For Quick Alerts
ALLOW NOTIFICATIONS  
For Daily Alerts

ವಿಟಮಿನ್ ಎ ಕೊರತೆ ನೀಗಿಸುವ ಆಹಾರಗಳಿವು

|

ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕ. ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಅತ್ಯವಶ್ಯಕ, ತ್ವಚೆಯ ಆರೋಗ್ಯಕ್ಕೆ ಹಾಗೂ ದೇಹದಲ್ಲಿ ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸುವಲ್ಲಿ ವಿಟಮಿನ್ ಸಿ, ವಿಟಮಿನ್ ಇ, ಮೂಳೆಗಳ ಆರೋಗ್ಯಕ್ಕೆ ವಿಟಮಿನ್ ಡಿ ಹೀಗೆ ಪ್ರತಿಯೊಂದು ವಿಟಮಿನ್ ಅವಶ್ಯಕ. ಈ ವಿಟಮಿನ್ ಗಳಲ್ಲಿ ಯಾವುದಾದರೂ ಒಂದು ವಿಟಮಿನ್ ನ ಕೊರತೆ ಉಂಟಾದರೂ ಅನಾರೋಗ್ಯ ಉಂಟಾಗುವುದು.

ಈ ವಿಟಮಿನ್ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಇವುಗಳನ್ನು ಆಹಾರದ ಮುಖಾಂತರ, ಮಾತ್ರೆಯ ಮುಖಾಂತರ ತೆಗೆದುಕೊಳ್ಳಬೇಕು. ಅದರಲ್ಲಿ ವಿಟಮಿನ್ ಡಿ ಆಹಾರ ಪದಾರ್ಥಗಳಲ್ಲಿ ದೊರೆಯುವುದು ತುಂಬಾ ವಿರಳ, ಇದನ್ನು ನಮ್ಮ ದೇಹವು ಸೂರ್ಯನ ಕಿರಣಗಳಿಂದ ಪಡೆದುಕೊಳ್ಳುತ್ತದೆ.

ವಿಟಮಿನ್ ಎ ಆಹಾರಗಳಿಂದ ದೊರೆಯುತ್ತದೆ. ತ್ವಚೆ, ಕೂದಲು ಹಾಗೂ ಕಣ್ಣಿನ ಆರೋಗ್ಯಕ್ಕೆ ವಿಟಮಿನ್ ಎ ಒಳ್ಳೆಯದು. ಇಲ್ಲಿ ನಾವು ವಿಟಮಿನ್ ಎ ದೊರೆಯುವ ಆಹಾರ ಮೂಲಗಳ ಬಗ್ಗೆ ಮಾಹಿತಿ ನೋಡಿ ಇಲ್ಲಿವೆ:

 ಕ್ಯಾರೆಟ್

ಕ್ಯಾರೆಟ್

ಕ್ಯಾರೆಟ್ ನಲ್ಲಿ ವಿಟಮಿನ್ ಎ ಇದ್ದು ಕಣ್ಣಿನ ಹಾಗೂ ತ್ವಚೆಯ ಆರೋಗ್ಯವನ್ನು ವೃದ್ಧಿಸುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ಬೀಟಾ ಕೆರೋಟಿನ್ ಇದ್ದು ಇದು ದೇಹವನ್ನು ಸೇರಿದಾಗ ವಿಟಮಿನ್ ಎ ಆಗಿ ಪರಿವರ್ತನೆಗೊಳ್ಳುತ್ತದೆ.

 ಸೊಪ್ಪು

ಸೊಪ್ಪು

ಸೊಪ್ಪಿನಲ್ಲಿ ವಿಟಮಿನ್ ಎ ಮಾತ್ರವಲ್ಲ ಇತರ ವಿಟಮಿನ್ಸ್ ಹಾಗೂ ಖನಿಜಾಂಶವಿರುತ್ತದೆ.

 ಚೀಸ್

ಚೀಸ್

ಆರೋಗ್ಯಕರ ಗುಣಗಳಿವೆ.

 ಖರ್ಬೂಜ

ಖರ್ಬೂಜ

ಖರ್ಬೂಜದ ಜ್ಯೂಸ್ ಕುಡಿದರೆ ತ್ವಚೆಯ ಅಂದ ಹೆಚ್ಚಾಗುವುದು ಆರೋಗ್ಯಕ್ಕೆ ಒಳ್ಳೆಯದು.

ಮೊಟ್ಟೆ

ಮೊಟ್ಟೆ

ಮೊಟ್ಟೆಯ ಹಳದಿಯಲ್ಲಿ ಕೊಬ್ಬಿನಂಶ ಮಾತ್ರವಲ್ಲ ವಿಟಮಿನ್ ಎ ಅಂಶವೂ ಇದೆ.

ಬೆಣ್ಣೆ ಹಣ್ಣು

ಬೆಣ್ಣೆ ಹಣ್ಣು

ವಿಟಮಿನ್ ಎ ಇರುವ ಮತ್ತೊಂದು ಹಣ್ಣು ಬೆಣ್ಣೆ ಹಣ್ಣು.

ಪಪ್ಪಾಯಿ

ಪಪ್ಪಾಯಿ

ಪಪ್ಪಾಯಿ ತಿಂದರೆ ತ್ವಚೆಗೆ ಒಳ್ಳೆಯದು ಏಕೆ ಗೊತ್ತೆ? ಇದರಲ್ಲಿ ವಿಟಮಿನ್ ಎ ಇದೆ.

ಸೀಬೆಕಾಯಿ

ಸೀಬೆಕಾಯಿ

ಸೀಬೆಕಾಯಿಯಲ್ಲಿ ವಿಟಮಿನ್ ಎ ಶೇ. 21 ಇದ್ದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ಇರುಳು ಕುರುಡು ಉಂಟಾಗದಂತೆ ಕಣ್ಣನ್ನು ರಕ್ಷಣೆ ಮಾಡುತ್ತದೆ.

ಮೀನು

ಮೀನು

ಮೀನಿನಲ್ಲಿ ಒಮೆಗಾ 3 ಕೊಬ್ಬಿನಂಶ ಮತ್ತು ವಿಟಮಿನ್ ಎ ಇದೆ.

ಲಿವರ್

ಲಿವರ್

ಚಿಕನ್ , ಮಟನ್ ಇವುಗಳ ಲಿವರ್ ನಲ್ಲಿ ವಿಟಮಿನ್ ಎ ಅಧಿಕವಾಗಿರುತ್ತದೆ. ಅಲ್ಲದೆ ಲಿವರ್ ತಿಂದರೆ ನಮ್ಮ ದೇಹವು ವಿಟಮಿನ್ ಎ ಅಂಶವನ್ನು ಸುಲಭದಲ್ಲಿ ಹೀರಿಕೊಳ್ಳುತ್ತದೆ.

English summary

Vitamin A Rich Foods | Tips For Health | ವಿಟಮಿನ್ ಎ ಇರುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Vitamin A has many properties similar to retinoid drugs, which are used to treat inflammatory skin conditions like acne. Carotenoids, a form of Vitamin A found in fruits and vegetables, provides antioxidant effects and helps improve your body's ability to keep your skin young and healthy.
X
Desktop Bottom Promotion