For Quick Alerts
ALLOW NOTIFICATIONS  
For Daily Alerts

ಮಗುವಿನ ಮಸಾಜ್‌ನಲ್ಲಿರುವ ಆರೋಗ್ಯಕರ ಲಾಭಗಳು

By Hemanth P
|

ನೀವು ಮಗುವನ್ನು ಅಪ್ಪಿಹಿಡಿದಾಗ ಮಗು ಎಷ್ಟೊಂದು ಆನಂದಪಡುತ್ತದೆ ಎಂದು ಭಾವಿಸಿದ್ದರೆ ನಿಮ್ಮ ಮಗುವಿಗೆ ಸಂಪೂರ್ಣ ದೇಹದ ಮಸಾಜ್ ಮಾಡಿದಾಗ ಅದಕ್ಕೆ ಎಷ್ಟು ಸಂತೋಷವಾಗಬಹುದು ಎಂದು ನೀವೇ ಯೋಚಿಸಿ. ಮಗುವಿಗೆ ಮಸಾಜ್ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ ಎಂದು ಅಧ್ಯಯನಗಳು ಹೇಳಿವೆ. ಇದರಿಂದ ನಿಮ್ಮ ಮಗು ತುಂಬಾ ಆರಾಮವಾಗಿರುವಂತೆ, ಶಾಂತಿಯಿಂದ ನಿದ್ದೆ ಮಾಡಲು ಮತ್ತು ಮಲಬದ್ಧತೆ ಮತ್ತು ಗ್ಯಾಸ್ ಸಮಸ್ಯೆಗೆ ಒಳ್ಳೆಯ ಮದ್ದು ಇದಾಗಿದೆ.

ನಿಮ್ಮ ಪ್ರೀತಿಯ ಸ್ಪರ್ಶವು ಮಗುವಿಗೆ ಅದ್ಭುತವನ್ನು ಉಂಟುಮಾಡಲಿದೆ. ದೈಹಿಕ ಆರೋಗ್ಯದ ಲಾಭ ಹೊರತುಪಡಿಸಿ ನಿಮ್ಮ ಮಗುವಿಗೆ ಮಸಾಜ್ ಮಾಡುವುದರಿಂದ ಮಗುವಿಗೆ ನಿಮ್ಮೊಂದಿಗಿನ ಮಾನಸಿಕ ಸಾಮೀಪ್ಯ ಹಾಗೂ ಬೆಸುಗೆ ವೃದ್ಧಿಸಲು ನೆರವಾಗಲಿದೆ. ಪ್ರತೀದಿನ ಮಗುವಿನ ಒಂದು ನಿಗದಿತ ಸಮಯದಲ್ಲಿ ದೇಹದ ಮಸಾಜ್ ಮಾಡಿದರೆ ತುಂಬಾ ಒಳ್ಳೆಯದು. ಆದರೆ ಮಗುವಿನ ದೇಹದ ಮಸಾಜ್ ಮಾಡಲು ಯಾವುದೇ ಒಂದು ಸಮಯ ಒಳ್ಳೆಯದು ಎನ್ನುವುದಲ್ಲ. ದಿನದ ಯಾವುದೇ ಸಮಯದಲ್ಲೂ ಮಗುವಿಗೆ ನೀವು ದೇಹದ ಮಸಾಜ್ ಮಾಡಬಹುದು.

ನಿಮ್ಮ ಮಗುವಿಗೆ ಸ್ವಲ್ಪ ಮಸಾಜ್ ಮಾಡುವುದರಿಂದ ಮಗುವಿಗೆ ಅದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಸಿಗಲಿದೆ. ನಿಮಗೆ ಮಗುವಿನ ಮಸಾಜ್ ನ ಟಿಪ್ಸ್ ತಿಳಿದಿದ್ದರೆ ಆಗ ನಿಮ್ಮ ಕೆಲಸ ತುಂಬಾ ಖುಷಿ ಮತ್ತು ಯಶಸ್ಸಿನದ್ದಾಗಲಿದೆ. ಮಗುವಿನ ಮಸಾಜ್ ಬಗ್ಗೆ ಇಲ್ಲಿರುವ ಕೆಲವೊಂದು ಟಿಪ್ಸ್ ಗಳನ್ನು ಬಳಸಿಕೊಂಡು ನೀವು ಮಗುವಿನ ಮಸಾಜ್ ನ ಆರೋಗ್ಯಕರ ಲಾಭಗಳನ್ನು ಪಡೆಯಬಹುದು.

ಬೆಸುಗೆ

ಬೆಸುಗೆ

ಮಗುವಿಗೆ ಮಸಾಜ್ ಮಾಡುವ ಅತ್ಯಂತ ದೊಡ್ಡ ಲಾಭವೆಂದರೆ ಅದು ತಾಯಿ-ಮಗುವಿನ ಬೆಸುಗೆಯನ್ನು ಸುಧಾರಿಸುತ್ತದೆ. ನಿಮ್ಮ ಒಂದು ಸ್ಪರ್ಶವು ಮಗುವಿಗೆ ಸಾವಿರ ಪದಗಳನ್ನು ಹೇಳುತ್ತದೆ. ನಿಮ್ಮ ಹಿತವಾದ ಸ್ಪರ್ಶವು ಮಗುವಿಗೆ ಸುರಕ್ಷಿತ ಹಾಗೂ ಭದ್ರತಾ ಭಾವನೆ ಮೂಡಿಸುತ್ತದೆ. ಇದರಿಂದ ನೀವು ಇರುವಾಗ ಅದು ತುಂಬಾ ಆರಾಮದಾಯಕವಾಗಿರುತ್ತದೆ.

ಉತ್ತಮ ನಿದ್ರೆ

ಉತ್ತಮ ನಿದ್ರೆ

ಹಿತವಾದ ಸ್ಪರ್ಶವು ನಿಮ್ಮ ಮಗು ಆರಾಮದಾಯಕ ಮತ್ತು ಸಮಾಧಾನದಿಂದ ಇರುವಂತೆ ಮಾಡುತ್ತದೆ. ಮೃದು ಸಂಗೀತವು ನಿಮಗೆ ನಿದ್ರೆ ಬರಲು ನೆರವಾಗುವಂತೆ ಮಗು ನಿಮ್ಮ ಬೆರಳುಗಳ ಸ್ಪರ್ಶವನ್ನು ಆನಂದಿಸಲಿದೆ. ಇದು ಆರಾಮದಾಯಕ ವಾತಾವರಣದಲ್ಲಿ ಮಗು ಮಲಗುವಂತೆ ಮಾಡುತ್ತದೆ.

ರಕ್ತ ಪರಿಚಲನೆ

ರಕ್ತ ಪರಿಚಲನೆ

ದೇಹದ ಮಸಾಜ್ ರಕ್ತ ಪರಿಚಲನೆ ಸುಧಾರಿಸಲಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಮಗುವಿನ ವಿಚಾರದಲ್ಲೂ ಇದು ನಿಜ. ಒಳ್ಳೆಯ ಮಸಾಜ್ ನೀಡುವುದರಿಂದ ಮಗುವಿನ ರಕ್ತ ಪರಿಚಲನೆಗೆ ನೆರವಾಗಲಿದೆ. ಇದು ಮಗುವಿನ ಮಸಾಜ್ ನ ಎಲ್ಲಾ ರೀತಿಯ ಆರೋಗ್ಯ ಲಾಭಗಳನ್ನು ನೀಡಲಿದೆ.

ಗ್ಯಾಸ್ ಹೊರಹಾಕುತ್ತದೆ

ಗ್ಯಾಸ್ ಹೊರಹಾಕುತ್ತದೆ

ಮಗುವಿಗೆ ಅದರ ಹೊಟ್ಟೆಯ ಭಾಗದಲ್ಲಿ ನಿಧಾನವಾಗಿ ಮಸಾಜ್ ಮಾಡುವುದರಿಂದ ಗ್ಯಾಸ್ ನಿಂದ ಉಂಟಾಗಿರುವ ನೋವು ಕಡಿಮೆಯಾಗುತ್ತದೆ. ಮಂಡಿಗಳು ಮತ್ತು ಪಾದಗಳನ್ನು ಜತೆಯಾಗಿ ಹಿಡಿದುಕೊಳ್ಳಿ ಮತ್ತು ಮಸಾಜ್ ಮಾಡುವಾಗ ಮಂಡಿಗಳನ್ನು ಹೊಟ್ಟೆಯ ಭಾಗಕ್ಕೆ ತನ್ನಿ. ಗ್ಯಾಸ್ ಹೊರಹಾಕಲು ಇದು ಅತ್ಯಂತ ಪರಿಣಾಮಕಾರಿ ಮಗುವಿನ ಮಸಾಜ್ ಟಿಪ್ಸ್.

ಮಲಬದ್ಧತೆ ನಿವಾರಣೆ

ಮಲಬದ್ಧತೆ ನಿವಾರಣೆ

ಮಲಬದ್ಧತೆ ಮಕ್ಕಳಲ್ಲಿ ಸಾಮಾನ್ಯ ಸಮಸ್ಯೆ. ಮಗುವಿಗೆ ಮಸಾಜ್ ಮಾಡುವುದರಿಂದ ಮಲಬದ್ಧತೆ ನಿವಾರಣೆಯಾಗುವುದು ಅತಿ ಪ್ರಾಮುಖ್ಯ ಆರೋಗ್ಯದ ಲಾಭ. ಹೊಟ್ಟೆ ಭಾಗದಲ್ಲಿ ಮಸಾಜ್ ಮಾಡುವುದರಿಂದ ಕರುಳಿನ ಚಲನೆ ಸುಧಾರಿಸಿ ಮಲಬದ್ಧತೆ ನಿವಾರಿಸುತ್ತದೆ.

ಆರಾಮ ನೀಡುತ್ತದೆ

ಆರಾಮ ನೀಡುತ್ತದೆ

ಮಗುವಿನ ಮಸಾಜ್ ನ ಪ್ರಮುಖ ಉದ್ದೇಶವೆಂದರೆ ಆರಾಮ. ಹಿತಕಾರಿಯಾದ ಮಸಾಜ್ ನಿಂದ ಅಳುತ್ತಿರುವ ಮಗುವನ್ನು ಆರಾಮವಾಗಿರುವಂತೆ ಮಾಡಬಹುದು. ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮಗು ತುಂಬಾ ಆರಾಮವಾಗಿರುವುದು ಮುಖ್ಯ.

ಬೌದ್ಧಿಕ ಬೆಳವಣಿಗೆ

ಬೌದ್ಧಿಕ ಬೆಳವಣಿಗೆ

ಮಸಾಜ್ ಸಮಯವು ನಿಮಗಿಬ್ಬರಿಗೆ ತಡೆರಹಿತ ಸಮಯವನ್ನು ನೀಡಲಿದೆ. ಇದು ಮಗುವಿನ ಬೌದ್ಧಿಕ ಸಾಮಾರ್ಥ್ಯ ಹೆಚ್ಚಿಸುವ ಒಳ್ಳೆಯ ಸಮಯವಾಗಲಿದೆ. ಈ ವೇಳೆ ಮಗುವಿನೊಂದಿಗೆ ಮಾತನಾಡಲು ಅಥವಾ ಹಾಡು ಹೇಳಲು ಬಳಸಿಕೊಳ್ಳಿ.

ಹೆರಿಗೆ ಬಳಿಕದ ಖಿನ್ನತೆಗೆ ಚಿಕಿತ್ಸೆ

ಹೆರಿಗೆ ಬಳಿಕದ ಖಿನ್ನತೆಗೆ ಚಿಕಿತ್ಸೆ

ಮಗುವಿನ ಮಸಾಜ್ ನ ಆರೋಗ್ಯಕರ ಲಾಭವನ್ನು ಕೇವಲ ಮಗುವಿಗೆ ಮಾತ್ರ ಸೀಮಿತ ಮಾಡಬೇಡಿ. ಹೆರಿಗೆ ಬಳಿಕದ ಖಿನ್ನತೆಯಿಂದ ಹೊರಬರಲು ಮಗುವಿನ ಮಸಾಜ್ ತುಂಬಾ ನೆರವಾಗಲಿದೆ. ಮಗುವಿನೊಂದಿಗಿನ ಮಾನಸಿಕ ಬೆಸುಗೆಯು ಹೆಚ್ಚಾಗಿ ನಿಮಗೆ ನೆರವಾಗಲಿದೆ.

English summary

Health Benefits Of Baby Massage

If you feel that your baby is blissful when you hold them in your warmth, imagine how happy they will be with a full body massage. Many studies have proved that there are many health benefits for baby massage.
Story first published: Saturday, January 4, 2014, 13:04 [IST]
X
Desktop Bottom Promotion