For Quick Alerts
ALLOW NOTIFICATIONS  
For Daily Alerts

ಅನಿಯಮಿತ ಮುಟ್ಟು: ನಿಮ್ಮ ದೇಹ ಏನನ್ನು ಹೇಳುತ್ತದೆ?

By Super
|

ಸಾಮಾನ್ಯವಾಗಿ ಮಹಿಳೆಯರಲ್ಲಿ ಸರಾಸರಿ, ತಿಂಗಳಲ್ಲಿ ಮೂರರಿಂದ ಏಳು ದಿನಗಳ ಕಾಲ ಋತುಚಕ್ರ ಉಂಟಾಗುತ್ತದೆ. ( ಪ್ರತಿ 30 ದಿನಗಳು) ಹಲವಾರು ವರ್ಷಗಳ ಈ ಋತುಚಕ್ರ ಹಾಗೆಯೇ ಮತ್ತೆ ಮತ್ತೆ ಪುನರ್ರಾವರ್ತನೆಗೊಂಡು ಬಹಳ ವರ್ಷಗಳ ಕಾಲ ಹಾಗೆಯೇ ಮುಂದುವರೆಯುತ್ತದೆ.ಕೆಲವು ಮಹಿಳೆಯರು ಕೆಲವು ಗಂಟೆಗಳ ಮುಂಚೆಯೇ ತಾವು ಮುಟ್ಟಾಗುವುದನ್ನು ಊಹಿಸಬಲ್ಲರು.

ಪ್ರತಿ ಮುಟ್ಟಿನಲ್ಲೂ ರಕ್ತಸ್ರಾವವಾಗುವ ಪ್ರಮಾಣ ಮಹಿಳೆಯರಿಂದ ಮಹಿಳೆಗೆ ಬದಲಾಗುತ್ತದೆ. ಕೆಲವು ಮಹಿಳೆಯರಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುತ್ತದೆ ( ಪ್ರತಿ ತಿಂಗಳು 12 ಚಮಚಗಳಷ್ಟು ರಕ್ರಸ್ರಾವ). ಮತ್ತು ಇನ್ನೂ ಕೆಲವರಲ್ಲಿ ಅತಿ ಕಡಿಮೆ ಪ್ರಮಾಣದಲ್ಲಿ ( ಕೇವಲ ನಾಲ್ಕು ಚಮಚಗಳಷ್ಟು) ಮುಟ್ಟಿನ ರಕ್ತಸ್ರಾವವಾಗುವುದನ್ನು ಕಾಣಬಹುದು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು

ಅನಿಯಮಿತ ಮುಟ್ಟು

ಅನಿಯಮಿತ ಮುಟ್ಟು

ನೀವು ಅನಿಯಮಿತ ಮುಟ್ಟನ್ನು ಅನುಭವಿಸುತ್ತಿದ್ದರೆ, ನಿಮ್ಮ ದೇಹ ಮುಂತಿನ ಋತುಚಕ್ರಕ್ಕೆ ಸಿದ್ಧವಾಗಿಲ್ಲವೆಂದು ಅರ್ಥ. ನಿಮ್ಮ ಕಳೆದ ಕೆಲವು ಮುಟ್ಟಿನ ಅವಧಿಗೆ ಹೋಲಿಸಿದರೆ ನಿಮ್ಮಲ್ಲಿ ಈಗ ಅಸಹಜ ರಕ್ತಸ್ರಾವವಾದರೆ ಅದನ್ನು ಅನಿಯಮಿತ ಮುಟ್ಟು ಎಂದು ಪರಿಗಣಿಸಲಾಗುತ್ತದೆ.

ಗರ್ಭಧಾರಣೆ

ಗರ್ಭಧಾರಣೆ

ಗರ್ಭಾವಸ್ಥೆಯಲ್ಲಿರುವಾಗ ಮಹಿಳೆಯರ ದೇಹದಲ್ಲಿ ವಿವಿಧ ಮಟ್ಟಗಳಲ್ಲಿ ಹಾರ್ಮೋನ್ ಗಳು ಉತ್ಪಾದನೆಯಾಗುವುದರಿಂದ ಮುಟ್ಟು ನಿಲ್ಲಲು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಮಹಿಳೆಯರಲ್ಲಿ ಸಾಮಾನ್ಯ ಮುಟ್ಟಿಗಿಂತಲೂ ಕಡಿಮೆ ರಕ್ತಸಾವ ಅಥವಾ ತಡವಾಗಿ ಮುಟ್ಟು ಸಂಭವಿಸಬಹುದು. ಒಂದುವೇಳೆ ನೀವು ಗರ್ಭಿಣಿಯಾಗುವ ಸಾಧ್ಯತೆಗಳಿದ್ದರೆ, ನಿಮ್ಮ ವೈದ್ಯ ಬಳಿ ಈ ವಿಷಯವನ್ನು ಚರ್ಚಿಸುವುದು ಉತ್ತಮ.

ಒತ್ತಡ

ಒತ್ತಡ

ಒತ್ತಡ, ಅನಿಯಮಿತ ಮುಟಿಗೆ ಅತ್ಯಂತ ಸಾಮಾನ್ಯ ಕಾರಣ. ಎರಡು ಲೈಂಗಿಕ ಹಾರ್ಮೋನ್ ಗಳಾದ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ನಮ್ಮ ದೇಹದಲ್ಲಿ ಎಷ್ಟು ಉತ್ಪಾದನೆಯಾಗುತ್ತದೆ ಎಂಬುದರ ಮೇಲೆ ಕಾರ್ಟಿಸಾಲ್ ಒತ್ತಡ ಹಾರ್ಮೋನ್ ಪ್ರಭಾವ ಬೀರುತ್ತದೆ. ನಿಮ್ಮ ರಕ್ತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ, ಕಾರ್ಟಿಸೋಲ್ ಇದ್ದರೆ, ನಿಮ್ಮ ಮುಟ್ಟಿನ ಅವಧಿಯೂ ಬದಲಾಗುತ್ತದೆ.

ಆಹಾರ

ಆಹಾರ

ತಡವಾಗಿ ಉಂಟಾಗುವ ಮುಟ್ಟಿಗೆ ಇನ್ನೊಂದು ಸಾಮಾನ್ಯ ಕಾರಣವೆಂದರೆ ನೀವು ತಿನ್ನುವ ಆಹಾರ ಮತ್ತು ಅದಕ್ಕಿಂದ ಹೆಚ್ಚಾಗಿ ನೀವು ಎಷ್ಟು ದೇಹ ತೂಕವನ್ನು ಹೊಂದಿದ್ದೀರಿ ಎಂಬುದು! ಕಾಬ್ರೋಹೈಡ್ರೇಟ್ ಅಧಿಕವಾಗಿರುವ ಅನಾರೋಗ್ಯಕರ ಆಹಾರವನ್ನು ಸೇವಿಸಿ ಅಧಿಕ ತೂಕವನ್ನು ಪಡೆದಿದ್ದರೆ, ನಿಮ್ಮ ದೇಹಲ್ಲು ಹಾರ್ಮೀನ್ ಉತ್ಪಾದನೆಯ ಮಟ್ಟದಲ್ಲಿ ವ್ಯತ್ಯಾಸವುಂಟಾಗಿ ಋತುಚಕ್ರ ಸರಿಯಾಗಿ ಆಗುವುದಿಲ್ಲ. ಇದೇ ರೀತಿ ಅತ್ಯಂತ ತೆಳ್ಳಗಿರುವ ಮಹಿಳೆಯರಲ್ಲೂ ಇದೇ ಸಮಸ್ಯೆ ಉಂಟಾಗಬಹುದು.

ವ್ಯಾಯಾಮ

ವ್ಯಾಯಾಮ

ನಮ್ಮ ಶರೀರಕ್ಕೆ ಋತುಚಕ್ರವನ್ನು ಅನುಭವಿಸಲು ಶಕ್ತಿಯ ಅಗತ್ಯವಿದೆ. ನೀವು ನಿಮ್ಮ ಶಕ್ತಿಯನ್ನು ಜಿಮ್ , ವ್ಯಾಯಾಮ ಮಾಡುವುದರಲ್ಲಿಯೇ ಕಳೆದರೆ, ತಿಂಗಳಿನಲ್ಲಿ ಮುಟ್ಟು ಉಂಟಾಗುವುದು ಅನಿಯಮಿತವಾಗುತ್ತದೆ.

ಜನನ ನಿಯಂತ್ರಣ ಮಾತ್ರೆಗಳು

ಜನನ ನಿಯಂತ್ರಣ ಮಾತ್ರೆಗಳು

ಇದು ಜನನ ನಿಯಂತ್ರಣ ಮಾತ್ರೆಗಳು, ಹಾರ್ಮೋನುಗಳನ್ನು ತಲುಪಲು ಕೆಲವು ತಿಂಗಳುಗಳೇ ತೆಗೆದುಕೊಳ್ಳಬಹುದು. ಇದರಿಂದ ಮುಟ್ಟಿನಲ್ಲಿ ವ್ಯತ್ಯಾಸ ಕಾಣಿಸಬಹುದು.

 ಅತಿಯಾದ ಮದ್ಯ ಸೇವನೆ

ಅತಿಯಾದ ಮದ್ಯ ಸೇವನೆ

ಯಕೃತ್ತು, ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟರಾನ್ ಚಯಾಪಚಯ ಕ್ರಿಯೆಗೆ ಸಹಾಯ ಮಾಡಿ ಮಹಿಳೆಯರಲ್ಲಿ ಸಹಯ ಮುಟ್ಟು ಉಂಟಾಗಲು ಕಾರಣವಾಗುತ್ತದೆ. ಆದರೆ, ವಿಪರೀತ ಕುಡಿಯುವುದರಿಂದ ಯಕೃತ್ತಿಗೆ ಹಾನಿಯಾಗಿ ಮುಟ್ಟು ಮತ್ತು ಸಾಮಾನ್ಯ ಹಾರ್ಮೋನುಗಳ ಉತ್ಪತ್ತಿಗೆ ಅಡ್ಡಿಪಡಿಸುತ್ತವೆ.

English summary

Irregular periods: What your body is trying to tell you

A woman will, on average, get her period for three to seven days once a month (every 30 days or so). After menstruating for several years, women tend to settle into a cycle.
X
Desktop Bottom Promotion