For Quick Alerts
ALLOW NOTIFICATIONS  
For Daily Alerts

ಶುಂಠಿ, ಅಜೀರ್ಣ ಪರಿಹಾರಕ್ಕೆ ಒಂದು ಒಳ್ಳೆಯ ಮನೆ ಮದ್ದು.

By Super
|

ನಿಮಗೆ ಆಗಾಗ್ಗೆ ಅಜೀರ್ಣದಿಂದ ಸಮಸ್ಯೆಗಳು ಬರುತ್ತಿದ್ದರೆ ಮತ್ತು ನಿಮ್ಮ ಶರೀರದಲ್ಲಿ ವಾಯು ಸೇರಿಕೊಂಡು ಪದೇಪದೇ ಬಳಲುತ್ತಿದ್ದರೆ, ಶುಂಠಿಯನ್ನು ಉಪಯೋಗಿಸಿ ಪರಿಹಾರ ಪಡೆಯಿರಿ. ಶುಂಠಿಯು ನೀವು ತಿನ್ನುವ ಆಹಾರವನ್ನು ಜೀರ್ಣಿಸುವಿಕೆಯಲ್ಲಿ ನೆರವಾಗಿ ಆಹಾರದ ಅಗತ್ಯ ಪೌಷ್ಟಿಕಾಂಶಗಳ ಹೀರುವಿಕೆ ಮತ್ತು ಹೊಂದಾಣಿಕೆ ಯನ್ನು ಉತ್ತಮಗೊಳಿಸುತ್ತದೆ. ಇದು ಆಹಾರದಲ್ಲಿರುವ ಪ್ರೋಟೀನ್‌ಗಳನ್ನು ವಿಂಡಿಸಲು ಸಹಾಯಕಾರಿಯಾಗಿದೆ.

ಶುಂಠಿ ಚಹಾದ 8 ಆರೋಗ್ಯ ಪ್ರಯೋಜನಗಳು

ಶುಂಠಿಯು ಲೋಳೆಸ್ರವಿಸುವಿಕೆಗೆ ಉತ್ತೇಜನ ಕೊಟ್ಟು, ನಿಮ್ಮ ಜಠರದಲ್ಲಿ ಹುಣ್ಣುಗಳಿದ್ದರೆ ಅವುಗಳ ವಿರುದ್ಧ ರಕ್ಷಣೆ ಕೊಡುತ್ತದೆ. ಅದಲ್ಲದೆ ಅದರಲ್ಲಿರುವ ಅನಿಲ ಉಚ್ಚಾಟನೆ (Carminative Effect) ಗುಣದಿಂದ ಹೊಟ್ಟೆ ಉಬ್ಬುವುದನ್ನು ಮತ್ತು ವಾಯು ಸೇರುವುದನ್ನು ಕಡಿಮೆಮಾಡುತ್ತದೆ. ಇದರ ಆಂಟಿಆಕ್ಸಿಡೆಂಟ್ ಚಟುವಟಿಕೆಯಿಂದ ಜೀವಕೋಶದ ಸಾವು (Apoptosis) ಮತ್ತು ಕೆಲವು ಪ್ರೋಟಿನ್ ಅಂಶವನ್ನು ಮುಚ್ಚಿಹಾಕಿ ಆಂಟಿಕ್ಯಾನ್ಸರ್ ಲಕ್ಷಣಗಳನ್ನು ಉಂಟುಮಾಡುತ್ತದೆ. ಹಾಗೂ ಕೆಲವು ಅಲರ್ಜಿ ಪ್ರತಿಕಿಯೆಗಳನ್ನು ನಿಗ್ರಹಿಸುತ್ತದೆ. ಈ ಎಲ್ಲಾ ಗುಣಗಳನ್ನು ಹೊಂದಿರುವ ಶುಂಠಿಯು ನಿಜಕ್ಕೂ ಒಂದು ಆರೋಗ್ಯದ ಶಕ್ತಿಕೇಂದ್ರವೆನ್ನಬಹುದು.

Ginger, the perfect home remedy for indigestion

ನಿಮ್ಮ ಶರೀರದಲ್ಲಿ ಸೇರಿಕೊಳ್ಳುವ ವಾಯುವನ್ನು ನಿವಾರಿಸಿ ದೂರವಿಟ್ಟಿರಲು ಇಲ್ಲಿ ಕೆಲವು ಸಲಹೆಗಳನ್ನು ಕೊಟ್ಟಿದ್ದೇವೆ:

ಸಲಹೆ 1: ತಾಜಾಶುಂಠಿಯನ್ನು ಚೆನ್ನಾಗಿ ತೊಳೆದು ಅದರ ಸಿಪ್ಪೆಯನ್ನು ತೆಗೆಯಿರಿ. ಈಗ ಅದನು ಚೆನ್ನಾಗಿ ಬಡಿದು ನಂತರ ಹಿಂಡೀ ರಸವನ್ನು ತೆಗೆಯಿರಿ. ಈ ಗಟ್ಟಿಯಾಗಿರುವ ರಸವನ್ನು ಒಂದು ಕಪ್ಪಿನಲ್ಲಿ ಸಂಗ್ರಹಿಸಿ ಪ್ರತಿದಿನ ಒಂದುಸಲ ಕುಡಿಯಿರಿ. ಹಾಗೆ ಮಾಡುವುದರಿಂದ ನಿಮಗೆ ತಕ್ಷಣವೇ ಪರಿಹಾರ ಕಾಣಬಹುದು.

ಶುಂಠಿ ಸೇವನೆ ಅಳತೆಯಲ್ಲಿ ಮಾಡಬೇಕು!

ಸಲಹೆ 2: ತಾಜಾ ಶುಂಠಿಯಾನ್ನು ತೆಳುವಾದ ಹೋಳುಗಳಾಗಿ ಕತ್ತರಿಸಿ. ಇದರ ಒಂದು ತುಂಡನ್ನು ನಿಮ್ಮ ಬಾಯಿಯೊಳಗೆ ಇರಿಸಿ ಮತ್ತು ನುಂಗಲು ಪ್ರಯತ್ನಿಸಬೇಡಿ. ಅದರ ರಸವು ಈಗ ನಿಮ್ಮ ಹೊಟ್ಟೆಗೆ ನಿಧಾನವಾಗಿ ಸೇರುತ್ತದೆ. ಹಾಗೆ ಮಾಡುವುದರಿಂದ ನಿಮ್ಮ ಅಜೀರ್ಣತೆಯನ್ನು ನಿವಾರಿಸಬಹುದು.

ಸಲಹೆ 3: ಅಜೀರ್ಣತೆ ಮತ್ತು ವಾಕರಿಕೆಯಿಂದ ಬಳಲುತ್ತಿದ್ದರೆ ಒಂದು ತೆಳುವಾದ ತುಂಡಿನಮೇಲೆ ಸ್ವಲ್ಪ ಉಪ್ಪನ್ನು ಸಿಂಪಡಿಸಿ ಬಾಯಿಯೊಳಗಿಟ್ಟುಕೊಂಡು ಮೆಲ್ಲಗೆ ಅಗಿಯಿರಿ. ಅದರಿಂದ ಬರುವ ರಸದಿಂದ ನಿಮ್ಮ ವಾಕರಿಕೆ ಮತ್ತು ಅಜೀರ್ಣತೆ ಕಡಿಮೆಮಾಡಬಹುದು.

English summary

Ginger, the perfect home remedy for indigestion

Ginger helps in digestion and improves absorption and assimilation of essential nutrients. It also helps break down the proteins in your food. So, if you are suffering from indigestion you could try the following home remedies:
Story first published: Friday, June 27, 2014, 14:43 [IST]
X
Desktop Bottom Promotion