For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ತೂಕ ನಿಯಂತ್ರಣಕ್ಕೆ ಕೆಲ ಟಿಪ್ಸ್

|

ಚಳಿಗಾಲಕ್ಕೂ ತೂಕ ಹೆಚ್ಚುವುದಕ್ಕೂ ನಿಕಟ ಸಂಬಂಧವಿದೆ. ಹೊರಾಂಗಣ ಚಟುವಟಿಕೆಗಳು ಮತ್ತು ಡಯೆಟ್ ತೂಕ ನಿಯಂತ್ರಣಕ್ಕೆ ಅತ್ಯಗತ್ಯ. ಚಳಿಗಾಲದಲ್ಲಿ ತೂಕ ಹೆಚ್ಚಾಗದಂತೆ ತಡೆಯಲು ಹಲವು ದಾರಿಗಳಿವೆ. ಉದಾಹರಣೆಗೆ ಹೊರಾಂಗಣ ಚಟುವಟಿಕೆಗಳು. ಚಳಿಗಾಳಿ ನಿಮ್ಮ ಹೊರಗೆ ಹೋಗುವ ಉತ್ಸಾಹವನ್ನು ತಡೆಯಬಹುದು. ಆದರೆ ಬೆಚ್ಚಗಿನ ಉಡುಪನ್ನು ಧರಿಸಿ ಜಾಗಿಂಗ್ ಅಥವ ಸೈಕ್ಲಿಂಗ್ ಹೋಗುವುದನ್ನು ತಪ್ಪಿಸಬೇಡಿ. ಇದು ನಿಮ್ಮ ಮೂಡನ್ನು ಬದಲಾಯಿಸುವುದರೊಂದಿಗೆ ಅನಾವಶ್ಯಕ ತೂಕ ಗಳಿಸುವುದನ್ನು ತಪ್ಪಿಸುತ್ತದೆ.

ಮತ್ತೊಂದು ದಾರಿಯೆಂದರೆ ಉತ್ತಮ ಆಹಾರಕ್ರಮವನ್ನು ಅಳವಡಿಸಿಕೊಳ್ಳುವುದು. ನಿಮ್ಮ ದೇಹಕ್ಕೆ ಅಗತ್ಯವಾದದ್ದನ್ನು ಮಾತ್ರ ಸೇವಿಸಿ. ಗೆಣಸು ಮತ್ತು ಸೇಬು ದೇಹಕ್ಕೆ ಫೈಬರ್ ಅಂಶವನ್ನು ಒದಗಿಸಿ ಹೆಚ್ಚು ಹೊತ್ತು ಹೊಟ್ಟೆ ತುಂಬಿದಂತಿರಿಸುತ್ತದೆ. ಮ್ಯಾರೊನಿ ಮತ್ತು ಚೀಸ್ ಅನ್ನು ಹಲವರು ಇಷ್ಟಪಡುತ್ತಾರೆ ಆದರೆ ಚಳಿಗಾಲದಲ್ಲಿ ಹೆಚ್ಚು ಕ್ಯಾಲೊರಿಗಳಿರುವ ಆಹಾರವನ್ನು ಸೇವಿಸದಿರುವುದು ಒಳ್ಳೆಯದು. ವಿಟಮಿನ್ ಗಳು ಮತ್ತು ಪೌಷ್ಟಿಕಾಂಶಗಳಿರುವ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಅಳವಡಿಸಿಕೊಳ್ಳಿ. ಚೀಸ್ ಇರುವ ಸಲಾಡ್ ಮತ್ತು ಪಾಸ್ತಾಗಳಿಂದ ದೂರವಿರಿ.

ಒಳ್ಳೆಯ ಆಹಾರದ ಡಯೆಟ್ ಪ್ಲಾನ್ ಅನುಸರಿಸುವುದು ಒಳ್ಳೆಯದು. ಬೆಳಗಿನ ಉಪಹಾರ ನಿಮ್ಮ ಮೆಟಬಾಲಿಸಂ ಅನ್ನು ಹೆಚ್ಚಿಸುತ್ತದೆ. ತಿನ್ನುವುದಕ್ಕೆ ಮುಂಚೆ 20 ನಿಮಿಷ ಕಾಯುವುದು ಒಳ್ಳೆಯದು ಇದರಿಂದ ನಿಮಗೆ ನಿಜವಾಗಿಯೂ ಹಸಿವಾಗಿದೆಯೋ ಇಲ್ಲವೋ ತಿಳಿಯುತ್ತದೆ. ಹೆಚ್ಚು ಕ್ಯಾಲೊರಿಗಳಿರುವಂತಹ ಪಾನೀಯ ಅಥವ ತಿಂಡಿಗಳನ್ನು ಸೇವಿಸಬೇಡಿ. ನೀವು ಆಲ್ಕೋಹಾಲ್ ಬಳಸುವವರಾಗಿದ್ದರೆ ಟಾನಿಕ್ ಅಥವ ಸೋಡ ಬದಲಿಗೆ ನೀರು ಮತ್ತು ನಿಂಬೆರಸ ಬೆರೆಸಿ ಕುಡಿಯಿರಿ.

ಚಳಿಗಾಲದಲ್ಲಿ ತೂಕ ಹೆಚ್ಚಾಗುವುದನ್ನು ತಡೆಯಲು ಕೆಲ ಟಿಪ್ಸ್:

ವ್ಯಾಯಾಮ

ವ್ಯಾಯಾಮ

ಚಳಿಗಾಲದಲ್ಲಿ ರಗ್ಗಿನೊಳಗೆ ಮುದುರಿಕೊಂಡು ಮಲಗಿರಬೇಕೆಂಬ ಸೋಮಾರಿತನ ಕಾಡುತ್ತದೆ. ಆದರೆ ವ್ಯಾಯಾಮವನ್ನು ತಪ್ಪಿಸುವುದು ಒಳ್ಳೆಯದಲ್ಲ. ವ್ಯಾಯಾಮವು ಕ್ಯಾಲೊರಿಗಳನ್ನು ದಹಿಸುತ್ತದೆ ಮತ್ತು ದೇಹದಲ್ಲಿ ಶೇಖರಣೆಯಾದ ಕೊಬ್ಬನ್ನು ಕರಗಿಸುತ್ತದೆ.

ಹಸಿವಿನಿಂದಿರಬೇಡಿ

ಹಸಿವಿನಿಂದಿರಬೇಡಿ

ಅಧ್ಯಯನಗಳ ಪ್ರಕಾರ ನೀವು ಮನೆಯಿಂದ ಹೊರಗೆ ತಿಂದಾಗ ಶೇಕಡ 40 ರಷ್ಟು ಹೆಚ್ಚಿನ ಕ್ಯಾಲೊರಿಗಳನ್ನು ದೇಹದೊಳಕ್ಕೆ ಸೇರಿಸಿಕೊಳ್ಳುವಿರಿ. ಆದ್ದರಿಂದ ಎಂದೂ ಕೂಡ ಮನೆಯಿಂದ ಹಸಿದ ಹೊಟ್ಟೆಯಲ್ಲಿ ಹೊರಡಬೇಡಿ.

ಸೂಪ್ ಗಳು

ಸೂಪ್ ಗಳು

ಸೂಪ್ ಗಳು ನಿಮ್ಮ ಹೊಟ್ಟೆಯನ್ನು ತುಂಬಿದಂತಿರಿಸುತ್ತದೆ ಮತ್ತು ಹೆಚ್ಚಾಗಿ ತಿನ್ನುವುದನ್ನು ತಪ್ಪಿಸುತ್ತದೆ. ನೀವು ತೂಕ ಕಳೆದುಕೊಳ್ಳಲು ಕಟ್ಟನಿಟ್ಟಾಗಿ ಡಯೆಟ್ ಮಾಡುತ್ತಿರುವಿರಾದರೆ ಮನೆಯಿಂದ ಹೊರಗೆ ರಾತ್ರಿಯೂಟಕ್ಕೆ ಹೋದಾಗ ಕಡಿಮೆ ಕ್ಯಾಲೊರಿಗಳಿರುವ ಸೂಪನ್ನು ಕುಡಿಯಿರಿ.

ಸ್ನಾಕ್ಸ್ ತಿನ್ನಬೇಡಿ

ಸ್ನಾಕ್ಸ್ ತಿನ್ನಬೇಡಿ

ಚಳಿಗಾಲದಲ್ಲಿ ಏನಾದರೂ ತಿನ್ನುತ್ತಿರಬೇಕು ಎಂದೆನಿಸುತ್ತಿರುತ್ತದೆ. ಎಣ್ಣೆ ಪದಾರ್ಥಗಳು ಮತ್ತು ಜಂಕ್ ಫುಡ್ ಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತದೆ. ಆದ್ದರಿಂದ ಸ್ನಾಕ್ ಗಳಿಂದ ದೂರವಿರಿ.

ಮದ್ಯಪಾನ ಮಾಡಬೇಡಿ

ಮದ್ಯಪಾನ ಮಾಡಬೇಡಿ

ನೀವು ಅಂದುಕೊಳ್ಳಬಹುದು ಆಲ್ಕೋಹಾಲ್ ಚಳಿಗಾಲದಲ್ಲಿ ಮೈಯನ್ನು ಬೆಚ್ಚಗಿರಿಸುತ್ತದೆಯೆಂದು. ಉಷ್ಣತೆಯೊಂದಿಗೆ ಆಲ್ಕೋಹಾಲ್ ಹೆಚ್ಚಿನ ಕ್ಯಾಲೊರಿಗಳನ್ನು ದೇಹಕ್ಕೆ ಸೇರಿಸಿ ತೂಕ ಹೆಚ್ಚಲು ಕಾರಣವಾಗುತ್ತದೆ. ನೀವು ಕುಡಿದರೂ ಕೂಡ ನಿಧಾನವಾಗಿ ಕುಡಿಯಿರಿ. ಕುಡಿಯುವಾಗ ಜೊತೆ ಯಾವುದೇ ರೀತಿಯ ಕೊಬ್ಬಿನಂಶವಿರುವ ಪದಾರ್ಥಗಳನ್ನು ತಿನ್ನಬೇಡಿ.

ನೀರು ಕುಡಿಯಿರಿ

ನೀರು ಕುಡಿಯಿರಿ

ನೀರು ನೀವು ಹೆಚ್ಚಾಗಿ ತಿನ್ನುವುದನ್ನು ತಪ್ಪಿಸುತ್ತದೆ. ಊಟಕ್ಕೆ 20 ನಿಮಿಷ ಮುಂಚೆ ಒಂದು ಲೋಟ ನೀರನ್ನು ಚಳಿಗಾಲದಲ್ಲಿ ಕುಡಿಯಿರಿ. ಚಳಿಗಾಲದಲ್ಲಿ ಈ ಟಿಪ್ ಪಾಲಿಸಿ.

ಕೊಬ್ಬು ಕರಗಿಸುವ ಪದಾರ್ಥಗಳನ್ನು ತಿನ್ನಿ

ಕೊಬ್ಬು ಕರಗಿಸುವ ಪದಾರ್ಥಗಳನ್ನು ತಿನ್ನಿ

ಬ್ರೆರಿ ಹಣ್ಣುಗಳು, ಸಿಟ್ರಸ್ ಹಣ್ಣುಗಳು, ಸ್ಪಿನಾಚ್ ಇತ್ಯಾದಿ ಹಣ್ಣುಗಳು ಕೊಬ್ಬನ್ನು ದಹಿಸುತ್ತವೆ. ಇದು ತೂಕ ಕಳೆದುಕೊಳ್ಳಲು ಸಹಕಾರಿ. ಇದರಿಂದ ದೇಹದಲ್ಲಿ ಕೊಬ್ಬು ಶೇಖರವಾಗುವುದು ತಪ್ಪುತ್ತದೆ.

ಒಳ್ಳೆಯ ಆಯ್ಕೆಗಳು

ಒಳ್ಳೆಯ ಆಯ್ಕೆಗಳು

ಬೇಯಿಸಿದ, ಆವಿಯಲ್ಲಿ ಬೆಂದ, ಹಸಿ ತರಕಾರಿಗಳು ಮತ್ತು ಕಡಿಮೆ ಜಿಡ್ಡಿನ ಪದಾರ್ಥಗಳು ನಿಮ್ಮ ಚಳಿಗಾಲದ ಡಯೆಟ್ ನಲ್ಲಿ ಸೇರಿರಲಿ. ಇದರಿಂದ ತೂಕ ಹೆಚ್ಚುವುದು ತಪ್ಪುತ್ತದೆ.

ಸೈಕ್ಲಿಂಗ್

ಸೈಕ್ಲಿಂಗ್

ಸೈಕ್ಲಿಂಗ್ ದೇಹಕ್ಕೆ ಒಳ್ಳೆಯ ವ್ಯಾಯಾಮವನ್ನು ಒದಗಿಸುತ್ತದೆ. ಇದು ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ ಮತ್ತು ತೂಕ ಹೆಚ್ಚಾಗುವುದನ್ನು ತಪ್ಪಿಸುತ್ತದೆ.

English summary

Tips To Prevent Winter Weight Gain

Winter and weight gain go hand in hand. Outdoor workouts and planing your diet to avoid gaining weight is very important.
Story first published: Thursday, December 12, 2013, 10:11 [IST]
X
Desktop Bottom Promotion