For Quick Alerts
ALLOW NOTIFICATIONS  
For Daily Alerts

ಬಾಯಿಯ ಹುಣ್ಣಿನ ಚಿಕಿತ್ಸೆಗೆ ಗೃಹೋಪಾಯಗಳು

By Poornima Heggade
|

ಬಾಯಿಯ ಆರೋಗ್ಯವನ್ನು ಎಷ್ಟೇ ಕಾಳಜಿ ವಹಿಸಿ ಮಾಡಿದರೂ ಕಡಿಮೆಯೆ. ಹಲ್ಲು ಒಸಡು ಹಾಗೂ ಬಾಯಿಯ ಒಟ್ಟಾರೆ ಆರೋಗ್ಯ ಬಹಳವೇ ಮುಖ್ಯ. ಬಾಯಿಯಲ್ಲು ಬಿಳಿ ಬಣ್ಣದ ಗಾಯಗಳಾಗಿರುವುದನ್ನು ನಾವೆಲ್ಲರೂ ಕಂಡಿದ್ದೇವೆ. ಇದು ಕ್ಯಾಂಡಿಡಾ ಆಲ್ಬಿಕನ್ಸ್ ಎನ್ನುವ ಯೀಸ್ಟ್ ಫಂಗಸ್ ನ ಅತಿಯಾದ ಬೆಳವಣಿಗೆಯಿಂದ ಕಾಣುವ ಗಾಯಗಳಾಗಿವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕಾಫಿ ಸೇವನೆಯಿಂದ ತೂಕ ಇಳಿಕೆ ಸಾಧ್ಯವೇ?

ಇದು ಬಾಯಿಯ ಬದಿಯಲ್ಲಿ ಅಥವಾ ನಡುವಲ್ಲಿ ಕಾಣಬಹುದು. ಇದರಿಂದಾಗಿ ನಾಲಗೆಯ ಮೇಲೆ ಮತ್ತು ಗಂಟಲಲ್ಲಿ ಕೆಂಪು ಬಣ್ಣದ ಗಾಯಗಳಾಗುತ್ತವೆ. ಇದು ಮಕ್ಕಳಲ್ಲಿ ಸಾಮಾನ್ಯವಾದರೂ ದೊಡ್ಡವರಲ್ಲೂ ಕಂಡುಬರುವ ಒಂದು ತೊಂದರೆಯಾಗಿದೆ. ದೊಡ್ಡವರಲ್ಲಿ ಇದು ಆಂಟಿಬಯೋಟಿಕ್ ನ ಬಹಳವಾದ ಸೇವನೆಯಿಂದ ಆಗುತ್ತದೆ.

ಸಮಸ್ಯೆ ಬಹಳವೇ ತೀವ್ರವಾಗಿದ್ದರೆ ವೈದ್ಯರ ಸಲಹೆಯನ್ನು ಪಡೆಯುವುದು ಅಗತ್ಯವಾಗಿದೆ. ಆದರೆ ಇದನ್ನು ನಿಯಂತ್ರಿಸಲು ಹಲವು ದಾರಿಗಳಿದ್ದು ಮಾರುಕಟ್ಟೆಯಲ್ಲಿ ಇವುಗಳಿಗೆ ಸಂಬಂಧಿಸಿದ ಕ್ರೀಮ್ ಗಳು ಲಭ್ಯವಿವೆ. ಇದರ ಜೊತೆಗೆ ಮನೆಯಲ್ಲೇ ಮಾಡಬಹುದಾದ ಕೆಲವು ಔಷಧಗಳೂ ಇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಆರೋಗ್ಯ ಸುಧಾರಣೆಗೆ ಬೇವು ಸಹಕಾರಿ ಹೇಗೆ?

ಮನೆಯಲ್ಲಿ ಮಾಡಿದ ಔಷಧಗಳು:

ಮನೆಯಲ್ಲಿ ಮಾಡಿದ ಔಷಧಗಳು:

ಸೇಬುಹಣ್ಣಿನಿಂದ ಮಾಡಿದ ವಿನೇಗರ್: ಒಂದು ಕಪ್ ಬಿಸಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಪ್ರಮಾಣದ ಸೇಬುಹಣ್ಣಿನಿಂದ ತಯಾರಿಸಿದ ವಿನೇಗರನ್ನು ಹಾಕಿ ಈ ಮಿಶ್ರಣದಿಂದ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಬಾಯಿ ತೊಳೆಯಿರಿ. ಇದು ಬಾಯಿಯಲ್ಲಿ ಸಂಗ್ರಹಹಾಗುವ ಶಿಲೀಂಧ್ರಗಳನ್ನು ತಡೆಯುತ್ತದೆ ಹಾಗೂ ಸಮಸ್ಯೆಯನು ನಿವಾರಿಸುತ್ತದೆ.

ಬೋರಿಕ್ ಆಸಿಡ್:

ಬೋರಿಕ್ ಆಸಿಡ್:

ಇದು ದೊಡ್ಡವರಿಗೆ ಬಹಳ ಉತ್ತಮವಾದ ಔಷಧವಾದರೂ ಮಕ್ಕಳಿಗೆ ಇದರ ಬಳಕೆಯನ್ನು ಮಾಡಬಾರದು. ಒಂದು ಕಪ್ ನೀರನ್ನು ತೆಗೆದುಕೊಂಡು ಅದರಲ್ಲಿ ಕಾಲು ಕಪ್ ಬೋರಿಕ್ ಆಸಿಡ್ ಅನ್ನು ಹಾಕಿ ಕಲಕಿ ಹಾಗೂ ಇದನ್ನು ಮೌತ್ ವಾಶ್ ನಂತೆ ಬಳಸಿ. ಇದರಲ್ಲಿ ದಿನಕ್ಕೆ ಎರಡು ಮೂರು ಬಾರಿ ಬಾಯಿ ತೊಳೆಯಿರಿ. ಆದರೆ ಇದನ್ನು ಬಳಸುವಾಗ ಇದನ್ನು ನೀವು ಕುಡಿಯದಂತೆ ಎಚ್ಚರ ವಹಿಸಿ ಇದನ್ನು ಕುಡಿದಲ್ಲಿ ಉದರ ಸಂಬಂಧೀ ಇತರ ಸಮಸ್ಯೆಗಳು ಬರಬಹುದು.

ಬೆಳ್ಳುಳ್ಳಿ:

ಬೆಳ್ಳುಳ್ಳಿ:

ಶಿಲಿಂಧ್ರ ಮತ್ತು ಬಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣ ಬೆಳ್ಳುಳ್ಳಿಯಲ್ಲೂ ಇದೆ. ಒಂದು ಅಥವಾ ಎರಡು ಬೆಳ್ಳುಳ್ಳಿಯ ಎಸಳುಗಳನ್ನು ತೆಗೆದುಕೊಂಡು ಅದನ್ನು ಸರಿಯಾಗಿ ಹುಡಿ ಮಾಡಿ. ಇದನ್ನು ನೇರವಾಗಿ ಸೇವಿಸಿ ಅಥವಾ ಎಲ್ಲಿ ಸಮಸ್ಯೆ ಇದೆಯೋ ಆ ಜಾಗದಲ್ಲಿ ಇಟ್ಟುಕೊಳ್ಳಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ಸಮಸ್ಯೆಯಿಂದ ಮುಕ್ತಿ ಪಡೆಯುವಿರಿ.

ಮೊಸರು:

ಮೊಸರು:

ಎರಡು ಚಮಚಗಳಷ್ಟು ಮೊಸರಿನಲ್ಲೂ ಬಹಳ ಔಷಧೀಯ ಗುಣ ಇದೆ. ಆದರೆ ಮೊಸರನ್ನು ತೆಗೆದುಕೊಳ್ಳುವಾಗ ಸ್ವಾಭಾವಿಕವಾಗಿ ಮಾಡಿದ ಮೊಸರನ್ನು ತೆಗೆದುಕೊಳ್ಳಿ. ಪ್ಯಾಶ್ಚರೀಕರಿಸಿದ ಮೊಸರಲ್ಲಿ ಆ ಗುಣ ಇರುವುದಿಲ್ಲ. ಇದರ ಜೊತೆಗೆ ನೀವು ಆಸಿಡೋಫಿಲಸ್ ಮಾತ್ರೆಗಳನ್ನೂ ಸೇವಿಸಬಹುದು. ಇದನ್ನು ಒಂದು ಚಮಚ ಕಿತ್ತೆಳೆ ಹಣ್ಣಿನ ರಸದೊಂದಿಗೆ ಸೇರಿಸಿ ಸೇವಿಸಿ.

ಎಣ್ಣೆಗಳು:

ಎಣ್ಣೆಗಳು:

ಲಾವೆಂಡರ್, ಲವಂಗದ ಎಣ್ಣೆ ಹಾಗೂ ಚಹಾ ಗಿಡದಿಂದ ಮಾಡಿದ ಎಣ್ಣೆ ಅಲರ್ಜಿ ನಿವಾರಕ ಗುಣವನ್ನು ಹೊಂದಿವೆ. ಇದರಿಂದಾಗಿ ನಿಮ್ಮ ಬಾಯಿಯ ಹುಣ್ಣು ಗುಣವಾಗಿವುದು ಸುಲಭವಾಗುತ್ತದೆ. ಲಾವೆಂಡರ್ ಅಥವಾ ಲವಂಗದ ಎಣ್ಣೆ ಸುಲಭವಾಗಿ ಅಂಗಡಿಗಳಲ್ಲಿ ಲಭ್ಯವಾಗಿದೆ. ಇದನ್ನು ನೀವು ಬಳಸುವ ಹಲ್ಲುಜ್ಜುವ ಪೇಸ್ಟ್ ನಲ್ಲಿ ಹಾಕಿ ಪ್ರತಿದಿನ ಹಲ್ಲುಜ್ಜಿದರೆ ಸಾಕು. ಹೀಗೆ ಹಲ್ಲುಜ್ಜುವಾಗ ಒಂದೆರಡು ನಿಮಿಷಗಳಾದರೂ ಬಾಯನ್ನು ಹಾಗೆಯೇ ಬಿಟ್ಟರೆ ಒಳ್ಳೆಯದು. ನಂತರ ಸ್ವಚ್ಛವಾದ ನೀರಿನಲ್ಲಿ ಸರಿಯಾಗಿ ತೊಳೆಯಿರಿ. ಇವೇ ಎಣ್ಣೆಗಳನ್ನು ಬಳಸಿ ಮೌತ್ ವಾಶ್ ಕೂಡ ತಯಾರಿಸಿ ಇಡಬಹುದು. ಇದನ್ನು ದಿನದಲ್ಲಿ ಮೂರು ಅಥವಾ ನಾಲ್ಕು ಬಾರಿ ಬಳಸಿ.

English summary

homemade remedies to treat oral thrush

Oral thrush is a white colored patch formed inside the mouth due to the overgrowth of the yeast fungus named Candida Albicans. It may occur on any side of the inside of the mouth, it also results for the reddish spots on the tongue and throat.
Story first published: Friday, March 7, 2014, 15:12 [IST]
X
Desktop Bottom Promotion