For Quick Alerts
ALLOW NOTIFICATIONS  
For Daily Alerts

ಇನ್ನು ಶೀತ, ಗಂಟಲು ಕೆರೆತಕ್ಕೆ ಗುಡ್ ಬೈ ಹೇಳಿ!

|

ಮಳೆಗಾಲದ ಅವಧಿಯಲ್ಲಿ ನೆಗಡಿ ಹಾಗೂ ಕೆಮ್ಮುಗಳು ತೀರ ಸಾಮಾನ್ಯವಾದ ತೊ೦ದರೆಗಳಾಗಿವೆ. ಹವಾಮಾನದಲ್ಲಾಗುವ ಬದಲಾವಣೆಯು ಎಲ್ಲರ ಮೇಲೂ ಕೂಡ ತನ್ನ ಪ್ರಭಾವವನ್ನು ಬೀರುತ್ತದೆ. ಇ೦ತಹ ಹವಾಮಾನ ವೈಪರೀತ್ಯಗಳಿರುವ ಸ೦ದರ್ಭಗಳಲ್ಲಿ ಕೈಗೊಳ್ಳಬೇಕಾದ೦ತಹ ಅತ್ಯುತ್ತಮವಾದ ಕ್ರಮವೆ೦ದರೆ, ಈ ರೋಗಗಳ ವಿರುದ್ಧ ಪ್ರತಿಬ೦ಧನಾತ್ಮಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊ೦ಡು ಅವು ಬಾರದ೦ತೆ ತಡೆಗಟ್ಟುವುದು.

ಮಳೆಗಾಲದ ತಿ೦ಗಳುಗಳ ಪ್ರಮುಖ ಖಳನಾಯಕನಾದ ನೆಗಡಿಯ ವಿರುದ್ಧ ಹೋರಾಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಗಮನಹರಿಸುವುದೇ ನಮ್ಮ ಆದ್ಯ ಕರ್ತವ್ಯಗಳಲ್ಲೊ೦ದಾಗಿದೆ. ನೆಗಡಿ ಮತ್ತು ಕೆಮ್ಮು ಜನರನ್ನು ತೀರಾ ಸಾಮಾನ್ಯವಾಗಿ ಕಾಡುವ ಮಳೆಗಾಲದ ರೋಗಗಳಾಗಿವೆ.

ಸಾಮಾನ್ಯ ಶೀತಕ್ಕೆ ಹೇಳಿ ಗುಡ್ ಬೈ!

ಖ೦ಡಿತವಾಗಿಯೂ ಈ ಶೀತವು "ಸಾಮಾನ್ಯ ನೆಗಡಿ" ಎ೦ದೇ ಗುರುತಿಸಲ್ಪಟ್ಟಿದೆ. ಆದಾಗ್ಯೂ, ಇದರ ಕುರಿತು ಎಚ್ಚರವಹಿಸದೇ ಹೋದರೆ, ಈ ಸಾಮಾನ್ಯವಾದ ನೆಗಡಿಯು ಉಲ್ಬಣಗೊ೦ಡು ಪರಿಸ್ಥಿತಿಯನ್ನು ಪತ್ತಷ್ಟು ಬಿಗಡಾಯಿಸುತ್ತದೆ. ಇದಕ್ಕಿರುವ ಪರಿಹಾರವೆಂದರೆ, ಒಂದೋ ಇದನ್ನು ಬಾರದಂತೆ ತಡೆಗಟ್ಟುವುದು, ಇಲ್ಲವೇ ಇದನ್ನು ಮೊಳಕೆಯಲ್ಲಿಯೇ ಚಿವುಟಿ ತೆಗೆಯುವುದು. ಓರ್ವ ವ್ಯಕ್ತಿಯ ಆರೋಗ್ಯ ವಿಚಾರದಲ್ಲಿ ಆತನು ತೆಗೆದುಕೊಳ್ಳುವ ಅಹಾರವು ಮಹತ್ವದ ಪಾತ್ರವಹಿಸುತ್ತದೆ.

ಅದ್ದರಿಂದ, ಮಳೆಗಾಲದಲ್ಲಿ ನೆಗಡಿಯನ್ನು ತಡೆಗಟ್ಟಲು ನೆರವಾಗುವ ಆಹಾರವಸ್ತುಗಳು ನಮ್ಮ ದಿನನಿತ್ಯದ ಅಹಾರಕ್ರಮದ ಭಾಗವಾಗಿರುವಂತೆ ನೋಡಿಕೊಳ್ಳಬೇಕು. ಆದರ್ಶಪ್ರಾಯವಾದ ವಿಚಾರವೇನೆಂದರೆ, ವ್ಯಕ್ತಿಯೋರ್ವನು ಸತ್ವಯುತವಾದ ಹಾಗೂ ಆರೋಗ್ಯಕರವಾದ ಆಹಾರಕ್ರಮ ಮತ್ತು ಜೀವನಶೈಲಿಯನ್ನು ಪಾಲಿಸುವುದರ ಮೂಲಕ ಅನೇಕ ರೋಗಗಳನ್ನು ದೂರವಿರಿಸಿಕೊಳ್ಳಬಹುದು.

ಅಡುಗೆಯನ್ನು ತಯಾರಿಸುವ ನಮ್ಮ ಸಾಂಪ್ರದಾಯಿಕ ವಿಧಾನಗಳು ಬದಲಾವಣೆಗಳಿಗೆ ಒಳಪಡುತ್ತಿದ್ದು, ಇವುಗಳ ಪರಿಣಾಮವನ್ನು ನಾನಾ ರೂಪಗಳಲ್ಲಿoದು ನಾವು ಕಾಣುವಂತಾಗಿದೆ. ನಮ್ಮ ಅಜ್ಜ ಅಜ್ಜಿಯಂದಿರ ಕಾಲದ ಆರೋಗ್ಯದಾಯಕ ಪಾಕಪುಸ್ತಕದೆಡೆಗೆ ಕಣ್ಣುಹಾಯಿಸಲು ಇದು ಸಕಾಲ. ನೆಗಡಿಯ ವಿರುದ್ಧದ ಹೋರಾಟದ ಮಾರ್ಗವನ್ನು ನೀವು ಅರಸುತ್ತಿದ್ದೀರೆಂದಾರೆ, ಈ ಕೆಳಗೆ ನೀಡಲಾಗಿರುವ ಆಹಾರವಸ್ತುಗಳ ಬಗ್ಗೆ ಅಗತ್ಯವಾಗಿ ಗಮನ ನೀಡಿರಿ.

ಶೀತದಿಂದಾಗಿ ಮೂಗು ಕಟ್ಟಿದರೆ ಈ ರೀತಿ ಮಾಡಿ

ಅರಿಶಿನ

ಅರಿಶಿನ

ತಲೆತಲಾಂತರದಿಂದಲೂ ಕೂಡ ಅರಿಶಿನವು ಭಾರತೀಯ ಅಡುಗೆಯ ಒಂದು ಅವಿಭಾಜ್ಯ ಅಂಗವಾಗಿದೆ. ಇದಕ್ಕೆ ಕಾರಣವು ಇಲ್ಲದ್ದಿಲ್ಲ. ಈ ಚಮತ್ಕಾರಿಕ ಗಿಡಮೂಲಿಕೆಯು ಒಂದು ಅತ್ಯುತ್ತಮವಾದ ನಂಜುನಿರೋಧಕವಾಗಿದ್ದು, ಇದು ಕಡಿಮೆ ಕುದಿಯುವ ಬಿಂದುವುಳ್ಳ ತೈಲಗಳನ್ನು ಯಥೇಚ್ಚವಾಗಿ ಒಳಗೊಂಡಿದೆ. ಅರಿಶಿನದ ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಲು ನಿಮ್ಮ ಎಲ್ಲಾ ಆಹಾರ ಪದಾರ್ಥಗಳಲ್ಲಿಯೂ ಅದನ್ನು ಪ್ರತಿನಿತ್ಯವೂ ಸೇರಿಸಿರಿ. ನೀವೊಂದು ವೇಳೆ ಗಂಟಲ ಕೆರೆತದ ತೊಂದರೆಯಿಂದ ಬಳಲುತ್ತಿದ್ದರೆ, ಅರಿಶಿನ ಬೆರೆಸಿದ ಹಾಲು ಅಥವಾ ಅರಿಶಿನ ಬೆರೆಸಿದ ಚಹಾವನ್ನು ಕುಡಿಯಿರಿ.

ತುಳಸಿ

ತುಳಸಿ

ಹೆಚ್ಚು ಕಡಿಮೆ ಪ್ರತಿಯೋರ್ವ ಭಾರತೀಯನ ಮನೆಯಲ್ಲಿಯೂ ಸಹ ತುಳಸಿಯ ಗಿಡವೊoದಿರುತ್ತದೆ. ತುಳಸಿಯ ಹಲವು ಆರೋಗ್ಯ ಸoಬoಧೀ ಪ್ರಯೋಜನಗಳ ಪೈಕಿ, ಸಾಮಾನ್ಯವಾದ ನೆಗಡಿಯನ್ನು ತಡೆಗಟ್ಟುವ ಮತ್ತು ಗುಣಪಡಿಸುವ ಪರಿಣಾಮಕಾರೀ ಪ್ರಯೋಜನವೂ ಒಂದು. ಅರಿಶಿನವು ರೋಗನಿರೋಧಕ ಶಕ್ತಿಯನ್ನು ನಿಯಮಿತಗೊಳಿಸಿ ಕಫವನ್ನು ನಿವಾರಿಸುತ್ತದೆ. ಅರಿಶಿನದ ಸೂಕ್ಷ್ಮಾಣು ಪ್ರತಿಬಂಧಕ ಹಾಗೂ ಫಂಗಸ್ ವಿರೋಧಿ ಗುಣಗಳು, ಶ್ವಾಸಕಾಂಗವ್ಯೂಹದ ಸೋಂಕು ರೋಗಗಳನ್ನು ಹೊಡೆದೋಡಿಸಲು ನೆರವಾಗುತ್ತವೆ.

ಶುoಠಿ

ಶುoಠಿ

ಇದು ಮತ್ತೊಂದು ಚಮತ್ಕಾರಿಕ ಅಹಾರಪದಾರ್ಥವಾಗಿದೆ. ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ, ಪುಡಿಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುoಠಿಯನ್ನು ಪ್ರತಿಯೊಂದು ತರಕಾರಿ ಪದಾರ್ಥದೊoದಿಗೂ ಸೇರಿಸಿಕೊಳ್ಳಿರಿ. ಶುಂಠಿಯು ಕೇವಲ ಕಟುವಾದ ರುಚಿಯನ್ನು ಹೊಂದಿರುವುದು ಮಾತ್ರವೇ ಅಲ್ಲ, ಜೊತೆಗೆ, ಅದು ನೆಗಡಿಯ ವಿರುದ್ಧ ಹೋರಾಡಲೂ ಸಹ ನೆರವಾಗುತ್ತದೆ. ನಿಮ್ಮ ಚಹಾದ ನೀರಿನೊದಿಗೆ ಶುoಠಿಯನ್ನು ಹಾಕಿ ಕುದಿಸಿ ಶುoಠಿ ಸ್ವಾದದ ಚಹಾದ ಆನಂದವನ್ನು ಅನುಭವಿಸಿರಿ. ಇದು ಗಂಟಲ ಕೆರೆತವನ್ನು ಉಪಶಮನಗೊಳಿಸುತ್ತದೆ ಹಾಗೂ ನೆಗಡಿಗೆ ಕಾರಣವಾದ ವೈರಾಣುಗಳನ್ನು ಬೆನ್ನಟ್ಟಿ ಓಡಿಸುತ್ತದೆ.

ಜೇನು

ಜೇನು

ತನ್ನ ಶುದ್ಧರೂಪದಲ್ಲಿ ಜೇನು ಅಗಣಿತವಾದ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ. ನೆಗಡಿಯ ವಿರುದ್ಧ ಹೋರಾಡುವ ಆಹಾರವಸ್ತುಗಳ ಪೈಕಿ ಜೇನು ಅರ್ಹತೆಯನ್ನು ಗಳಿಸಿಕೊಂಡಿದೆ. ಇದರಲ್ಲಿರುವ ನಂಜುಪ್ರತಿಬಂಧಕ, ಸೂಕ್ಷ್ಮಾಣುಪ್ರತಿಬಂಧಕ, ಹಾಗೂ ಆಂಟಿ ಆಕ್ಸಿಡೆಂಟ್ ಗುಣಧರ್ಮಗಳು ವೈರಾಣುಗಳು, ಸೂಕ್ಷ್ಮಾಣುಗಳು, ಹಾಗೂ ಫಂಗಸ್ ಗಳ ವಿರುದ್ಧ ಹೋರಾಡಲು ನೆರವಾಗುತ್ತವೆ.

ಕಾಳುಮೆಣಸು

ಕಾಳುಮೆಣಸು

ಇದು ಅತಿಯಾಗಿ ಖಾರವಾಗಿದ್ದು, ಗಂಟಲು ಉರಿಯುವ ಅನುಭವವನ್ನು ಉಂಟು ಮಾಡಿ, ನೀವು ಬಹಳ ಕೆಟ್ಟದಾಗಿ ಸೀನುವoತೆ ಮಾಡಿದರೂ ಸಹ, ಇದರಲ್ಲಿರುವ ತೈಲಾoಶವು ನೆಗಡಿ, ಕೆಮ್ಮು, ಜ್ವರ, ಹಾಗೂ ನೋವಿನಿಂದ ಬಿಡುಗಡೆಯನ್ನು ನೀಡಬಲ್ಲದು. ಕಾರಣ, ಕಾಳುಮೆಣಸಿನಲ್ಲಿ piperine ಎಂಬ ಬಹು ಪರಿಣಾಮಕಾರಿಯಾದ ರಾಸಾಯನಿಕ ವಸ್ತುವಿದೆ.

ಸಿಟ್ರಸ್ ಹಣ್ಣುಗಳು

ಸಿಟ್ರಸ್ ಹಣ್ಣುಗಳು

ಅದು ಕಿತ್ತಳೆ ಹಣ್ಣೇ ಆಗಿರಲಿ, ಅಥವಾ ಲಿಂಬೆ ಹಣ್ಣೇ ಆಗಿರಲಿ, ಎಲ್ಲಾ ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳು ಅನ್ನಾಂಗ C ನಿಂದ ಸಮೃದ್ಧವಾಗಿದ್ದು, ಈ ಅನ್ನಾoಗವು ನೆಗಡಿಯನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಬೆಳ್ಳುಳ್ಳಿಗಳ ನಿಯಮಿತವಾದ ಸೇವನೆಯು ನೆಗಡಿಯನ್ನು ದೂರವಿಡುತ್ತದೆ ಎಂದು ಸoಶೋಧನೆಗಳಿಂದ ಕಂಡುಬಂದಿದೆ. ಬೆಳ್ಳುಳ್ಳಿ ಅಗಾಧ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್ ಗಳನ್ನು ಒಳಗೊಂಡಿದ್ದು ಈ ಕಾರಣಕ್ಕಾಗಿ, ಇದು ನೆಗಡಿಯ ವಿರುದ್ಧ ಹೋರಾಡುವ ಅತ್ಯುತ್ತಮವಾದ ಆಹಾರವಸ್ತುವಾಗಿದೆ. ಇದನ್ನು ಹಸಿಯಾಗಿಯೇ ತಿನ್ನಬಹುದಾದರೂ ಸಹ, ಇದರ ಕಟುವಾಸನೆಯ ಕಾರಣಕ್ಕಾಗಿ ಇದನ್ನು ಹಾಗೆಯೇ ತಿನ್ನಲು ಜನರು ಹಿಂದೇಟು ಹಾಕುತ್ತಾರೆ. ಅದ್ದರಿಂದ, ಅದರ ಬದಲಿಗೆ, ನೀವು ಅಡುಗೆಯ ವೇಳೆ ಇದನ್ನು ಹಲವಾರು ಆಹಾರಪದಾರ್ಥಗಳೊoದಿಗೆ ಸೇರಿಸಿಕೊಳ್ಳಬಹುದು.

ಕೆಂಬಣ್ಣದ ದ್ರಾಕ್ಷಿ ರಸ

ಕೆಂಬಣ್ಣದ ದ್ರಾಕ್ಷಿ ರಸ

ಕೆಂಬಣ್ಣದ ದ್ರಾಕ್ಷಿ ರಸವು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ನಮಗೀಗಾಗಲೇ ತಿಳಿದಿದೆಯಷ್ಟೇ. ಆದರೆ, ಇದರ ಪ್ರಯೋಜನಗಳು ಇಲ್ಲಿಗೇ ನಿಲ್ಲುವುದಿಲ್ಲ. ನೆಗಡಿಯ ವಿರುದ್ಧ ಹೋರಾಡಲು ಕೆಂಬಣ್ಣದ ದ್ರಾಕ್ಷಾರಸವು ಅತ್ಯುತ್ತಮ ಸಾಧನವಾಗಿದೆ. ಇದನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಇದು ನೆಗಡಿ ಮತ್ತು ಫ್ಲೂ ಗಳ ವೈರಾಣುಗಳು ಶರೀರದಲ್ಲಿ ಹೆಚ್ಚಳವಾಗುವುದನ್ನು ತಡೆಯುತ್ತದೆ.

ಕಿವಿ ಹಣ್ಣು

ಕಿವಿ ಹಣ್ಣು

ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳು ಅನ್ನಾಂಗ C ಯ ಉಗ್ರಾಣವೆಂದು ಹೇಳಿದಿರಾ? ನಿಮ್ಮ ಅಭಿಪ್ರಾಯವನ್ನು ಮರುಪರಿಶೀಲಿಸಿ. ಕಿವಿ ಹಣ್ಣಿಲ್ಲಿರುವ ವಿಟಮಿನ್ ಸಿಯ ಪ್ರಮಾಣವು ಎಲ್ಲಾ ಸಿಟ್ರಸ್ ಹಣ್ಣುಗಳಲ್ಲಿರುವುದಕ್ಕಿಂತಲೂ ಅನೇಕ ಪಟ್ಟು ಅಧಿಕವಾಗಿದೆ. ಕಿವಿ ಹಣ್ಣಿನ ಈ ಗುಣಧರ್ಮವು ಅದನ್ನು ನೆಗಡಿಯ ವಿರುದ್ಧದ ಹೋರಾಟದ ಅತ್ಯುತ್ತಮ ಫಲವನ್ನಾಗಿಸುತ್ತದೆ.

ಅಣಬೆ

ಅಣಬೆ

ಅಣಬೆಗಳು ಪೊಟ್ಯಾಸಿಯo, ವಿಟಮಿನ್ ಬಿ, ಹಾಗೂ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವ ವೈರಾಣುಗಳಿಂದ ಸಂಪನ್ನವಾಗಿದೆ. ಅರೋಗ್ಯಶಾಲಿಯಾದ ಶರೀರವನ್ನು ಕಾಪಾಡಿಕೊಳ್ಳಲು ಇವೆಲ್ಲವೂ ಅತೀ ಅವಶ್ಯವಾಗಿ ಬೇಕಾಗುತ್ತವೆ.

English summary

10 Foods To Fight Cold In The Rains

Colds and coughs are common illnesses during monsoon. Be it children or adults, all are affected by the change in weather. In such conditions, the best course to take would be to work towards prevention of illnesses.When you go looking for ways to fight cold, do give due consideration to the following foods:
Story first published: Wednesday, September 17, 2014, 17:04 [IST]
X
Desktop Bottom Promotion