For Quick Alerts
ALLOW NOTIFICATIONS  
For Daily Alerts

ಈ ಜ್ವರಗಳು ಬಂದರೆ ಪ್ರಾಣಕ್ಕೆ ಅಪಾಯ

|

ಈಗ ಕರ್ನಾಟಕದಲ್ಲಿ ಡೆಂಗ್ಯೂ ಜ್ವರದ ಭೀತಿ ಜನರಲ್ಲಿ ಆವರಿಸಿದೆ. ಮೈ ಸ್ವಲ್ಪ ಬೆಚ್ಚಗಾದರೂ ಡೆಂಗ್ಯೂ ಇರಬಹುದೇ ಎಂಬ ಸಂಶಯ ನಮ್ಮನ್ನು ಕಾಡುತ್ತಿದೆ. ವಾತಾವರಣದಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಒಂದು ದಿನ ಮಳೆ, ಮತ್ತೊಂದು ದಿನ ಬಿಸಿಲು ಈ ರೀತಿ ವಾತಾವರಣದಲ್ಲಿ ಬದಲಾವಣೆ ಉಂಟಾಗುತ್ತಿರುವುದರಿಂದ ನಮ್ಮ ಆರೋಗ್ಯದಲ್ಲೂ ಏರುಪೇರು ಕಂಡು ಬರುತ್ತಿದೆ.

ಅದಲ್ಲದೆ ವೈರಲ್ ಜ್ವರದಿಂದಲೂ ಹೆಚ್ಚಿನ ಜನರು ಬಳಲುತ್ತಿದ್ದಾರೆ. ಇದು ಬಂದರೆ ಗುಣಮುಖವಾಗಲು ಒಂದು ವಾರ ತೆಗೆದುಕೊಳ್ಳುವುದು, ಅಲ್ಲದೆ ಮನೆಯಲ್ಲಿ ಒಬ್ಬರಿಗೆ ಬಂದರೆ ಮನೆಯವರೆಲ್ಲರೂ ಜ್ವರದಿಂದ ಬಳಲುವಂತಾಗುವುದು. ವೈರಲ್ ಜ್ವರ ಪ್ರಾಣಾಪಾಯ ತರುವಂಥ ಜ್ವರವಲ್ಲ, ಸೂಕ್ತ ಚಿಕಿತ್ಸೆ ನೀಡಿದರೆ ಗುಣಮುಖವಾಗುವುದು, ಆದರೆ ಡೆಂಗ್ಯೂ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಅಧಿಕವಿರುತ್ತದೆ. ನಾನಾ ಬಗೆಯ ಜ್ವರಗಳಿವೆ, ಆದ್ದರಿಂದ ಜ್ವರ ಬಂದಾಗ ಪರೀಕ್ಷೆ ಮಾಡಿಸಿ ಯಾವ ಕಾರಣದಿಂದ ಜ್ವರ ಬರುತ್ತಿದೆ ಎಂದು ತಿಳಿದುಕೊಳ್ಳುವುದು ಒಳ್ಳೆಯದು.

ಪ್ರಾಣಕ್ಕೆ ಕುತ್ತು ತರುವ ವಿವಿಧ ಬಗೆಯ ಜ್ವರಗಳು

ವೈರಲ್ ಜ್ವರ

ವೈರಲ್ ಜ್ವರ

ಈ ಜ್ವರ ಬಂದರೆ ಗುಣಮುಖವಾಗಲು7-9 ದಿನ ಬೇಕು. ಮೊದಲ 3 ದಿನ ಜ್ವರ ಬಂದ ರೀತಿ ನಿಮಗನಿಸುವುದು, ನಂತರ 3 ದಿನ ಮೈ ಉಷ್ಣತೆ ಹೆಚ್ಚಾಗುವುದು, ಎದ್ದು ನಡೆಯಲು ಸಾಧ್ಯವಾಗದಷ್ಟು ಸುಸ್ತು ಕಂಡು ಬರುವುದು, ಈ ಜ್ವರ ಕಂಡು ಬಂದರೆ ಶೀತ, ಕೆಮ್ಮು, ಗಂಟಲು ಕೆರತ ಈ ರೀತಿಯ ಸಮಸ್ಯೆ ಕೂಡ ಕಂಡುಬರುವುದು.

ಡೆಂಗ್ಯೂ ಜ್ವರ

ಡೆಂಗ್ಯೂ ಜ್ವರ

ಇದು ಸೊಳ್ಳೆ ಕಚ್ಚಿ ಬರುವ ಜ್ವರವಾಗಿದೆ, ಇದು ಬಂದರೆ ಮೈ ಮೂಳೆ ಮುರಿದು ಹೋದಷ್ಟು ಮೈಕೈ ನೋವು ಕಂಡು ಬರುವುದು, ಮೈ ಉಷ್ಣತೆ ಹೆಚ್ಚಾಗುವುದು, ಮೈ ತುಂಬಾ ಬಿಸಿಯಾದರೆ ರಕ್ತಸ್ರಾವ ಕಂಡು ಬರುವುದು.

 ಮಲೇರಿಯಾ

ಮಲೇರಿಯಾ

ಇದು ಕೂಡ ಸೊಳ್ಳೆ ಕಚ್ಚಿ ಕಂಡು ಬರುವ ಸಮಸ್ಯೆಯಾಗಿದೆ. ಈ ಜ್ವರ ಮೆದುಳನ್ನು ಬಾಧಿಸಿದರೆ ಪ್ರಾಣಕ್ಕೆ ಅಪಾಯ ಉಂಟಾಗುವುದು.

 ಚಿಕನ್ ಗುನಿಯಾ

ಚಿಕನ್ ಗುನಿಯಾ

ಚಿಕನ್ ಗುನಿಯಾಕ್ಕೂ, ಚಿಕನ್ ಗೂ ಯಾವುದೇ ಸಂಬಂಧವಿಲ್ಲ, ಇದು ಕೂಡ ಸೊಳ್ಳೆಯಿಂದ ಬರುವ ಜ್ವರವಾಗಿದ್ದು ಸಕಾಲದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಖದಿದ್ದರೆ ಅಪಾಯ. ಚಿಕನ್ ಗುನಿಯಾ ಒಮ್ಮೆ ಬಂದರೂ, ಅದು ಗುಣಮುಖವಾದ ಮೇಲೂ ಆ ವ್ಯಕ್ತಿಗೆ ಮಂಡಿ ನೋವು ಕಾಣಿಸಿಕೊಳ್ಳುವುದು.

ಟೈಫಾಯ್ಡ್

ಟೈಫಾಯ್ಡ್

ಟೈಫಾಯ್ಡ್ ಹೊಟ್ಟೆಯಲ್ಲಿ ಸೋಂಕಾಶಣುಗಳ ದಾಳಿಯಿಂದ ಉಂಟಾಗುತ್ತದೆ. ತಿಂದ ಆಹಾರ ಅಥವಾ ಕುಡಿದ ನೀರಿನಲ್ಲಿ ಟೈಫಾಯ್ಡ್ ಎಂಬ ಬ್ಯಾಕ್ಟೀರಿಯಾ ಇದ್ದರೆ ಟೈಫಾಯ್ಡ್ ಜ್ವರ ಕಂಡು ಬರುವುದು. ಇದು ಬಂದರೆ ಜ್ವರ, ತುಂಬಾ ತಲೆನೋವು ಕಂಡು ಬರುವುದು.

ಮಿದುಳ್ಪೊರೆಯುರಿತ(Meningitis)

ಮಿದುಳ್ಪೊರೆಯುರಿತ(Meningitis)

ಇದನ್ನು ಮೆದುಳು ಜ್ವರ ಎಂದು ಕರೆಯಬಹುದು. ಇದು ಮೆದುಳಿನ ನರಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯಾದರೆ ಜ್ವರದ ಜೊತೆ ತುಂಬಾ ತಲೆನೋವು ಉಂಟಾಗುವುದು.

ಎಚ್1 ಎನ್ 1

ಎಚ್1 ಎನ್ 1

ಹಂದಿ ಜ್ವರ ಎಂದು ಕರಿಯುವ ಈ ಜ್ವರ ತುಂಬಾ ಅಪಾಯಕಾರಿಯಾದ ಜ್ವರವಾಗಿದೆ. ಇದು ಒಬ್ಬರಿಗೆ ಬಂದರೆ ಇತರರಿಗೆ ಬೇಗನೆ ಹರಡುತ್ತದೆ. ಈ ಜ್ವರವನ್ನು ಮೊದಲ ಹಂತದಲ್ಲಿಯೇ ಗುರುತಿಸುವುದು ಒಳ್ಳೆಯದು.

ಏಡ್ಸ್

ಏಡ್ಸ್

ಏಡ್ಸ್ ರೋಗದ ಮೊದಲ ಲಕ್ಷಣ ಜ್ವರ ಬರುವುದು. ಔಷಧಿ ತೆಗೆದಾಗ ಜ್ವರ ಕಮ್ಮಿಯಾಗುತ್ತದೆ, ಆದರೆ ಮತ್ತೆ ಮರುಕಳಿಸುವುದು. ಆಗಾಗ ಜ್ವರ ಬರುತ್ತಿದ್ದರೆ ಹೆಚ್ ಐ ವಿ ಟೆಸ್ಟ್ ಮಾಡಿಸುವುದು ಒಳ್ಳೆಯದು

ಮೂತ್ರದ ಸೋಂಕು

ಮೂತ್ರದ ಸೋಂಕು

ಕೆಲವೊಮ್ಮೆ ಮೂತ್ರದ ಸೋಂಕು ಉಂಟಾದಾಗ ಜ್ವರ ಕೂಡ ಬರುವುದು, ಕೆಳ ಹೊಟ್ಟೆಯಲ್ಲಿ ತುಂಬಾ ನೋವು, ಮೂತ್ರ ವಿಸರ್ಜನೆಗೆ ಹೋದಾಗ ಉರಿ ಕಂಡು ಬರುವುದು.

ತಿಂಗಳುಗಟ್ಟಲೆ ಜ್ವರ ಇದ್ದಾಗ

ತಿಂಗಳುಗಟ್ಟಲೆ ಜ್ವರ ಇದ್ದಾಗ

ಜ್ವರ ಬಂದು ತಿಂಗಳಾದರೂ ಗುಣಮುಖವಾಗದಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು ಬ್ಲಡ್ ಕ್ಯಾನ್ಸರ್ ಇದ್ದಾಗ ಈ ರೀತಿ ಕಂಡು ಬರುವ ಸಾಧ್ಯತೆ ಹೆಚ್ಚು.

English summary

Types Of Fever You Must Be Aware Of | Health Tips

Some specific viral infections like dengue fever or malaria can be life threatening. There are conclusive tests to determine the nature of your fever. These tests along with the symptoms of fever should make it easy for any doctor to diagnose your condition.
X
Desktop Bottom Promotion