಗೆಯಲ್ಲಿ ಸೇವಿಸಲು ಇರುವ ಅತ್ಯುತ್ತಮ ಆಹಾರಗಳ ಪೈಕಿ ಮೊದಲನೆಯದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನೀರಿನಂಶವನ್ನು ಒದಗಿಸುತ್ತದೆ. ಅಧಿಕ ನೀರಿನ ಅಂಶವಿರುವ ಕಲ್ಲಂಗಡಿಯನ್ನು ನೀವು ಸೇವಿಸಿದರೆ, ನಿಮ್ಮ ದೇಹಕ್ಕೆ ಅಗತ್ಯ ನೀರಿನಂಶದ ಜೊತೆಗೆ ಆಹ್ಲಾದಕತೆಯು ಸಹ ಸಿಗುತ್ತದೆ. ಆಹಾ...! ಕ್ಯಾಬೇಜ್ ಜ್ಯೂಸ್‌ನ ಪ್ರಯೋಜನಗಳು ಒ೦ದೇ, ಎರಡೇ..?

ಸ್ಟ್ರಾಬೆರ್ರಿ
ಸ್ಟ್ರಾಬೆರ್ರಿಯು ನಿಮ್ಮ ದೇಹಕ್ಕೆ ಹೆಚ್ಚಿನ ನೀರಿನಂಶವನ್ನು ಒದಗಿಸುತ್ತದೆ ಮತ್ತು ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ನಿಮ್ಮ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಇದು ನಿಮಗೆ ಉಷ್ಣಾಂಶವನ್ನು ತಡೆಯುವ ಶಕ್ತಿಯನ್ನು ಒದಗಿಸುವ ಜೊತೆಗೆ, ನಿಮ್ಮ ತ್ವಚೆಗೆ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಪೀಚ್‍ಗಳು
ಪೀಚ್‌ಗಳು ಮೃದುವಾದ ಮತ್ತು ಸಿಹಿಯಾದ ನೀರಿನಂಶವಿರುವ ಸಿಹಿ ಹಣ್ಣುಗಳಾಗಿದ್ದು, ಇದರಲ್ಲಿ ವಿಟಮಿನ್ ಎ ಮತ್ತು ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಬೇಸಿಗೆಯಲ್ಲಿ ಸೇವಿಸಬಹುದಾದ ಅತ್ಯುತ್ತಮ ಆಹಾರ ಪದಾರ್ಥಗಳ ಪೈಕಿ ಒಂದಾಗಿದೆ. ಇದು ನಿರ್ಜಲೀಕರಣವನ್ನು ತಡೆಯುತ್ತದೆ ಮತ್ತು ತ್ವಚೆಯ ಬಣ್ಣವನ್ನು ಹೆಚ್ಚಿಸುತ್ತದೆ.

ಅನಾನಸ್
ಈ ಋತುವಿನಲ್ಲಿ ನಮಗೆ ದೊರೆಯುವ ಹಣ್ಣುಗಳಲ್ಲಿ ಅನಾನಸ್ ಸಹ ಒಂದು. ಇದರಲ್ಲಿ ವಿಟಮಿನ್‍ಗಳು, ಆಂಟಿ ಆಕ್ಸಿಡೆಂ‍ಟ್‌ಗಳು ಮತ್ತು ಉಪಯೋಗಕಾರಿ ಕಿಣ್ವಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ನಿಮ್ಮ ದೇಹದಲ್ಲಿ ಉರಿಯೂತಗಳು ಬರದಂತೆ ತಡೆಯುತ್ತವೆ. ಈ ರಸದಿಂದ ಕೂಡಿದ, ರುಚಿಕರವಾದ ಹಣ್ಣು ನಿಮ್ಮ ದೇಹದಲ್ಲಿ ನೀರಿನಂಶವನ್ನು ಕಾಪಾಡಲು ಖಂಡಿತ ನೆರವಾಗುತ್ತದೆ. ಬೇಸಿಗೆಯ ಕಾಲದಲ್ಲಿ ದೇಹವನ್ನು ತಂಪಾಗಿಸುವ ಹಣ್ಣುಗಳು

ಕಿತ್ತಳೆ
ಕಿತ್ತಳೆಯಲ್ಲಿ ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ನಿಮ್ಮ ದೇಹವನ್ನು ಉಳುಕುಗಳಿಂದ ರಕ್ಷಿಸುತ್ತದೆ. ಇದರಲ್ಲಿ ಸುಮಾರು 80% ನೀರಿನಂಶವಿರುತ್ತದೆ. ಇದು ಖಂಡಿತ ನಿಮ್ಮ ದೇಹಕ್ಕೆ ನೀರಿನಂಶವನ್ನು ಒದಗಿಸುತ್ತದೆ. ಬೇಸಿಗೆಯಲ್ಲಿ ವರ್ಕ್‌ಔಟ್ ಮಾಡುವಾಗ ಇದನ್ನು ಸೇವಿಸುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು.

English summary

Top Foods To Eat In Summer

Summer, it’s the time when almost all of us like to spend in sandy beaches or along the shadows close to a pool. Moreover, during the summer the mercury takes off into its most extreme and makes us sweat more causing dehydration.
X
Desktop Bottom Promotion