For Quick Alerts
ALLOW NOTIFICATIONS  
For Daily Alerts

ನೆನಪಿನ ಶಕ್ತಿ ವರ್ಧಕ-ಒಂದೆಲಗದ ತಂಬುಳಿ

By Su.Ra
|

ಇದು ಹಿಂದಿನ ಕಾಲದ ಮಾತು..ಮಕ್ಕಳು ಬುದ್ಧಿವಂತರಾಗಬೇಕು ಅಂದ್ರೆ, ಈ ತಂಬಳಿ ತಿನ್ನಬೇಕು ಅಂತ ದೊಡ್ಡವರು ಹೇಳುತ್ತಾ ಇದ್ದರು.. ಹಾಗಾಗಿ ಆ ಕಾಲದ ನಂಬಿಕೆಯ ಒಂದು ವಿಚಾರವನ್ನು ನಾವಿಲ್ಲಿ ಪ್ರಸ್ತಾಪಿಸುತ್ತಾ ಇದ್ದೇವೆ. ಈ ಸೊಪ್ಪಿನ ಹೆಸರು ಒಂದೊಂದು ಭಾಗದಲ್ಲಿ ಒಂದೊಂದು ಹೆಸರಿನಲ್ಲಿ ಕರೆಯಲಾಗುತ್ತೆ. ಮಲೆನಾಡ ಮಂದಿ ಒಂದೆಲಗ ಅಂತ ಕರೆದರೆ, ಕರಾವಳಿ ಭಾಗದಲ್ಲಿ ಉರಗದ ಸೊಪ್ಪು ಅಂತ ಕರೀತಾರೆ ಇನ್ನು ಕೆಲವರು ಬ್ರಾಹ್ಮೀ ಎಂದು ಕರೆಯುವುದು ಉಂಟು. ತುಳುವಿನಲ್ಲಿ ತಿಮರೆ ಎಂದು ಕೂಡ ಕರೀತಾರೆ.. ಗಿಡದ ಒಂದು ಕೊಂಬೆಯಲ್ಲಿ ಒಂದೇ ಎಲೆ ಇರುವ ಪುಟ್ಟ ಗಿಡಗಳಿವು. ಹುಲ್ಲಿನ ಜಾತಿಯಲ್ಲಿ ಬೆಳೆಯುತ್ತೆ. ಹೆಚ್ಚು ನೀರು ಬೀಳುವ ಪ್ರದೇಶದಲ್ಲಿ ಕಂಡುಬರುತ್ತೆ. ಮಾರುಕಟ್ಟೆಯಲ್ಲೂ ಕೂಡ ಇವುಗಳನ್ನು ಇತ್ತೀಚೆಗೆ ಮಾರಾಟ ಮಾಡಲಾಗುತ್ತೆ.

ಎಲ್ಲಾ ಸೊಪ್ಪಿನಲ್ಲಿರುವಂತೆ ಇದ್ರಲ್ಲೂ ಫೋಲಿಕ್ ಆಸಿಡ್, ಕ್ಯಾಲ್ಸಿಯಂ, ವಿಟಮಿನ್ ಅಂಶಗಳು ಹೇರಳವಾಗಿರುತ್ತೆ. ಆದ್ರೆ ಬುದ್ಧಿವಂತರಾಗ್ತಾರೆ ಅನ್ನುವ ಹಿಂದಿನ ಕಾಲದ ಮಾತು ಯಾಕೆ ಅನ್ನೋದ್ರ ಬಗ್ಗೆ ಸಂಶೋಧನೆಗಳು ನಡೆಯಬೇಕಷ್ಟೇ.. ಮೆದುಳಿನ ಕಾರ್ಯಚಟುವಟಿಕೆಗೆ ಈ ಸೊಪ್ಪು ಸಹಕಾರಿ ಅಂತ ಹೇಳಲಾಗುತ್ತೆ. ಸ್ಮರಣ ಶಕ್ತಿ ಹೆಚ್ಚಿಸುವ ಚಟ್ನಿ ಮತ್ತು ತಂಬುಳಿ

Brahmi is a wonderful herb

ಆರೋಗ್ಯದ ದೃಷ್ಟಿಯಿಂದ ಸಹಕಾರಿ ಒಂದೆಲಗ ತಂಬಳಿ
*ಕೇವಲ ಬುದ್ಧಿಮತ್ತೆ ಬೆಳೆಸೋಕೆ ಮಾತ್ರವಲ್ಲ ಇನ್ನೂ ಹಲವು ಕಾರಣಗಳಿಂದ ಒಂದೆಲಗದ ತಂಬಳಿ ನಿಮ್ಮ ಆರೋಗ್ಯಕ್ಕೆ ಸಹಕಾರಿಯಾಗಿದೆ..ದೇಹದ ಉಷ್ಣತೆ ಹೆಚ್ಚಾದಾಗ ತಂಪು ಮಾಡುವ ಸಾಮರ್ಥ್ಯ ಇದಕ್ಕಿದೆ. ಅದ್ರಲ್ಲೂ ಬೇಸಿಗೆಯ ಸಂದರ್ಭದಲ್ಲಿ ಹೆಚ್ಚು ಪರಿಣಾಮಕಾರಿ.
*ಕಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಕೂಡ ಇದು ಉತ್ತಮವಾದ ಸೊಪ್ಪು,
*ಅಜೀರ್ಣತೆ ಸಮಸ್ಯೆಯನ್ನು ನಿವಾರಿಸುತ್ತೆ.
*ನೆನಪಿನ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ನೀವು ಕ್ರಿಯಾಶೀಲರಾಗಿರುವಂತೆ ಮಾಡುವಲ್ಲಿ ಇದು ಸಹಕಾರಿ.
*ಕೊಬ್ಬರಿ ಎಣ್ಣೆ ಜೊತೆ ಈ ಸೊಪ್ಪಿನ ರಸ ತೆಗೆದು ಕುದಿಸಿ ಕೂದಲಿಗೆ ಹಚ್ಚಿದ್ರೆ ಕೂದಲುದುರುವ ಸಮಸ್ಯೆ, ತಲೆಹೊಟ್ಟು ಮತ್ತು ತಲೆನೋವಿನ ಸಮಸ್ಯೆ ನಿವಾರಣೆಯಾಗುತ್ತೆ. ಅಷ್ಟೇ ಅಲ್ಲ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತೆ.
*ನಿದ್ರಾಹೀನತೆ ಸಮಸ್ಯೆಯಿಂದ ಬಳಲುವವರು ಕೂಡ ಒಂದೆಲಗ ಅಥ್ವಾ ಬ್ರಾಹ್ಮೀ ಸೊಪ್ಪಿನಿಂದ ತಯಾರಿಸಿರುವ ಎಣ್ಣೆಯನ್ನು ತಲೆಗೆ ಹಚ್ಚಿಕೊಂಡ್ರೆ ಆರಾಮದಾಯಕ ನಿದ್ದೆ ಬರುತ್ತೆ.
ಅಪೌಷ್ಟಿಕತೆ ನಿವಾರಣೆ ಮಾಡಿ, ಶಕ್ತಿವರ್ಧಕವಾಗಿಯೂ ಕೂಡ ಇದು ಕೆಲಸ ಮಾಡುತ್ತೆ.

ಒಂದೆಲಗದ ತಂಬಳಿ ಮಾಡಲು ಬೇಕಾಗುವ ಸಾಮಗ್ರಿಗಳು
*ಒಂದೆಲಗ - ಒಂದು ಮುಷ್ಟಿ ಬೇರು ಮತ್ತು ದಂಟು ಸಹಿತವೇ ಬಳಸಿ
*ಜೀರಿಗೆ - ಒಂದು ಸ್ಪೂನ್
*ಕಾಳುಮೆಣಸು - 6 ರಿಂದ 8 ಕಾಳು
*ತೆಂಗಿನಕಾಯಿ - ಅರ್ಥ ತೆಂಗಿನಕಾಯಿ (ಒಂದು ಮುಷ್ಟಿ)
*ಉಪ್ಪು - ರುಚಿಗೆ ತಕ್ಕಷ್ಟು
*ಬೆಲ್ಲ -ಒಂದು ಸ್ಪೂನ್
*ತುಪ್ಪ ಅಥ್ವಾ ಬೆಣ್ಣೆ - 2 ಸ್ಪೂನ್
*ಸಾಸಿವೆ - ಕಾಲು ಸ್ಪೂನ್
*ಬ್ಯಾಡಗಿ ಒಣಮೆಣಸು - 2

ಮಾಡುವ ವಿಧಾನ
*ಮೊದಲು ಕಾಯಿ, ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಹಾಕಿ ಮಿಕ್ಸಿ ಮಾಡ್ಕೊಳ್ಳಿ. ನಂತ್ರ ಅದರಿಂದ ರಸವನ್ನು ಮಾತ್ರ ಬೇರ್ಪಡಿಸಿಕೊಳ್ಳಿ. ಜೊಗಟು ಹಾಕಿದ್ರೆ ತಂಬಳಿ ರುಚಿ ಅಷ್ಟೇನು ಅನ್ನಿಸೋದಿಲ್ಲ. ಸೊಪ್ಪನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಿ. ಬೇರಿನಲ್ಲಿರುವ ಮಣ್ಣೆಲ್ಲವೂ ಕ್ಲೀನ್ ಆಗಲಿ. ಬೇರು ಮತ್ತು ಕಾಂಡದ ಸಹಿತವೇ ಸ್ವಲ್ಪ ನೀರು ಸೇರಿಸಿ ಮಿಕ್ಸಿ ಮಾಡ್ಕೊಳ್ಳಿ. ಎಲೆಯಲ್ಲಿ ಮಾತ್ರವಲ್ಲ, ಬೇರು ಮತ್ತು ಕಾಂಡದಲ್ಲೂ ಅಪಾರ ಪ್ರಮಾಣದ ವಿಟಮಿನ್ ಗಳಿರುತ್ತೆ. ನುಣ್ಣಗೆ ರುಬ್ಬಿದ ಮಿಶ್ರಣದಿಂದ ರಸ ತೆಗೆದು ಅದನ್ನು ಈಗಾಗಲೇ ತೆಗೆದುಕೊಂಡಿರುವ ಕಾಯಿಯ ಹಾಲಿನ ರಸದೊಂದಿಗೆ ಸೇರಿಸಿ.
*ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬೆಲ್ಲ ಸೇರಿಸಿ. ಸಿಹಿ ತಂಬಳಿ ಇಷ್ಟವಿಲ್ಲದೇ ಇರುವವರು ಬೆಲ್ಲ ಬಳಸದೆಯೂ ಇರಬಹುದು. ನಂತ್ರ ಒಗ್ಗರಣೆ ಮಾಡುವ ಸಮಯ. ತುಪ್ಪ ಅಥ್ವಾ ಬೆಣ್ಣೆಯನ್ನು ಒಗ್ಗರಣೆಗೆ ಬಳಸ್ಬಹುದು..ಸಾಸಿವೆ ಚಟಿಪಟಿ ಮಾಡಿ, ಜೀರಿಗೆ ಮತ್ತು ಬ್ಯಾಡಗಿ ಒಣಮೆಣಸು ಹಾಕಿ ಒಗ್ಗರಣೆ ಕೊಡಿ.. ರುಚಿರುಚಿಯಾದ ನಿಮ್ಮನ್ನು ಬುದ್ಧಿರಾಗಿ ಮಾಡುವ ತಂಬಳಿ ರೆಡಿಯಾಗುತ್ತೆ. ಅನ್ನದ ಜೊತೆ ಸವಿಯಲು ಬಲು ಟೇಸ್ಟಿ.

ಫಟಾಫಟ್ ಮಾಡುವ ಅಡುಗೆ ಒಂದೆಲಗದ ತಂಬಳಿ
ತಂಬಳಿ ಅನ್ನೋ ಅಡುಗೆಯೇ ಹಾಗೆ.. ಫಟಾಫಟ್ ಅಂತ ಮಾಡುವ, ಸಮಯ ಕಡಿಮೆ ಇದ್ದಾಗ ಮಹಿಳೆಯರಿಗೆ ಸಹಾಯ ಮಾಡುವ ಸ್ಪೆಷಲ್ ಅಡುಗೆ ಅಂತಲೇ ಫೇಮಸ್.. ಅನ್ನದ ಜೊತೆ ಇದು ಹೇಳಿಮಾಡಿಸಿದಂತಿರುತ್ತೆ. ಸೂಪರ್ ಟೇಸ್ಟ್ ಅನ್ನಿಸುತ್ತೆ.

Read more about: health wellness
English summary

Title Benefits of Brahmi Leaves which should boost your brain

Brahmi, or Bacopa monnieri, is an herb embraced by Ayurvedic medicine for ... that Brahmi provided a noticeable boost in cognitive performance. to remember that Brahmi is nutritional support for your brain. So today boldsky share some tips, regarding about Brahmi Leaves, have a look
X
Desktop Bottom Promotion