ಹಲಸು ಆರೋಗ್ಯಕ್ಕೆ ಹೇಗೆ ಫಲಪ್ರದ

Subscribe to Boldsky

ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಇಂದು ನಾವು ಹಲಸಿನ ಬಹುವಿಧ ರೂಪವನ್ನು ನಿಮಗೆ ಪರಿಚಯಿಸುತ್ತಿದ್ದೇವೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು. ಹೆಚ್ಚು ಬೆಲೆ ನೀಡದೇ ಈ ಆರೋಗ್ಯವಂತ ಹಣ್ಣಿನ ಸತ್ವಗಳನ್ನು ನಮ್ಮದಾಗಿಸಬಹುದು.

ಹಳ್ಳಿಕಡೆಗಳಲ್ಲಿ ಯಥೇಚ್ಛವಾಗಿ ದುಡ್ಡಿಲ್ಲದೆ ಸಿಗುವ ಈ ಬಹು ಉಪಯೋಗಿ ಹಲಸು ಹಸಿಯಾಗಿ ಅಥವಾ ಬೇಯಿಸಿ ತಿಂಡಿಯ ರೂಪದಲ್ಲಿ ತಿನ್ನಲೂ ಸಾಧ್ಯವಾಗಿರುವಂತಹ ಹಣ್ಣು. ಹಳದಿ ಬಣ್ಣದ ಯಥೇಚ್ಛವಾಗಿ ಸಿಹಿಯಿಂದ ಕೂಡಿರುವ ಹಲಸು ಪ್ರೋಟೀನ್ ವಿಟಮಿನ್ ಭರಿತವಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಧುಮೇಹಿಗಳು ಸೇವಿಸಲೇಬೇಕಾದ ಅತ್ಯುತ್ತಮ ಆಹಾರಗಳು

1.ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ - ವಿಟಮಿನ್ ಸಿ ಯನ್ನು ಒಳಗೊಂಡಿರುವ ಹಲಸಿನ ಹಣ್ಣು, ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕಿನಿಂದ ನಮ್ಮನ್ನು ಸಂರಕ್ಷಿಸುತ್ತದೆ. ಬಿಳಿ ರಕ್ತ ಕೋಶಗಳ ರಚನೆಯನ್ನು ಬೆಂಬಲಿಸುತ್ತಾ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ವಿಟಮಿನ್ ಸಿ ಪ್ರಮುಖ ಪಾತ್ರ ವಹಿಸುತ್ತದೆ. ಒಂದು ಕಪ್ ಹಲಸಿನಹಣ್ಣು ಈ ಶಕ್ತಿಯುತ ಉತ್ಕರ್ಷಣ ನಿರೋಧಕವನ್ನು ದೇಹಕ್ಕೆ ಒದಗಿಸುತ್ತದೆ.

Health benefits of Jackfruits

2.ಕ್ಯಾನ್ಸರ್ ವಿರುದ್ಧ ರಕ್ಷಿಸುತ್ತದೆ - ವಿಟಮಿನ್ ಸಿಯನ್ನು ಒಳಗೊಂಡಂತೆ ಹಲಸಿನ ಹಣ್ಣು, ಲಿಗಾನ್ಸ್, ಐಸೋಫ್ಲೇವನ್ಸ್ ಮತ್ತು ಸಪೋನಿನ್ಸ್‌ನಂತಹ ಫೈಟೋನ್ಯೂಟ್ರಿಯಂಟ್ಸ್ ಅನ್ನು ದೇಹಕ್ಕೆ ಪೂರೈಸುತ್ತದೆ ಇದು ಕ್ಯಾನ್ಸರ್ ವಿರುದ್ದ ಮತ್ತು ಬೇಗನೇ ಮುಪ್ಪಿನ ಲಕ್ಷಣಗಳನ್ನು ವರ್ಧಿಸುವುದರ ವಿರುದ್ದ ಹೋರಾಡುತ್ತದೆ.

3.ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ - ಅಲ್ಸರ್ ವಿರುದ್ಧ ಹೋರಾಡುವ ವಿಶಿಷ್ಟ ಗುಣವನ್ನು ಹೊಂದಿರುವ ಹಲಸಿನ ಹಣ್ಣು ಅಲ್ಸರ್ ಮತ್ತು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರಮಾಡುತ್ತದೆ. ಇದರಲ್ಲಿರುವ ಅತ್ಯಧಿಕ ಫೈಬರ್ ಅಂಶವು ಮೃದುವಾದ ಕರುಳಿನ ಚಲನೆಗೆ ಸಹಕಾರಿ.

4.ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ - ಹಲಸಿನ ಹಣ್ಣು ವಿಟಮಿನ್ ಎ ಯಿಂದ ಸಮೃದ್ಧವಾಗಿದ್ದು, ಆರೋಗ್ಯಕರ ಕಣ್ಣು ಮತ್ತು ತ್ವಚೆಗಾಗಿ ಒಂದು ಶಕ್ತಿಯುತ ನ್ಯೂಟ್ರಿಯೆಂಟ್ ಆಗಿದೆ. ಇರುಳುಗುರುಡುತನ ಮತ್ತು ಅಕ್ಷಿಪಟಲದ ಅವನತಿ ಸಮಸ್ಯೆಯನ್ನು ದೂರಮಾಡುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಏಲಕ್ಕಿಯ 20 ಆರೋಗ್ಯಕರ ಪ್ರಯೋಜನಗಳು

5.ಶಕ್ತಿ ವರ್ಧನೆ - ಹಲಸಿನ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಗಳಾದ ಸುಕ್ರೋಸ್ ಮತ್ತು ಫ್ರುಕ್ಟೋಸ್ ನಿಮ್ಮ ಶಕ್ರಿಯನ್ನು ವರ್ಧಿಸುವಲ್ಲಿ ಸಹಕಾರಿಯಾಗಿದೆ.

6.ಅಧಿಕ ರಕ್ತದೊತ್ತಡ - ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿ ಹಲಸಿನ ಹಣ್ಣಿನಲ್ಲಿರುವ ಪೊಟ್ಯಾಶಿಯಂ ಕಾರಣವಾಗಿದೆ. ಅಲ್ಲದೆ ಹಥದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಕಾಯಿಲೆಯನ್ನು ಹಲಸಿನ ಹಣ್ಣು ಪರಿಹರಿಸುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಗೋಡಂಬಿಯ ವಿಸ್ಮಯಕಾರಿ 7 ಆರೋಗ್ಯ ಪ್ರಯೋಜನಗಳು

7.ಅಸ್ತಮಾವನ್ನು ನಿಯಂತ್ರಿಸುತ್ತದೆ - ಹಲಸಿನ ಹಣ್ಣಿನ ಬೇರುಗಳು ಅಸ್ತಮಾದಿಂದ ಬಳಲುತ್ತಿರುವವರಿಗೆ ರಾಮಬಾಣವಾಗಿದೆ. ಇದರ ಬೇರನ್ನು ಮತ್ತು ಉಳಿದ ಭಾಗಗಳನ್ನು ಕುದಿಸಿ ಕಷಾಯದಂತೆ ಸೇವಿಸುವುದು ಅಸ್ತಮಾದಿಂದ ಮುಕ್ತಿ ದೊರಕುವಂತೆ ಮಾಡುತ್ತದೆ.

8.ಮೂಳೆಯನ್ನು ಬಲಪಡಿಸುತ್ತದೆ -ಹಲಸಿನಲ್ಲಿರುವ ಮೆಗ್ನೇಷಿಯಂ, ಕ್ಯಾಲ್ಶಿಯಂನೊಂದಿಗೆ ಕಾರ್ಯನಿರ್ವಹಿಸಿ ಮೂಳೆಯನ್ನು ಬಲಪಡಿಸುತ್ತದೆ. ಮೂಳೆ ಸಂಬಂಧಿತ ಹಲವಾರು ಕಾಯಿಲೆಯನ್ನು ದೂರಮಾಡುವಲ್ಲಿ ಹಲಸಿನ ಹಣ್ಣು ಉಪಕಾರಿಯಾಗಿದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಕರ್ಬೂಜ ಹಣ್ಣಿನಲ್ಲಿರುವ ಗುಣಗಳು ಒಂದಾ ಎರಡಾ...

9.ಅನೀಮಿಯಾವನ್ನು ದೂರಮಾಡುತ್ತದೆ - ಹಲಸಿನ ಹಣ್ಣಿನಲ್ಲಿರುವ ಕಬ್ಬಿಣದ ಅಂಶ ಅನೀಮಿಯಾವನ್ನು ದೂರ ಮಾಡಿ ದೇಹದ ಸೂಕ್ತ ರಕ್ತ ಸಂಚಲನೆಗೆ ಫಲಪ್ರದವಾಗಿದೆ.

10.ಆರೋಗ್ಯಕರ ಥೈರೋಯ್ಡ್‌ಗೆ ಉಪಕಾರಿ -ಥೈರೊಯ್ಡ್ ಮೆಟಾಬಾಲಿಸಂಗೆ ಕೋಪರ್‌ ಉಪಕಾರಿಯಾಗಿದೆ, ಹಾರ್ಮೋನ್ ಉತ್ಪಾದನೆಯಲ್ಲಿ ಕೋಪರ್ ಪ್ರಮುಖ ಪಾತ್ರ ವಹಿಸಿದೆ. ಹಲಸಿನ ಹಣ್ಣು ಕೋಪರ್‌ನಿಂದ ಯಥೇಚ್ಛಿತಗೊಂಡಿದ್ದು ಥೈರೊಯ್ಡ್ ಅನ್ನು ಆರೋಗ್ಯಕರವಾಗಿಸುತ್ತದೆ.

For Quick Alerts
ALLOW NOTIFICATIONS
For Daily Alerts

    English summary

    Health benefits of Jackfruits

    Jackfruit is an excellent source of vitamin C, a powerful nutrient which helps protect against viral and bacterial infections. Vitamin C helps to strengthen the immune system function by supporting the white blood cells function. One cup of jackfruit can supply the body a very good amount of this powerful antioxidant.
    Story first published: Monday, February 3, 2014, 15:00 [IST]
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more