For Quick Alerts
ALLOW NOTIFICATIONS  
For Daily Alerts

ಅಸಿಡಿಟಿ ಕಡಿಮೆ ಮಾಡುವ ಆಹಾರಗಳು

|

ಅಸಿಡಿಟಿಯ ತೊಂದರೆ ಅನುಭವ ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಇರುತ್ತದೆ. ನಮ್ಮ ದೇಹದ ಗ್ಯಾಸ್ಟ್ರಿಕ್ ಗ್ಲಾಂಡ್ಸ್(gastric glands)ನಲ್ಲಿ ಆಸಿಡ್ ಹೆಚ್ಚು ಶೇಖರವಾದಾಗ ಅಸಿಡಿಟಿ ಉಂಟಾಗುವುದು. ಈ ರೀತಿ ಉಂಟಾದಾಗ ಕಂಡು ಬರುವ ಲಕ್ಷಣವೆಂದರೆ ಎದೆ ಉರಿ. ಈ ರೀತಿಯಾದಾಗ ಖಾರದ ಆಹಾರಗಳನ್ನು ಸೇವಿಸಿದರೆ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು.

ಅಸಿಡಿಟಿಯ ಸಮಸ್ಯೆ ಕಾಣಿಸಿದರೆ ಈ ಕೆಳಗಿನ ಆಹಾರಗಳನ್ನು ತಿಂದರೆ ಅಸಿಡಿಟಿ ಕಡಿಮೆಯಾಗುವುದು.

1. ಓಟ್ಸ್

1. ಓಟ್ಸ್

ಬ್ರೇಕ್ ಫಾಸ್ಟ್ ಗೆ ಓಟ್ಸ್ ತಿಂದರೆ ಹೊಟ್ಟೆಯೂ ತುಂಬುವುದು, ಅಸಿಡಿಟಿ ಸಮಸ್ಯೆಯೂ ಕಾಣಿಸಿಕೊಳ್ಳುವುದಿಲ್ಲ, ಫಿಗರ್ ಕೂಡ ಕಾಪಾಡಬಹುದು.

2. ಶುಂಠಿ

2. ಶುಂಠಿ

ಶುಂಠಿ ಕೂಡ ಅಸಿಡಿಟಿ ಕಡಿಮೆ ಮಾಡುವಲ್ಲಿ ತುಂಬಾ ಪರಿಣಾಮಕಾರಿ. ಆದರೆ ಶುಂಠಿಯನ್ನು ಮಿತಿಯಲ್ಲಿ ತಿನ್ನಬೇಕಷ್ಟೇ.

3. ಲೋಳೆಸರ

3. ಲೋಳೆಸರ

ಲೋಳೆಸರ(Aloe vera)ದ ಒಂದು ಗಿಡ ಮನೆಯಲ್ಲಿ ಇರುವುದು ಒಳ್ಳೆಯದು. ಅಸಿಡಿಟಿಯಿಂದ ಎದೆ ಉರಿ ಕಾಣಿಸಿಕೊಂಡರೆ ಲೋಳೆಸರ ತಿನ್ನಿ, ಅಥವಾ ಅದರಿಂದ ಜ್ಯೂಸ್ ಮಾಡಿ ಕುಡಿಯಿರಿ, ತಕ್ಷಣ ಕಡಿಮೆ ಮಾಡುವುದು.

4. ಈ ತರಕಾರಿಗಳನ್ನು ತಿನ್ನಿ

4. ಈ ತರಕಾರಿಗಳನ್ನು ತಿನ್ನಿ

ಹೂಕೋಸು, ಬ್ರೊಕೋಲಿ, ಬೀನ್ಸ್ , ಹಸಿರು ತರಕಾರಿಗಳು ಮತ್ತು ಸೊಪ್ಪು ಅಸಿಡಿಟಿ ಸಮಸ್ಯೆ ಕಡಿಮೆ ಮಾಡುವುದು.

 5. ಕೆಂಪಕ್ಕಿ ಅನ್ನ

5. ಕೆಂಪಕ್ಕಿ ಅನ್ನ

ಅಸಿಡಿಟಿ ಸಮಸ್ಯೆ ಇರುವವರು ಕೆಂಪಕ್ಕಿಯಿಂದ ಮಾಡಿದ ಅನ್ನ ತಿನ್ನುವುದು ಒಳ್ಳೆಯದು. ಅಸಿಡಿಟಿ ಸಮಸ್ಯೆ ಕಡಿಮೆ ಮಾಡುವಲ್ಲಿ ಕಾರ್ಬೋಹೈಡ್ರೇಟ್ಸ್ ಆಹಾರಗಳು ಸಹಕಾರಿ.

6. ತಣ್ಣನೆಯ ಹಾಲು

6. ತಣ್ಣನೆಯ ಹಾಲು

2-3 ಚಮಚ ತಣ್ಣನೆಯ ಹಾಲು ಕುಡಿದರೆ ಅಸಿಡಿಟಿ ಸಮಸ್ಯೆಯಿಂದ ತಕ್ಷಣ ರಿಲೀಫ್ ದೊರೆಯುವುದು.

ಕಾಫಿ

ಕಾಫಿ

* ಕಾಫಿ ಬದಲು ಹರ್ಬಲ್ ಟೀ ಕುಡಿಯುವುದು ಒಳ್ಳೆಯದು.

ಬಿಸಿ ನೀರು ಕುಡಿಯುವುದು

ಬಿಸಿ ನೀರು ಕುಡಿಯುವುದು

* ಪ್ರತೀದಿನ ಒಂದು ಲೋಟ ಬಿಸಿ ನೀರು ಕುಡಿಯುವುದು ಒಳ್ಳೆಯದು.

ಬಾಳೆಹಣ್ಣು

ಬಾಳೆಹಣ್ಣು

* ಬಾಳೆ ಹಣ್ಣು, ಸೌತೆಕಾಯಿ, ಕ್ಲಲಂಗಡಿ ಹಣ್ಣನ್ನು ಆಹಾರಕ್ರಮದಲ್ಲಿ ಸೇರಿಸುವುದು ಒಳ್ಳೆಯದು.

ಎಳನೀರು

ಎಳನೀರು

* ಎಳನೀರು ಕೂಡ ಅಸಿಡಿಟಿಯನ್ನು ಕಡಿಮೆ ಮಾಡುವುದು.

ಖಾರ ಪದಾರ್ಥಗಳು

ಖಾರ ಪದಾರ್ಥಗಳು

* ಉಪ್ಪಿನಕಾಯಿ, ಖಾರ ಚಟ್ನಿ, ಪಲ್ಯ ಇವುಗಳನ್ನು ತಿನ್ನಬೇಡಿ.

ಪುದೀನಾ ಹಾಕಿದ ನೀರು

ಪುದೀನಾ ಹಾಕಿದ ನೀರು

* ಪುದೀನಾ ಎಲೆಯನ್ನು ನೀರಿಗೆ ಹಾಕಿ ಕುದಿಸಿ, ಊಟದ ನಂತರ ಕುಡಿಯುವುದು ಒಳ್ಳೆಯದು.

ಲವಂಗ

ಲವಂಗ

* ಒಂದು ಲವಂಗ ಜಗಿದರೆ ಕೂಡ ಅಸಿಡಿಟಿ ಕಡಿಮೆಯಾಗುವುದು, ಅಲ್ಲದೆ ಇದು ಜೀರ್ಣಕ್ರಿಯೆಗೂ ತುಂಬಾ ಒಳ್ಳೆಯದು.

ಚ್ಯೂಯಿಂಗ್ ಗಮ್ ಅಗಿಯಿರಿ

ಚ್ಯೂಯಿಂಗ್ ಗಮ್ ಅಗಿಯಿರಿ

* ಚ್ಯೂಯಿಂಗ್ ಗಮ್ ಜಗಿಯಿರಿ. ಬಾಯಿಯಲ್ಲಿ ಎಂಜಲು ಅಧಿಕ ಉತ್ಪತ್ತಿಯಾದರೆ ಅಸಿಡಿಟಿ ಸಮಸ್ಯೆ ಕಡಿಮೆಯಾಗುವುದು.

ಕುಡಿತ, ಸಿಗರೇಟ್

ಕುಡಿತ, ಸಿಗರೇಟ್

* ಸಿಗರೇಟ್, ಕುಡಿತ ಇವುಗಳಿಗೆ ಕಡಿವಾಣ ಹಾಕಬೇಕು, ಏಕೆಂದರೆ ಇವುಗಳು ಅಸಿಡಿಟಿ ಸಮಸ್ಯೆಯನ್ನು ಹೆಚ್ಚಾಗಿಸಿ, ತುಂಬಾ ನೋವು ಅನುಭವಿಸುವಂತಾಗುವುದು.

English summary

Foods That Help Fight Acidity

Acidity occurs when there is excess secretion of acids in the gastric glands of the stomach. When the secretion is more than usual, we feel, what is commonly known as heartburn, which is normally triggered off by consumption of spicy foods. Below are the foods which can help to reduce acidity.
X
Desktop Bottom Promotion