For Quick Alerts
ALLOW NOTIFICATIONS  
For Daily Alerts

ಬೆನ್ನುಬಿಡದೇ ಕಾಡುವ ಮೈಗ್ರೇನ್‌ನ 10 ಲಕ್ಷಣಗಳು ಯಾವುದು?

|

ಶಾಲೆಗೆ ಚಕ್ಕರ್ ಹೊಡೆದು ಸಿನೆಮಾ ನೋಡಲು ಅಥವಾ ಯಾವುದೋ ಕೆಲಸಕ್ಕಾಗಿ ಕಛೇರಿಯಿಂದ ಬೇಗನೇ ಹೊರಹೋಗಲು ಅಥವಾ ಒಲ್ಲದ ಕೆಲಸವನ್ನು ಮಾಡದೇ ಇರಲು ನಾವೆಲ್ಲಾ ಒಂದು ಸಾಮಾನ್ಯವಾದ ನೆಪವನ್ನು ನೀಡುತ್ತೇವೆ. ಅದೇ ತಲೆನೋವು. ಆದರೆ ನಿಜವಾದ ತಲೆನೋವು ನಿಜಕ್ಕೂ ದೇಹವನ್ನು ಒಳಗಿನಿಂದ ಹಿಂಡುವ ಮಹಾ ನೋವಾಗಿದೆ. ವೈದ್ಯವಿಜ್ಞಾನಕ್ಕೆ ಇಂದಿಗೂ ಸವಾಲಾಗಿರುವ ತಲೆನೋವಿನ ಮೂಲ ಹಾಗೂ ಸೂಕ್ತ ಚಿಕಿತ್ಸೆ ಇಂದಿಗೂ ಲಭ್ಯವಿಲ್ಲ. ಪ್ರಸ್ತುತ ಲಭ್ಯವಿರುವ ಔಷಧಿಗಳೆಲ್ಲಾ ಈ ನೋವಿನ ಸಂಜ್ಞೆಗಳು ಮೆದುಳನ್ನು ತಲುಪದಿರುವಂತೆ ಮಾಡುವ ಉಪಾಯಗಳಷ್ಟೇ.

ತಲೆ ನೋವುಗಳಲ್ಲಿಯೂ ವಿವಿಧ ಪ್ರಕಾರಗಳಿವೆ. ಚಿಕ್ಕದಾಗಿರುವ ತಲೆನೋವಿನಿಂದ ಹಿಡಿದು ಪಂಚೇಂದ್ರಿಯಗಳ ಮೇಲಿನ ಹತೋಟಿಗಳನ್ನೇ ಅಲ್ಲಾಡಿಸುವಂತಹ ಮೈಗ್ರೇನ್ ತಲೆನೋವುಗಳಿವೆ. ಅಮೇರಿಕಾದಲ್ಲಿ ನಡೆಸಿದ ಒಂದು ಸಮೀಕ್ಷೆಯ ಪ್ರಕಾರ ಶೇಖಡಾ ಮೂವತ್ತು ಜನರು ಮೈಗ್ರೇನ್ ನಿಂದ ಬಳಲುತ್ತಾರೆ. ಅದರಲ್ಲಿ ಪುರುಷರಿಗಿಂತ ಮಹಿಳೆಯರ ಪಾಲು ಮುಕ್ಕಾಲರಷ್ಟಿದೆ. ಸಾಮಾನ್ಯವಾಗಿ ಚಿಕ್ಕ ವಯಸ್ಸಿನಲ್ಲಿಯೇ ತೊಡಗಿ ಪ್ರಬುದ್ಧಾವಸ್ಥೆಯವರೆಗೂ ತಲೆನೋವು ಕಾಡುತ್ತದೆ. ಮೈಗ್ರೇನ್ ಉಪಶಮನಕ್ಕೆ ಮಾರ್ಗಗಳು

ಏನಿದು ಮೈಗ್ರೇನ್? ಸಾಮಾನ್ಯವಾಗಿ ತಲೆಯ ಮಧ್ಯದಲ್ಲಿ ನೋವಿನ ಅನುಭವವಾಗಿ ಯೋಚಿಸುವ ಕ್ಷಮತೆಯ ಮೇಲೆ ಪ್ರಭಾವ ಬೀರುವುದಾದರೆ ಅದು ಸಾಮಾನ್ಯ ತಲೆನೋವು. ಆದರೆ ಒಂದು ವೇಳೆ ಈ ನೋವು ಆಗಾಗ ಮಿಂಚು ಹೊಡೆದಂತೆ ಅತ್ಯಂತ ಜೋರಾಗಿ, ಒಮ್ಮೆ ತಲೆಯ ಎಡಭಾಗದಲ್ಲೂ ಮತ್ತೊಮ್ಮೆ ಬಲಭಾಗದಲ್ಲೂ ತೀವ್ರವಾದ ನೋವು ಅನುಭವವಾದರೆ, ವಾಂತಿ ಬರುವಂತಾಗುತ್ತದೆ, ಆದರೆ ಆಗುವುದಿಲ್ಲ ಎಂದಾದರೆ, ಹಣೆಯ ಪಕ್ಕದ ನರಗಳು ಧಪಧಪ ಹೊಡೆದುಕೊಳ್ಳುತ್ತಿರುವುದು ಕಣ್ಣಿಗೆ ಕಾಣುವಂತಿದ್ದರೆ, ಕಣ್ಣುಗಳ ಎದುರು ನೂರಾರು ಮಿಂಚುಹುಳಗಳು ಫಕ್ಕನೇ ಮಿಂಚಿ ಮರೆಯಾದಂತೆ ಅನ್ನಿಸಿದರೆ, ದೃಷ್ಟಿಯ ಕೇಂದ್ರಭಾಗದ ದ್ಯಶ್ಯ ಕಾಣೆಯಾಗಿಬಿಟ್ಟರೆ, ಕೈಕಾಲುಗಳಲ್ಲಿ ಶಕ್ತಿಯೇ ಇಲ್ಲದಂತಾಗಿ ತಲೆಸುತ್ತುವ ಅನುಭವವಾದರೆ, ನಿದ್ದೆ ಮರೀಚಿಕೆಯಾದರೆ, ಇವೆಲ್ಲಾ ತೀವ್ರತರದ ಮೈಗ್ರೇನ್ ತಲೆನೋವಿನ ಲಕ್ಷಣಗಳು. ಇದು ಹೇಗೆ ಬರುತ್ತದೆ, ಕೇವಲ ಕೆಲವರನ್ನು ಮಾತ್ರ ಏಕೆ ಕಾಡುತ್ತದೆ, ಇದಕ್ಕೆ ಸಮರ್ಪಕವಾದ ಚಿಕಿತ್ಸೆ ಏನು ಎಂಬುದು ಇಂದಿಗೂ ರಹಸ್ಯವಾಗಿರುವ ಪ್ರಶ್ನೆಗಳು. For video click here

ಮೈಗ್ರೇನ್ ನಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಮೊದಲನೆಯದು ತೇಜಸ್ಸಿನೊಂದಿಗಿನ ಮೈಗ್ರೇನ್ (migraine with aura- classical migraine) ಅಥವಾ ಕಲಾತ್ಮಕ ಮೈಗ್ರೇನ್. ಇದರಲ್ಲಿ ತಲೆನೋವಿನೊಂದಿಗೆ ದೃಷ್ಟಿಯಲ್ಲಿ ಮಿಂಚು, ಕೇಂದ್ರಭಾಗದ ದ್ಯಶ್ಯ ಕಾಣೆಯಾಗುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಎರಡನೆಯದಾಗಿ ತೇಜಸ್ಸಿಲ್ಲದ ಮೈಗ್ರೇನ್ (migraine without aura-common migraine) ಅಥವಾ ಸಾಮಾನ್ಯ ಮೈಗ್ರೇನ್. ಇದರಲ್ಲಿ ವಾಂತಿಯಾಗುವ ಭಾವನೆ, ತಲೆಸುತ್ತು, ಹಣೆಗಳ ನರಗಳು ಹೊಡೆದುಕೊಳ್ಳುವುದು ಮೊದಲಾದ ಲಕ್ಷಣಗಳು ಕಂಡುಬರುತ್ತವೆ. ಈ ಲೇಖನದಲ್ಲಿ ಈ ನೋವನ್ನು ಎದುರಿಸುವ ಹಾಗೂ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಹಲವು ಸಲಹೆಗಳನ್ನು ನೀಡಲಾಗಿದೆ. ಇವುಗಳಲ್ಲಿ ಯಾವುದೇ ಒಂದೂ ಲಕ್ಷಣಗಳು ಹೌದು ಎಂದಾದಲ್ಲಿ, ಆದಷ್ಟು ಶೀಘ್ರ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆದುಕೊಳ್ಳುವುದು ಉಚಿತವಾಗಿದೆ. ಮೈಗ್ರೇನ್ ತಡೆಯೋದಕ್ಕೆ ಏನು ಮಾಡಬಹುದು?

ತೇಜಸ್ಸು ಅಥವಾ ಪ್ರಭೆ

ತೇಜಸ್ಸು ಅಥವಾ ಪ್ರಭೆ

ತೇಜಸ್ಸಿನೊಂದಿಗಿನ ಮೈಗ್ರೇನ್ ನ ಮುಖ್ಯ ಲಕ್ಷಣವಾಗಿರುವ ಪ್ರಭೆಯಲ್ಲಿ ಕಣ್ಣುಗಳ ಮುಂದೆ ಚಿಕ್ಕ ಚಿಕ್ಕ ಮಿಂಚು ಹೊಡೆದಂತಹಾ ಅನುಭವವಾಗುತ್ತದೆ. ಇವು ಚಿಕ್ಕ ಚುಕ್ಕೆಗಳಂತೆಯೂ ಪೆನ್ಸಿಲ್ ನಂತಹ ಕಡ್ಡಿಯಾಕಾರದಲ್ಲಿಯೂ ಇರಬಹುದು. ಕೆಲವೊಮ್ಮೆ ಒಂದರ ಹಿಂದೆ ಇನ್ನೊಂದು ಬಂದು ರಿನ್ ಸೋಪಿನ ಮಿಂಚಿನ ಚಿನ್ಹೆಯಂತಹಾ ಆಕಾರಗಳೂ ಮೂಡಬಹುದು. ಈ ಲಕ್ಷಣಗಳು ತಲೆನೋವು ಅತ್ಯಂತ ತೀವ್ರವಾಗಿದ್ದಾಗ ಐದು ನಿಮಿಷದಿಂದ ಒಂದು ಘಂಟೆಯವರೆಗೂ ಇರಬಹುದು. ಈ ಸಮಯದಲ್ಲಿ ಮೆದುಳಿಗೆ ಸಂಪೂರ್ಣವಾಗಿ ವಿಶ್ರಾಂತಿ ನೀಡುವುದೇ ಏಕಮಾತ್ರ ಉಪಾಯವಾಗಿದೆ. ಮೊಣಕಾಲಿನಲ್ಲಿ ಕುಳಿತು ತಲೆಯನ್ನು ಕೆಳಕ್ಕೆ ಬಗ್ಗಿಸಿ ಹಾಸಿಗೆಯ ಮೇಲಿಟ್ಟು ತಲೆನೋವು ನಿಧಾನವಾಗಿ ಕಡಿಮೆಯಾಗುವ ತನಕ ಸಹನೆ ವಹಿಸುವುದು ಒಂದು ಉಪಾಯವಾಗಿದೆ.

ತಲೆನೋವಿನ ಭರದಲ್ಲಿ ಬದಲಾಗುವ ಭಾವೋದ್ವೇಗ

ತಲೆನೋವಿನ ಭರದಲ್ಲಿ ಬದಲಾಗುವ ಭಾವೋದ್ವೇಗ

ಸಾಮಾನ್ಯವಾಗಿ ತಲೆನೋವು ಅತ್ಯಂತ ತೀವ್ರವಾಗಿದ್ದಾದ ಉಳಿದ ಇಂದ್ರಿಯಗಳಿಗೆ ಸೂಕ್ತವಾಗಿ ಪ್ರತಿಕ್ರಿಯಿಸಲು ಮೆದುಳಿಗೆ ಸಾಧ್ಯವಾಗದುದರಿಂದ ಸ್ಪಂದನೆ ನೀಡುವುದು ಕಷ್ಟವಾಗುತ್ತದೆ. ಉದಾಹರಣೆಗೆ ಈ ಸಮಯದಲ್ಲಿ ನಿಮ್ಮ ಪರಿಸ್ಥಿತಿಯ ಬಗ್ಗೆ ಅರಿವಿಲ್ಲದವರು ಏನಾದರೂ ಕೇಳಿದರೆ ಅದಕ್ಕೆ ತಕ್ಕ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಆದರೆ ಅವರು ಅದೇ ಪ್ರಶ್ನೆಯನ್ನು ಮತ್ತೊಮ್ಮೆ ಕೇಳಿದರೆ ಮೆದುಳು ತೀವ್ರ ಕಿರಿಕಿರಿಯನ್ನನುಭವಿಸಿ ಥಟ್ಟನೇ ರೇಗುವ ಪ್ರಚೋದನೆಯನ್ನು ನೀಡುತ್ತದೆ. ಪದೇ ಪದೇ ಚಿಕ್ಕ ಚಿಕ್ಕ ಕಾರಣಗಳಿಗಾಗಿ ನೀವು ಎಲ್ಲರ ಮೇಲೆ ರೇಗುತ್ತಿದ್ದರೆ ಮೈಗ್ರೇನ್ ಇರುವ ಸಂಭವ ಹೆಚ್ಚಾಗಿದೆ.

ಮರೀಚಿಕೆಯಾಗುವ ನಿದ್ದೆ

ಮರೀಚಿಕೆಯಾಗುವ ನಿದ್ದೆ

ನಿದ್ದೆ ಎಂದರೆ ಎಲ್ಲಾ ಇಂದ್ರಿಯಗಳು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ದೇಹದ ಅನೈಚ್ಚಿಕ ಕಾರ್ಯಗಳು ಸುಗಮವಾಗುವಂತೆ ಮಾಡುವುದು. ಆದರೆ ಮೈಗ್ರೇನ್ ಇರುವಷ್ಟೂ ಹೊತ್ತು ಮೆದುಳು ಎಚ್ಚರಾಗಿಯೇ ಇರುವುದರಿಂದ ಬೇರೆ ಇಂದ್ರಿಯಗಳಿಗೆ ವಿಶ್ರಾಂತಿ ತೆಗೆದುಕೊಳ್ಳುವ ಪ್ರಮೇಯವೇ ಬರುವುದಿಲ್ಲ. ತಡರಾತ್ರಿಯವರೆಗೆ ನಿದ್ದೆಯಿಲ್ಲದಿರುವುದು, ಕೆಲವೊಮ್ಮೆ ಎರಡು ಮೂರು ದಿನಗಳ ವರೆಗೂ ನಿದ್ದೆಯಿಲ್ಲದೇ ಇರುವುದು ತೀವ್ರತರದ ಮೈಗ್ರೇನ್ ನ ಲಕ್ಷಣವಾಗಿದೆ. ಇದಕ್ಕೆ ತಡಮಾಡದೇ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ಕುಹರ ಅಥವಾ ಸೈನಸ್ (Sinus) ನಲ್ಲಿ ಸೋಂಕು

ಕುಹರ ಅಥವಾ ಸೈನಸ್ (Sinus) ನಲ್ಲಿ ಸೋಂಕು

ಮಾನವನ ತಲೆಬುರುಡೆಯನ್ನು ನೋಡಿದರೆ ಮೂಗಿರುವ ಜಾಗದಲ್ಲಿ ಒಂದು ಕುಳಿ ಇರುವುದು ಕಂಡುಬರುತ್ತದೆ. ಹಾಗಾದರೆ ಮುಖದಿಂದ ಒಂದಿಂಚು ಮುಂದಿರುವ ಮೂಗು ಏನು? ಮೂಗಿನೊಳಗೆ ಮೃದುವಾದ ಮೂಳೆ ಇದೆ (ಮೃದ್ವಸ್ಥಿ). ಇದು ಮೂಗಿನ ನಡುಭಾಗದಿಂದ ತೊಡಗಿ ಕುಳಿ ಇರುವ ಜಾಗದ ಒಳಗಿನವರೆಗೂ ಇರುತ್ತದೆ. ಇದರ ಹಿಂದೆ ಸ್ವಲ್ಪ ಟೊಳ್ಳಾದ ಸ್ಥಳವಿದೆ. ಇದೇ ಕುಹರ ಅಥವಾ ಸೈನಸ್. ನಮ್ಮ ಮೂಗು, ಕಣ್ಣು ಹಾಗೂ ಕಿವಿಯಿಂದ ಹೊರಟ ಸೂಕ್ಷ್ಮ ನರಗಳು ಈ ಟೊಳ್ಳುಭಾಗದ ಮೇಲಿನಿಂದ ಹಾದು ಹೋಗಿರುತ್ತವೆ. ಒಂದು ವೇಳೆ ಈ ಟೊಳ್ಳಿನಲ್ಲಿ ಹೇಗೋ ಬ್ಯಾಕ್ಟೀರಿಯಾ ಅಥವಾ ವೈರಸ್ಸುಗಳು ನುಗ್ಗಿಬಿಟ್ಟರೆ ಅಲ್ಲಿ ಸೋಂಕು ಉಂಟಾಗುತ್ತದೆ. ಈ ಸೋಂಕು ನರಗಳ ಮೇಲೂ ಪ್ರಭಾವ ತೋರಿ ನೋವಿನ ಅನುಭವ ನೀಡುತ್ತವೆ. ಮೂಗಿನಲ್ಲಿ ನೀರು, ಕಿವಿಯಲ್ಲಿ ಕೀವು, ಕಣ್ಣಿನಲ್ಲಿ ನೀರು ಸೋರುತ್ತಲೇ ಇರುವುದು ಸೋಂಕು ತೀವ್ರವಾಗಿರುವ ಲಕ್ಷಣಗಳು. ಒಂದು ವೇಳೆ ಸೋಂಕು ಔಷಧಿಗಳಿಗೆ ಬಗ್ಗದೇ ಇರುವ ಸ್ಥಿತಿಯನ್ನು ದಾಟಿದ್ದರೆ ಶಸ್ತ್ರಚಿಕಿತ್ಸೆಯೊಂದೇ ದಾರಿ. ಹಾಗಾಗುವ ಮೊದಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು. ಇದಕ್ಕೂ ಒಂದು ಸುಲಭ ಉಪಾಯವಿದೆ. ಮುಖವಡಿಯಾಗಿ ಮಲಗಿ ಎಷ್ಟು ಸಾಧ್ಯವೋ ಅಷ್ಟು ಮುಖವನ್ನು ಮುಂದಕ್ಕೆ ಬಗ್ಗಿಸಿ ಕೊಂಚ ಹೊತ್ತು ಇರಬೇಕು. ಅಂದರೆ ನೀರಿನ ಬಾಟಲಿಯನ್ನು ಉಲ್ಟಾ ಮಾಡಿದ ಹಾಗೆ. ಈ ಭಂಗಿಯಲ್ಲಿ ಸೈನಸ್ ನೊಳಗಿದ್ದ ಸೋಂಕುಪೀಡಿತ ದ್ರವ ನಿಧಾನವಾಗಿ ಇಳಿದು ಮೂಗಿಗೆ ಬರುತ್ತದೆ. ಕೆಲವೊಮ್ಮೆ ಈ ದ್ರವ ಕೆಲಸೆಕೆಂಡುಗಳಲ್ಲೇ ಬರಬಹುದು ಅಥವಾ ಕೆಲವು ನಿಮಿಷಗಳ ಬಳಿಕ ಬರಬಹುದು. ಸ್ವಲ್ಪ ಸಮಯದ ನಂತರ ತಲೆಯನ್ನು ನೇರವಾಗಿಸಿದರೆ ಈ ದ್ರವ ಮೂಗಿನಿಂದ ಹೊರಬರುತ್ತದೆ. ಪವಾಡವೆಂಬಂತೆ ತಲೆನೋವು ಆ ಕ್ಷಣದಿಂದ ಕಡಿಮೆಯಾಗುತ್ತಾ ಬರುತ್ತದೆ. ಒಂದು ವೇಳೆ ಬರದೇ ಇದ್ದರೆ ಸೋಂಕು ಕೆಳಗಿಳಿಯಲಾರದಷ್ಟು ಗಟ್ಟಿಯಾಗಿದೆ ಎಂದು ಅರ್ಥೈಸಿಕೊಳ್ಳಬೇಕು. ಈ ಪ್ರಮೇಯ ಬರುವ ಮುನ್ನವೇ ಉಲ್ಟಾ ಮಲಗುವ ಸುಲಭ ಉಪಾಯವೇ ಮೇಲು.

ಚಾಕಲೇಟು ತಿನ್ನುವ ಬಯಕೆಯಾಗುತ್ತದೆ

ಚಾಕಲೇಟು ತಿನ್ನುವ ಬಯಕೆಯಾಗುತ್ತದೆ

ಮೈಗ್ರೇನ್ ನೋವು ಹೆಚ್ಚಾದಷ್ಟೂ ಚಾಕಲೇಟು ತಿನ್ನುವ ಬಯಕೆ ಹೆಚ್ಚಾಗುತ್ತಾ ಹೋಗುತ್ತದೆ. ಚಾಕಲೇಟಿನಲ್ಲಿರುವ ಕೋಕೋ ಇದಕ್ಕೆ ಕಾರಣ ಎಂದು ನಂಬಲಾಗಿದೆ. ಆದರೆ ತಲೆನೋವಿಗೂ ಕೋಕೋಗೂ ಯಾವ ಬಾದರಾಯಣ ಸಂಬಂಧ ಎಂಬುದನ್ನು ಇದುವರೆಗೆ ಕಂಡುಹಿಡಿಯಲಾಗಿಲ್ಲ. ಒಂದು ವೇಳೆ ಚಾಕಲೇಟು ತಿನ್ನುವ ಬಯಕೆ ತೀವ್ರವಾದರೆ ವೈದ್ಯರನ್ನು ಭೇಟಿಯಾಗುವುದು ಉತ್ತಮ.

ತಡೆತಡೆದು ಕಾಡುವ ನೋವು

ತಡೆತಡೆದು ಕಾಡುವ ನೋವು

ಒಂದು ವೇಳೆ ತಲೆಯ ಮಧ್ಯಭಾಗದಲ್ಲಿ ಅಥವಾ ಬಲ ಇಲ್ಲವೇ ಎಡ ಭಾಗದಲ್ಲಿ ಬಿಟ್ಟು ಬಿಟ್ಟು ಬರುವಂತೆ ನೋವು ಕಂಡುಬಂದರೆ, ಏರಿಳಿತ ಕೆಲವೊಮ್ಮೆ ಸೆಕೆಂಡುಗಳಲ್ಲಿದ್ದರೆ ಕೆಲವೊಮ್ಮೆ ಒಂದೆರಡು ನಿಮಿಷಗಳಲ್ಲಿದ್ದರೆ ಇದು ಅಪ್ಪಟ ಸಾಮಾನ್ಯ ಮೈಗ್ರೇನ್ ಆಗಿದೆ. ಈ ನೋವು ಸಾಧಾರಣವಾಗಿ ಘಂಟೆಗಟ್ಟಲೇ ಇರುತ್ತದೆ. ಈ ಸಮಯದಲ್ಲಿ ವಿಶ್ರಾಂತಿ ಪಡೆಯುವುದು ಉತ್ತಮ. ಈ ನೋವು ದೃಷ್ಟಿ, ಮತ್ತು ಸ್ಪರ್ಶಗಳಿಗೆ ಹೆಚ್ಚು ಸ್ಪಂದಿಸುವುದರಿಂದ ಹಾಗೂ ಶ್ರವಣಕ್ಕೆ ಕಡಿಮೆ ಪ್ರಭಾವವಿರುವುದರಿಂದ ನಿಧಾನಗತಿಯ ಮತ್ತು ಮೆಲುದನಿಯ ಸಂಗೀತ ಕೇಳುವುದರಿಂದ ಮೆದುಳನ್ನು ನೋವಿನ ಪ್ರಭಾವದಿಂದ ಕೊಂಚ ಕಡಿಮೆ ಮಾಡಿಕೊಳ್ಳಬಹುದು.

ಕಣ್ಣಿನಲ್ಲಿ ನೋವು

ಕಣ್ಣಿನಲ್ಲಿ ನೋವು

ತಲೆನೋವು ತೀವ್ರವಾಗಿದ್ದಾಗ ಕಣ್ಣುಗುಡ್ಡೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ತೇಜಸ್ಸಿನೊಂದಿಗಿನ ಮೈಗ್ರೇನ್ ಆಗಿರುವ ಈ ವಿಧದಲ್ಲಿ ನೋವು ತೀವ್ರವಾದಾಗ ನೋಡುವ ದೃಶ್ಯದ ಕೇಂದ್ರಭಾಗ ಕಾಣೆಯಾಗಿಬಿಡುತ್ತದೆ. ಉದಾಹರಣೆಗೆ ಎದುರಿಗಿರುವ ವ್ಯಕ್ತಿಯ ಮುಖವನ್ನು ನೋಡುತ್ತಿದ್ದರೆ ಅವರ ಮುಖ ಮಾಯವಾಗಿ ಕೇವಲ ರುಂಡ ಮಾತ್ರ ಎದುರಿಗಿರುತ್ತದೆ. ಐದು ಬೆರಳುಗಳನ್ನು ಎದುರು ಹಿಡಿದು ಮಧ್ಯ ಬೆರಳಿನ ಮೇಲೆ ಕೇಂದ್ರೀಕರಿಸಿದರೆ ಮಧ್ಯಬೆರಳು ಮಾಯವಾಗಿರುತ್ತದೆ. ಅದೇ ಕಿರುಬೆರಳಿನ ಕಡೆ ನೋಡಿದರೆ ಮಾಯವಾಗಿದ್ದ ಮಧ್ಯಬೆರಳು ಪ್ರಕಟವಾಗಿ ಕಿರುಬೆರಳು ಮಾಯವಾಗುತ್ತದೆ. ಇದು ಮೈಗ್ರೇನ್ ತಲೆನೋವಿನ ಅತ್ಯುಗ್ರ ರೂಪವಾಗಿದೆ. ಈ ಸ್ಥಿತಿಯಲ್ಲಿದ್ದಾಗ ಹೊರಹೋಗುವುದು ಅಪಾಯಕಾರಿಯಾಗಿದೆ. ಡ್ರೈವಿಂಗ್ ಅಂತೂ ಸಾವಿಗೆ ಆಹ್ವಾನ ನೀಡುವುದಾಗಿದೆ. ಈ ಸ್ಥಿತಿಯಲ್ಲಿ ನೀವು ಒಂಟಿಯಾಗಿರುವ ಬದಲು ಒಬ್ಬರು ಜೊತೆಯಲ್ಲಿರುವುದು ಒಳ್ಳೆಯದು. ತಡಮಾಡದೇ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಕುತ್ತಿಗೆಯಲ್ಲಿ ನೋವು

ಕುತ್ತಿಗೆಯಲ್ಲಿ ನೋವು

ಕುತ್ತಿಗೆಯ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಸೆಟೆದಂತಿರುತ್ತದೆ. ಸಾಮಾನ್ಯವಾಗಿ ಮುಂದೆ ಬಗ್ಗಿದರೆ ನೋವು ಉಂಟಾದರೆ ಇಲ್ಲಿ ಅದು ಉಲ್ಟಾ. ಬಗ್ಗಿದಷ್ಟೂ ಕಡಿಮೆಯಿದ್ದು ನೇರವಾಗಿ ತಲೆ ಎತ್ತಿದಾಗ ನೋವು ಹೆಚ್ಚಾಗುತ್ತದೆ. ಇದು ಸಾಮಾನ್ಯವಾಗಿ ಮೈಗ್ರೇನ್ ನಿಮ್ಮನ್ನು ಆವರಿಸಿಕೊಳ್ಳುತ್ತಿದೆ ಎಂಬುವುದರ ಮುನ್ಸೂಚನೆಯಾಗಿದೆ. ತಡಮಾಡದೇ ವೈದ್ಯರನ್ನು ಭೇಟಿಯಾಗಿ.

ಹಲವಾರು ಬಾರಿ ಮೂತ್ರಕ್ಕೆ ಅವಸರವಾಗುತ್ತದೆ

ಹಲವಾರು ಬಾರಿ ಮೂತ್ರಕ್ಕೆ ಅವಸರವಾಗುತ್ತದೆ

ಒಂದು ವೇಳೆ ಪದೇ ಪದೇ ಮೂತ್ರಕ್ಕೆ ಅವಸರವಾಗುತ್ತಲೇ ಇದ್ದು ಮೂತ್ರದ ಪ್ರಮಾಣ ಚಿಕ್ಕದಾಗಿಯೇ ಇದ್ದರೆ ಇದು ಮ್ರೈಗ್ರೇನ್ ಬರುತ್ತಿದೆ ಎಚ್ಚರಿಕೆ ಎಂದು ದೇಹ ನೀಡುವ ಮುನ್ಸೂಚನೆಯಾಗಿದೆ.

ನಿದ್ದೆಯಿಲ್ಲದ ಆಕಳಿಕೆ

ನಿದ್ದೆಯಿಲ್ಲದ ಆಕಳಿಕೆ

ಕೆಲವೊಮ್ಮೆ ಯಾವುದೇ ಕಾರಣವಿಲ್ಲದಿದ್ದರೂ ಆಕಳಿಕೆ ಹಾಗೂ ತೂಕಡಿಕೆ ಆವರಿಸಿದರೆ ಇದು ಮೈಗ್ರೇನ್ ಬರುತ್ತಿರುವ ಲಕ್ಷಣವಾಗಿರಬಹುದು. ಹೆಚ್ಚಿನ ಪಕ್ಷ ಊಟವಾದ ಬಳಿಕ ಬರುವ ತೂಕಡಿಕೆಗೂ ಕಛೇರಿ, ಪಾಠದ ಸಮಯ ಮೊದಲಾದ ಅತ್ಯಂತ ಚಟುವಟಿಕೆಯಿಂದ ಹಾಗೂ ಏಕಾಗ್ರತೆಯಿಂದ ಇರಬೇಕಾದ ಸಮಯದಲ್ಲಿ ನಿದ್ದೆಯಿಲ್ಲದೇ ಬರುವ ತೂಕಡಿಕೆ ಹಾಗೂ ಆಕಳಿಕೆ ಮೈಗ್ರೇನ್ ನ ಮುನ್ಸೂಚನೆಯಾಗಿದೆ.

English summary

10 Symptoms Of Migraine

What’s a migraine? It is a pulsating headache that throbs one part of the head, and continues to stay on for a long time. You will find this kind of headache lasting for as long as days together. There are various causes contributing towards this issue, most common of all being a good amount of physical activity.
X
Desktop Bottom Promotion