For Quick Alerts
ALLOW NOTIFICATIONS  
For Daily Alerts

ತೊಂಡೆಕಾಯಿಯ ಆರೋಗ್ಯಕಾರಿ ಗುಣಗಳು

|

ಭಾರತದಲ್ಲಿ ಸೊಪ್ಪಿನಿಂದ ಹಿಡಿದು ಆಲೂಗಡ್ಡೆಗಳವರೆಗೆ ಹಲವು ತರಕಾರಿಗಳನ್ನು ದಿನನಿತ್ಯ ತಮ್ಮ ಅಡುಗೆಗೆ ಬಳಸುತ್ತಾರೆ. ಈ ತರಕಾರಿಗಳನ್ನು ಬಳಸಿ ಹಲವು ರೀತಿಯ ಅಡುಗೆಗಳನ್ನು ತಯಾರಿಸುತ್ತಾರೆ. ಹಾಗಲ ಕಾಯಿ, ಹೀರೆಕಾಯಿ, ಪಡವಲಕಾಯಿ ಇವೆಲ್ಲವೂ ಕೂಡ ಮೂತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಮಧುಮೇಹಕ್ಕೆ ಬಹಳ ಒಳ್ಳೆಯದು. ಅದೇ ರೀತಿ ನುಗ್ಗೇ ಕಾಯಿ ದಕ್ಷಿಣ ಭಾರತದಲ್ಲಿ ಪ್ರಸಿದ್ಧವಾಗಿದೆ. ಇದನ್ನು ಹುಳಿ/ಸಾರಿಗೆ ಹೆಚ್ಚಾಗಿ ಬಳಸುತ್ತಾರೆ. ಇದು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳನ್ನು ಪರಿಹರಿಸುತ್ತದೆ. ಅದೇ ರೀತಿ ಬಾಳೆ ಹಣ್ಣನ್ನು ಮಾತ್ರವಲ್ಲದೆ, ಅದರ ಕಾಂಡ ಮತ್ತು ಹೂವನ್ನು ಕೂಡ ಅಡುಗೆಗೆ ಬಳಸುತ್ತಾರೆ.

ಹಸಿರು ತರಕಾರಿಗಳಾದ ತೊಂಡೆಕಾಯನ್ನು ಕೂಡ ಭಾರತೀಯ ಅಡುಗೆಮನೆಯಲ್ಲಿ ಕಾಣಬಹುದು. ಇದು ರುಚಿಕರವಾಗಿರುತ್ತದೆ ಮತ್ತು ಅಡುಗೆ ಮಾಡಲು ಸುಲಭ ಹಾಗೂ ಅಷ್ಟೇನು ದುಬಾರಿಯಲ್ಲದ ತರಕಾರಿ.
ತೊಂಡೆಕಾಯಿಯಲ್ಲಿರುವ ಔಷಧಿಯ ಗುಣಗಳ ಬಗ್ಗೆ ಬಹಳ ಕಡಿಮೆ ಮಂದಿಗೆ ತಿಳಿದಿದೆ. ಇದನ್ನು ಸಹ ಭಾರತೀಯ ಅಡುಗೆಗಳಲ್ಲಿ ಕಾಣಬಹುದು. ಇದನ್ನು ಪಲ್ಯ ಮತ್ತು ಸಾಂಬಾರಿಗೆ ಬಳಸುತ್ತಾರೆ. ಪೂರ್ವ ಭಾರತದ ಕೆಲವು ಪ್ರದೇಶಗಳಲ್ಲಿ ಇದನ್ನು ಸಿಹಿ ತಿಂಡಿ ಮಾಡಲು ಕೂಡ ಬಳಸುತ್ತಾರೆ.

ತೊಂಡೆಕಾಯಿಯಲ್ಲಿ ವಿಟಮಿನ್ ಎ, ಬಿ1, ಸಿ ಮತ್ತು ಕ್ಯಾಲ್ಸಿಯಂ ಇರುತ್ತದೆ. ಇದರಲ್ಲಿ ಕ್ಯಾಲೊರಿಗಳು ಕಡಿಮೆಯಿದ್ದು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರಲು ಸಹಕಾರಿ. ಆಯರ್ವೇದದ ಪ್ರಕಾರ ಇದು ಗ್ಯಾಸ್ಟ್ರಿಕ್ ತೊಂದರೆಗಳನ್ನು ಪರಿಹರಿಸುತ್ತದೆ. ಇದರಲ್ಲಿ ನೈಸರ್ಗಿಕವಾಗಿ ಆಫ್ರೊಡಿಸಿಯಾಕ್ ಇದ್ದು ಇದು ನಿಮ್ಮ ಲೈಂಗಿಕ ಜೀವನಕ್ಕೆ ಸಹಕಾರಿ.

ತೊಂಡೆಕಾಯಿಯ ಆರೋಗ್ಯಕಾರಿ ಪ್ರಯೋಜನಗಳು:

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ತೊಂಡೆಕಾಯಿಯಲ್ಲಿರುವ ಬೀಜಗಳು ಮಲಬದ್ಧತೆಯನ್ನು ಸಮಸ್ಯೆಯನ್ನು ನಿವಾರಿಸುತ್ತದೆ ಮತ್ತು ಮಲ ವಿಸರ್ಜನೆಗೆ ಸಂಬಂಧಿಸಿದ ಸಮಸ್ಯೆಯನ್ನು ಕೂಡ ಗುಣಮಾಡುತ್ತದೆ.

ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ

ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ

ತೊಂಡೆಕಾಯಿ ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿ ಫೈಬರ್ ನ ಅಂಶ ಹೆಚ್ಚಿದ್ದು ಗ್ಯಾಸ್ಟ್ರಿಕ್, ಕರಳು ಮತ್ತು ಜಠರದ ಸಮಸ್ಯೆಗಳಿಗೆ ಪರಿಣಾಮಕಾರಿ.

ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

ಕೊಲೆಸ್ಟ್ರಾಲ್ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ತಗ್ಗಿಸುತ್ತದೆ

ತೊಂಡೆಕಾಯಿಯಲ್ಲಿರುವ ಬೀಜಗಳು ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳುವಿಕೆ

ತೂಕ ಕಳೆದುಕೊಳ್ಳಲು ಇದು ಸಹಕಾರಿ. ಇದರಲ್ಲಿ ಕಡಿಮೆ ಕ್ಯಾಲೊರಿಗಳಿರುತ್ತದೆ ಮತ್ತು ಹೆಚ್ಚು ಹೊತ್ತು ನಿಮ್ಮ ಹೊಟ್ಟೆಯನ್ನು ತುಂಬಿದಂತಿರಿಸುತ್ತದೆ. ಇದರಿಂದ ನೀವು ಸುಲಭವಾಗಿ ತೂಕ ಕಳೆದುಕೊಳ್ಳಬಹುದು.

ಫ್ಲೂ ಗುಣಪಡಿಸುತ್ತದೆ

ಫ್ಲೂ ಗುಣಪಡಿಸುತ್ತದೆ

ಆಯರ್ವೇದದ ಪ್ರಕಾರ ತೊಂಡೆಕಾಯಿಯನ್ನು ಶೀತ, ಜ್ವರ ಮತ್ತು ಗಂಟಲ ತೊಂದರೆಗಳನ್ನು ನಿವಾರಿಸಲು ಔಷಧಿಯಾಗಿ ಬಳಸಲಾಗುತ್ತದೆ.

ರಕ್ತ ಶುದ್ಧೀಕರಿಸುತ್ತದೆ

ರಕ್ತ ಶುದ್ಧೀಕರಿಸುತ್ತದೆ

ಆಯರ್ವೇದದ ಪರಿಣಿತರ ಪ್ರಕಾರ ತೊಂಡೆಕಾಯಿ ಕಫದ ಸಮಸ್ಯೆಯನ್ನು ನಿವಾರಿಸುತ್ತದೆ. ಅಲ್ಲದೆ ಇದು ರಕ್ತವನ್ನು ಶುದ್ಧೀಕರಿಸುತ್ತದೆ. ಇದರೊಂದಿಗೆ ಇದು ಚರ್ಮಕ್ಕೆ ಕೂಡ ಒಳ್ಳೆಯದು.

ಚರ್ಮಕ್ಕಾಗುವ ಲಾಭಗಳು

ಚರ್ಮಕ್ಕಾಗುವ ಲಾಭಗಳು

ತೊಂಡೆಕಾಯಿಯಲ್ಲಿ ವಿಟಮಿನ್ ಎ, ಸಿ ಮತ್ತು ಆ್ಯಂಟಿಆ್ಯಂಕ್ಸಿಡೆಂಟ್ಸ್ ಹೆಚ್ಚಿದ್ದು ಇದು ಚರ್ಮಕ್ಕೆ ಬಹಳ ಪ್ರಯೋಜನಕಾರಿ.

English summary

Health Benefits Of Parwal/Pointed Gourd

There are many Indian vegetables which are found in almost every household. From spinach to potatoes, a lot of vegetables are used in the Indian kitchen on a regular basis.
Story first published: Wednesday, December 4, 2013, 13:22 [IST]
X
Desktop Bottom Promotion