For Quick Alerts
ALLOW NOTIFICATIONS  
For Daily Alerts

ಸೈಕ್ಲಿಂಗ್ ಅಥವ ರನ್ನಿಂಗ್ ಯಾವುದು ಉತ್ತಮ?

By Hemanth Amin
|

ಸೈಕ್ಲಿಂಗ್ ಮತ್ತು ರನ್ನಿಂಗ್ ದೈಹಿಕ ತಾಲೀಮಿಗೆ ಒಂದು ಅತ್ಯುತ್ತಮ ರೂಪ. ಇವೆರಡೂ ನಿಮ್ಮ ಆರೋಗ್ಯಕ್ಕೆ ಸಮಾನ ರೀತಿಯಲ್ಲಿ ಒಳ್ಳೆಯದು. ನಿಮ್ಮ ದೇಹ ಹಾಗೂ ಆರೋಗ್ಯಕ್ಕೆ ಇವೆರಡು ವಿಶೇಷ ಲಾಭ ಉಂಟುಮಾಡುತ್ತದೆ. ಪ್ರತೀ ನಿಮಿಷಕ್ಕೆ ಓಟವು ಸೈಕ್ಲಿಂಗ್ ಗಿಂತ ಹೆಚ್ಚಿನ ಕ್ಯಾಲೋರಿಯನ್ನು ಕಡಿಮೆ ಮಾಡುತ್ತದೆ. ಸೈಕ್ಲಿಂಗ್ ಗೆ ಹೋಲಿಸಿದರೆ ಓಡುವುದರಿಂದ ನಿಮ್ಮ ಮೂಳೆಗಳು ಮತ್ತು ಕೀಲುಗಳ ಮೇಲೆ ಹೆಚ್ಚಿನ ಒತ್ತಡ ಬಿದ್ದು ಹರಿದುಹೋಗಬಹುದು. ನಿಯಮಿತವಾಗಿ ಓಡುವುದರಿಂದ ದೈಹಿಕ ಗಾಯಗಳಿಗೆ ತುತ್ತಾಗುವ ಸಾಧ್ಯತೆಯಿದೆ.

ಪ್ರಾಯೋಗಿಕ ಮತ್ತು ದಕ್ಷತೆಯ ಕಾರಣದಿಂದ ಓಡುವುದಕ್ಕೆ ಹೋಲಿಸಿದರೆ ಸೈಕ್ಲಿಂಗ್ ನಿಂದ ಹೆಚ್ಚಿನ ಆರೋಗ್ಯ ಲಾಭ ಮತ್ತು ಪ್ರಾಯೋಗಿಕ ಉಪಯೋಗವಿದೆ. ನೀವು ಸೈಕಲ್ ನಲ್ಲಿ ಕಚೇರಿಗೆ ಹೋದರೆ ಆಗ ನಿಮ್ಮ ಕ್ಯಾಲೋರಿ ನಷ್ಟವಾಗುತ್ತದೆ ಮತ್ತು ಯಾವುದೇ ಆಯಾಸವಿಲ್ಲದೆ ನಿಮ್ಮ ಸಾರಿಗೆಯಾಗಿಯೂ ಇದು ಕೆಲಸ ಮಾಡುತ್ತದೆ. ಕಚೇರಿಗೆ ಓಡಿಕೊಂಡು ಹೋಗುವುದು ತುಂಬಾ ಕಷ್ಟ ಮತ್ತು ಇದು ತುಂಬಾ ಆಯಾಸವನ್ನುಂಟುಮಾಡುತ್ತದೆ.

ಓಡಿಕೊಂಡು ಹೋದರೆ ಆಗ ನೀವು ಧರಿಸಿದ ಬಟ್ಟೆ ಬೆವರಿನಿಂದ ಒದ್ದೆಯಾಗಿರುತ್ತದೆ. ಓಡುವುದಕ್ಕೆ ಹೆಚ್ಚಿನ ಬದ್ಧತೆ ಬೇಕಾಗಿದೆ. ಆದರೆ ಸೈಕ್ಲಿಂಗ್ ನಿಂದ ನೀವು ಖರೀದಿಗೆ ಅಥವಾ ಯಾವುದೇ ಬಿಲ್ ಕಟ್ಟಲು ಹೋಗಬಹುದು.

ಆದರೆ ಖರ್ಚಿಗೆ ಹೋಲಿಸಿದರೆ ಓಡುವುದು ತುಂಬಾ ಮಿತವ್ಯಯಿ. ಯಾಕೆಂದರೆ ಇದಕ್ಕೆ ಯಾವುದೇ ನಿರ್ವಹಣೆ ಬೇಕಿಲ್ಲ ಮತ್ತು ಒಂದು ಜತೆ ಸ್ಪೋರ್ಟ್ಸ್ ಶೂ ಇದ್ದರೆ ಸಾಕು. ಸೈಕಲ್ ಖರೀದಿಸುವ ವೆಚ್ಚ ಸ್ವಲ್ಪ ಹೆಚ್ಚಾದರೂ ಅದರ ನಿರ್ವಹಣೆಗೆ ತಗಲುವ ವೆಚ್ಚ ತುಂಬಾ ಕಡಿಮೆ. ಒಂದು ಸಲ ಬಂಡವಾಳ ಹೂಡಿದರೆ ಇದನ್ನು ಹಲವಾರು ವರ್ಷಗಳ ಕಾಲ ಯಾವುದೇ ಸಮಸ್ಯೆಯಿಲ್ಲದೆ ನಿಮ್ಮ ಸಾರಿಗೆಗೆ ಬಳಸಿಕೊಳ್ಳಬಹುದು.

ಸೈಕ್ಲಿಂಗ್ ಮತ್ತು ರನ್ನಿಂಗ್ ನಲ್ಲಿರುವ ಕೆಲವೊಂದು ಸಾಮಾನ್ಯ ವ್ಯತ್ಯಾಸಗಳು

1. ಸಂತೋಷ

1. ಸಂತೋಷ

ಸಂತೋಷದ ವಿಷಯಕ್ಕೆ ಹೋಲಿಸಿದರೆ ಓಡುವುದಕ್ಕಿಂತ ಸೈಕ್ಲಿಂಗ್ ನಲ್ಲಿ ಹೆಚ್ಚಿನ ಮೋಜು. ಓಡುವುದಕ್ಕಿಂತ ಸೈಕ್ಲಿಂಗ್ ನಲ್ಲಿ ಕಡಿಮೆ ಶ್ರಮವಿರುವ ಕಾರಣ ತುಂಬಾ ದೀರ್ಘ ಪ್ರಯಾಣ ಮಾಡಬಹುದು. ಒಂದು ಹಾದಿಯಲ್ಲಿ ಓಡುವುದಕ್ಕಿಂತ ಸೈಕಲ್ ತುಳಿಯುವುದು ತುಂಬಾ ಪ್ರಾಯೋಗಿಕವಾಗಬಹುದು.

2. ಪರಿಣಾಮಕಾರಿ

2. ಪರಿಣಾಮಕಾರಿ

ಓಡುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಕ್ಯಾಲೋರಿ ದಹಿಸಬಹುದು. ಸೈಕ್ಲಿಂಗ್ ಇದೇ ಸಮಯದಲ್ಲಿ ಕೇವಲ ಶೇ. 15-20ರಷ್ಟು ಕ್ಯಾಲೋರಿ ಮಾತ್ರ ನಷ್ಟ ಮಾಡುತ್ತದೆ. ನಿಮಗೆ ಸಮಯ ಸಿಕ್ಕಿದರೆ ಆಗ ಒಂದು ಸಣ್ಣ ಅಂತರವನ್ನು ಓಡಿ ಕ್ರಮಿಸಬಹುದು.

3. ವಾಹನದಟ್ಟಣೆ

3. ವಾಹನದಟ್ಟಣೆ

ಈ ಒಂದು ಅಂಶವು ಸೈಕ್ಲಿಂಗ್ ಗೆ ದೊಡ್ಡ ಮಟ್ಟದಲ್ಲಿ ಪರವಾಗಿರುವ ಅಂಶ. ಎರಡೂ ದೈಹಿಕ ವ್ಯಾಯಾಮಕ್ಕಾದರೂ ಸೈಕಲ್ ನಿಂದ ನೀವು ದೈಹಿಕ ಮತ್ತು ಕಚೇರಿಗೆ ಪ್ರಯಾಣಿಸಲು ಉಪಯೋಗಿಸುವುದರಿಂದ ನಿಮ್ಮ ಎರಡು ಕೆಲಸ ಒಂದೇ ಬಾರಿಗೆ ಆಗುತ್ತದೆ. ಫಾರ್ಮಲ್ ಡ್ರೆಸ್ ಹಾಕಿಕೊಂಡು ಕಚೇರಿಗೆ ಓಡಿಕೊಂಡು ಹೋಗುವುದು ಅಷ್ಟು ಸರಿಯಾಗಿ ಕಾಣಿಸುವುದಿಲ್ಲ.

4. ಗಾಯಗಳಾಗುವುದು

4. ಗಾಯಗಳಾಗುವುದು

ದಿನನಿತ್ಯ ಓಡುವುದರಿಂದ ನಿಮ್ಮ ದೇಹ ಮತ್ತು ಮೂಳೆಗಳ ಮೇಲೆ ದೀರ್ಘಕಾಲದವರೆಗೆ ಪರಿಣಾಮ ಬೀರಬಹುದು. ಅದರಲ್ಲೂ ಪ್ರಮುಖವಾಗಿ ನಿಮ್ಮ ಕೀಲುಗಳ ಮೇಲೆ ಓಡುವಾಗ ಹೆಚ್ಚಿನ ಒತ್ತಡ ಬೀಳುತ್ತದೆ. ಓಡುವುದಕ್ಕೆ ಹೋಲಿಸಿದರೆ ಸೈಕ್ಲಿಂಗ್ ಮಾಡುವಾಗ ಕೀಲುಗಳಿಗೆ ಅಷ್ಟು ದೊಡ್ಡ ಮಟ್ಟದಲ್ಲಿ ಪರಿಣಾಮವಾಗದು ಮತ್ತು ದೈಹಿಕವಾಗಿ ಗಾಯಾಳುವಾಗುವ ಸಮಸ್ಯೆಯೂ ಕಡಿಮೆ.

5. ಸ್ನಾಯುಗಳು ಬಲಿಷ್ಠವಾಗಲು

5. ಸ್ನಾಯುಗಳು ಬಲಿಷ್ಠವಾಗಲು

ಸೈಕ್ಲಿಂಗ್ ದೇಹದ ಕೆಳಭಾಗ ಅದರಲ್ಲೂ ತೊಡೆ ಮತ್ತು ಕಾಲುಗಳಿಗೆ ಒಳ್ಳೆಯ ವ್ಯಾಯಾಮ ನೀಡುತ್ತದೆ. ಸೈಕ್ಲಿಂಗ್ ಮೂಲಕ ನಿಮ್ಮ ದೇಹದ ಕೆಳಗಿನ ಭಾಗದ ಸ್ನಾಯುಗಳನ್ನು ಬಲಿಷ್ಠಗೊಳಿಸಬಹುದು. ಆದರೆ ಓಡುವುದರಿಂದ ಸ್ನಾಯುಗಳು ಬಲಗೊಳ್ಳುವ ಬದಲಿಗೆ ಅದರ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ನಿಮ್ಮ ದೇಹ ಬಲಿಷ್ಠಗೊಳಿಸಬಹುದು.

6. ಮೂಲಸೌಕರ್ಯ

6. ಮೂಲಸೌಕರ್ಯ

ಓಡಲು ನಿಮಗೆ ಇಡೀ ಭೂಮಿಯೇ ಇದೆ. ಓರೆಕೋರೆಯಾಗಿರುವ ಭೂಪ್ರದೇಶ, ಇಳಿಜಾರು ಮತ್ತು ಹುಲ್ಲಿನ ಬೆಟ್ಟಗಳಲ್ಲಿ ನೀವು ಓಡಬಹುದು. ಆದರೆ ಸೈಕ್ಲಿಂಗ್ ಗೆ ಸ್ಥಿರ ಮತ್ತು ಸಮತಟ್ಟದ ಮಾರ್ಗವಿದ್ದರೆ ಹೆಚ್ಚಿನ ಶ್ರಮವಿಲ್ಲದೆ ಸೈಕ್ಲಿಂಗ್ ಮಾಡಬಹುದು. ನಗರಗಳಲ್ಲೂ ಸೈಕಲ್ ನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕಾದರೆ ಕಡಿಮೆ ವಾಹನದಟ್ಟಣೆಯಿರುವ ರಸ್ತೆಗಳು ಬೇಕಾಗುತ್ತದೆ.

7. ಖರ್ಚು ಮತ್ತು ನಿರ್ವಹಣೆ

7. ಖರ್ಚು ಮತ್ತು ನಿರ್ವಹಣೆ

ದೈಹಿಕ ಚಟುವಟಿಕೆ ಮಾಡಲು ಎರಡು ಅತ್ಯಂತ ಕಡಿಮೆ ವೆಚ್ಚದಾಯಕ. ಅದರಲ್ಲೂ ಓಡಲು ತುಂಬಾ ಕಡಿಮೆ ವೆಚ್ಚ ಹಾಗೂ ನಿರ್ವಹಣೆ ಬೇಕಾಗುತ್ತದೆ. ರನ್ನಿಂಗ್ ಗೆ ಒಂದು ಜತೆ ಶೂ ಇದ್ದರೆ ಸಾಕು. ಇದನ್ನು ಪ್ರತೀ ಆರು ತಿಂಗಳಿಗೊಮ್ಮೆ ಬದಲಾಯಿಸಬಹುದು. ಸೈಕ್ಲಿಂಗ್ ಗೆ ಆರಂಭದಲ್ಲಿ ಹಣ ಹೂಡಬೇಕು ಮತ್ತು ಕಾಲಕಾಲಕ್ಕೆ ಇದರ ನಿರ್ವಹಣೆ ಕೂಡ ಹಣ ಬೇಕಾಗುತ್ತದೆ.

English summary

Cycling vs Running: Which Is Better?

Cycling and running are both an excellent form of physical workout. They are both equally good for your health though each has its own set of specific Benefit to your body and well being. Running is said to burn more calories than cycling per minute.
Story first published: Wednesday, November 27, 2013, 15:34 [IST]
X
Desktop Bottom Promotion