For Quick Alerts
ALLOW NOTIFICATIONS  
For Daily Alerts

ಕಿಡ್ನಿ ಕಲ್ಲುಗಳ ನಿವಾರಣೆಗೆ ಇಲ್ಲಿದೆ ಸೂಕ್ತ ಪರಿಹಾರ

|

ನಮ್ಮ ದೇಹದ ಅತಿ ಮುಖ್ಯ ಅಂಗಗಳಲ್ಲಿ ಮೂತ್ರಪಿಂಡಗಳೂ ಒಂದು. ಇವು ಸತತವಾಗಿ ನಮ್ಮ ದೇಹದಲ್ಲಿ ಆಹಾರದ ಮೂಲಕ ಆಗಮಿಸಿದ್ದ ವಿಷಕಾರಿ ವಸ್ತುಗಳನ್ನು, ಕಲ್ಮಶಗಳನ್ನು ನಿವಾರಿಸಿ ಹೊರಹಾಕುತ್ತವೆ. ವಿಶೇಷವಾಗಿ ನೀರಿನಲ್ಲಿ ಕರಗಿದ್ದ ಉಪ್ಪು ಮತ್ತು ಇತರ ಲವಣಗಳನ್ನು ಸೋಸಿ ಮೂತ್ರದ ಮೂಲಕ ಹೊರಹಾಕುತ್ತವೆ.

ಕೆಲವು ಸಂದರ್ಭಗಳಲ್ಲಿ ಈ ಲವಣಗಳು ಹರಳುಗಟ್ಟಿ ಮೂತ್ರಪಿಂಡಗಳ ಒಳಗೇ ಉಳಿದುಕೊಳ್ಳುತ್ತವೆ. ಇವೇ ಮೂತ್ರಪಿಂಡಗಳ ಕಲ್ಲು. ಸರಿಸುಮಾರಾಗಿ ಪ್ರತಿಯೊಬ್ಬರ ಮೂತ್ರಪಿಂಡಗಳಲ್ಲಿಯೂ ಚಿಕ್ಕ ಚಿಕ್ಕ ಕಲ್ಲುಗಳಿದ್ದೇ ಇರುತ್ತವೆ. ಆದರೆ ಸತತವಾಗಿ ನೀರು ಕುಡಿಯುವ ಮತ್ತು ನಿಯಮಿತವಾಗಿ ಮೂತ್ರವಿಸರ್ಜಿಸುವ ಮೂಲಕ ಈ ಕಲ್ಲುಗಳೂ ಕರಗುತ್ತಾ ಹೋಗುತ್ತವೆ.

ಮೂತ್ರ ತಡೆದು ಹಿಡಿದಷ್ಟೂ ಈ ಕಲ್ಲುಗಳ ಸಾಂದ್ರತೆ ಹೆಚ್ಚುತ್ತದೆ. ಒಂದು ಹಂತದಲ್ಲಿ ಇವು ದೊಡ್ಡದಾಗುತ್ತಾ ಮೂತ್ರಪಿಂಡಗಳ ಒಳಗೆ ಒತ್ತಡ ನೀಡುವ ಮೂಲಕ ನೋವು ಕೊಟ್ಟು ತಮ್ಮ ಇರುವಿಕೆಯನ್ನು ತೋರ್ಪಡಿಸುತ್ತವೆ. ಆಗ ತಡಬಡಾಯಿಸಿ ನೋವು ತಡೆಯಲಾರದೇ ಎಲ್ಲರೂ ವೈದ್ಯರ ಬಳಿ ಓಡುತ್ತಾರೆ

ಈ ಸ್ಥಿತಿ ಬರದೇ ಇರಲು ನಿಯಮಿತವಾಗಿ ನೀರು ಕುಡಿಯುತ್ತಿರುವುದು, ಮೂತ್ರ ತಡೆಗಟ್ಟದಿರುವುದು, ಲವಣಗಳನ್ನು ಹೆಚ್ಚಾಗಿ ಸೇವಿಸದೇ ಇರುವುದು ಮೊದಲಾದ ಕ್ರಮಗಳನ್ನು ನಮ್ಮ ಜೀವನದ ಅಭ್ಯಾಸವಾಗಿಸಬೇಕು. ಒಂದು ವೇಳೆ ಮಾಹಿತಿಯ ಕೊರತೆಯಿಂದ ಈಗಾಗಲೇ ತಡವಾಗಿದ್ದು ಮೂತ್ರಪಿಂಡಗಳಲ್ಲಿ ಕಲ್ಲು ಮೂಡಿದ್ದರೆ ಇವನ್ನು ಸಮರ್ಥವಾಗಿ ಹೊರಹಾಕಲು ಸುಲಭ ಮತ್ತು ಸಮರ್ಥವಾದ ವಿಧಾನವೊಂದಿದೆ, ಬನ್ನಿ, ಈ ವಿಧಾನ ಯಾವುದು ಎಂಬುದನ್ನು ನೋಡೋಣ.....

ನೀರು ಕುಡಿಯುವುದು

ನೀರು ಕುಡಿಯುವುದು

ಸಾಕಷ್ಟು ನೀರು ಕುಡಿಯುವುದು ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ತಡೆಯುತ್ತದೆ. ಕನಿಷ್ಟ ಪಕ್ಷ 8 ಲೋಟಗಳಷ್ಟಾದರೂ ನೀರನ್ನು ಕುಡಿಯುವುದು ಅತ್ಯವಶ್ಯಕವಾಗಿದೆ. ನೀರಲ್ಲದೆ, ಸಿಟ್ರಸ್ ಅಂಶವುಳ್ಳ ಜ್ಯೂಸ್ ಅನ್ನು ಕೂಡ ನೀವು ಸೇವಿಸಬಹುದು. ಈ ಪಾನೀಯಗಳು ಕಲ್ಲಿನ ರಚನೆಯನ್ನು ನಿರ್ಬಂಧಿಸುವಲ್ಲಿ ಸಹಕಾರಿ.

ಕ್ಯಾಲ್ಶಿಯಮ್

ಕ್ಯಾಲ್ಶಿಯಮ್

ಕ್ಯಾಲ್ಶಿಯಮ್ ಪ್ರಮಾಣ ಕಡಿಮೆ ಇರುವುದು ಆಕ್ಸಲೇಟ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಿಡ್ನಿ ಕಲ್ಲುಗಳ ರಚನೆಯನ್ನು ಮಾಡುತ್ತವೆ. ಹೆಚ್ಚು ಪ್ರಮಾಣದ ಕ್ಯಾಲ್ಶಿಯಂ ಸೇವನೆಯನ್ನು ಈ ದಿಸೆಯಲ್ಲಿ ನೀವು ಮಾಡಬೇಕಾಗುತ್ತದೆ. ನಿಮ್ಮ ವಯಸ್ಸಿಗೆ ತಕ್ಕಂತಹ ಕ್ಯಾಲ್ಶಿಯಂ ಅನ್ನು ನೀವು ಸೇವಿಸಬೇಕು. ಕ್ಯಾಲ್ಶಿಯಂ ಅನ್ನು ಪೂರೈಕೆ ಮಾಡುವ ಇತರ ಆಹಾರಗಳೊಂದಿಗೆ ಕ್ಯಾಲ್ಶಿಯಂ ಉಳ್ಳ ಆಹಾರವನ್ನು ಸೇವಿಸುವುದೂ ಕೂಡ ಕಿಡ್ನಿ ಕಲ್ಲಿಗೆ ರಾಮಬಾಣವಾಗಿದೆ.

ಕಡಿಮೆ ಸೋಡಿಯಮ್

ಕಡಿಮೆ ಸೋಡಿಯಮ್

ಸೋಡಿಯಮ್ ಮಟ್ಟವನ್ನು ಹೆಚ್ಚಿಸುವುದು ದೇಹದಲ್ಲಿ ಕ್ಯಾಲ್ಶಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಕಿಡ್ನಿ ಕಲ್ಲುಗಳ ರಚನೆಗೆ ಸಹಕಾರಿಯಾಗಿವೆ. ಆದ್ದರಿಂದ ಕಡಿಮೆ ಪ್ರಮಾಣದಲ್ಲಿ ಸೋಡಿಯಮ್ ಅನ್ನು ಸೇವಿಸಬೇಕು. ಇದು ನಿಮ್ಮ ಕಿಡ್ನಿ ಕಲ್ಲುಗಳ ರಚನೆಯಲ್ಲಿ ನಿರ್ಬಂಧವನ್ನುಂಟು ಮಾಡುವುದರ ಜೊತೆಗೆ ನಿಮ್ಮ ರಕ್ತದೊತ್ತಡವನ್ನು ನಿರ್ವಹಿಸುತ್ತದೆ.

ಪ್ರಾಣಿಗಳ ಪ್ರೊಟೀನ್

ಪ್ರಾಣಿಗಳ ಪ್ರೊಟೀನ್

ಕೆಂಪು ಮಾಂಸ, ಕೋಳಿ ಮೊಟ್ಟೆಯ ಸೇವನೆಯನ್ನು ಕಡಿಮೆ ಮಾಡುವುದು ಕೂಡ ಕಿಡ್ನಿ ಕಲ್ಲುಗಳನ್ನು ಸ್ವಾಭಾವಿಕವಾಗಿ ನಿವಾರಿಸುತ್ತದೆ. ಇವುಗಳು ಹೆಚ್ಚುವರಿ ಪ್ರೊಟೀನ್‌ಗಳನ್ನು ಒಳಗೊಂಡಿರುವುದರಿಂದ ಯೂರಿಕ್ ಆಸಿಡ್ ಮಟ್ಟವನ್ನು ಹೆಚ್ಚಿಸುತ್ತದೆ. ಇದು ದೇಹದಲ್ಲಿ ಸಿಟ್ರೇಟ್ ಮಟ್ಟವನ್ನು ಕಡಿಮೆಮಾಡಿ ಕಿಡ್ನಿ ಕಲ್ಲುಗಳ ರಚನೆಗೆ ದಾರಿ ದೀಪವಾಗುತ್ತದೆ. ದೈನಂದಿನ ಜೀವನದಲ್ಲಿ ಮಾಂಸ ಸೇವನೆಯನ್ನು ಮಿತಿಗೊಳಿಸುವುದರಿಂದ ಕೂಡ ಕಿಡ್ನಿ ಕಲ್ಲನ್ನು ದೂರವಿರಿಸಬಹುದು.

ಕ್ಯಾಲ್ಶಿಯಂ ಮತ್ತು ಆಕ್ಸಲೇಟ್ ಜೊತೆಯಾಗಿಸಿ

ಕ್ಯಾಲ್ಶಿಯಂ ಮತ್ತು ಆಕ್ಸಲೇಟ್ ಜೊತೆಯಾಗಿಸಿ

ಕ್ಯಾಲ್ಶಿಯಂ ಭರಿತ ಆಹಾರ ಮತ್ತು ಅಕ್ಸಲೇಟ್ ಇರುವಂತಹ ಆಹಾರವನ್ನು ಜೊತೆಯಾಗಿ ಸೇವಿಸುವುದರಿಂದ ಕೂಡ ಕಿಡ್ನಿ ಕಲ್ಲುಗಳನ್ನು ತಡೆಗಟ್ಟಬಹುದೆಂದು ಇತ್ತೀಚಿನ ಅಧ್ಯಾಯನ ತಿಳಿಸಿದೆ. ಹೊಟ್ಟೆಯಲ್ಲಿ ಮತ್ತು ಕರುಳಲ್ಲಿ ಆಕ್ಸಲೇಟ್ ಮತ್ತು ಕ್ಯಾಲ್ಶಿಯಂ ಒಂದಕ್ಕೊಂದು ಬಂಧಿಸಲ್ಪಡುತ್ತವೆ. ಇದರಿಂದ ಕಿಡ್ನಿ ಕಲ್ಲುಗಳ ಉತ್ಪಾದನೆ ಕಡಿಮೆಯಾಗುತ್ತದೆ.

ಕಿಡ್ನಿ ಕಲ್ಲುಗಳನ್ನು ಉತ್ಪಾದಿಸುವ ಆಹಾರ

ಕಿಡ್ನಿ ಕಲ್ಲುಗಳನ್ನು ಉತ್ಪಾದಿಸುವ ಆಹಾರ

ಕಿಡ್ನಿ ಕಲ್ಲುಗಳ ರಚನೆಯನ್ನು ತಡೆಯುವುದು ಹೇಗೆ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೆ, ಇದನ್ನು ಉಂಟು ಮಾಡುವ ಆಹಾರ ಪದಾರ್ಥಗಳನ್ನು ನೀವು ತ್ಯಜಿಸಬೇಕು. ಗೆಣಸು, ಪಾಲಾಕ್, ಚಾಕಲೇಟ್‌ಗಳು ಕಿಡ್ನಿ ಕಲ್ಲುಗಳನ್ನು ಉತ್ಪಾದಿಸುವ ಆಹಾರಗಳಾಗಿವೆ. ಕೆಲವೊಂದು ನಟ್ಸ್‌ಗಳು ಆಕ್ಸಲೇಟ್ ಅನ್ನು ಹೆಚ್ಚು ಹೊಂದಿರುತ್ತವೆ. ಈ ಆಹಾರಗಳನ್ನು ಸೇವಿಸದಿರುವುದು ಕಿಡ್ನಿ ಕಲ್ಲಿನ ಅಪಾಯವನ್ನು ಕಡಿಮೆ ಮಾಡುತ್ತದೆ.

ತಡೆಗಟ್ಟುವಿಕೆ ಚಿಕಿತ್ಸೆಗಿಂತ ಉತ್ತಮ

ತಡೆಗಟ್ಟುವಿಕೆ ಚಿಕಿತ್ಸೆಗಿಂತ ಉತ್ತಮ

ಕಿಡ್ನಿ ಕಲ್ಲುಗಳ ಉತ್ಪಾದನೆಯನ್ನು ತಡೆಗಟ್ಟುವ ವಿಧಾನಗಳನ್ನು ನೀವು ತಿಳಿದುಕೊಂಡರೆ ಅದರಿಂದ ಉಂಟಾಗುವ ಸಮಸ್ಯೆಗಳು ಕಡಿಮೆಯೇ. ಈಗಾಗಲೇ ಈ ಸಮಸ್ಯೆಯನ್ನು ಹೊಂದಿರುವ ಜನರಲ್ಲಿ ಇದು ಮರುಕಳಿಸುತ್ತಿರುತ್ತದೆ. ಈ ಸಮಯದಲ್ಲಿ ಇವರುಗಳು ಹೆಚ್ಚು ಜಾಗರೂಕರಾಗಿರಬೇಕು. ಆರೋಗ್ಯವಂತ ಆಹಾರಪದಾರ್ಥಗಳನ್ನು ಮಾತ್ರವೇ ಸೇವಿಸಿ ಇಲ್ಲಿ ನಾವು ತಿಳಿಸಿದ ಡಯೆಟ್ ಅನ್ನು ಅನುಸರಿಸಬೇಕು.

English summary

How To Prevent Kidney Stones?

Kidney stones the most painful word that you can hear. Those who have kidney stones should be extremely careful with their eating habits. If you wonder how to prevent kidney stones, here are some tips that you can follow.
X
Desktop Bottom Promotion