For Quick Alerts
ALLOW NOTIFICATIONS  
For Daily Alerts

ತುಳಸಿ ಎಲೆಯ ಆರೋಗ್ಯಕಾರಿ ಉಪಯೋಗಗಳು

|

ಪ್ರತಿಯೊಂದು ಪೂಜೆ ಪುನಸ್ಕಾರಗಳಲ್ಲಿ ಶುದ್ಧತೆಯ ಸಂಕೇತವಾಗಿ ತುಳಸಿಯನ್ನು ಹೆಚ್ಚಾಗಿಯೇ ಬಳಸುತ್ತಾರೆ. ತುಳಸಿ ದೇವಿಯನ್ನು ಮುಟ್ಟಿದೊಡನೆಯೇ ನಾವು ಶುದ್ಧರಾಗುತ್ತೇವೆ ಹಾಗೂ ಪ್ರಾರ್ಥಿಸುವುದರಿಂದ ಎಲ್ಲಾ ಕಾಯಿಲೆಗಳು ಹೇಳಹೆಸರಿಲ್ಲದಂತೆ ಮಾಯವಾಗಿ ನೆಮ್ಮದಿ ಸಿಗುತ್ತದೆ ಹಾಗೆಯೇ ಒಮ್ಮೆ ತುಳಸಿಯನ್ನು ನೀರಿನಿಂದ ತೋಯಿಸಿದರೆ ಯಮರಾಜನ ಭಯವು ಮರೆಯಾಗುತ್ತದೆ ಎಂದು ಸ್ಕಂದ ಪುರಾಣವು ಹೇಳುತ್ತದೆ. ವಾಸ್ತು ಕೂಡ ತುಳಸಿಗೆ ಪೂಜನೀಯ ಸ್ಥಾನವನ್ನು ನೀಡಿದೆ.

ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ವಿಶ್ವಾಸ ಕೂಡ ನಮ್ಮಲ್ಲಿದೆ. ವೈದ್ಯಕೀಯ ಕ್ಷೇತ್ರದಲ್ಲೂ ತುಳಸಿಯು ಹಲವಾರು ಅದ್ಭುತಗಳನ್ನು ಮಾಡಿದೆ. ನಮ್ಮ ಭಾರತೀಯ ಪರಂಪರೆಯು ಸಾವಿರಾರು ವರ್ಷಗಳಿಂದ ತುಳಸಿಯನ್ನು ಬಳಸಿಕೊಂಡು ಬರುತ್ತಿದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ ಎಂಬ ನಂಬಿಕೆಯೂ ಇದೆ.

ತುಳಸಿ ಸಾಮಾನ್ಯ ಎಲ್ಲರ ಮನೆಯಲ್ಲೂ ಬೆಳೆಯುವ ದೈವಿಕ ಸಸ್ಯ. ತುಳಸಿ ಧಾರ್ಮಿಕವಾಗಿ ಮಾತ್ರ ಹೆಸರುಗಳಿಸಿಲ್ಲ, ಅದರಲ್ಲಿ ಹಲವು ಔಷಧೀಯ ಗುಣಗಳೂ ಇದೆ. ಆದರೆ ಈ ಅಂಶ ತುಳಸಿ ಬೆಳೆಸಿದ ಎಷ್ಟೋ ಜನರಿಗೂ ತಿಳಿದಿರುವುದಿಲ್ಲ. ಇದರ ಎಲೆಯ ಗಂಧವೇ ವಾತಾವರಣವನ್ನು ತಂಪು ಮತ್ತು ಕಲ್ಮಶರಹಿತವಾಗಿಸುವ ಶಕ್ತಿ ಹೊಂದಿದೆ. ಬನ್ನಿ ತುಳಸಿ ಎಲೆಗಳ ಆರೋಗ್ಯಕಾರಿ ಪ್ರಯೋಜನಗಳೇನು ಎನ್ನುವುದರ ಬಗ್ಗೆ ತಿಳಿಯೋಣ

ಗರ್ಭಾವಸ್ಥೆಯ ಸಮಯದಲ್ಲಿ ತುಳಸಿ ಚಹಾ ಏಕೆ ಮಹತ್ವಪೂರ್ಣ?

ಜ್ವರ ಹಾಗೂ ಶೀತಕ್ಕೆ ರಾಮಬಾಣ

ಜ್ವರ ಹಾಗೂ ಶೀತಕ್ಕೆ ರಾಮಬಾಣ

ಜ್ವರ ಹಾಗೂ ಶೀತಕ್ಕೆ ಇದರ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯುವುದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಜ್ವರ ಉಪಶಮನವಾಗುತ್ತದೆ. ಮತ್ತು ತುಳಸಿ ರಸ ಜ್ವರವನ್ನು ತಗ್ಗಿಸುವಲ್ಲಿ ಸಹಕಾರಿ. ಇದರ ಎಲೆಯನ್ನು ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ.

ತಲೆನೋವು

ತಲೆನೋವು

ತುಳಸಿ ರಸವನ್ನು ಗಂಧದೊಂದಿಗೆ ತೇಯ್ದು ನೆತ್ತಿಗೆ ಹಚ್ಚುವುದರಿಂದ ತಲೆನೋವು ಉಪಶಮನವಾಗುತ್ತದೆ.

ಕಿಡ್ನಿ ಕಲ್ಲಿನ ಸಮಸ್ಯೆ

ಕಿಡ್ನಿ ಕಲ್ಲಿನ ಸಮಸ್ಯೆ

ತುಳಸಿ ರಸವನ್ನು ಜೇನಿನೊಂದಿಗೆ ನಿಯಮಿತವಾಗಿ 6 ತಿಂಗಳು ತೆಗೆದುಕೊಂಡಲ್ಲಿ ನೋವಿನ ಬಾಧೆ ಕಡಿಮೆಯಾಗುತ್ತದೆ. ಹೀಗೆ ಬಹುವಿಧ ಕಾಯಿಲೆಗಳಿಗೆ ಮನೆಮದ್ದಾಗಿರುವ ತುಳಸಿಯು ವಾತಾವರಣಕ್ಕೂ ಒಳ್ಳೆಯದು. ಹೆಚ್ಚು ಖರ್ಚಿಲ್ಲದೆ ಬೆಳೆಸಬಹುದಾದ ತುಳಸಿಯಿಂದ ನಾವು ಪಡೆಯಬಹುದಾದ ಪ್ರಯೋಜನ ಅಪಾರವಾದುದು.

ಕೊಲೆಸ್ಟ್ರಾಲ್

ಕೊಲೆಸ್ಟ್ರಾಲ್

ತುಳಸಿ ಬೊಜ್ಜನ್ನು ನಿಯಂತ್ರಿಸುವುದಲ್ಲದೆ ರಕ್ತದಲ್ಲಿನ ಕೊಬ್ಬಿನಂಶವನ್ನೂ ನಿಯಂತ್ರಿಸುತ್ತದೆ. ಜ್ವರ, ಕೆಮ್ಮು ಮತ್ತು ಟಿಬಿ ರೋಗಿಗಳೂ 3 ಗ್ರಾಂ ತುಳಸಿಯನ್ನು ಪ್ರತಿನಿತ್ಯ ಸೇವಿಸಿದರೆ ಉಪಯೋಗ ಹೊಂದಬಹುದು.

ಹೊಳೆವ ತ್ವಚೆ

ಹೊಳೆವ ತ್ವಚೆ

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಿದರೆ ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ.

ಜ್ಞಾಪಕ ಶಕ್ತಿ ಹೆಚ್ಚುತ್ತದೆ

ಜ್ಞಾಪಕ ಶಕ್ತಿ ಹೆಚ್ಚುತ್ತದೆ

ಐದು ತುಳಸಿ ಎಲೆಯನ್ನು ಪ್ರತಿ ದಿನ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿರಿಸಬಹುದು. ಇದರ ಸೇವನೆಯಿಂದ ಜ್ಞಾಪಕ ಶಕ್ತಿಯೂ ಹೆಚ್ಚಾಗಿ ಬುದ್ಧಿವಂತಿಕೆಯೂ ಚುರುಕುಗೊಳ್ಳುತ್ತದೆ. ಇದನ್ನು ವಯಸ್ಸಾದವರು ಸೇವಿಸಿದರೆ ಸುಸ್ತು ಕಡಿಮೆಗೊಳ್ಳುತ್ತದೆ.

English summary

Top health benefits of Basil Plant

Tulsi have so many health benefits in it and its health benefits make it as best ayurvedic plant to cure many disorders. Have a look to know the several benefits of Tulsi Plant.
Story first published: Thursday, July 10, 2014, 16:55 [IST]
X
Desktop Bottom Promotion