For Quick Alerts
ALLOW NOTIFICATIONS  
For Daily Alerts

ನಿದ್ರಾಹೀನತೆಯನ್ನು ನಿವಾರಿಸುವ ಟಿಪ್ಸ್

By ವಿವೇಕ್
|

ವಯಸ್ಸಾದಂತೆ ಅಥವಾ ಮಾನಸಿಕ ಒತ್ತಡ, ಅನಾರೋಗ್ಯ ಈ ಎಲ್ಲಾ ಕಾರಣಗಳಿಂದ ನಿದ್ರಾ ಹೀನತೆ ಸಮಸ್ಯೆ ಉಂಟಾಗುವುದು. ಈ ರೀತಿ ಉಂಟಾದರೆ ದೇಹದ ಆರೋಗ್ಯ ಮತ್ತಷ್ಟು ಹದಗೆಡುವುದು, ಸುಸ್ತು, ಮರೆವು ಕಾಣಿಸಿಕೊಳ್ಳುವುದು. ಈ ರೀತಿ ನಿದ್ದೆ ಸಮಸ್ಯೆ ಕಾಣಿಸಿಕೊಂಡಾಗ ನಿದ್ದೆ ಮಾತ್ರೆ ನುಂಗಿದರೆ ಅದು ಆರೋಗ್ಯಕ್ಕೆ ಮತ್ತಷ್ಟು ಅಪಾಯ! ಆದ್ದರಿಂದ ಈ ರೀತಿಯ ನಿದ್ರಾಹೀನತೆ ಸಮಸ್ಯೆಯನ್ನು ಈ ಕೆಳಗಿನ ಮನೆ ಮದ್ದಿನ ಮುಖಾಂತರ ಪರಿಹರಿಸಿಕೊಳ್ಳುವುದು ಬನ್ನಿ ಅವು ಯಾವುದು ಎಂಬದನ್ನು ನೋಡೋಣ...

ವೇಳಾಪಟ್ಟಿಯನ್ನು ಪಾಲಿಸಿ

ವೇಳಾಪಟ್ಟಿಯನ್ನು ಪಾಲಿಸಿ

ನಿದ್ದೆಗೆ ಒಂದು ಸಮಯವನ್ನು ಹಾಕಿಕೊಳ್ಳಿ. ಅದನ್ನು ಕಟ್ಟು ನಿಟ್ಟಾಗಿ ಪಾಲಿಸಿ. ನಿಮ್ಮ ದೇಹಕ್ಕೆ ವಿಶ್ರಾಂತಿ ಅಗತ್ಯವಾದಾಗ ಒಂದು ಬೆಕ್ಕು ನಿದ್ದೆ, ಅಥವಾ ಸ್ಟ್ರೆಚ್ಚಿಂಗ್ ಮುಂತಾದವನ್ನು ಮಾಡಿ. ಆದರೆ ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸಲು ನಿದ್ದೆಗು ವೇಳಾಪಟ್ಟಿ ಅಗತ್ಯ. ಇದರಿಂದಾಗಿ ನಿಮ್ಮ ದೇಹದಲ್ಲಿನ ಜೈವಿಕ ಗಡಿಯಾರವು ಸಮತೋಲನವನ್ನು ಸಾಧಿಸಿ, ನಿದ್ರಾಹೀನತೆಯನ್ನು ತಡೆಯುತ್ತದೆ.

ಧೂಮಪಾನವನ್ನು ತ್ಯಜಿಸಿ

ಧೂಮಪಾನವನ್ನು ತ್ಯಜಿಸಿ

ಧೂಮಪಾನವು ನಿದ್ರಾಹೀನತೆಯನ್ನುಂಟು ಮಾಡುವ ಪ್ರಮುಖ ಕಾರಣವಾಗಿದೆ. ನಿಕೋಟಿನ್ ಎಂಬುದು ಒಂದು ಪ್ರಚೋಧಕ ಇದು ನಿದ್ರಾಹೀನತೆಯನ್ನುಂಟು ಮಾಡುತ್ತದೆ. ಧೂಮಪಾನವು ನಮ್ಮಲ್ಲಿ ಉದ್ವೇಗವನ್ನು ಅಧಿಕಗೊಳಿಸುತ್ತದೆ. ಈ ಉದ್ವೇಗವು ನಿದ್ದೆಯನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಧೂಮಪಾನವನ್ನು ತ್ಯಜಿಸಿ, ನೆಮ್ಮದಿಯಾಗಿ ನಿದ್ದೆ ಮಾಡಿ.

ವಿಶ್ರಾಂತಿ ಪಡೆಯಿರಿ

ವಿಶ್ರಾಂತಿ ಪಡೆಯಿರಿ

ನಿದ್ದೆ ಮಾಡುವ ಮೊದಲು ನಿಮ್ಮ ಸಮಸ್ಯೆಗಳನ್ನು, ದುಃಖಗಳನ್ನು ಆದಷ್ಟು ದೂರ ತಳ್ಳಿ. ಗೊಂದಲ ಮತ್ತು ಗೋಜಲುಗಳಿಂದ ಕೂಡಿದ ಮೆದುಳು ಮತ್ತು ಮನಸ್ಸು ನಿದ್ದೆಯನ್ನು ಕಸಿದುಕೊಳ್ಳುತ್ತವೆ. ಪ್ರಕ್ಷುಬ್ದ ಮನಸ್ಸು ಕೆಟ್ಟ ಕನಸುಗಳನ್ನುಂಟು ಮಾಡಿ ನಿದ್ದೆಯನ್ನು ಹಾಳು ಮಾಡುತ್ತವೆ. ಹಾಗಾಗಿ ಧ್ಯಾನ, ಯೋಗ ಮುಂತಾದ ಚಟುವಟಿಕೆಗಳನ್ನು ಮಾಡಿ, ಮನಸ್ಸಿಗೆ ಮತ್ತು ದೇಹಕ್ಕೆ ವಿಶ್ರಾಂತಿಯನ್ನು ನೀಡಿ, ಚೆನ್ನಾಗಿ ನಿದ್ದೆ ಮಾಡಿ.

ಉಸಿರಾಟವನ್ನು ಮಾಡಿ.

ಉಸಿರಾಟವನ್ನು ಮಾಡಿ.

ಬದುಕಿರುವ ಎಲ್ಲರೂ ಉಸಿರಾಡುತ್ತಾರೆ ಎಂದು ಹೇಳಬೇಡಿ. ಉಸಿರಾಡುವುದು ಸಹ ಒಂದು ವ್ಯಾಯಾಮ. ಅದಕ್ಕಾಗಿಯೇ ಪ್ರಾಣಾಯಾಮ ಹಾಗು ಮುಂತಾದ ಉಸಿರಾಟದ ವ್ಯಾಯಾಮಗಳೇ ಇವೆ. ಇವು ದೇಹ ಮತ್ತು ನರಗಳಿಗೆ ಅಗತ್ಯವಾದ ವಿಶ್ರಾಂತಿಯನ್ನು ನೀಡುತ್ತವೆ. ಉತ್ತಮವಾದ ಉಸಿರಾಟದ ವ್ಯಾಯಾಮಗಳು ನಿಮ್ಮ ಹೃದಯದ ಆರೋಗ್ಯವನ್ನು ಮತ್ತು ರಕ್ತದ ಒತ್ತಡವನ್ನು ಕಾಪಾಡುತ್ತದೆ, ಜೊತೆಗೆ ಉತ್ತಮ ನಿದ್ದೆಯನ್ನು ಸಹ ನೀಡುತ್ತವೆ.

ವೈದ್ಯರನ್ನು ಸಂದರ್ಶಿಸಿ

ವೈದ್ಯರನ್ನು ಸಂದರ್ಶಿಸಿ

ನಿಮಗೆ ನಿದ್ರಾಹೀನತೆಯು ವಿಪರೀತವಾಗಿ ಕಾಡುತ್ತಿದ್ದರೆ ಮೊದಲು ವೈಧ್ಯರನ್ನು ಕಾಣಿರಿ. ಅವರು ನಿಮ್ಮನ್ನು ಪರೀಕ್ಷಿಸಿ, ನಿಮಗೆ ಅಗತ್ಯವಿರುವ ಮಾತ್ರೆ ಮತ್ತು ಔಷಧಿಗಳನ್ನು ನೀಡುತ್ತಾರೆ. ನಿಮ್ಮ ವೈಧ್ಯರು ನಿಮ್ಮ ನಿದ್ರಾಹೀನತೆಯ ಮೂಲವನ್ನು ಹುಡುಕಿ ಅದಕ್ಕೆ ಪರಿಹಾರವನ್ನು ತಿಳಿಸುವುದರಿಂದಾಗಿ ನಿಮ್ಮ ಸಮಸ್ಯೆ ಪರಿಹಾರವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಆದಷ್ಟು ವಿಪರೀತವಾದ ನಿದ್ರಾಹೀನತೆಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವೈಧ್ಯರ ಸಲಹೆ ಮತ್ತು ಸೂಚನೆಗಳನ್ನು ಪಡೆಯಿರಿ. ಇದರಿಂದಾಗಿ ಮುಂದೆ ನಿಮಗೆ ಉಂಟಾಗುವ ಆರೋಗ್ಯದ ಸಮಸ್ಯೆಗಳನ್ನು ಇಂದೇ ಪರಿಹರಿಸಬಹುದು. ಎಚ್ಚರ ನಿರಂತರವಾಗಿ ತೊಂದರೆಕೊಡುವ ನಿದ್ರಾಹೀನತೆಯನ್ನು ಎಂದಿಗು ಕಡೆಗಣಿಸಬೇಡಿ.

English summary

Cure Sleep Deprivation

Sleep deprivation, when untreated over a period of time, leads to long term complications and health issues such as weakening of your immune system, memory loss, impair your judgement skills etc. Let us take look at some ways to cure sleep deprivation.
X
Desktop Bottom Promotion