For Quick Alerts
ALLOW NOTIFICATIONS  
For Daily Alerts

ಸಣ್ಣ ಪುಟ್ಟ ಕಾಯಿಲೆಗಳಿಗೆ ಮನೆಮದ್ದೇ ಸಾಕು

|

ಇ೦ದಿನ ದಿನಮಾನಗಳಲ್ಲಿ ನಮ್ಮಲ್ಲಿ ಯಾರೇ ಆಗಲಿ, ಕೊ೦ಚ ಅಸ್ವಸ್ಥಗೊ೦ಡಲ್ಲಿ ನಾವು ಮಾಡುವ ಮೊದಲ ಕೆಲಸವೇನೆ೦ದರೆ ವೈದ್ಯರಿಗೆ ಕರೆ ಮಾಡುವುದು ಇಲ್ಲವೇ ಸಮೀಪದ ದವಾಖಾನೆಗೆ ದೌಡಾಯಿಸುವುದು.

ಇನ್ನೂ ಕೆಲವರು ಮತ್ತೂ ಒ೦ದು ಹೆಜ್ಜೆ ಮು೦ದುವರಿದು ವೈದ್ಯರ ಶಿಫಾರಸಿನ ಹ೦ಗಿಲ್ಲದೇ ಔಷಧಾಲಯದವರು ನೀಡುವ ಗುಳಿಗೆಗಳ ಬಳಕೆಗೆ ಮು೦ದಾಗುತ್ತಾರೆ. ಆದರೆ, ಇನ್ನೂ ಕೆಲವರು ಬುದ್ಧಿವ೦ತರಿರುತ್ತಾರೆ. ಇವರು ಮೊದಲು ನೈಸರ್ಗಿಕವಾಗಿ ದೊರೆಯುವ ಮನೆಮದ್ದುಗಳನ್ನು ಪ್ರಯತ್ನಿಸುತ್ತಾರೆ.

ಹೌದು ಇಂತಹ ಅನೇಕ ನೈಸರ್ಗಿಕ ಪರಿಹಾರೋಪಾಯಗಳು ತಲೆಮಾರಿನಿ೦ದ ತಲೆಮಾರಿಗೆ ಸಾಗುತ್ತಾ ಬ೦ದಿದ್ದು, ಈ ತೆರನಾಗಿ ಪಾರ೦ಪರಿಕವಾಗಿ ಅವು ನಮ್ಮ ತಲೆಮಾರನ್ನು ತಲುಪಿವೆ. ಹಿರಿಯರು ಸೂಚಿಸುವ ಈ ಮನೆಮದ್ದುಗಳು ಮನೆಯಲ್ಲಿಯೇ ಸುಲಭವಾಗಿ ಕೈಗೆಟಕುವ೦ತಹ ನೈಸರ್ಗಿಕ ಘಟಕಗಳನ್ನು ಬಳಸಿಕೊ೦ಡವುಗಳಾಗಿರುತ್ತವೆ.

ಕೆಲವೊಮ್ಮೆ ಅವು ಚೆನ್ನಾಗಿ ಕೆಲಸಮಾಡಬಲ್ಲವು ಅಥವಾ ಕೆಲವೊಮ್ಮೆ ಕೆಲವರ ವಿಷಯದಲ್ಲಿ ಅವು ಕೆಲಸವನ್ನು ಮಾಡದೆಯೂ ಇರಬಹುದು. ಒ೦ದು ವೇಳೆ ಅವು ಚೆನ್ನಾಗಿ ಕೆಲಸ ಮಾಡಿದವೆ೦ದಾದರೂ ಕೂಡ ಅವು ಸೂಕ್ತ ಚಿಕಿತ್ಸೆಗೆ ಪರ್ಯಾಯವಲ್ಲವೆ೦ಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದುದು ಅತ್ಯಾವಶ್ಯಕವಾಗಿದೆ. ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

 

ಹಿಂದೆ ಎಷ್ಟೋ ಕಾಯಿಲೆಗಳಿಗೆ ನಮ್ಮ ಹಿರಿಯರು ಮನೆ ಹಿತ್ತಲಲ್ಲಿ ಬೆಳೆದಿದ್ದ, ಅಡುಗೆಮನೆಯ ನಿತ್ಯಬಳಕೆಯ ವಸ್ತುಗಳನ್ನೇ ಉಪಯೋಗಿಸಿಕೊಳ್ಳುತ್ತಿದ್ದರು. ತಲೆಮಾರುಗಳ ಮೂಲಕ ಈ ಔಷಧದ ಗುಟ್ಟುಗಳು ಮುಂದಿನ ತಲೆಮಾರಿಗೆ ದಾಟುತ್ತಾ ಇಂದು ನಮ್ಮ ಹಿರಿಯರ ಬಳಿ ಸಂಗ್ರಹವಾಗಿದೆ. ಬನ್ನಿ ಅಂತಹ ಮನೆಮದ್ದುಗಳ ವೈಶಿಷ್ಟ್ಯವೇನು ಎಂಬುದನ್ನು ನೋಡೋಣ..

ರಕ್ತದ ಒತ್ತಡ ಕಡಿಮೆಗೊಳಿಸಲು ಬೆಳ್ಳುಳ್ಳಿ ಸೇವಿಸಿ

ರಕ್ತದ ಒತ್ತಡ ಕಡಿಮೆಗೊಳಿಸಲು ಬೆಳ್ಳುಳ್ಳಿ ಸೇವಿಸಿ

ನಮ್ಮ ರಕ್ತದ ಒತ್ತಡವನ್ನು ಹೆಚ್ಚಿಸಲು angiotensin II ಎಂಬ ಪ್ರೋಟೀನ್ ಕಾರಣವಾಗಿದೆ. ಬೆಳ್ಳುಳ್ಳಿಯಲ್ಲಿರುವ ಆಲಿಸಿನ್ ಈ ಪ್ರೋಟೀನ್ ನೊಂದಿಗೆ ಮಿಳಿತಗೊಂಡು ಅದರ ಪ್ರಭಾವವನ್ನು ಕಡಿಮೆಗೊಳಿಸುತ್ತದೆ. ಪರಿಣಾಮವಾಗಿ ರಕ್ತದೊತ್ತಡ ಹೆಚ್ಚುವುದನ್ನು ತಡೆಯುತ್ತದೆ. ಬೆಳ್ಳುಳ್ಳಿಯಲ್ಲಿರುವ polysulphide ಎಂಬ ರಾಸಾಯನಿಕಗಳು ದೇಹದಲ್ಲಿ ಪ್ರವೇಶ ಪಡೆದ ಬಳಿಕ ಅನಿಲವಾಗಿ ಪರಿವರ್ತನೆಗೊಂಡು hydrogen sulphide ಎಂಬ ರೂಪ ತಳೆಯುತ್ತವೆ. ಈ ಅನಿಲ ರಕ್ತನಾಳಗಳನ್ನು ಒಳಗಿನಿಂದ ಹಿಗ್ಗಿಸಿ ಹೆಚ್ಚಿನ ರಕ್ತ ಪೂರೈಕೆಗೆ ನೆರವಾಗುತ್ತದೆ. ಪರಿಣಾಮವಾಗಿ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಹೆಚ್ಚಿನ ರಕ್ತದೊತ್ತಡ ಇರುವ ರೋಗಿಗಳು ತಮ್ಮ ವೈದ್ಯರ ಸಲಹೆ ಪಡೆದು ಬೆಳ್ಳುಳ್ಳಿಯನ್ನು ಔಷಧಿಯಾಗಿ ಸೇವಿಸಬಹುದು. ಉಪಯೋಗಿಸುವ ವಿಧಾನ ಪ್ರತಿ ಊಟದಲ್ಲಿ ಬೆಳ್ಳುಳ್ಳಿಯ ಹಸಿ ಎಸಳುಗಳನ್ನು ಊಟದ ನಡುವೆ ತಿನ್ನಿರಿ. ಪ್ರತಿ ಊಟದಲ್ಲಿ ನಾಲ್ಲ್ಕೈದು ಎಸಳುಗಳು ಸಾಕು.ಬೆಳಿಗೆ ಖಾಲಿಹೊಟ್ಟೆಯಲ್ಲಿ ಒಂದು ಅಥವಾ ಎರಡು ಚಿಕ್ಕ ಎಸಳುಗಳನ್ನು ತಿನ್ನುವುದೂ ಫಲಕಾರಿಯಾಗಿದೆ.

ಜ್ವರ ಬಂದರೆ-ತುಳಸಿ ಎಲೆ ಕುದಿಸಿದ ನೀರು ಸೇವಿಸಿ

ಜ್ವರ ಬಂದರೆ-ತುಳಸಿ ಎಲೆ ಕುದಿಸಿದ ನೀರು ಸೇವಿಸಿ

ಬಿಸಿನೀರಿಗೆ ತುಳಸಿ ಎಲೆಗಳನ್ನು ಹಾಕಿ ಕುಡಿಸಿ ಒಂದು ಕಪ್ ಕುದಿಯುವ ನೀರಿಗೆ ಒಂದು ಚಿಕ್ಕ ಚಮಚದಷ್ಟು ಜಜ್ಜಿದ ತುಳಸಿ ಎಲೆಗಳನ್ನು ಹಾಕಿ ಐದು ನಿಮಿಷಗಳವರೆಗೆ ಹಾಗೇ ಇಡಿ (ಮತ್ತೆ ಕುದಿಸಬೇಡಿ). ಬಳಿಕ ಇದನ್ನು ಸೋಸಿ ಸಾಧ್ಯವಿದ್ದಷ್ಟು ಬಿಸಿಯಾಗಿಯೇ ದಿನಕ್ಕೆ ನಾಲ್ಕು ಅಥವಾ ಐದು ಬಾರಿ ಕುಡಿಸಿ. ಜ್ವರ ಮರುದಿನವೇ ಕಡಿಮೆಯಾಗುವುದು ಗಮನಕ್ಕೆ ಬರುತ್ತದೆ.

ಕೆಮ್ಮಿನ ಸಿರಪ್
 

ಕೆಮ್ಮಿನ ಸಿರಪ್

ಆರು ಮಧ್ಯಮ ಗಾತ್ರದ ಈರುಳ್ಳಿಗಳ ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಇದನ್ನು ಒಂದು ಗಾಳಿಯಾಡದ ಜಾಡಿಯೊಳಗೆ ಹಾಕಿ ನಾಲ್ಕು ದೊಡ್ಡ ಚಮಚ ಜೇನುತುಪ್ಪ ಸೇರಿಸಿ. ಈ ಜಾಡಿಯನ್ನು ಗಟ್ಟಿಯಾಗಿ ಮುಚ್ಚಿ ಬಿಸಿನೀರಿನಲ್ಲಿ ಮುಳುಗಿಸಿಡಿ ಅಥವಾ ಒಲೆಯ ಮೇಲೆ ಅತಿ ಚಿಕ್ಕ ಉರಿಯಲ್ಲಿ ಇರಿಸಿ. ಸುಮಾರು ಎರಡು ಗಂಟೆಗಳ ಬಳಿಕ ಬಿಸಿಯಿಂದ ಹೊರತೆಗೆಯಿರಿ. ಮಿಶ್ರಣವನ್ನು ಹೊರತೆಗೆದು ತೆಳುವಾದ ಜರಡಿಯಲ್ಲಿ ಸೋಸಿ. ನಿಮ್ಮ ಮನೆಯ ಅತ್ಯುತ್ತಮ ಸಿರಪ್ ಸಿದ್ಧ. ಪ್ರತಿ ಮೂರು ಘಂಟೆಗೆ ಸುಮಾರು ಒಂದು ದೊಡ್ಡಚಮಚ ಸಿರಪ್ ಅನ್ನು ಸೇವಿಸುವುದರಿಂದ ಸಾಮಾನ್ಯದಿಂದ ಮಧ್ಯಮ ಕೆಮ್ಮು ನಿವಾರಣೆಯಾಗುತ್ತದೆ

ಗಂಟಲು ನೋವಿಗೆ

ಗಂಟಲು ನೋವಿಗೆ

ಅರ್ಧ ಕಪ್ ಉಗುರುಬೆಚ್ಚನೆಯ ನೀರಿಗೆ ಅರ್ಧ ಟೀ ಚಮಚ ಉಪ್ಪು, ಕಾಲು ಟೀ ಚಮಚ ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಕಲಕಿ. ಈ ನೀರಿನಿಂದ ಚೆನ್ನಾಗಿ ಮುಕ್ಕಳಿಸಿ. ಗದ್ದವನ್ನು ಮೇಲಕ್ಕೆತ್ತಿ ಗಳಗಳ ಮಾಡಿ. ಕನಿಷ್ಠ ಅರ್ಧ ಗಂಟೆ ಕಾಲ ನೀರಿನ ಸಹಿತ ಏನನ್ನೂ ಸೇವಿಸಬೇಡಿ. ಈ ಸಮಯದಲ್ಲಿ ಉಪ್ಪು ಅರಿಶಿನದ ಜೋಡಿ ಎಲ್ಲಾ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತಾ ಬರುತ್ತವೆ. ಇದನ್ನು ದಿನಕ್ಕೆ ಅಗತ್ಯವಿದ್ದಷ್ಟು ಕಾಲ ಪುನರಾವರ್ತಿಸಿ.

ಮೈಗ್ರೇನ್ ತಲೆನೋವಿದ್ದರೆ

ಮೈಗ್ರೇನ್ ತಲೆನೋವಿದ್ದರೆ

ತಲೆನೋವುಗಳಲ್ಲಿಯೇ ಅತ್ಯುಗ್ರ ರೂಪವಾದ ಮೈಗ್ರೇನ್ ತಲೆನೋವಿನಿಂದ ಬಳಲುವವರು ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಸೇಬುಹಣ್ಣನ್ನು ಸೇವಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ. ಸುಮಾರು ಹತ್ತು ವರ್ಷಗಳಿಂದ ಈ ತಲೆಶೂಲೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಈ ವಿಧಾನ ಪ್ರಾರಂಭಿಸಿದ ಬಳಿಕ ಸಂಪೂರ್ಣರಾಗಿ ಗುಣಮುಖರಾಗಿದ್ದಾರೆ.

ಸರಿಯಾಗಿ ನಿದ್ದೆ ಬರದಿದ್ದರೆ

ಸರಿಯಾಗಿ ನಿದ್ದೆ ಬರದಿದ್ದರೆ

ರಾತ್ರಿ ಹಾಸಿಗೆಗೆ ತೆರಳುವ ಮುನ್ನ ಒ೦ದು ಲೋಟದಷ್ಟು ಬೆಚ್ಚಗಿನ ಹಾಲನ್ನು ಕುಡಿಯಿರಿ. ನಿದ್ರಾಹೀನತೆಯ ನಿವಾರಣೆಗಾಗಿ ಈ ಪರಿಹಾರೋಪಾಯವನ್ನು ನೂರಾರು ವರ್ಷಗಳಿ೦ದಲೂ ಬಳಸಲಾಗುತ್ತಿದೆ. ಹಾಲು ಖ೦ಡಿತವಾಗಿಯೂ ನಿದ್ರೆಹೊ೦ದುವಲ್ಲಿ ನೆರವಾಗುತ್ತದೆ.

ಮುಟ್ಟಿನ ಅವಧಿಯ ಸಮಸ್ಯೆಗಳಿಗಾಗಿ

ಮುಟ್ಟಿನ ಅವಧಿಯ ಸಮಸ್ಯೆಗಳಿಗಾಗಿ

ಪೇಸ್ಟ್ ರೂಪಕ್ಕೆ ಬರುವವರೆಗೂ ಎರಡರಿ೦ದ ಮೂರು ವೀಳ್ಯದೆಲೆಗಳನ್ನು ಚೆನ್ನಾಗಿ ಜಜ್ಜಿರಿ. ಒ೦ದು ಚಮಚ ಭರ್ತಿ ಈ ಪೇಸ್ಟ್ ಅನ್ನು ಉಗುರು ಬೆಚ್ಚಗಿನ ನೀರಿನೊ೦ದಿಗೆ ಕುಡಿಯಿರಿ. ಇದಾದ ಕೆಲವು ಸೆಕೆ೦ಡುಗಳ ಬಳಿಕ, ಒ೦ದು ಲೋಟದಷ್ಟು ತಣ್ಣೀರನ್ನು ಕುಡಿಯಿರಿ.

ಗಂಟಲಲ್ಲಿ ಕಫ ಕಟ್ಟಿಕೊಂಡಿದ್ದರೆ

ಗಂಟಲಲ್ಲಿ ಕಫ ಕಟ್ಟಿಕೊಂಡಿದ್ದರೆ

ಸಮಪ್ರಮಾಣದಲ್ಲಿ ಜೇನು ಮತ್ತು ಹಸಿಶುಂಠಿಯ ರಸವನ್ನು ಸೇರಿಸಿ ಗಾಢವಾದ ಮಿಶ್ರಣವನ್ನು ತಯಾರಿಸಿಟ್ಟುಕೊಳ್ಳಿ. ಪ್ರತಿದಿನ ಎರಡರಿಂದ ಮೂರು ಚಮಚ (ಕಫದ ತೀವ್ರತೆಯನ್ನು ಅನುಸರಿಸಿ ದಿನಕ್ಕೆರಡು ಬಾರಿ ಅಥವಾ ಮೂರು ಬಾರಿ) ಸೇವಿಸಿ. ಇದು ಸಾಮಾನ್ಯ ಶೀತ, ಸಾಮಾನ್ಯ ಕೆಮ್ಮು ಮತ್ತು ಗಂಟಲಿನ ತೊಂದರೆಗಳಿಗೂ ಉತ್ತಮ ಪರಿಹಾರ ನೀಡುತ್ತದೆ.

English summary

Home Remedies and Natural Cures you should know

Are you among those who pop a pill every time you experience some pain? Well, it's time you turn to your kitchen. There are so many natural remedies available that can be utilized for your overall well being. Have a look:
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more