For Quick Alerts
ALLOW NOTIFICATIONS  
For Daily Alerts

ಸರ್ವ ರೋಗಕ್ಕೂ ರಾಮಬಾಣವಾಗಿರುವ ಟಾಪ್ 10 ಆಹಾರಗಳು

|

ಆರೋಗ್ಯ ಕಾಪಾಡಿಕೊಳ್ಳಬೇಕು ಅಂತಾದರೆ ಎಲ್ಲ ವಯೋವಾವದಲ್ಲಿಯೂ ಪೌಷ್ಟಿಕ ಆಹಾರಗಳನ್ನು ಸೇವಿಸಬೇಕು. ಆದರೆ ಸಣ್ಣ ವಯಸ್ಸಿನಿಂದಲೇ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಆಹಾರಗಳ ಸೇವನೆಗೆ ಒತ್ತು ನೀಡಬೇಕು. ಆಹಾರಗಳು ನಮ್ಮ ಶರೀರವನ್ನು ಪೋಷಣೆ ಮಾದುವುದಲ್ಲದೆ ನಮ್ಮ ದೈನಂದಿನ ಚಟುವಟಿಕೆಗಳಿಗೆ ಉತ್ತೇಜನಕೊಡುತ್ತದೆಂದು ಎಲ್ಲರಿಗೂ ತಿಳಿದ ವಿಷಯ. ಆದರೆ ಅದೇ ಆಹಾರದಿಂದ ಕೆಲವು ಕಾಯಿಲೆಗಳನ್ನು - ಅಂದರೆ ಅಧಿಕ ರಕ್ತದೊತ್ತಡ, ಅಸ್ತಮಾ, ಚರ್ಮ ತುರಿಕೆ ಮತ್ತು ಮೂತ್ರಕೋಶ ಸೋಂಕು - ಇಂತಹ ಕಾಯಿಲೆಗಳನ್ನು ತಡೆಗಟ್ಟಬಹುದು. ಯಮಯಾತನೆ ನೀಡುವ ಶ್ವಾಸನಾಳದ ರೋಗಕ್ಕೆ ಪರಿಹಾರವೇನು?

ಒಟ್ಟಾರೆ ಅರೋಗ್ಯಕ್ಕೆ ಅಡಿಪಾಯವಾದರೆ ಕೆಲವು ನಿರ್ದಿಷ್ಟ ಕಾಯಿಲೆಗಳು ಮತ್ತು ಅವುಗಳ ಲಕ್ಷಣಗಳನ್ನು ತೊಡೆದುಹಾಕಲು ಸಹಾಯವಾಗುವ ಕೆಲವು ಆಹಾರ ಪೋಷಕಾಂಶಗಳ ಕ್ರಮಬದ್ಧವಾದ ಸೇವನೆಯಿಂದ ಸಾಧ್ಯ. ಬನ್ನಿ ಕೆಲವು ಆಹಾರಪದಾರ್ಥಗಳಿಂದ ಯಾವುದೇ ಅಡ್ಡ ಪರಿಣಾಮವಿಲ್ಲದೆ ನಿರ್ದಿಷ್ಟವಾದ ಕೆಲವೇ ಕಾಯಿಲೆಗಳನ್ನು ಗುಣಪಡಿಸಲು ಹೇಗೆಂಬುದನ್ನು ಮುಂದೆ ಓದಿ

ಬ್ರೊಕೊಲಿ

ಬ್ರೊಕೊಲಿ

ಬ್ರೊಕೊಲಿಯಲ್ಲಿ ವಿಟಮಿನ್‌ಗಳು, ಖನಿಜಗಳು, ನಾರಿನಾಂಶ ಮತ್ತು ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳಿಂದ ಮುಕ್ತ ಮೂಲ ಸ್ವರೂಪಗಳಿಗಾಗುವ ಅಪಾಯವನ್ನು ತಡೆಗಟ್ಟಬಹುದು. ಇದು ರಕ್ತದಲ್ಲಿನ ಸಕ್ಕರೆ ಅಂಶವನ್ನು ಕಡಿಮೆಗೊಳಿಸಲು ಒಂದು ಅತ್ಯಂತ ವಿಶಿಷ್ಟವಾದ ಆಹಾರ.

ಈರುಳ್ಳಿ

ಈರುಳ್ಳಿ

ಬಿಳಿ, ಹಳದಿ ಮತ್ತು ಕೆಂಪು ಬಣ್ಣದ ಈರುಳ್ಳಿ ಮತ್ತು ಇತರ ಅದೇ ತರಹ ಇರುವ ತರಕಾರಿಗಳು ಸ್ವಾದಿಷ್ಟ ಅಲ್ಲಿಯುಂ (allium) ಗುಂಪಿಗೆ ಸೇರಿದೆ. ಈ ಗುಂಪಿಗೆ ಸೇರಿದ ಮಹಾನ್ ತರಕಾರಿಗಳಲ್ಲಿ ಪಲ್ಯ್ಫೆನಾಲ್ ಕ್ವರ್ಸೆಟಿನ್ (Polyphenol Quercetin) ಎಂಬ ಅಂಶವಿರುತ್ತದೆ. ಕ್ವರ್ಸೆಟಿನ್ (Quercetin) ಒಂದು ನೈಸರ್ಗಿಕ ಅಲರ್ಜಿಯನ್ನು ಕಡಿಮೆ ಮಾಡುವ ಗುಣ ಹೊಂದಿರುತ್ತದೆ. ಈ ಗುಣದಿಂದ ಆಸ್ತಮಾ ಕಾಯಿಲೆಯನ್ನು ತಡೆಯಬಹುದು. ಕ್ವರ್ಸೆಟಿನ್ (Quercetin) ಅಂಶದಿಂದ ಹಿಸ್ಟಮೀನ್ ಎಂಬ ಅಂಶವು ಬಿಡುಗಡೆಯಾಗಿ ನಮ್ಮ ಶರೀರದಲ್ಲಿ ಉಂಟಾಗುವ ಅಲರ್ಜಿ ಪ್ರತಿಕ್ರಿಯೆಗಳನ್ನು ತಪ್ಪಿಸುತ್ತದೆ. ಹಾಗೆಯೇ ಅದು ಹೃದಯ ರೋಗಗಳು, ಕ್ಯಾನ್ಸರ್ ಮತ್ತು ಮೂತ್ರಕೋಶ ಸೋಂಕು ಅಪಾಯವನ್ನು ಕಡಿಮೆ ಮಾಡಲು ಸಹಾಯಮಾಡುತ್ತದೆ.

ಅರಶಿನ

ಅರಶಿನ

ಅರಶಿನದ ಗಡ್ಡೆ ಅಥವ ಪುಡಿಯ ಕ್ರಿಯಾತ್ಮಕ ಗುಣದಿಂದ ಸಂಧಿವಾತದ ತೊಂದರೆಗಳನ್ನು ಕಡಿಮೆಮಾಡಬಹುದು. ಇದರಲ್ಲಿರುವ ಸರ್ಕಮಿನೈದ್ಸ್ (Circuminoids) ಅಂಶವು ಉರಿಯೂತ ಕಡಿಮೆಯಾಗುವುದರಿಂದ ಕೀಲುಗಳ ಊತವನ್ನೂ ಸಹ ಕಡಿಮೆಮಾಡಲು ಸಹಾಯಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಅರಶಿನವನ್ನು ಮರೆಯದೇ ಉಪಯೋಗಿಸಿ ಅದರ ಗುಣಗಳಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಎಲೆಕೋಸು

ಎಲೆಕೋಸು

ಎಲೆಕೋಸಿನಲ್ಲಿ ಹಲವಾರು ಕ್ಯಾನ್ಸರ್ ತಡೆಯುವ ಗುಣಲಕ್ಷಣಗಳಿವೆ. ಇದರಲ್ಲಿರುವ ಉತ್ಕರ್ಷಣ (Antioxidant) ಮತ್ತು ಗ್ಲೂಕೊಸಿನೋಲೇಟ್ಸ್ (Glucosinolates) ಅಂಶಗಳು ಇದಕ್ಕೆ ಸಹಾಯಮಾಡುತ್ತವೆ. ಹಾಗೆಯೇ ಇದರಲ್ಲಿರುವ ಐಸೊತಿಯೋಸೈನೇಟ್ಸ್ (Isothiocynates) ಮತ್ತು ಇಂಡಾಲ್ 3 ಕಾರ್ಬಿನಾಲ್(Indol 3 Carbinol) ಅಂಶಗಳಿಂದ ಕ್ಯಾನ್ಸರ್ ಕಾಯಿಲೆಯನ್ನು ಮತ್ತು ಈಸ್ಟ್ರೋಜೆನ್ (Estrogen) ಗಳಿಂದ ಆಗುವ ಕೆಟ್ಟ ಪರಿಣಾಮಗಳನ್ನು ತಡೆಯಬಹುದು. ಎಲೆಕೋಸು ಮತ್ತು ಇಂತಹ ಇತರ ತರಕಾರಿಗಳಲ್ಲಿರುವ ನಾರಿನಾಂಶದಿಂದ ಕ್ಯಾನ್ಸರ್ ರೋಗದ ಅಪಾಯವನ್ನು ತಡೆಯಬಹುದು.

ಗ್ರೀನ್ ಟೀ

ಗ್ರೀನ್ ಟೀ

ಅನೇಕ ದೇಶಗಳಲ್ಲಿ ಮೆದುಳಿನ ಹಠಾತ್ ಅಘಾತ (Stroke) ದಿಂದ ಸಾವಿಗೆ ಒಂದು ಪ್ರಮುಖ ಕಾರಣವಾಗಿದೆ. ಅಗ್ಗದ ಗ್ರೀನ್ ಟೀ (Green Tea) ಕುಡಿಯುವುದರಿಂದ ಇಂತಹ ರೋಗಗಳನ್ನು ತಡೆಗಟ್ಟಬಹುದಾಗಿದೆ. ಹಸಿರು ಚಾನಲ್ಲಿ ಕ್ರಿಯಾತ್ಮಕ ಪ್ಲಾವೊನಾಯಿಡ್ಗಳು (Flavonoids) ಇರುವುದರಿಂದ ಹೃದಯ ರಕ್ತನಾಳದ ಅಪಾಯವನ್ನು ತಡೆಯಲು ಪ್ರಯೋಜನಕಾರಿಯಾಗಿದೆ. ದಿನಂಪ್ರತಿ ನಾಲ್ಕು ಕಪ್ ಗ್ರೀನ್ ಟೀ ಸೇವಿಸಿದರೆ ನಿಮ್ಮ ಮೆದುಳಿನ ಹಠಾತ್ ಅಘಾತವನ್ನು ತಡೆಯಬಹುದು.

ಕೆಂಪು ಮೆಣಸಿನಕಾಯಿ

ಕೆಂಪು ಮೆಣಸಿನಕಾಯಿ

ಕೆಂಪು ಮೆಣಸಿನಕಾಯಿ (Cayenne Pepper) ಯನ್ನು ಶತಮಾನಗಳಿಂದ ನೋವು, ಉರಿಯೂತ, ನೋಯುತ್ತಿರುವ ಗಂಟಲು ನೋವು, ಜೀರ್ಣಾಂಗ ತೊಂದರೆಗಳು ಮತ್ತು ತಲೆನೋವು ಚಿಕಿತ್ಸೆಗಳಿಗೆ ಗುಣಪಡಿಸಲು ಬಳಸಲಾಗುತ್ತಿದೆ. ಇದರ ಪುಡಿಯನ್ನು ಸೇವಿಸಿದ ತಕ್ಷಣವೇ ರಕ್ತಸಂಚಾರವನ್ನು ಹೆಚ್ಚಿಸುತ್ತದೆ. ಹಾಗಾಗುವುದರಿಂದ ಮಂದವಾದ ಎದೆಯ ಬಡಿತ ಮತ್ತು ತಲೆನೋವನ್ನು ಹಗುರಗೊಳಿಸುತ್ತದೆ. ಆದ್ದರಿಂದ ನಿಮಗೆ ಮುಂದೆ ತಲೆನೋವು ಕಾಣಿಸುವಂತಾದರೆ ಸ್ವಲ್ಪ ಕೆಂಪು ಮೆಣಸಿನಕಾಯಿಯನ್ನು ಮೆಲಕು ಹಾಕಿ.

ಬಾಳೆಹಣ್ಣು

ಬಾಳೆಹಣ್ಣು

ಬಾಳೆಹಣ್ಣನ್ನು ಜಠರಗೊಳಗಿನ ಅಸ್ವಸ್ಥತೆಯಿಂದ ಚೇತರಿಸಿಕೊಳ್ಳಲು ಶಿಫಾರಸು ಮಾಡುತ್ತಾರೆ. ಬಾಳೆಹಣ್ಣಿನಲ್ಲಿ ನಾರಿನಾಂಶವಿರುವುದರಿಂದ ಮಲವಿಸರ್ಜನೆಗೆ ಅನುಕೂಲಮಾಡಿಕೊಡುತ್ತದೆ. ಇದು ಸ್ವಾಭಾವಿಕ ಆಂಟಾಸಿಡ್ ಕೂಡ ಆಗಿದೆ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣಿನಲ್ಲಿ ಅಧಿಕವಾಗಿ ಎಲ್ಲಾಜಿಕ್ ಎಂಬ ಆಮ್ಲವಿರುತ್ತದೆ. ಈ ಆಮ್ಲದಿಂದ ನಿಮ್ಮ ಚರ್ಮವನ್ನು ಉವಿಎ (UVA) ಮತ್ತು ಉವಿಬಿ(UVB) ಪ್ರೇರಿತ ಜೀವಕೋಶಹಾನಿಯಾಗದಂತೆ ತಡೆಯಬಹುದು. ದಾಳಿಂಬೆ ಹಣ್ಣು ಸೂರ್ಯನ ತೀಕ್ಷ್ಣ ಕಿರಣಗಳಿಂದ ರಕ್ಷಣೆಯನ್ನು ಕೊಡುವ ಸಂಯುಕ್ತವನ್ನು ಹೊಂದಿದೆ. ಇದರಿಂದ ನಿಮಗೆ ಅಚ್ಚರಿಯಾಗುವ ಪರಿಹಾರ ನೀಡುತ್ತದೆ.

ಸೇಬಿನ ಸೈಡರ್

ಸೇಬಿನ ಸೈಡರ್

ಸೇಬಿನ ಸೈಡರ್ (Cider) ವಿನೇಗರ್ ವಿರೋಧಿ ಶಿಲೀಂದ್ರ ಮತ್ತು ವಿರೋಧಿ ಬ್ಯಾಕ್ಟೀರಿಯಾ ವ್ಯಾಪಕವಾಗಿ ಗುಣಗಳಿಂದ ಚರ್ಮ ತುರಿಕೆ ಮತ್ತು ವಿಶೇಷವಾಗಿ ಒಣ ಚರ್ಮ ಇವುಗಳನ್ನು ನಿವಾರಿಸಬಹುದು. ಇದು ಉರಿಯೂತ ಮತ್ತು ಕಿರಿಕಿರಿಯಾಗುವುದನ್ನು ಕಡಿಮೆ ಮಾಡುತ್ತದೆ. ಈ ವಿನೇಗರಿನ ಕೆಲವು ಹನಿಗಳನ್ನು ಒಂದು ಹತ್ತಿಯಉಂಡೆ ಅಥವಾ ವಾಶ್ ಮಾಡಿದ ಬಟ್ಟೆಯ ಮೇಲೆ ಹಾಕಿಕೊಂಡು ಬಾಧಿತ ಚರ್ಮದಮೇಲೆ ಸವರಿ ವಾಸಿಮಾಡಿಕೊಳ್ಳಬಹುದು.

ತುಳಸಿ ಎಲೆ

ತುಳಸಿ ಎಲೆ

ಬಾಯಿಹುಣ್ಣಿನಿಂದ ಬಹಳ ನೋವು ಆಗುತ್ತದೆ. ಅದರಿಂದ ಒಂದು ಬಿಳಿ ಬಣ್ಣದ ಹುಣ್ಣು ಮತ್ತು ನಾಲಿಗೆ, ವಸಡು, ಗಲ್ಲ ಮತ್ತು ತುಟಿಗಳ ಒಳಭಾಗದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ ತುಳಸಿಎಲೆಯನ್ನು ತಿನ್ನುವುದರಿಂದ ಯಾತನೆಯು ಕಡಿಮೆಯಾಗಿ ಗುಣವಾಗುತ್ತದೆ. ನಾಲ್ಕರಿಂದ ಐದು ತುಳಸಿ ಎಲೆಗಳನ್ನು ಮೆಲಕುಹಾಕಿ ತಿನ್ನುತ್ತಿದ್ದರೆ ಅದರಿಂದ ಬರುವ ರಸದಿಂದ ಹುಣ್ಣು ಗುಣಹೊಂದುವುದಲ್ಲದೆ ಕೆಟ್ಟ ಉಸಿರನ್ನೂ ಸಹ ತಡೆಯಬಹುದು.

English summary

Top 10 Natural Treatment For Many Diseases

The body requires carbohydrates, fats, proteins, vitamins, and minerals to maintain healthy organs, bones, muscles, nerves, and to produce hormones and chemicals that are necessary for the proper function of organs. Read about some food items which cure certain diseases without any side effects
Story first published: Saturday, January 24, 2015, 17:57 [IST]
X
Desktop Bottom Promotion