For Quick Alerts
ALLOW NOTIFICATIONS  
For Daily Alerts

ಅಸಿಡಿಟಿಯ ಈ ಅಸಾಮಾನ್ಯ ಲಕ್ಷಣಗಳನ್ನು ಕಡೆಗಣಿಸಬೇಡಿ

|

ಅಸಿಟಿಡಿ ಬಹುತೇಕ ಜನರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಅಸಿಡಿಟಿಯ ಪ್ರಮುಖ ಲಕ್ಷಣವೆಂದರೆ ಎದೆ ಉರಿ. ಆದ್ದರಿಂದ ಹೆಚ್ಚಿನವರಲ್ಲಿ ಇರುವ ಕಲ್ಪನೆಯೆಂದರೆ ಅಸಿಡಿಟಿ ಕಾಯಿಲೆಯನ್ನು ಸುಲಭವಾಗಿ ಗುರುತಿಸಬಹುದು. ಆದರೆ ನಿಮಗೆ ಗೊತ್ತೆ ಅಸಿಡಿಟಿಯ ಕೆಲವೊಂದು ಲಕ್ಷಣಗಳನ್ನು ನಾವು ಗುರುತಿಸಲು ವಿಫಲರಾಗುತ್ತೇವೆ. ಹಾಗೇ ಸರಿಯಾದ ಸಮಯಕ್ಕೆ ಅಸಿಡಿಟಿಗೆ ಚಿಕಿತ್ಸೆ ತೆಗೆದುಕೊಳ್ಳದೆ ಸಮಸ್ಯೆ ಉಲ್ಭಣವಾಗಬಹುದು.

ಇನ್ನು ಕೆಲವರು ಎದೆ ಉರಿ ಕಾಣಿಸಿದರೆ ಅಸಿಡಿಟಿ ಎಂದು ಅಸಿಡಿಟಿಗೆ ಔಷಧಿ ತೆಗೆದುಕೊಳ್ಳುತ್ತಾರೆ, ಆದರೆ ಅಸಿಡಿಟಿಗೆ ಔಷಧಿ ತೆಗೆದುಕೊಂಡ ಬಳಿಕವೂ ಎದೆ ಉರಿ ಕಮ್ಮಿಯಾಗದಿದ್ದರೆ, ಅಸಿಡಿಟಿ ಎಂದು ಸುಮ್ಮೆನೆ ಕೂರಬೇಡಿ, ಏಕೆಂದರೆ ಕಡಿಮೆಯಾಗದ ಎದೆ ಉರಿ ಕ್ಯಾನ್ಸರ್ ನ ಲಕ್ಷಣ ಕೂಡ ಹೌದು.

ಇಲ್ಲಿ ನಾವು ಅಸಿಡಿಟಿ ಕಾಯಿಲೆಯ ಇತರ ಕೆಲ ಲಕ್ಷಣಗಳ ಬಗ್ಗೆ ಹೇಳಿದ್ದೇವೆ. ಇವುಗಳು ಅಸಿಡಿಟಿ ಸಮಸ್ಯೆಯನ್ನು ಬೇಗನೆ ಗುರುತಿಸುವಲ್ಲಿ ಸಹಾಯ ಮಾಡುತ್ತದೆ:

ಕಾರುವಿಕೆ

ಕಾರುವಿಕೆ

ಇದು ಅಸಿಡಿಟಿಯ ಪ್ರಮುಖ ಲಕ್ಷಣವಾಗಿದೆ. ಗಂಟಲಿನಲ್ಲಿ ಏನೋ ಇರುವ ಅನುಭವವಾದಾಗ ನಾವು ಕಾರುತ್ತೇವೆ ಅಲ್ಲವೇ? ಗಂಟಲಿನಲ್ಲಿ ಕಫ ಕಟ್ಟಿದಾಗ ಆಗುವ ರೀತಿ ಕಫ ಏನೂ ಇಲ್ಲದಿದ್ದರೂ ಉಂಟಾಗುವುದು.

ಗಂಟಲಿನಲ್ಲಿ ಕಿಚ್ ಕಿಚ್

ಗಂಟಲಿನಲ್ಲಿ ಕಿಚ್ ಕಿಚ್

ಬರೀ ಶೀತ, ಕೆಮ್ಮು ಆದಾಗ ಮಾತ್ರ ಗಂಟಲಿನಲ್ಲಿ ಕಿಚ್ ಕಿಚ್ ಆಗುವುದು ಎಂದು ನೀವು ಭಾವಿಸಿದರೆ ಅದು ತಪ್ಪು, ಕೆಲವೊಮ್ಮೆ ಅದು ಅಸಿಡಿಟಿಯ ಲಕ್ಷಣ ಕೂಡ ಹೌದು. ಅದರಲ್ಲೂ ಊಟ ಮಾಡಿದ ತಕ್ಷಣ ಈ ರೀತಿ ಆಗುತ್ತಿದ್ದರೆ ಅದು ಅಸಿಡಿಟಿಯ ಲಕ್ಷಣವಾಗಿದೆ.

ವಾಂತಿ ಬಂದ ಅನುಭವ

ವಾಂತಿ ಬಂದ ಅನುಭವ

ಊಟವಾದ ಬಳಿಕ ವಾಂತಿ ಬರುವ ಅನುಭವವಾಗುತ್ತಿದ್ದರೆ ಅದು ಅಸಿಡಿಟಿಯ ಲಕ್ಷಣವಾಗಿರಬಹುದು.

ಬಾಯಿಯಲ್ಲಿ ಕಹಿ ನೀರು ಬರುವುದು

ಬಾಯಿಯಲ್ಲಿ ಕಹಿ ನೀರು ಬರುವುದು

ಬಾಯಿಯಲ್ಲಿ ಕಹಿ ನೀರು ಬರುತ್ತಿದ್ದರೆ ಒಂದೋ ಪಿತ್ತದಿಂದ ಇರಬಹುದು, ಇಲ್ಲದಿದ್ದರೆ ಅಸಿಡಿಟಿಯಿಂದ ಇರಬಹುದು.

ಎದೆ ನೋವು

ಎದೆ ನೋವು

ಎದೆ ನೋವು ಅಸಿಡಿಯ ಮತ್ತೊಂದು ಲಕ್ಷಣವಾಗಿದೆ. ಆದರೆ ಎದೆನೋವು ಕಾಣಿಸಿದಾಗ ಅಸಿಡಿಟಿ ಎಂದು ಸುಮ್ಮನೆ ಕೂರಬೇಡಿ, ಕ್ಷಣದಿಂದ-ಕ್ಷಣಕ್ಕೆ ಹೆಚ್ಚಾಗುತ್ತಿದ್ದರೆ ಕೂಡಲೇ ಆಸ್ಪತ್ರೆಗೆ ಹೋಗಿ, ಏಕೆಂದರೆ ಹೃದಯಾಘಾತದ ಲಕ್ಷಣವೂ ಆಗಿರಬಹುದು.

ವಿಶ್ರಾಂತಿ ತೆಗೆದುಕೊಳ್ಳುವಾಗ ನೋವು ಕಂಡು ಬರುವುದು

ವಿಶ್ರಾಂತಿ ತೆಗೆದುಕೊಳ್ಳುವಾಗ ನೋವು ಕಂಡು ಬರುವುದು

ಊಟ ಮಾಡಿದ ನಂತರ ನಿಂತಾಗ ಏನೂ ಅನಿಸುವುದಿಲ್ಲ, ಆದರೆ ಕೆಲವೊಮ್ಮೆ ಊಟ ಮಾಡಿದ ನಂತರ ಬಗ್ಗಿದಾಗ ಅಥವಾ ವಾಲಿ ಕೂತಾಗ ಎದೆ ಉರಿ ಕಾಣಿಸಿದರೆ ಅಸಿಡಿಟಿ ಆಗಿರಬಹುದು.

ಕೆಮ್ಮು

ಕೆಮ್ಮು

ಎದೆ ಉರಿ ಜೊತೆ ಕೆಮ್ಮು ಕಂಡು ಬಂದರೆ ಅದು ಅಸಿಡಿಟಿಯ ಪ್ರಮುಖ ಲಕ್ಷಣ ಅನ್ನುವುದನ್ನು ಮರೆಯದಿರಿ.

ಅಸ್ತಮಾ

ಅಸ್ತಮಾ

ಹೊಟ್ಟೆ ಗ್ಯಾಸ್ ಕೆಲವೊಮ್ಮೆ ಉಸಿರಾಟದ ತೊಂದರೆಯನ್ನೂ ತರುತ್ತದೆ. ಈ ಸಮಯದಲ್ಲಿ ಅಸ್ತಮಾ ಇರಬಹುದೆಂದು ತಪ್ಪಾಗಿ ಗ್ರಹಿಸುತ್ತೇವೆ. ಈ ಸಮಸ್ಯೆ ಕಾಣಿಸಿದರೆ ಅಸ್ತಮಾ ಕಾಯಿಲೆಯೇ ಅಥವಾ ಅಸಿಡಿಟಿಯೇ ಅನ್ನುವುದನ್ನು ವೈದ್ಯರ ಹತ್ತಿರ ಖಚಿತ ಪಡಿಸಿಕೊಳ್ಳಿ.

ನುಂಗಲು ಕಷ್ಟ

ನುಂಗಲು ಕಷ್ಟ

ಆಗಾಗ ಎದೆ ಉರಿ ಬರುತ್ತಿದ್ದರೆ ಅನ್ನನಾಳಗಳು ಕಿರಿದಾಗಿ ಆಹಾರ ನುಂಗಲು ಕಷಟ್ವಾಗಬಹುದು.

 ಅಧಿಕ ಎಂಜಲು

ಅಧಿಕ ಎಂಜಲು

ಬಾಯಲ್ಲಿ ತುಂಬಾ ಎಂಜಲು ಉತ್ಪತ್ತಿಯಾಗುತ್ತಿದರೆ ಅಸಿಡಿಟಿಯಿಂದ ಇರಬಹುದು. ದೇಹದಲ್ಲಿ ಅಧಿಕ ಇರುವ ಗ್ಯಾಸ್ ನಿಂದ ಈ ರೀತಿ ಉಂಟಾಗುವುದು.

English summary

Unusual Signs Of Acidity

The symptoms of acidity are less than obvious. They are also very easily mistaken for something else, since it is very hard to connect these unusual symptoms to acid reflux or acidity. It is very important to identify acidity and get the right treatment for it.
X
Desktop Bottom Promotion