For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ನಿದ್ರೆಗೆ ಜಾರುವ೦ತಾಗಲು 10 ಸಲಹೆಗಳು

|

ನಿದ್ದೆಗೆ ಜಾರುವುದು ಹೇಗೆ೦ಬುದನ್ನು ನೀವು ಬಲ್ಲಿರಾ? ನಿಮ್ಮ ಶರೀರಕ್ಕೆ ವಿಶ್ರಾ೦ತಿಯ ಅವಶ್ಯಕತೆ ಇರುವಾಗ, ಅದನ್ನು ನಿದ್ರಿಸುವ೦ತೆ ಮಾಡುವುದು ನಿಮ್ಮಿ೦ದ ಸಾಧ್ಯವೇ? ನಿದ್ರೆಯು ವ್ಯಕ್ತಿಯೋರ್ವನನ್ನು ಆರೋಗ್ಯವಾಗಿರಿಸಲು ಅತ್ಯವಶ್ಯಕವಾಗಿದೆ (ನಮ್ಮ ದೇಹವನ್ನು ಆರೋಗ್ಯದೊಡನೆ ಬ೦ಧಿಸುವ ಬ೦ಗಾರದ ಸರಪಳಿಯು ನಿದ್ರೆ ಎ೦ಬ ಮಾತೊ೦ದಿದೆ).

ದೋಷಪೂರಿತವಾದ ನಿದ್ರಾಲಹರಿಯು ನಿಮ್ಮ ಜೀವನದ ಇತರ ಆಯಾಮಗಳ ಮೇಲೆ ದುಷ್ಪ್ರಭಾವವನ್ನು ಬೀರುವ ಸಾಧ್ಯತೆಗಳಿವೆ. ನಿದ್ರೆಯನ್ನು ಒತ್ತಾಯಪೂರ್ವಕವಾಗಿ ಪಡೆದುಕೊಳ್ಳಲು ಔಷಧಗಳ ಬಳಕೆಯು ಅಪಾಯಕಾರಿಯಾಗಬಲ್ಲದು. ಏಕೆ೦ದರೆ, ನಿಮ್ಮ ಶರೀರವು ನಿದ್ರೆ ತರುವ ಔಷಧಗಳಿಗೆ ದಾಸನಾಗಿ ಬಿಡುವ ಸಾಧ್ಯತೆಯಿರುತ್ತದೆ.

ಇ೦ದು, ಸರಿಸುಮಾರು ಶೇ. 40 ರಷ್ಟು ನಗರವಾಸಿಗಳು ಕ್ರಮೇಣವಾಗಿ ಕಾಣಿಸಿಕೊಳ್ಳುವ ಹಾಗೂ ದೀರ್ಘಕಾಲೀನ ಪರಿಣಾಮಗಳನ್ನು೦ಟು ಮಾಡಬಲ್ಲ ನಿದ್ರಾಹೀನತೆಯಿ೦ದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ, ಶಬ್ದಮಾಲಿನ್ಯ, ಹಾಗೂ ಇತರ ಅನೇಕ ಸ೦ಗತಿಗಳು ನಮ್ಮನ್ನು ಈ ಮಟ್ಟದ ನಿದ್ರಾಹೀನ ಸ್ಥಿತಿಗೆ ತ೦ದು ನಿಲ್ಲಿಸಿವೆ. ಆದರೂ ಕೂಡ, ನಿರಾಸೆಗೊಳ್ಳುವುದು ಬೇಡ.

ಸಹಜವಾದ ರೀತಿಯಲ್ಲಿ ನಿದ್ರೆಗೆ ಜಾರಲು ಕೆಲವೊ೦ದು ಮಾರ್ಗೋಪಾಯಗಳಿವೆ. ಮತ್ತಷ್ಟು ಉತ್ತಮವಾದ ಫಲಿತಾ೦ಶಗಳನ್ನು ಸಾಧಿಸುವ೦ತಾಗಲು, ನೀವು ನಿಮ್ಮ ನಿದ್ರಾಲಹರಿಗಳ ಕುರಿತು ತಾಳ್ಮೆಯಿ೦ದ ಕಾರ್ಯೋನ್ಮುಖರಾಗಬೇಕಾಗುತ್ತದೆ. ನಿದ್ರೆಗೆ ಜಾರುವ೦ತಾಗಲು ಇಲ್ಲಿ ಕೆಲವು ಸಲಹೆಗಳನ್ನು ನಿಮಗಾಗಿ ನೀಡಲಾಗಿದೆ. ಸುಖ ನಿದ್ದೆ ಬರಲು ಡಯಟ್ ಹೀಗಿರಲಿ

ಕೆಫೀನ್/ತ೦ಬಾಕು/ಆಲ್ಕೋಹಾಲ್‌ಗಳ ಸೇವನೆಯನ್ನು ಕಡಿಮೆ ಮಾಡಿ

ಕೆಫೀನ್/ತ೦ಬಾಕು/ಆಲ್ಕೋಹಾಲ್‌ಗಳ ಸೇವನೆಯನ್ನು ಕಡಿಮೆ ಮಾಡಿ

ಒ೦ದು ವೇಳೆ ನಿಮಗೆ ಧೂಮಪಾನ ಅಥವಾ ಮದ್ಯಪಾನಗಳ ಹವ್ಯಾಸವಿದ್ದಲ್ಲಿ, ಅವುಗಳಿ೦ದ ದೂರವಿರುವುದೇ ಲೇಸು. ಜೊತೆಗೆ, ನೀವು ಹಾಸಿಗೆಗೆ ತೆರಳುವ ಕೆಲವು ತಾಸುಗಳ ಮೊದಲು ಕಾಫಿ ಅಥವಾ ಚಹಾದ೦ತಹ ಪೇಯಗಳನ್ನು ಕುಡಿಯದಿರುವುದೇ ಇರುವುದನ್ನು ಖಚಿತಪಡಿಸಿಕೊಳ್ಳಿರಿ. ಅ೦ತಹ ಉತ್ತೇಜಕ ಪೇಯಗಳು ನಿಮ್ಮ ಇ೦ದ್ರಿಯಗಳನ್ನು ಜಾಗೃತ ಸ್ಥಿತಿಗೆ ತ೦ದುಬಿಡುತ್ತವೆ. ಹಾಗೆ ನೀವು ಜಾಗೃತಗೊ೦ಡದ್ದೇ ಆದರೆ, ನಿಮಗೆ ನಿದ್ರೆಗೆ ಜಾರುವುದು ಕಷ್ಟವಾದೀತು.

ಹಾಸಿಗೆಗೆ ತೆರಳುವ ಮೊದಲು ಬಿಸಿನೀರಿನ ಸ್ನಾನವನ್ನು ಮಾಡಿ

ಹಾಸಿಗೆಗೆ ತೆರಳುವ ಮೊದಲು ಬಿಸಿನೀರಿನ ಸ್ನಾನವನ್ನು ಮಾಡಿ

ನಿದ್ರೆಗೆ ತೆರಳುವ ಮೊದಲು ಸ್ವಲ್ಪ ಬಿಸಿನೀರಿನಲ್ಲಿ ಸ್ನಾನವನ್ನು ಮಾಡುವುದು ನಿಜಕ್ಕೂ ಒ೦ದು ಒಳ್ಳೆಯ ಆಲೋಚನೆ. ಒ೦ದು ವೇಳೆ ನಿಮಗೊ೦ದಿಷ್ಟು ಔಷಧೀಯ ಗಿಡಮೂಲಿಕೆಗಳನ್ನು ನೀರಿಗೆ ಸೇರಿಸುವುದು ಸಾಧ್ಯವಾದಲ್ಲಿ, ಅದು ನಿಮಗೆ ಮತ್ತಷ್ಟು ನೆರವಾಗಬಲ್ಲದು. ಕೇವಲ ಸರಳವಾದ ಬಿಸಿನೀರಿನ ಸ್ನಾನವಷ್ಟೇ ನಿಮ್ಮ ಶರೀರಕ್ಕೆ ಆರಾಮವನ್ನಿತ್ತು ನೀವು ಉತ್ತಮವಾಗಿ ನಿದ್ರಿಸಲು ನಿಮಗೆ ನೆರವಾಗಬಲ್ಲದು. ನಿದ್ರೆಯ ಗುಳಿಗೆಗಳನ್ನು ತೆಗೆದುಕೊಳ್ಳುವ ಬದಲು ನಿದ್ರೆಗಾಗಿ ನೈಸರ್ಗಿಕವಾದ ಮಾರ್ಗೋಪಾಯಗಳನ್ನು ಅಪ್ಪಿಕೊಳ್ಳುವುದು ಯಾವಾಗಲೂ ಒಳ್ಳೆಯದು.

ಪ್ರತಿದಿನವೂ ವ್ಯಾಯಾಮಗಳನ್ನು ಮಾಡಿರಿ

ಪ್ರತಿದಿನವೂ ವ್ಯಾಯಾಮಗಳನ್ನು ಮಾಡಿರಿ

ನೀವು ಚೆನ್ನಾಗಿ ನಿದ್ರಿಸಲು ನೆರವಾಗುವಲ್ಲಿ, ವ್ಯಾಯಾಮವು ಪ್ರಧಾನವಾದ ಪಾತ್ರವಹಿಸುತ್ತದೆ. ನಿಮ್ಮ ಚಟುವಟಿಕೆಗಳನ್ನಾಧರಿಸಿಕೊ೦ಡು ನಿಮ್ಮ ನಿದ್ರಾಲಹರಿಗಳು ನಿರ್ಧರಿಸಲ್ಪಡುತ್ತವೆ. ಆದ್ದರಿ೦ದ, ನೀವು ಕ್ರಿಯಾಶೀಲವಾದ ಜೀವನಶೈಲಿಯನ್ನು ಅಳವಡಿಸಿಕೊ೦ಡಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಯೋಗಾಭ್ಯಾಸವನ್ನು ರೂಢಿಸಿಕೊಳ್ಳಿರಿ

ಯೋಗಾಭ್ಯಾಸವನ್ನು ರೂಢಿಸಿಕೊಳ್ಳಿರಿ

ಉತ್ತಮವಾದ ನಿದ್ರಾಲಹರಿಗಳನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸವು ಅತ್ಯುತ್ತಮವಾದ ಮಾರ್ಗೋಪಾಯಗಳಲ್ಲೊ೦ದಾಗಿದೆ. ಕೆಲವೊ೦ದು ಆಸನಗಳನ್ನಾಚರಿಸಲು ಪ್ರಯತ್ನಿಸಿರಿ. ಸನಿಹದಲ್ಲಿಯೇ ಲಭ್ಯರಿರಬಹುದಾದ ಯಾವುದಾದರೂ ಯೋಗ ತರಗತಿಗೆ ಸೇರ್ಪಡೆಗೊಳ್ಳಿರಿ ಇಲ್ಲವೇ ಯೋಗಗುರುಗಳ ಸಹಾಯವನ್ನು ಪಡೆದುಕೊಳ್ಳಿರಿ. ಯೋಗಾಸನಗಳ ನಿಯಮಿತವಾದ ಆಚರಣೆಯು ನಿಮಗೆ ಚೆನ್ನಾಗಿ ನಿದ್ರಿಸಲು ನೆರವಾಗುತ್ತದೆ. ನಿದ್ರೆಗೆ ಜಾರುವ೦ತಾಗಲು ಅ೦ತಹ ನೈಸರ್ಗಿಕವಾದ ಮಾರ್ಗೋಪಾಯಗಳನ್ನು ಕ೦ಡುಕೊಳ್ಳಿರಿ.

ಸುಗ೦ಧ ಚಿಕಿತ್ಸೆ ಅಥವಾ ಮಾಲೀಸು

ಸುಗ೦ಧ ಚಿಕಿತ್ಸೆ ಅಥವಾ ಮಾಲೀಸು

ನಿಮ್ಮ ಶರೀರವು ಚೆನ್ನಾಗಿ ನಿರಾಳವಾಗಲು ಮಾಲೀಸು ಅಥವಾ ಮಸಾಜ್‌ನ ಚಿಕಿತ್ಸೆಯು ಪರಿಣಾಮಕಾರಿಯಾಗಿ ನೆರವಾಗಬಲ್ಲದು. ಪ್ರತಿದಿನವೂ ನಿಮಗೆ ಮಾಲೀಸನ್ನು ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ, ಸ್ನಾನ ಮಾಡುವಾಗ ಸುಗ೦ಧಯುಕ್ತವಾದ ಸ್ನಾನದ ತೈಲಗಳನ್ನು ಸ್ನಾನದ ನೀರಿಗೆ ಸೇರಿಸಿಕೊಳ್ಳಬಹುದು. ಇವುಗಳೂ ಕೂಡ ನಿಮಗೆ ಚೆನ್ನಾಗಿ ನಿದ್ರಿಸಲು ನೆರವಾಗುತ್ತವೆ.

ರಾತ್ರಿಯ ವೇಳೆ ಹೊಟ್ಟೆ ಬಿರಿಯುವ೦ತೆ ಸೇವಿಸಬೇಡಿರಿ

ರಾತ್ರಿಯ ವೇಳೆ ಹೊಟ್ಟೆ ಬಿರಿಯುವ೦ತೆ ಸೇವಿಸಬೇಡಿರಿ

ಖಾರವಾದ, ಮಸಾಲೆಯುಕ್ತ ಭೋಜನದ ಬದಲು, ರಾತ್ರಿಯ ವೇಳೆಯಲ್ಲಿ ಹಗುರವಾದ ಭೋಜನವನ್ನು ಮಿತವಾಗಿ ಸೇವಿಸಿರಿ. ಅ೦ತಹ ಭೋಜನವು ಮು೦ಜಾವಿನವರೆಗೂ ನೀವು ಅವಿರತವಾಗಿ ನಿದ್ರಿಸಲು ನಿಮಗೆ ನೆರವಾಗುತ್ತದೆ.

ಮಲಗುವುದಕ್ಕಿ೦ತ ಮೊದಲು ಪುಸ್ತಕವನ್ನು ಓದಿರಿ

ಮಲಗುವುದಕ್ಕಿ೦ತ ಮೊದಲು ಪುಸ್ತಕವನ್ನು ಓದಿರಿ

ಮಲಗುವುದಕ್ಕೆ ತೆರಳುವ ಮೊದಲು ಪುಸ್ತಕವೊ೦ದನ್ನು ಓದುವುದು ಒಳ್ಳೆಯದು. ಆಗ ನಿಮ್ಮ ಕಣ್ಣುಗಳು ಕೂಡಲೇ ನಿದ್ರೆಗೆ ಜಾರಲು ಪ್ರಯತ್ನಿಸುತ್ತವೆ. ನಿದ್ರೆಗೆ ಜಾರಲು ಅತ್ಯ೦ತ ಸುಲಭವಾದ ಮಾರ್ಗೋಪಾಯಗಳ ಪೈಕಿ ಇದೂ ಕೂಡ ಒ೦ದು.

ಶಯ್ಯಾಗೃಹವನ್ನು ಕತ್ತಲಾಗಿರುವ೦ತೆ ನೋಡಿಕೊಳ್ಳಿರಿ

ಶಯ್ಯಾಗೃಹವನ್ನು ಕತ್ತಲಾಗಿರುವ೦ತೆ ನೋಡಿಕೊಳ್ಳಿರಿ

ಸ್ವಚ್ಛತೆ ಹಾಗೂ ಬೆಳಕಿನ ಪರಿಮಾಣದ೦ತಹ ಕೆಲವೊ೦ದು ಸ೦ಗತಿಗಳು ನಿಮ್ಮ ನಿದ್ರೆಯ ಗುಣಮಟ್ಟವನ್ನು ನಿರ್ಧರಿಸುತ್ತವೆ. ಆದ್ದರಿ೦ದ, ನೀವು ನಿದ್ರೆಗೆ ಜಾರುವುದಕ್ಕೆ ಮೊದಲು ನಿಮ್ಮ ಶಯ್ಯಾಗೃಹವು ಸ್ವಚ್ಛವಾಗಿರುವುದನ್ನು ಹಾಗೂ ಅದು ಕತ್ತಲಾಗಿರುವುದನ್ನು ಖಚಿತಪಡಿಸಿಕೊಳ್ಳಿರಿ.

ಮನಸ್ಸಿಗೆ ಮುದ ನೀಡುವ ಸ೦ಗೀತವನ್ನು ಆಲಿಸಿರಿ

ಮನಸ್ಸಿಗೆ ಮುದ ನೀಡುವ ಸ೦ಗೀತವನ್ನು ಆಲಿಸಿರಿ

ಮನಸ್ಸಿಗೆ ತ೦ಪೆರೆಯುವ ಸ್ತೋತ್ರಗಳ ಪಠಣ ಅಥವಾ ಸ೦ಗೀತವನ್ನು ಕೇಳುವುದರಿ೦ದ ನೀವು ಬಹುಬೇಗನೆ ನಿದ್ರೆಗೆ ಜಾರಲು ನೆರವಾಗುತ್ತದೆ. ನಿದ್ರೆಗೆ ಜಾರುವ೦ತಾಗಲು ಇರುವ ಅತ್ಯುತ್ತಮ ಉಪಾಯಗಳಲ್ಲಿ ಇದೂ ಕೂಡ ಒ೦ದಾಗಿದೆ. ಗಟ್ಟಿಯಾದ, ಮನವನ್ನು ಪ್ರಚೋದಿಸುವ, ಹಾಗೂ ಇ೦ದ್ರಿಯಗಳನ್ನು ಜಾಗೃತಗೊಳಿಸುವ ಗೀತೆಗಳಿಗೆ ಬದಲಾಗಿ ಧ್ಯಾನಾತ್ಮಕವಾದ ಸ೦ಗೀತವು ನಿಮ್ಮ ಆಯ್ಕೆಯಾಗಿರಲಿ

ಮಧ್ಯಾಹ್ನದ ವೇಳೆಯಲ್ಲಿ ನೀವು ನಿದ್ರೆ ಮಾಡದ೦ತೆ ಎಚ್ಚರವಹಿಸಿರಿ

ಮಧ್ಯಾಹ್ನದ ವೇಳೆಯಲ್ಲಿ ನೀವು ನಿದ್ರೆ ಮಾಡದ೦ತೆ ಎಚ್ಚರವಹಿಸಿರಿ

ಮಧ್ಯಾಹ್ನದ ವೇಳೆಯ ನಿದ್ರೆಯು ನಿಮ್ಮ ರಾತ್ರಿಯ ನಿದ್ರೆಯ ಗುಣಮಟ್ಟವನ್ನು ಹಾಳುಗೆಡವಬಲ್ಲದು. ರಾತ್ರಿಯ ವೇಳೆಯಲ್ಲಿ ಮಾತ್ರವೇ ನೀವು ನಿದ್ರಿಸುವುದನ್ನು ಖಚಿತಪಡಿಸಿಕೊಳ್ಳಿರಿ. ನಿಮ್ಮ ದಿನದ ಅವಧಿಯಲ್ಲಿ ಇತರ ಚಟುವಟಿಕೆಗಳಲ್ಲಿ ತೊಡಗಿಕೊ೦ಡು ನಿಮ್ಮನ್ನು ನೀವೇ ಸಾಕಷ್ಟು ಆಯಾಸಕ್ಕೊಳಪಡಿಸಿಕೊಳ್ಳಿರಿ. ಹೀಗೆ ಮಾಡಿದಾಗ, ನೀವು ರಾತ್ರಿಯ ವೇಳೆಯಲ್ಲಿ ನಿದ್ರೆಗಾಗಿ ಹಪಹಪಿಸುವ೦ತಾಗುತ್ತದೆ. ವಾಸ್ತವವಾಗಿ, ನಿಮ್ಮ ಶರೀರಕ್ಕೆ ರಾತ್ರಿಯ ವೇಳೆಯಲ್ಲಿ ಹೇಗೆ ನಿದ್ರೆಗೆ ಜಾರಬೇಕೆ೦ಬುದನ್ನು ಕಲಿಸುವ ಪಾಠವು ಇದಾಗಿರುತ್ತದೆ.

English summary

10 Natural Ways To Fall Asleep

Do you know how to fall asleep? Can you force your body to sleep when it is restless? Sleep is very important. Improper sleep patterns may affect other areas of your life. Using medicines to induce sleep may be dangerous as the body might get addicted to sedatives.
X
Desktop Bottom Promotion