For Quick Alerts
ALLOW NOTIFICATIONS  
For Daily Alerts

ಮೈ ಮನಸ್ಸನ್ನು ನಿರಾಳಗೊಳಿಸುವ ನಗುವಿನ ಮಹತ್ವವೇನು?

By Super
|

ನಕ್ಕರೆ ಅದುವೇ ಸ್ವರ್ಗ, ನಕ್ಕರೆ ಎಲ್ಲಾ ಕಾಯಿಲೆಗಳು ಮಾಯ. ನಗುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ ಎನ್ನುವ ಮಾತಿದೆ. ಸುಮ್ಮನೆ ನಕ್ಕರೆ ಅದನ್ನು ಸುತ್ತಮುತ್ತಲಿನವರು ಬೇರೆಯೇ ರೀತಿಯಲ್ಲಿ ಪರಿಗಣಿಸಬಹುದು. ಇದಕ್ಕಾಗಿ ನಾವು ಗುಂಪಿನಲ್ಲಿರುವಾಗ ಜೋಕ್ಸ್ (ಹಾಸ್ಯ) ಸಿಡಿಸುವುದು ಸಹಜ. ಇದನ್ನು ಕೇಳಿ ನಕ್ಕರೆ ಜೋಕ್ಸ್ ಹೇಳಿದವನ ಮನಸ್ಸಿಗೂ ಖುಷಿ.

ಹೌದು, ನಗು ಎಲ್ಲದಕ್ಕೂ ಮದ್ದು, ಯಾವಾಗಲೂ ನಗುತ್ತೀರಿ ಎಂದು ತಿಳಿದವರು ಹೇಳುತ್ತಾರೆ. ನಗು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದೆಂದು ಪರಿಗಣಿಸಲಾಗಿದೆ. ನಗುವುದರಿಂದ ಆರೋಗ್ಯವು ಉತ್ತಮವಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ವೈದ್ಯರು ಕೂಡ ತಮ್ಮ ರೋಗಿಗಳಿಗೆ ಚಿಂತೆ ಬಿಟ್ಟು ನಗುವಂತೆ ಸೂಚಿಸುತ್ತಾರೆ. ಒತ್ತಡದಲ್ಲೇ ಇರುವಂತಹ ಇಂದಿನ ದಿನಗಳಲ್ಲಿ ಕೆಲವು ಮಂದಿ ಆರೋಗ್ಯದ ದೃಷ್ಟಿಯಿಂದ ಬೆಳಗ್ಗಿನ ಅವಧಿಯಲ್ಲಿ ನಗುವ ತರಗತಿಗಳಿಗೆ ಹೋಗುತ್ತಾರೆ. ಇಂತಹ ತರಗತಿಗಳಲ್ಲಿ ಎಲ್ಲರು ಜತೆಸೇರಿ ವಿವಿಧ ಶೈಲಿಯಲ್ಲಿ ನಗುತ್ತಾರೆ. ದೀರ್ಘಾಯುಷ್ಯಕ್ಕೆ ನಗು ಒಳ್ಳೆಯ ಮದ್ದು. ನಗುವಿನಿಂದಾಗಿ ದೀರ್ಘಕಾಲ ಹೇಗೆ ಬದುಕಬಹುದು ಎನ್ನುವುದನ್ನು ಕೆಲವೊಂದು ಸತ್ಯ ಮತ್ತು ಕಾರಣಗಳು ಹೇಳುತ್ತಿವೆ. ನಗುವಿನಿಂದ ನಮ್ಮ ಆರೋಗ್ಯಕ್ಕೆ ಆಗುವ ವಿವಿಧ ರೀತಿಯ ಲಾಭಗಳೆಂದರೆ ಅದು ನಮ್ಮ ಜೀವನ ಹಾಗೂ ಬದುಕನ್ನು ಹೇಗೆ ಸುಧಾರಿಸುತ್ತದೆ ಎಂಬ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಹೃದಯಕ್ಕೆ ಬೀಳುವ ಭಾರ ಕಡಿಮೆಯಾಗುತ್ತದೆ
ನಗುವಿನಿಂದ ದೇಹದ ಎಲ್ಲಾ ಸ್ನಾಯುಗಳು ಸಡಿಲಗೊಂಡು ರಕ್ತಸಂಚಾರ ಸುಗಮಗೊಳ್ಳುತ್ತದೆ. ಇದರಿಂದ ಹೃದಯಕ್ಕೆ ಹೆಚ್ಚು ಭಾರ ಬೀಳದೇ ರಕ್ತದೊತ್ತಡವನ್ನು ತಹಬಂದಿಗೆ ತರಲು ಸಾಧ್ಯವಾಗುತ್ತದೆ.

Health Benefits of Smiling

ಉತ್ಪಾದನೆಯನ್ನು ಹೆಚ್ಚಿಸುತ್ತದೆ
ನಗುವನ್ನು ಹಂಚುವುದರಿಂದ ವ್ಯಕ್ತಿಯ ಕಾರ್ಯವೈಖರಿಯಲ್ಲಿ ಹೆಚ್ಚಳ ಕಂಡುಬಂದಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮೆಸೇಜುಗಳಲ್ಲಿ ಬರುವ ಚಿಕ್ಕ ಚಿಕ್ಕ ಸ್ಮೈಲಿಗಳೇ ನಮ್ಮ ಮೊಗದಲ್ಲಿ ಕಿರುನಗೆ ಮೂಡಿಸುವ ಮೂಲಕ ನಮ್ಮಿಂದ ಎಷ್ಟೋ ಕೆಲಸ ಮಾಡಿಸಿಕೊಡಬೇಕಾದರೆ ಅಪ್ಪಟ ನಗುವಿನ ಮಹತ್ವ ಇನ್ನೆಷ್ಟಿರಬಾರದು?

ಪರಸ್ಪರ ವಿಶ್ವಾಸವನ್ನು ಹೆಚ್ಚಿಸುತ್ತದೆ
ವ್ಯಕ್ತಿಗಳಿಬ್ಬರು ಭೇಟಿಯಾದಾಗ ನಗುವಿನ ವಿನಿಮಯದೊಂದಿಗೇ ವಿನಿಮಯಗೊಂಡ ಮಾತುಕತೆ ಪರಸ್ಪರ ವಿಶ್ವಾಸಕ್ಕೆ ನೆರವಾಗುತ್ತದೆ. ಇದರಿಂದ ಸಾಮಾಜಿಕ ಬಾಂಧವ್ಯ, ವಿಶ್ವಾಸಾರ್ಹತೆ, ಪ್ರಾಮಾಣಿಕತೆ ಹೆಚ್ಚುತ್ತದೆ. ಒಂದು ವೇಳೆ ಮುಖ ಗಂಟಿಕ್ಕಿ ಮಾಡಿದ ವ್ಯವಹಾರ ಕುದುರುವುದೇ ಅಸಾಧ್ಯವಾಗಬಹುದು. ಅತ್ಯಧಿಕ ಪ್ರಮಾಣದ ಕ್ಯಾಲೋರಿಗಳಿರುವ ಹಣ್ಣುಗಳು ಯಾವುದು?

ತಾದಾತ್ಮ್ಯತೆ (empathy) ಯನ್ನು ಹೆಚ್ಚಿಸುತ್ತದೆ
ನಾವು ತೊಡುವ ಬಟ್ಟೆ, ಆಡುವ ಮಾಡು, ಮಾಡುವ ಕ್ರಿಯೆಗಳು ಇತರರು ನಮ್ಮ ಬಗ್ಗೆ ಪಡುವ ಅಭಿಪ್ರಾಯಗಳಿಗೆ ಮೂಲವಾಗಿವೆ. ಅಂತೆಯೇ ನಮ್ಮ ನಗು ಕೂಡಾ ಸಂದರ್ಭಕ್ಕೆ ತಕ್ಕಂತೆ ನಮ್ಮ ಬಗೆಗಿನ ಅಭಿಪ್ರಾಯವನ್ನು ಮೂಡಿಸುತ್ತವೆ. ಉದಾಹರಣೆಗೆ ನಿಮ್ಮಿಂದಾಗಬಹುದಾದ ಕೆಲಸವನ್ನು ನಿಮ್ಮ ನೆರೆಯವರು ಅಪೇಕ್ಷಿಸಿದರೆ ಆ ಕೆಲಸವಾಗಬಹುದಾದರೂ ನಮಯವಿಲ್ಲದಿರುವ ಕಾರಣ ಮಾಡಲು ಸಾಧ್ಯವಾಗದಿದ್ದಲ್ಲಿ ಈ ವಿಷಯವನ್ನು ನಗುವಿನ ಮೂಲಕ ನಯವಾಗಿ ತಿರಸ್ಕರಿಸಿದಾಗ ಅವರಲ್ಲಿ ನಿಮ್ಮಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಅದೇ ಮುಖ ಗಂಟಿಕ್ಕಿ ನಮಗೆ ಟೈಮಿಲ್ಲ ಎಂಬ ಧೋರಣೆಯಿಂದ ಹೇಳಿದರೆ ನಿಮ್ಮ ಬಗ್ಗೆ ಅವರಲ್ಲಿ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಇದು ನಾಳೆ ನಿಮಗೇ ಮುಳುವಾಗುತ್ತದೆ.

ಪಶ್ಚಾತ್ತಾಪವನ್ನು ತಪ್ಪಿಸುತ್ತದೆ
ಒಂದು ವೇಳೆ ಯಾವುದಾದರೂ ತಪ್ಪಾದರೆ ಆ ತಪ್ಪನ್ನು ಒಪ್ಪಿಕೊಂಡು ನಗುನಗುತ್ತಲೇ ಆ ತಪ್ಪನ್ನು ತಿದ್ದಿಕೊಳ್ಳುವ, ತಪ್ಪಿಗೆ ತಕ್ಕ ಶಿಕ್ಷೆಯನ್ನು ಎದುರಿಸುವ ಮೂಲಕ ಬಳಿಕ ಪಶ್ಚಾತ್ತಾಪಪಡುವುದನ್ನು ತಪ್ಪಿಸಬಹುದು. ಈ ಪರಿತಾಪ ಮನೋವೇದನೆಯನ್ನು ಹೆಚ್ಚಿಸಿ ಸ್ವಾಸ್ಥ್ಯವನ್ನೇ ಕೆಡಿಸಿಬಿಡಬಹುದು.

ನೋವನ್ನು ಕಡಿಮೆಮಾಡುತ್ತದೆ
ಸಾಮಾನ್ಯವಾಗಿ ನರಸಂಬಂಧಿನೋವುಗಳು (ಉದಾಹರಣೆಗೆ ತಲೆನೋವು, ಉಳುಕು) ಮೊದಲದವು ನಗುವ ಹೊತ್ತಿನಲ್ಲಿ ಮಾಯವಾಗುತ್ತವೆ. ಏಕೆಂದರೆ ನಗುತ್ತಿರುವ ಹೊತ್ತಿನಲ್ಲಿ ರಕ್ತದಲ್ಲಿ ಬಿಡುಗಡೆಯಾಗುವ ಎಂಡಾರ್ಫಿನ್ ಉತ್ತಮ ನೋವುನಿವಾರಕವಾಗಿದೆ.

ನಗು ಸಾಂಕ್ರಾಮಿಕ - ನಗಿ, ನಗಿಸುತ್ತಿರಿ
ನಿಮ್ಮ ಸುತ್ತಮುತ್ತಲಿನ ಜನ ನಿಮ್ಮ ನಗುವನ್ನು ನಗುವಿನೊಂದಿಗೇ ಸ್ವೀಕರಿಸುತ್ತಾರೆ. ನಿಮ್ಮೊಂದಿಗೇ ನಗುನಗುತ್ತಲೇ ಕೆಲಸ ಮಾಡುತ್ತಾ ಕಾರ್ಯವನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಮುಗಿಸಿಕೊಡಲು ನೆರವಾಗುತ್ತಾರೆ. ಅಂತೆಯೇ ನೀವೂ ಸಹಾ ನಗುನಗುತ್ತಾ ಇನ್ನೊಬ್ಬರಿಗೆ ನೆರವಾಗುವಿರಿ ಮತ್ತು ಪರಸ್ಪರ ಸ್ನೇಹ, ವಿಶ್ವಾಸಗಳನ್ನು ಬೆಳೆಸಿಕೊಳ್ಳುವಿರಿ.

ನಿಮ್ಮ ಆಕರ್ಷಣೆಯನ್ನು ಹೆಚ್ಚಿಸುತ್ತದೆ
ಸದಾ ನಗುತ್ತಿರುವ ನಿಮ್ಮ ಮೊಗ ಆಕರ್ಷಣೀಯವಾಗಿರುತ್ತದೆ. ಖಂಡಿತವಾಗಿಯೂ ಹೆಚ್ಚಿನವರು ನಗುಮೊಗದ ವ್ಯಕ್ತಿಗಳ ಸಂಗವನ್ನೇ ಬಯಸುತ್ತಾರೆಯೇ ವಿನಃ ಗಂಟುಮುಖದವರನ್ನಲ್ಲ.

ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ
ನಿಮ್ಮ ಮೊಗದಲ್ಲಿನ ನಗು ನಿಮ್ಮ ಆತ್ಮವಿಶ್ವಾಸವನ್ನು ಪ್ರಚುರಪಡಿಸುತ್ತದೆ. ಈ ಆತ್ಮವಿಶ್ವಾಸವನ್ನು ಗ್ರಹಿಸಿದ ನಿಮ್ಮ ಗ್ರಾಹಕರು ನಿಮ್ಮಿಂದ ಸೇವೆ ಪಡೆಯಲು ಮುಂದಾಗುತ್ತಾರೆ. ಆರೋಗ್ಯದ ಜೊತೆಜೊತೆಗೇ ನಿಮ್ಮ ಐಶ್ವರ್ಯವೂ ವೃದ್ಧಿಸುತ್ತದೆ.

ಇನ್ನಷ್ಟು ಚಿಕ್ಕವರಾಗಿ ಕಾಣಲು ಸಾಧ್ಯವಾಗುತ್ತದೆ
ನಗುಮೊಗವೇ ಯೌವನದ ಸಂಕೇತ ಎಂಬುದನ್ನು ವಿಜ್ಞಾನ ಈಗ ಸಾಬೀತುಪಡಿಸಿದೆ.

ದೀರ್ಘಾಯಸ್ಸಿಗೆ ಕಾರಣವಾಗಿದೆ
ಸದಾ ನಗುತ್ತಿರುವವರ ಆಯಸ್ಸು ನಗದೇ ಇರುವವರಿಗಿಂತ ಏಳು ವರ್ಷ ಹೆಚ್ಚಾಗಿರುತ್ತದೆ ಎಂದು ಸಂಶೋಧನೆಗಳು ದೃಢಪಡಿಸಿವೆ.

English summary

Health Benefits of Smiling

A smile is free and it improves your health, your mood and helps in giving you a longer and healthier life. A fake smile involves fewer muscles while a genuine smile involves a greater number of muscles. Smile your way into a healthy life!
X
Desktop Bottom Promotion