For Quick Alerts
ALLOW NOTIFICATIONS  
For Daily Alerts

ಜೀರ್ಣಕ್ರಿಯೆ ಸುಧಾರಿಸುವ ಉತ್ತಮ ಆಹಾರಗಳು

By Hemanth P
|

ಜೀವಮಾನದಲ್ಲಿ ಒಂದು ಸಲವಾದರೂ ನಾವು ಅಜೀರ್ಣದ ಸಮಸ್ಯೆ ಎದುರಿಸಬೇಕಾಗುತ್ತದೆ. ಕೆಟ್ಟದಾಗಿ ತಿನ್ನುವ ಅಭ್ಯಾಸ, ವೈರಲ್ ಸೋಂಕು, ಕೆಲವೊಂದು ಔಷಧಿ ಮತ್ತು ಕೆಲವು ಇತರ ಕಾರಣಗಳಿಂದಾಗಿ ಅಜೀರ್ಣದ ಸಮಸ್ಯೆಯಾಗುತ್ತದೆ. ಆದಾಗ್ಯೂ ನೀವು ಇದರ ಬಗ್ಗೆ ಚಿಂತಿಸಬೇಕಿಲ್ಲ. ಕೆಳಗೆ ಕೊಟ್ಟಿರುವ ಕೆಲವೊಂದು ಆಹಾರಗಳ ಪಟ್ಟಿಯನ್ನು ಗಮನಿಸಿ ಜೀರ್ಣಕ್ರಿಯೆ ಗುಣಮಟ್ಟ ಉತ್ತಮಪಡಿಸಬಹುದು.

ಜೀರ್ಣಕ್ರಿಯೆ ಸುಧಾರಿಸಲು ಇರುವ ಆಹಾರಗಳು...

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜೀರ್ಣಕ್ರಿಯೆ ಸಮಸ್ಯೆಯನ್ನು ಬಗೆಹರಿಸುವುದು ಹೇಗೆ?

ಶುಂಠಿ

ಶುಂಠಿ

ತುಂಬಾ ಹಳೆಯ ಮಸಾಲೆಯಾಗಿರುವ ಶುಂಠಿಯು ಸರಿಯಾದ ರೀತಿ ಜೀರ್ಣಕ್ರಿಯೆಯಾಗಲು ನೆರವಾಗುತ್ತದೆ. ಇದು ಉರಿಯೂತ ಹಾಗೂ ಸೂಕ್ಷ್ಮಾಣು ವಿರೋಧಿ ಗುಣಗಳನ್ನು ಹೊಂದಿದೆ. ಇದರಿಂದಾಗಿ ಇದು ಅಜೀರ್ಣ, ವಾಕರಿಕೆ, ಗ್ಯಾಸ್, ಹೊಟ್ಟೆ ಉಬ್ಬರಿಸುವುದು ಮತ್ತು ಜೀರ್ಣಕಾರಿ ಸೆಳೆತ ಮೊದಲಾದ ಜೀರ್ಣಕ್ರಿಯೆಗೆ ಸಂಬಂಧಪಟ್ಟ ಸಮಸ್ಯೆಗಳನ್ನು ನಿವಾರಿಸುತ್ತದೆ.

ಪ್ರತೀ ದಿನ ಶುಂಠಿ ಹಾಕಿದ ಚಹಾ ಕುಡಿಯಿರಿ ಅಥವಾ ಬಿಸಿ ನೀರಿನಲ್ಲಿ ಒಂದು ತುಂಡು ಶುಂಠಿ ಹಾಕಿ ಅದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಕುಡಿಯಿರಿ. ಈ ಚಹಾ ಪಿತ್ತರಸ, ಲಾಲಾರಸ ಮತ್ತು ಜಠರದ ರಸ ಉತ್ಪತ್ತಿಯಾಗಿ ಅದು ಜೀರ್ಣಕ್ರಿಯೆಗೆ ನೆರವಾಗುತ್ತದೆ. ಒಂದು ಸಣ್ಣ ಚಮಚ ಶುಂಠಿ ರಸದೊಂದಿಗೆ ಅರ್ಧ ಚಮಚ ಜೇನು ಮಿಶ್ರಣ ಮಾಡಿ ಅದನ್ನು ಊಟಕ್ಕೆ ಮೊದಲು ಸೇವಿಸಬೇಕು.

ಓಟ್ ಮೀಲ್ಸ್

ಓಟ್ ಮೀಲ್ಸ್

ತೂಕ ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಈ ಆಹಾರವು ಕೇವಲ ತೂಕ ಕಡಿಮೆ ಮಾಡುವುದು ಮಾತ್ರವಲ್ಲದೆ ಇದರಲ್ಲಿ ಸಮೃದ್ಧವಾಗಿರುವ ನಾರಿನಾಂಶವು ಜೀರ್ಣಕ್ರಿಯೆಗೆ ಹೆಚ್ಚು ಲಾಭಕಾರಿ. ನಾರಿನಾಂಶವು ಮಲಬದ್ಧತೆ ತಡೆಯುತ್ತದೆ ಮತ್ತು ಸಾಮಾನ್ಯ ಕರುಳಿನ ನಿರ್ವಹಣೆಗೆ ನೆರವಾಗುತ್ತದೆ. ಒಳ್ಳೆಯ ಗುಣಮಟ್ಟದ ಓಟ್ ಮೀಲ್ಸ್ ಜಠರ ಅನ್ನನಾಳದ ಹಿಮ್ಮುಖ ಹರಿವು ರೋಗದಿಂದ ಉಂಟಾಗುವಂತಹ ಎದೆಉರಿ ಮತ್ತು ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಓಟ್ ಮೀಲ್ಸ್ ನಲ್ಲಿರುವ ಸತು, ತಾಮ್ರ, ಪಾಸ್ಪರಸ್, ಸೆಲೆನಿಯಮ್ ಮತ್ತು ಥಯಾಮಿನ್ ಅಂಶಗಳು ದೇಹದ ವ್ಯವಸ್ಥೆ ಸರಿಯಾದ ರೀತಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ನಿಮ್ಮ ಆಹಾರ ಕ್ರಮದಲ್ಲಿ ಓಟ್ ಮೀಲ್, ಓಟ್ ಮೀಲ್ ಕುಕ್ಕೀಸ್, ಓಟ್ ಹಿಟ್ಟು ಅಥವಾ ಓಟ್ ಮೀಲ್ಸ್ ನಿಂದ ಮಾಡಿದಂತಹ ಇತರ ಯಾವುದಾದರೂ ತಿಂಡಿ ತಿಂದರೆ ನಿಮ್ಮ ಜೀರ್ಣಕ್ರಿಯೆ ವ್ಯವಸ್ಥೆ ಸರಿಯಾಗಿಟ್ಟುಕೊಳ್ಳಬಹುದು.

ಪೆಪ್ಪರ್ ಮಿಂಟ್

ಪೆಪ್ಪರ್ ಮಿಂಟ್

ಪೆಪ್ಪರ್ ಮಿಂಟ್ ನ್ನು ನೀವು ಜಗಿದಾಗ ಅದು ನಿಮ್ಮ ಶ್ವಾಸಕ್ಕೆ ಒಳ್ಳೆಯ ತಂಪು ನೀಡುತ್ತದೆ. ಇದರಲ್ಲಿ ಉರಿಯೂತ ಶಮನಕಾರಿ ಮತ್ತು ನಂಜು ನಿರೋಧಕ ಗುಣ ಹೊಂದಿದೆ. ಇದು ಒಳ್ಳೆಯ ಜೀರ್ಣಕ್ರಿಯೆಗೆ ನೆರವಾಗುತ್ತದೆ. ಸಲಾಡ್ ಮತ್ತು ಯಾವುದಾದರೂ ಪದಾರ್ಥದಲ್ಲಿ ಹಸಿರು ಇರುವ ಪುದೀನಾ ಎಲೆಗಳನ್ನು ಬಳಸಿ. ಇದು ಹೊಟ್ಟೆಯ ಸಮಸ್ಯೆ ನಿವಾರಿಸುತ್ತದೆ. ಒಂದು ಗ್ಲಾಸ್ ನೀರಿಗೆ ಪೆಪ್ಪರ್ ಮಿಂಟ್ ಎಣ್ಣೆಯ ಕೆಲವು ಹನಿ ಹಾಕಿ ಕುಡಿದರೆ ಆಗ ಜೀರ್ಣಕ್ರಿಯೆ ಸುಲಭವಾಗಿ ಆಗುವಂತೆ ಅದು ಸಹಕರಿಸುತ್ತದೆ. ಇದು ಶುದ್ದೀಕರಿಸುವ ಮತ್ತು ಶುಚಿಯಾಗಿಸುವ ಕೆಲಸ ಮಾಡುತ್ತದೆ.

ಬೀಟ್ ರೂಟ್

ಬೀಟ್ ರೂಟ್

ಉಬ್ಬರ, ಮಲಬದ್ದತೆ, ಹೊಟ್ಟೆ ಸೆಳೆತ ಮತ್ತು ಆಹಾರ ಅಸಹನೆಯಂತ ಜೀರ್ಣ ಕ್ರಿಯೆ ಸಮಸ್ಯೆಗಳಿಗೆ ಬೀಟ್ ರೂಟ್ ತಿನ್ನುವುದು ಒಳ್ಳೆಯ ಮದ್ದು. ಬೀಟ್ ರೂಟ್ ನಲ್ಲಿರುವ ಉನ್ನತ ಮಟ್ಟದ ನಾರಿನಾಂಶ, ಮೆಗ್ನಿಶಿಯಂ ಮತ್ತು ಪೊಟಾಶಿಯಂ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕರ ನಿರ್ವಹಣೆಗೆ ನೆರವಾಗುತ್ತದೆ. ಇದರಲ್ಲಿನ ಬೆಟೈನಿ ಅಂಶವು ಹೊಟ್ಟೆಯಲ್ಲಿನ ಆಮ್ಲತೆ ತಗ್ಗಿಸುತ್ತದೆ. ಬೀಟ್ ರೂಟ್ ನ ಜ್ಯೂಸ್ ಅಥವಾ ಹಸಿಯಾಗಿಯೇ ಅದನ್ನು ಸೇವಿಸುದರಿಂದ ಹಲವಾರು ರೀತಿಯ ಆರೋಗ್ಯಕರ ಲಾಭಗಳಿವೆ.

ಸೇಬು

ಸೇಬು

ದಿನಕ್ಕೊಂದು ಸೇಬು ವೈದ್ಯರಿಂದ ದೂರ ಎನ್ನುವುದು ಸುಳ್ಳಲ್ಲ. ಸೇಬು ರುಚಿಯಿರುವಷ್ಟೇ ಅದು ಕರುಳಿನ ಚಲನೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತದೆ. ಇದರಲ್ಲಿ ಕರಗುವ ಮತ್ತು ಕರಗದ ನಾರಿನಾಂಶಗಳಿರುವ ಕಾರಣ ಇದನ್ನು ತುಂಬಾ ವಿಶೇಷವೆಂದು ಪರಿಗಣಿಸಲಾಗುತ್ತದೆ. ಸೇಬಿನ ಸಿಪ್ಪೆಯಲ್ಲಿರುವ ಸೆಲ್ಯುಲೋಸ್ ಎನ್ನುವ ಕರಗುವ ನಾರಿನಾಂಶ ಪಡೆಯಬಹುದು. ಇದರಿಂದ ಸೇಬು ತಿನ್ನುವ ಮೊದಲು ಅದರ ಸಿಪ್ಪೆ ತೆಗೆಯಬೇಡಿ ಎನ್ನುವುದನ್ನು ಗಮನಿಸಿ. ಸೆಲ್ಯುಲೋಸ್ ಜೀರ್ಣಕ್ರಿಯೆ ವ್ಯವಸ್ಥೆಯೊಳಗೆ ಬೇಗನೆ ಸೇರಿಕೊಂಡು ಮಲಬದ್ದತೆ ನಿವಾರಿಸುತ್ತದೆ. ಪೆಕ್ಟಿನ್ ಎನ್ನುವ ಕರಗುವ ನಾರಿನಾಂಶವು ಜೆಲ್ ನ್ನು ಉಂಟುಮಾಡಿ ಅದು ನೀರನ್ನು ಆಕರ್ಷಿಸಿ ಸಂಪೂರ್ಣ ಭಾವನೆ ಮೂಡಿಸುತ್ತದೆ.

ಸೇಬಿನಲ್ಲಿ ವಿಟಮಿನ್ ಎ ಮತ್ತು ಸಿ, ಪಾಸ್ಪರಸ್ ಮತ್ತು ಪೊಟ್ಯಾಸಿಯಮ್ ನಂತಹ ಮಿನರಲ್ ಗಳಿವೆ. ಇದು ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.


English summary

Best foods to improve your digestion

Improper digestion is a common problem we have been for atleast once in our lives. Imperfect digestion occurs due to poor eating habits, viral infections, certain medications and some other reasons.
Story first published: Friday, January 24, 2014, 18:33 [IST]
X
Desktop Bottom Promotion