For Quick Alerts
ALLOW NOTIFICATIONS  
For Daily Alerts

ಅವರೆಕಾಳಿನ ಭೂಗೋಳ, ಚರಿತ್ರೆ ಮತ್ತು ವರ್ತಮಾನ!

|

ಬಹುಶಃ ಮಾನವನು ಬೇಸಾಯ ಮಾಡಲು ಆರಂಭಿಸಿದ ಕಾಲದಿಂದಲೆ ಬೆಳೆಯಲು ಶುರು ಮಾಡಿದ ಗಿಡಗಳಲ್ಲಿ ಅವರೆಕಾಯಿಯು ಸಹ ಒಂದು. ಪ್ರಾಚೀನ ಗ್ರೀಕರು ಮತ್ತು ರೋಮನ್ನರು ಇವುಗಳನ್ನು ಸೇವಿಸುತ್ತಿದ್ದರು ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಇದನ್ನು ಇಂಗ್ಲೀಷಿನಲ್ಲಿ ಬ್ರಾಡ್ ಬೀನ್ಸ್, ಫಾವಾ ಬೀನ್ಸ್ ಎಂದು ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ.

ಮೆಡಿಟರೇನಿಯನ್ ಪ್ರದೇಶದ ಆಹಾರಗಳಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ. ಅಲ್ಲಿನ ಬೇಸಿಗೆ ತಿಂಡಿಗಳಲ್ಲಿ ಇದು ಸಾಮಾನ್ಯವಾದರು, ಇದನ್ನು ಒಣಗಿಸಿ ಚಳಿಗಾಲಕ್ಕು ಸಹ ಶೇಖರಿಸಿ ಇರಿಸಿಕೊಳ್ಳಲಾಗುತ್ತದೆ. ಅವರೆಕಾಳುಗಳು ತಮ್ಮ ರುಚಿಯಿಂದಾಗಿ ಹಲವಾರು ಬಗೆಯ ಆಹಾರ ಪದಾರ್ಥಗಳಲ್ಲಿ ಸ್ಥಾನವನ್ನು ಸಂಪಾದಿಸಿವೆ.

ಅವರೆಕಾಯಿಯನ್ನು ಸಾಮಾನ್ಯವಾಗಿ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಬೆಳೆಯಲಾಗುತ್ತದೆ. ಇದು ಜುಲೈ ತಿಂಗಳಿನಲ್ಲಿ ಕಾಯಿಗಳನ್ನು ಬಿಡುತ್ತದೆ. ಕರ್ನಾಟಕದಲ್ಲಿ ಇದನ್ನು ಚಳಿಗಾಲದಲ್ಲಿ ಸುಗ್ಗಿಗೆ ಮೊದಲು ಬೆಳೆಯುತ್ತಾರೆ. ಇಂತಹ ಕಾಯಿ ಅಥವಾ ಕೊಡುಗಳ ಒಳಗೆ ಇರುವ ಬೀಜದ ಸುತ್ತಲು ಒಂದು ಬಗೆಯ ಪದರವು ಇರುತ್ತದೆ. ಇದು ಬೀಜಗಳನ್ನು ಸಂರಕ್ಷಿಸುವ ಕೆಲಸವನ್ನು ಮಾಡುತ್ತದೆ. ಇದನ್ನು ಸುಲಿದು (ಹಿತುಕಿ) ಬಳಸುವ ವಾಡಿಕೆ ಹೆಚ್ಚಾಗಿದೆ. ಆಗ ಅದರ ರುಚಿಯೇ ಬೇರೆ.

ಅವರೆಕಾಳುಗಳನ್ನು ಮಣ್ಣಿನ ಫಲವತ್ತತೆಯನ್ನು ಕಾಪಾಡುವ ಸಲುವಾಗಿ ಬಳಸಲಾಗುತ್ತದೆ. ಆದ್ದರಿಂದಾಗಿ ಅವರೆಕಾಯಿಯನ್ನು ಮಧ್ಯಂತರ ಬೆಳೆಯಾಗಿ ರಾಗಿಯ ಮಧ್ಯೆ ಸಾಲುಗಳಲ್ಲಿ ಬೆಳೆಯಲಾಗುತ್ತದೆ. ಇನ್ನಿತರ ತರಕಾರಿಗಳಂತೆ, ಅವರೆಕಾಳುಗಳಲ್ಲಿಯು ಸಹ ಸಾರಜನಕವು ಹೆಚ್ಚಿರುತ್ತದೆ. ಇದರಿಂದಾಗಿ ಇದು ಭೂಮಿಯ ಫಲವತ್ತತೆಯನ್ನು ನಿಸ್ಸಂಶಯವಾಗಿ ಹೆಚ್ಚಿಸುತ್ತದೆ. ರೈತರು ಈ ಗಿಡಗಳಿಂದ ಕಾಯಿಗಳನ್ನು ಕಿತ್ತ ನಂತರ ಗಿಡಗಳನ್ನು ನೆಲದಲ್ಲಿಯೇ ಹೂತು ಬಿಡುತ್ತಾರೆ. ಇದರಿಂದ ಭೂಮಿಗೆ ಸಮೃದ್ಧವಾದ ಗೊಬ್ಬರ ದೊರೆಯುತ್ತದೆ.

ದೇಹದ ನೋವನ್ನು ತ್ವರಿತವಾಗಿ ಕಡಿಮೆ ಮಾಡುವ ಆಹಾರಗಳು

ಅವರೆಕಾಳುಗಳು, ಬಟಾಣಿಗಳಂತೆ ಪ್ರತ್ಯೇಕವಾದ ಕೋಡುಗಳಲ್ಲಿ ಬೆಳೆಯುತ್ತದೆ. ಇವುಗಳನ್ನು ನೀವು ತಾಜಾ ಆಗಿ ಅಥವಾ ಒಣಗಿದ ರೂಪದಲ್ಲಿ ಅಥವಾ ಇತ್ತೀಚೆಗೆ ಕ್ಯಾನ್‍ಗಳ ರೂಪದಲ್ಲಿ ಸಹ ಕೊಳ್ಳಬಹುದು. ಈ ಕಾಳುಗಳಲ್ಲಿ ಪೋಷಕಾಂಶಗಳು ಹೆಚ್ಚಿಗೆ ಇರುತ್ತದೆ. ಇದರಲ್ಲಿ ಕರಗುವಂತಹ ನಾರಿನಂಶ, ಅಚ್ಚರಿಗೊಳಪಡುವಷ್ಟರ ಮಟ್ಟಿಗೆ ಕಡಿಮೆ ಕೊಬ್ಬು, ಸ್ಯಾಚುರೇಟೆಡ್ ಫ್ಯಾಟ್‍ಗಳಿಂದ ಮುಕ್ತ ಮತ್ತು ಮಾನವನ ದೇಹಕ್ಕೆ ಅತ್ಯಗತ್ಯವಾದ ಎಲ್ಲಾ ಪೋಷಕಾಂಶಗಳನ್ನು ಇದು ಒಳಗೊಂಡಿದೆ.

ಉದಾಹರಣೆಗೆ ಖನಿಜಗಳು ಮತ್ತು ವಿಟಮಿನ್‍ಗಳು ಇದರಲ್ಲಿ ಯಥೇಚ್ಛವಾಗಿ ದೊರೆಯುತ್ತದೆ. ಇದನ್ನು ಸೇವಿಸಿದಾಗ ನಿಮಗೆ ಅತ್ಯುತ್ತಮ ಪೋಷಕಾಂಶಗಳು ದೊರೆಯುವುದರಲ್ಲಿ ಸಂಶಯವಿಲ್ಲ. ಜೊತೆಗೆ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಹೃದ್ರೋಗ ಬರದಂತೆ ಪರಿಹಾರವನ್ನು ಸಹ ಇದರಿಂದ ಪಡೆಯಬಹುದು. ಇದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ

ಯಥೇಚ್ಛವಾದ ಪೋಷಕಾಂಶಗಳನ್ನು ಒಳಗೊಂಡಿರುವ ಅವರೆಕಾಯಿಯು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಕರಿಸುತ್ತದೆ. ಇದರಲ್ಲಿ ದೇಹದಲ್ಲಿ ಕರಗಬಲ್ಲ ನಾರಿನಂಶವಿರುತ್ತದೆ. ಪ್ರತಿ 1/4 ಕಪ್‍ಗೆ 9 ಗ್ರಾಂ ಈ ನಾರಿನಂಶ ದೊರೆಯುತ್ತದೆಯೆಂದರೆ ನೀವೇ ಊಹಿಸಿ. ತರಕಾರಿಗಳಲಿ ಲಿಮಾ ಬೀನ್ಸ್‌ನಲ್ಲಿ ಇಷ್ಟೇ ಪ್ರಮಾಣದ ಡಯೇಟರಿ ಫೈಬರ್ ಇರುತ್ತದೆ. ಅದು ಸಹ ಕರಗುವ ಮತ್ತು ಕರಗದ ಗುಣಗಳನ್ನು ತನ್ನಲ್ಲಿ ಮೈಗೂಡಿಸಿಕೊಂಡಿರುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಪ್ರಮಾಣದ ನಾರಿನಂಶವು ಕರಗುವ ಗುಣವನ್ನು ಹೊಂದಿರುತ್ತದೆ. ಇಂತಹ ನಾರಿನಂಶಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಮತ್ತು ನಾರಿನಂಶವನ್ನು ಸಮತೋಲನದಲ್ಲಿಡುತ್ತವೆ. ಕರಗುವಂತಹ ನಾರಿನಂಶವು ಲೋ-ಡೆನ್ಸಿಟಿ ಲಿಪೊಪ್ರೋಟಿನ್ (LDL) ಕೊಲೆಸ್ಟ್ರಾಲ್ ಮಟ್ಟವನ್ನು ಹತೋಟಿಯಲ್ಲಿಡುತ್ತವೆ. ಇವು ಹೃದಯಕ್ಕೆ ಅಪಾಯಕಾರಿಯಾದ ಕೊಲೆಸ್ಟ್ರಾಲ್ ಆಗಿರುತ್ತದೆ.

ತೂಕವನ್ನು ನಿಯಂತ್ರಿಸುತ್ತವೆ

ತೂಕವನ್ನು ನಿಯಂತ್ರಿಸುತ್ತವೆ

ಅವರೆಕಾಳುಗಳಲ್ಲಿ ಹೆಚ್ಚಿನ ಪ್ರೋಟಿನ್‍ಗಳು ಇರುತ್ತವೆ. ಅಂದರೆ ಪ್ರತಿ 1/4 ಕಪ್‍ಗೆ 10 ಗ್ರಾಂ ಪ್ರೋಟಿನ್ ಇದರಲ್ಲಿ ದೊರೆಯುತ್ತದೆ."ಯೂರೋಪಿಯನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್" ನಡೆಸಿದ ಅಧ್ಯಯನದ ಪ್ರಕಾರ ತೂಕ ಹೆಚ್ಚಿರುವವರು ಕಡಿಮೆ ಕ್ಯಾಲೋರಿಯ, ಹೆಚ್ಚಿನ ಪೋಷಕಾಂಶವಿರುವ, ನಾರಿನಂಶ ಹೆಚ್ಚಿರುವ ಹಾಗು ಕೊಬ್ಬು ಕಡಿಮೆ ಇರುವ ಮತ್ತು ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರಗಳನ್ನು ಸೇವಿಸ ಬೇಕಂತೆ. ಇವರ ಅಧ್ಯಯನದಲ್ಲಿ ಪಾಲ್ಗೊಂಡ 89 ಜನರು ಸ್ಥೂಲಕಾಯಿ ರೋಗ ಇರುವವರು ಸುಮಾರು 18-65 ವರ್ಷದ ಒಳಗಿನವರಿಗೆ ಇಂತಹ ಆಹಾರವನ್ನು 10 ವಾರಗಳ ಕಾಲ ನೀಡಲಾಯಿತು. ಇವರ ಆಹಾರದಲ್ಲಿ ಅವರೆಕಾಳಗಳನ್ನು ಸೇರಿಸಲಾಗಿತ್ತು. ಇದರಿಂದ ಅವರ ಕೊಲೆಸ್ಟ್ರಾಲ್ ಕಡಿಮೆ ಆಯಿತು ಹಾಗೂ ತೂಕ ಇಳಿದಿದ್ದಲ್ಲದೆ, ಅವರು ಮತ್ತಷ್ತು ಚಟುವಟಿಕೆಯಿಂದ ಓಡಾಡುವಂತೆ ಮಾಡಿತ್ತು. ಇದಲ್ಲದೆ ಈ ಸ್ಥೂಲಕಾಯಿಗಳು ಈ ಆಹಾರ ಪದಾರ್ಥದ ಕಾರ್ಯಕ್ಷಮತೆಗೆ ಮೆಚ್ಚುಗೆಯನ್ನು ಸಹ ವ್ಯಕ್ತಪಡಿಸಿದರು.

ಸಮೃದ್ಧ ಪೋಷಕಾಂಶಗಳು

ಸಮೃದ್ಧ ಪೋಷಕಾಂಶಗಳು

ಅವರೆಕಾಳುಗಳಲ್ಲಿ ಸಮೃದ್ಧವಾಗಿರುವ ಪೋಷಕಾಂಶಗಳು ಇದನ್ನು ಯಾವುದೇ ಹಣ್ಣು ಮತ್ತು ತರಕಾರಿಗಿಂತ ಕಡಿಮೆ ಇಟ್ಟಿಲ್ಲ. ಜೊತೆಗೆ ಇದರಲ್ಲಿರುವ ಕ್ಯಾಲೋರಿಗಳು ದೇಹವನ್ನು ಚಟುವಟಿಕೆಯಿಂದ ಇರಿಸುತ್ತವೆ. ಈ ಬಗೆಯ ಕಾಳುಗಳಲ್ಲಿ ವಿಟಮಿನ್ ಬಿ1, ಅಥವಾ ಥಿಯಮಿನ್, ಕಬ್ಬಿಣಾಂಶ, ತಾಮ್ರ, ರಂಜಕ, ಪೊಟಾಶಿಯಂ ಮತ್ತು ಮ್ಯೆಗ್ನಿಶಿಯಂಗಳು ಇರುತ್ತವೆ. ಇದು ಒಂದು ದಿನದಲ್ಲಿ ಸೇವಿಸಬೇಕಾದ ಪೋಷಾಕಾಂಶಗಳಲ್ಲಿನ ಶೇ. 19% ನಲ್ಲಿ 10 ಭಾಗವನ್ನು ಖುದ್ದು ಒದಗಿಸುತ್ತದೆ. ವಿಟಮಿನ್ ಬಿ1 ಕೇಂದ್ರ ನರವ್ಯೂಹಕ್ಕೆ ಪ್ರಮುಖವಾಗಿ ಸಹಕರಿಸುತ್ತದೆ. ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಕಬ್ಬಿಣಾಂಶವು ಒಂದು ಒಳ್ಳೆಯ ಪ್ರೋಟೀನ್ ಆಗಿದ್ದು, ರಕ್ತದಲ್ಲಿ ಆಮ್ಲಜನಕದ ಪರಿಚಲನೆಗೆ ಸಹಕರಿಸುತ್ತದೆ. ಇದರ ಜೊತೆಗೆ ತಾಮ್ರ, ಕಬ್ಬಿಣಾಂಶವು ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಸಹಕರಿಸುತ್ತದೆ. ತಾಮ್ರವು ರಕ್ತದ ಪರಿಚಲನೆಗೆ ಹೆಚ್ಚಿನ ಸಹಕಾರವನ್ನು ನೀಡುತ್ತದೆ. ರಂಜಕ ಮತ್ತು ಮ್ಯೆಗ್ನಿಶಿಯಂ ಮೂಳೆಗಳನ್ನು ಗಟ್ಟಿಗೊಳಿಸಲು ನೆರವಾಗುತ್ತವೆ. ಪೊಟಾಶಿಯಂ ಸಹ ರಕ್ತದ ಒತ್ತಡವನ್ನು ನಿಯಂತ್ರಿಸಲು ಸಹಕರಿಸುತ್ತವೆ. ಹೀಗೆ ಇವೆಲ್ಲವು ನಿಮ್ಮ ಆರೋಗ್ಯವನ್ನು ಕಾಪಾಡುವ ಕೋಟೆಯನ್ನು ಭದ್ರಪಡಿಸುತ್ತವೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅವರೆಕಾಳುಗಳಲ್ಲಿ ಫೋಲಿಯೇಟ್ ಮತ್ತು ಮ್ಯಾಂಗನೀಸ್ ಸಹ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಕಾಲು ಕಪ್‍ನಲ್ಲಿ ಪ್ರತಿದಿನದ ದೇಹದ ಅಗತ್ಯತೆಯನ್ನು ಪೂರೈಸುವಷ್ಟು ಮ್ಯಾಂಗನೀಸ್ ದೊರೆಯುತ್ತದೆ. ಫೋಲಿಯೇಟ್ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಇದೆ. ಈಗಾಗಿ ಹೃದಯ ಸಮಸ್ಯೆ ಮತ್ತು ಕೆಂಪು ರಕ್ತ ಕಣಗಳ ಬೆಳವಣಿಗೆಗೆ ಇದು ನೆರವು ನೀಡುತ್ತದೆ. ಮ್ಯಾಂಗನೀಸ್ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಕಾರ್ಬೋಹೈಡ್ರೇಟ್ ಮತ್ತು ಕೊಲೆಸ್ಟ್ರಾಲ್ ಹಾಗೂ ಪ್ರೋಟೀನ್‌ಗಳಿಗೆ ಅಗತ್ಯವಾಗಿ ಬೇಕಾಗುತ್ತದೆ.

ನಿಮ್ಮಲ್ಲಿ ಸಂತೋಷವನ್ನು ತರುತ್ತದೆ

ನಿಮ್ಮಲ್ಲಿ ಸಂತೋಷವನ್ನು ತರುತ್ತದೆ

ಹೌದು, ಈ ಕಾಳುಗಳಲ್ಲಿ ನಿಮ್ಮ ಮುಖದಲ್ಲಿ ನಗುವನ್ನು ಸದಾ ಇರಿಸುವ ಪ್ರಯತ್ನ ಮಾಡುತ್ತವೆ. ಏಕೆಂದರೆ ಇದರಲ್ಲಿರುವ ಎಲ್-ಡೊಪಾ (ಡೊಪಾಮೈನ್) ಎಂಬ ಅಮೈನೊ ಆಮ್ಲಗಳ ಸಮೃದ್ಧತೆಯು ನಿಮ್ಮ ಮೂಡ್ ಲವಲವಿಕೆಯಿಂದ ಇರುವಂತೆ ಮಾಡಿ, ಖಿನ್ನತೆಯ ಸಮಸ್ಯೆಯನ್ನು ದೂರ ಮಾಡುತ್ತದೆ

ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ

ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ

ಒಮ್ಮೆ ನೀವು ಸೇವಿಸುವ ಅವರೆಕಾಳುಗಳು ನಿಮಗೆ ಅಂದಾಜು 200 ಕ್ಯಾಲೋರಿಗಳನ್ನು ಒದಗಿಸುತ್ತವೆ. ಇದರಲ್ಲಿನ ಕಡಿಮೆ ಕ್ಯಾಲೋರಿ ಮತ್ತು ನಾರಿನಂಶ ಹಾಗು ಕಡಿಮೆ ಕೊಬ್ಬುಗಳು ಮತ್ತು ಹೆಚ್ಚಿನ ಪ್ರೋಟೀನ್ ( ಪ್ರತಿ ಕಪ್‍ಗೆ 13ಗ್ರಾಂ) ಇದನ್ನು ಒಳ್ಳೆಯ ಸ್ನ್ಯಾಕ್ಸ್ ಆಗಿ ಪರಿವರ್ತಿಸಿವೆ. ಇದನ್ನು ಸೇವಿಸುವುದರಿಂದ ಊಟವನ್ನು ಕಡಿಮೆ ಸೇವಿಸುವ ಮನೋಭಾವ ತಾನೇ ತಾನಾಗಿ ಬಂದು ಬಿಡುತ್ತದೆ. ಗೋದಿ ಬ್ರೆಡ್‍ನ ಟೋಸ್ಟ್‌ನಲ್ಲಿ ಈ ಕಾಳುಗಳನ್ನು ಚೆನ್ನಾಗಿ ಜಜ್ಜಿ ಸೇವಿಸಲು ಪ್ರಾರಂಭಿಸಿ.

ಸಮೃದ್ಧ ಕಬ್ಬಿಣಾಂಶ

ಸಮೃದ್ಧ ಕಬ್ಬಿಣಾಂಶ

ಕಾಲು ಕಪ್ ಅವರೆಕಾಳು ಗಂಡಸರಿಗೆ ಪ್ರತಿದಿನಕ್ಕೆ ಅಗತ್ಯವಾದ 32% ಮತ್ತು ಹೆಂಗಸರಿಗೆ ಅಗತ್ಯವಾದ 14% ಕಬ್ಬಿಣಾಂಶವನ್ನು ಒದಗಿಸುತ್ತದೆ. ಕಬ್ಬಿಣಾಂಶವು ದೇಹದಲ್ಲಿ ಕೆಂಪು ರಕ್ತ ಕಣಗಳ ಅಭಿವೃದ್ಧಿಗೆ ನೆರವಾಗುತ್ತದೆ ಮತ್ತು ಇದರಲ್ಲಿರುವ ಅಡೆನೊಸೈನ್ ಟ್ರೈಫೊಸ್ಫೇಟ್ ಅಥವಾ ಎಟಿಪಿಗಳು ದೇಹದ ರಕ್ತಕ್ಕೆ ಅತ್ಯಗತ್ಯವಾಗಿ ಬೇಕು. ಒಂದು ವೇಳೆ ನಿಮ್ಮ ಆಹಾರದಲ್ಲಿ ಕಬ್ಬಿಣಾಂಶವು ಕಡಿಮೆಯಾಗಿದ್ದರೆ, ನಿಮಗೆ ಅನಿಮಿಯಾ ಬರುವ ಸಮಸ್ಯೆ ಇರುತ್ತದೆ ಮತ್ತು ಹೈಪರ್ ಆಕ್ಟಿವ್ ಡಿಸಾರ್ಡರ್‌ನಂತಹ ನರ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಆದ್ದರಿಂದ ನಿಮ್ಮ ದೇಹದಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸಿಕೊಳ್ಳಬೇಕು ಎಂದರೆ ನೀವು ಅವರೆಕಾಳುಗಳನ್ನು ಮಾಂಸ ಅಥವಾ ವಿಟಮಿನ್ ಸಿ ಜೊತೆಗೆ ಸೇವಿಸಬಹುದು. ಕೋಳಿ ಮಾಂಸದ ಜೊತೆಗೆ ಅವರೆಕಾಳು, ವಿಶೇಷವಾಗಿ ಹಿತುಕಿದ ಅವರೆಕಾಳನ್ನು ಬಳಸಿ. ಆಗ ಅದರ ರುಚಿಯೇ ಬೇರೆ. ನಿಮಗೆ ಬೇಕಾದಲ್ಲಿ ಕಿತ್ತಳೆ ಅಥವಾ ದ್ರಾಕ್ಷಿಯ ಸಲಾಡ್ ಜೊತೆಗೆ ಬೇಕಾದರು ನೀವು ಈ ಅವರೆಕಾಳನ್ನು ಬಳಸಬಹುದು.

ಮೂಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಮೂಳೆಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ಮೂಳೆಗಳ ಮತ್ತು ಹಲ್ಲುಗಳ ಬೆಳವಣಿಗೆಯಲ್ಲಿ ಕ್ಯಾಲ್ಸಿಯಂ ವಹಿಸುವ ಪಾತ್ರ ಅತ್ಯಂತ ಮಹತ್ವವಾದುದು. ಇದರ ಜೊತೆಗೆ ಹೃದಯದ ಕಾರ್ಯ ವೈಖರಿಯಲ್ಲಿ ಇದು ಗಮನಾರ್ಹ ಪಾತ್ರವನ್ನು ವಹಿಸುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಇದರಲ್ಲಿರುವ ನಾರಿನಂಶವು ನಿಮ್ಮ ಕರುಳುಗಳಲ್ಲಿ ಆಹಾರವು ಸರಾಗವಾಗಿ ಸಾಗಿ ಹೋಗುವಂತೆ ಮಾಡುತ್ತದೆ. ಹೀಗಾಗಿ ಇದನ್ನು ಸೇವಿಸಿದಾಗ ನಿಮಗೆ ಮಲಬದ್ಧತೆಯ ಸಮಸ್ಯೆ ಕಂಡು ಬರುವುದಿಲ್ಲ.

ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಅವರೆಕಾಳಿನಲ್ಲಿರುವ ವಿಟಮಿನ್ ಸಿಯು ಒಂದು ಪರಿಣಾಮಕಾರಿಯಾದ ಆಂಟಿ-ಆಕ್ಸಿಡೆಂಟ್ ಆಗಿರುತ್ತದೆ. ಇದು ಕ್ಯಾನ್ಸರ್‌ಕಾರಕ ಫ್ರೀ-ರಾಡಿಕಲ್‍ಗಳನ್ನು ಕಡಿಮೆ ಮಾಡುತ್ತದೆ. ಇದರ ಜೊತೆಗೆ ರೋಗ ನಿರೋಧಕ ಶಕ್ತಿಯಲ್ಲಿರುವ ಲೋಪ-ದೋಷಗಳನ್ನು ಸರಿಪಡಿಸುತ್ತದೆ.

ನೀರಿನ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ

ನೀರಿನ ಪ್ರಮಾಣವನ್ನು ಸಮತೋಲನದಲ್ಲಿಡುತ್ತದೆ

ಅವರೆಕಾಳಿನಲ್ಲಿರುವ ಪೊಟಾಶಿಯಂನಲ್ಲಿ ಎಲೆಕ್ಟ್ರೋಲೈಟ್‍ಗಳು ಇರುತ್ತವೆ. ಇವು ನಿಮ್ಮ ದೇಹದಲ್ಲಿ ನೀರು ಮತ್ತು ಅಗತ್ಯವಾದ ಪ್ರಮಾಣದ ಆಸಿಡಿಟಿ ಮಟ್ಟವನ್ನು ಕಾಯ್ದುಕೊಳ್ಳಲು ಸಹಕರಿಸುತ್ತವೆ. ಎಲೆಕ್ಟ್ರೋಲೈಟ್‍ಗಳು ಬೆವರು ಬಂದಾಗ ನಷ್ಟವಾಗುತ್ತವೆ ಮತ್ತು ಅವುಗಳನ್ನು ಆಗಾಗ ಪುನಃಶ್ಚೇತನ ಮಾಡುತ್ತ ಇರಬೇಕಾಗುತ್ತದೆ.

ಆಮ್ಲಜನಕದ ನಿರಂತರ ಪೂರೈಕೆಗೆ ಸಹಕರಿ

ಆಮ್ಲಜನಕದ ನಿರಂತರ ಪೂರೈಕೆಗೆ ಸಹಕರಿ

ಹಿಮೋಗ್ಲೊಬಿನ್‍ನಲ್ಲಿ ಕಬ್ಬಿಣಾಂಶವು ಅತ್ಯಂತ ಪ್ರಧಾನ ಪಾತ್ರವನ್ನು ನಿರ್ವಹಿಸುತ್ತದೆ. ಹಿಮೋಗ್ಲೋಬಿನ್ ದೇಹದಲ್ಲಿನ ಇತರ ಕೋಶಗಳ ಮೂಲಕ ಆಮ್ಲಜನಕವು ಸರಾಗವಾಗಿ ಸಾಗಿ ಹೋಗಲು ನೆರವಾಗುತ್ತದೆ. ಅವರೆಕಾಳಿನಲ್ಲಿರುವ ಕಬ್ಬಿಣಾಂಶದಿಂದ ಈ ಕ್ರಿಯೆ ಸುಗಮವಾಗಿ ಸಾಗುತ್ತದೆ.

English summary

Health benefits of Broad Beans

Fava beans are probably the earliest plants under farming, and they also were consumed in historical Greece and Rome ava beans, whenever consumed included in a general nutritious diet, offer cardio benefits as well as assist with weight loss. Some of the health benefits are listed below
X
Desktop Bottom Promotion