For Quick Alerts
ALLOW NOTIFICATIONS  
For Daily Alerts

ರೋಗರುಜಿನಗಳು ಹರಡಲು ಶೌಚಾಲಯಗಳೇ ಮೂಲ ಕಾರಣ!

By Super
|

ಮನೆ ಸ್ವಚ್ಛವಾಗಿಡುತ್ತಾರೋ ಇಲ್ಲವೋ ಎಂಬುದನ್ನು ಅವರ ಶೌಚಾಲಯದ ಮೂಲಕ ಪರಾಮರ್ಶಿಸು ಎಂದು ಹಿರಿಯರು ಹೇಳುತ್ತಾರೆ. ಯಾವುದೇ ಮನೆಯಲ್ಲಿ ಶೌಚಾಲಯದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಒಂದು ವೇಳೆ ಶೌಚಾಲಯ ಶುಚಿಯಾಗಿಲ್ಲದ್ದೇ ಅತಿಥಿಗಳ ಕೋಣೆ ಮಾತ್ರ ತುಂಬಾ ಅಚ್ಚುಕಟ್ಟಾಗಿದ್ದರೆ ಇವರು ತೋರಿಕೆಗೆ ಹೆಚ್ಚು ಪ್ರಾಶಸ್ತ್ಯ ನೀಡುವವರು ಎಂದುಕೊಳ್ಳಬಹುದು.

ಏಕೆಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಬ್ಯಾಕ್ಟೀರಿಯಾಗಳು ಅತಿ ಹೆಚ್ಚಾಗಿರುವ ಪ್ರದೇಶವೆಂದರೆ ಶೌಚಾಲಯ. ಮೇಲಿನಿಂದ ಥಳಥಳನೆ ನೋಡಲಿಕ್ಕೆ ಶುಚಿಯಾಗಿದ್ದಂತೆ ಕಂಡುಬಂದರೂ ಇತರ ಭಾಗಗಳಲ್ಲಿ ಅಡಗಿ ಕುಳಿತಿದ್ದ ಬ್ಯಾಕ್ಟೀರಿಯಾಗಳು ಸುಲಭವಾಗಿ ಉಪಯೋಗಿಸುವವರಿಗೆ ದಾಟಿಕೊಳ್ಳುವ ಅಪಾಯವಿರುತ್ತದೆ. ಸಾರ್ವಜನಿಕ ಶೌಚಾಲಯ ಬಳಸುವಾಗ ಜಾಗರೂಕರಾಗಿರಿ!

ಏಕೆಂದರೆ ಬಹುತೇಕ ಶೌಚಾಲಯ ಬಳಸುವವರು ಫ್ಲಶ್ ಮಾಡಿದರೆ ತಮ್ಮ ಕೆಲಸ ಮುಗಿಯಿತು ಎಂದು ತಿಳಿದಿದ್ದಾರೆ. ವಾಸ್ತವವಾಗಿ ಫ್ಲಶ್ ಮಾಡುವುದರಿಂದ ಕಲಕುವ ನೀರಿನಿಂದ ಸಿಡಿದ ನೀರಿನ ಅತಿಸೂಕ್ಷ್ಮ ಕಣಗಳು ಗಾಳಿಯಲ್ಲಿ ತೇಲಿ ಶೌಚಾಲಯದ ಎಲ್ಲೆಡೆ ಹರಡಿರುತ್ತವೆ. ಹೆಚ್ಚಿನವರು ಕಮೋಡ್‌ನ ಮುಚ್ಚಳವನ್ನೂ ಮುಚ್ಚುವುದಿಲ್ಲ ಅಥವಾ ಬಳಸಿದ ನಂತರ ಟಾಯ್ಲೆಟ್ ಪೇಪರ್‌ನಿಂದ ಒರಸುವುದಿಲ್ಲ.

ಕೆಲವು ಜನರಲ್ಲಿ ಸಾಂಕ್ರಾಮಿಕ ಬ್ಯಾಕ್ಟೀರಿಯಾಗಳಿದ್ದು ಶೌಚಾಲಯವನ್ನು ಬಳಸಿದ ಬಳಿಕ ಗಾಳಿಯಲ್ಲಿ ತೇಲಿ ಶೌಚಾಲಯವನ್ನೆಲ್ಲಾ ಆವರಿಸಿದ ಬಳಿಕ ಮುಂದಿನ ಬಳಕೆದಾರ ಶೌಚಾಲಯ ಬಳಸುವಾಗ ಸೇವಿಸುವ ಉಸಿರಿನಿಂದಲೂ, ಬ್ಯಾಕ್ಟೀರಿಯಾಗಳು ಆವರಿಸಿಕೊಂಡಿರುವ ಬಾಗಿಲ ಹಿಡಿಕೆ, ಫ್ಲಶ್ ಮಾಡುವ ಹಿಡಿಕೆ, ನಲ್ಲಿಯನ್ನು ತೆರೆಯುವ ಹಿಡಿಕೆ ಮೊದಲಾದವುಗಳನ್ನು ಮುಟ್ಟಿದಾಗಲೂ ಸೋಂಕು ತಗುಲಬಹುದು. ದಿಗಿಲಾಯಿತೇ? ಸ್ವಚ್ಛವಿಲ್ಲದ ಶೌಚಾಲಯಗಳಿಂದ ಹರಡಬಹುದಾದ ಬ್ಯಾಕ್ಟೀರಿಯಾಗಳ ಬಗ್ಗೆ ಕೆಲವು ಅಮೂಲ್ಯ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಸ್ಟ್ರೆಪ್ಟೋಕಾಕಸ್ ಸೋಂಕು (Streptococcus infection)

ಸ್ಟ್ರೆಪ್ಟೋಕಾಕಸ್ ಸೋಂಕು (Streptococcus infection)

ಸ್ಟ್ರೆಪ್ ಎಂದೂ ಚಿಕ್ಕದಾಗಿ ಕರೆಯಲ್ಪಡುವ ಈ ಬ್ಯಾಕ್ಟೀರಿಯಾ ಅತ್ಯಂತ ಪ್ರಬಲ ಎಲೆಕ್ಟ್ರಾನ್ ಸೂಕ್ಷ್ಮದರ್ಶಕಕ್ಕೂ ಕೇವಲ ಚುಕ್ಕೆಗಳ ಸಾಲಿನಂತೆ ಕಂಡುಬರುವ ಒಂದು ಬ್ಯಾಕ್ಟೀರಿಯಾ ಆಗಿದೆ. ಒಣಗಿದ ಬಳಿಕ ಗಾಳಿಯ ಧೂಳಿಗಿಂತಲೂ ಹಗುರವಾದ ಇದು ಶೌಚಾಲಯದ ಗಾಳಿಯನ್ನು ಸೇವಿಸುವ ಮೂಲಕವೂ, ಒದ್ದೆಯಾಗಿದ್ದ ಹಿಡಿಕೆಗಳನ್ನು ಮುಟ್ಟಿ ಆ ಬಳಿಕ ಆಹಾರವನ್ನು ಸೇವಿಸುವ ಮೂಲಕವೂ ಬರಬಹುದು. ಒಮ್ಮೆ ಆವರಿಸಿದರೆ ಪ್ರಮುಖವಾಗಿ ಗಂಟಲ ಹಿಂಭಾಗದಲ್ಲಿ ಅಂಟಿಕೊಂಡು ತಮ್ಮ ವಂಶವನ್ನು ಬೆಳೆಸುತ್ತಾ ಗಂಟಲ ಪಕ್ಕದಲ್ಲಿರುವ ಟಾನ್ಸಿಲ್ ಗಳ ಮೇಲೆ ಧಾಳಿಯಿಡುತ್ತದೆ. ಸೋಂಕು ಹರಡುತ್ತಾ ಹೋದಂತೆ ದೇಹದ ಇತರ ಭಾಗಗಳೂ ಬಾಧೆಗೊಳಗಾಗುತ್ತವೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ..

ಸ್ಟ್ರೆಪ್ಟೋಕಾಕಸ್ ಸೋಂಕು (Streptococcus infection)

ಸ್ಟ್ರೆಪ್ಟೋಕಾಕಸ್ ಸೋಂಕು (Streptococcus infection)

* ಸ್ಟ್ರೆಪ್ ಗಂಟಲು - ಗಂಟಲಿನ ಒಳಭಾಗದಲ್ಲಿ ಸೋಂಕು, ಟಾನ್ಸಿಲ್ ಗಳ ಮೇಲೆ ಬಿಳಿಚುಕ್ಕೆ ಮೊದಲ ತೊಂದರೆಗಳು ಎದುರಾಗುವುದು

* ಸ್ಕಾರ್ಲೆಟ್ ಜ್ವರ: ಗಂಟಲು ಒಣಗಿ ಸ್ಟ್ರೆಪ್ ಗಂಟಲು ಮತ್ತು ಇಡಿಯ ದೇಹದ ಮೇಲೆ ಗೀರುಗಳಂತೆ ಕೆಂಪಗಾಗುವುದು ಮತ್ತು ತುರಿಕೆ ಕಂಡುಬರುತ್ತದೆ.

* ಇಂಪೆಟಿಗೋ : ಒಂದು ರೀತಿಯ ಚರ್ಮವ್ಯಾಧಿ

* ಮೂತ್ರಕೋಶದಲ್ಲಿ ಸೋಂಕು, ರಕ್ತದಲ್ಲಿ ಸೋಂಕು ಮತ್ತು ನ್ಯೂಮೋನಿಯಾ ಎದುರಾಗಬಹುದು.

* ವಿಷ ಆಘಾತ (Toxic shock syndrome)

* ಸ್ನಾಯುಗಳನ್ನು ಬ್ಯಾಕ್ಟೀರಿಯಾಗಳು ತಿನ್ನುವ ವ್ಯಾಧಿ(Cellulitis and necrotizing fasciitis (flesh-eating disease))

ಮೊದಲಾದ ತೊಂದರೆಗಳು ಎದುರಾಗಬಹುದು.

ಹೆಪಟೈಟಿಸ್ ಎ ಸೋಂಕು

ಹೆಪಟೈಟಿಸ್ ಎ ಸೋಂಕು

ಶೌಚಾಲಯದಿಂದ ಹರಡಬಹುದಾದ ಅತ್ಯಂತ ಸಾಮಾನ್ಯ ಸೋಂಕು ಎಂದರೆ ಹೆಪಟೈಟಿಸ್ ಎ ಆಗಿದೆ. ಈ ಸೋಂಕು ತಗಲಿರುವವರಲ್ಲಿ ಜ್ವರ, ವಾಕರಿಕೆ, ಕೆಳಹೊಟ್ಟೆಯಲ್ಲಿ ನೋವು ಪ್ರಮುಖವಾಗಿ ಕಂಡುಬರುತ್ತದೆ. ಇದು ಪ್ರಮುಖವಾಗಿ ಸೋಂಕಿದ್ದವರ ಮಲದ ಮೂಲಕ ಶೌಚಾಲಯವನ್ನು ಪ್ರವೇಶಿಸಿ ಫ್ಲಶ್ ಮಾಡುವಾಗ ಗಾಳಿಯಲ್ಲಿ ಹರಡುವುದರಿಂದ, ಬಳಿಕ ನಿಧಾನವಾಗಿ ಇಳಿದು ಎಲ್ಲೆಡೆ ಹರಡಿದ ಬಳಿಕ ಇತರರು ಇದನ್ನು ಮುಟ್ಟಿದಾಗ (ಉದಾಹರಣೆಗೆ ಬಾಗಿಲ ಹಿಡಿಕೆ, ಬಕೆಟ್, ಮಗ್ ಮೊದಲಾದವು) ಅವರಿಗೂ ಹರಡುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಮಕ್ಕಳಿಗೆ ಈ ಸೋಂಕು ಅತಿ ಸುಲಭವಾಗಿ ಹರಡುತ್ತದೆ.

ಶೀತ ಮತ್ತು ಫ್ಲೂ ಜ್ವರ

ಶೀತ ಮತ್ತು ಫ್ಲೂ ಜ್ವರ

ಶೀತ ಮತ್ತು ಫ್ಲೂ ಜ್ವರಗಳು ವೈರಸ್ ಧಾಳಿಯ ಕಾರಣದಿಂದ ಬರುವಂತಹದ್ದಾಗಿದ್ದು ಕೊಳಕು ಶೌಚಾಲಯವನ್ನು ಬಳಸುವುದರಿಂದಲೂ ಬರಬಹುದು. ಫ್ಲೂ ಜ್ವರ ಇದ್ದವರ ಅಕ್ಕಪಕ್ಕದವರೂ ಈ ಭಾಧೆಗೆ ಸುಲಭವಾಗಿ ತುತ್ತಾಗುವುದನ್ನು ನೀವು ಗಮನಿಸಿರಬಹುದು. ಶೌಚಾಲಯ ಇತರ ಕೋಣೆಗಳಿಗಿಂತಲೂ ಚಿಕ್ಕದಾಗಿರುವುದರಿಂದ ಫ್ಲೂ ಇರುವ ವ್ಯಕ್ತಿ ಇಲ್ಲಿ ಸೀನಿದಾಗ ಅಥವಾ ಶೌಚಾಲಯದಲ್ಲಿ ಸ್ವಚ್ಛಗೊಳಿಸಿಕೊಂಡಾಗ ಇದು ಇತರರಿಗೆ ಹರಡುವ ಸಾಧ್ಯತೆ ಸಾವಿರ ಪಟ್ಟು ಹೆಚ್ಚುತ್ತದೆ. ಅತೀವ ತಲೆನೋವು, ಜ್ವರ, ಸುರಿಯುವ ಅಥವಾ ಕಟ್ಟಿಕೊಂಡ ಮೂಗು ಮೊದಲಾದವು ಈ ಜ್ವರದ ಲಕ್ಷಣಗಳಾಗಿವೆ.

ಸ್ಟಾಫೈಲೊಕಾಕಸ್ ಸೋಂಕು (Staphylococcus infection)

ಸ್ಟಾಫೈಲೊಕಾಕಸ್ ಸೋಂಕು (Staphylococcus infection)

ಸ್ಟಾಫ್ ಸೋಂಕು ಎಂದೂ ಕರೆಯಲ್ಪಡುವ ಇದು ವಿವಿಧ ಕಾಯಿಲೆಗಳ ಆಗರವಾಗಿದೆ. ಇದರ ಪರಿಣಾಮಗಳು ಕೆಲವು ಅಂಗಗಳ ಮೇಲೆ ನೇರವಾಗಿ ಬಾಧಿಸಿ ದೇಹವನ್ನು ಹಿಂಡಿಬಿಡುತ್ತವೆ. ಇದರಿಂದ ಹೊರಬರಲು ಕೆಲವು ತಿಂಗಳುಗಳೇ ಬೇಕಾಗಬಹುದು. ಇವು ಕೂಡಾ ಅತಿಸೂಕ್ಷ್ಮದರ್ಶಕದಲ್ಲಿ ಕೇವಲ ಚುಕ್ಕಿಗಳಂತೆ ಕಾಣುವ ಇವು ಗಾಳಿಯಲ್ಲಿ ಹಗುರವಾಗಿ ತೇಲುತ್ತಿರುತ್ತವೆ. ಸಾರ್ವಜನಿಕ ಶೌಚಾಲಯದಲ್ಲಿ ಇದು ಹರಡುವ ವೇಗ ಅತಿಹೆಚ್ಚಾಗಿದೆ. ಮುಂದಿನ ಬಾರಿ ಸಾರ್ವಜನಿಕ ಶೌಚಾಲಯ ಬಳಸುವಾಗ ಅತಿ ಎಚ್ಚರ ವಹಿಸಿ.

ಈ ಕೊಲೈ ಸೋಂಕು (e-coli)

ಈ ಕೊಲೈ ಸೋಂಕು (e-coli)

ಶೌಚಾಲಯದಲ್ಲಿ ಹರಡುವ ಸೋಂಕುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವ ಬ್ಯಾಕ್ಟೀರಿಯಾ ಅಂದರೆ ಈ ಕೋಲೈ. ಈ ಬ್ಯಾಕ್ಟೀರಿಯಾದ ಸೋಂಕು ತಗಲಿರುವ ವ್ಯಕ್ತಿಯು ಮಲವಿಸರ್ಜನೆಯಲ್ಲಿ ರಕ್ತ, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಮೊದಲಾದ ತೊಂದರೆ ಅನುಭವಿಸುತ್ತಾನೆ. ಈ ತೊಂದರೆಯಿಂದ ಹೊರಬರಲು ಕನಿಷ್ಟ ಒಂದು ವಾರದ ಚಿಕಿತ್ಸೆಯ ಅಗತ್ಯವಿದೆ. ಬಾಗಿಲ ಹಿಡಿಕೆಯಂತಹ ಸ್ಥಳಗಳಲ್ಲಿ ಈ ಬ್ಯಾಕ್ಟೀರಿಯಾ ಅಂಟಿಕೊಂಡಿದ್ದು ಸುಲಭವಾಗಿ ಇದನ್ನು ಮುಟ್ಟಿದವರಿಗೆ ಅಂಟಿಕೊಳ್ಳುತ್ತದೆ.

English summary

Infections That Spread By Using Dirty Toilet

A dry floor, dry and shining closet seat and a fresh smell of air freshener! Do you feel that this public toilet is as good as the one you have at you home? If you think yes, it is high time for you to know that you are wrong. Public bathrooms have the most amount of hidden germs. If you are wondering how many infections can spread by using dirty toilets, the following is the list.
X
Desktop Bottom Promotion