For Quick Alerts
ALLOW NOTIFICATIONS  
For Daily Alerts

ಈ ಔಷಧಿಗಳನ್ನು ಸೇವಿಸುವವರ ಮೈ ತೂಕ ಹೆಚ್ಚುವುದು!

By Super
|

ಔಷಧಿ, ಮಾತ್ರೆಗಳು ತೂಕ ಹೆಚ್ಚಲು ಕಾರಣವೆ? ಎಂದು ನೀವು ಕೇಳಬಹುದು. ಹೌದು, ಮಾತ್ರೆಗಳಿಂದ ದೇಹದ ತೂಕ ಹೆಚ್ಚಾಗಬಹುದು. ತೂಕ ಮತ್ತು ಅಗಲವಾಗುತ್ತಿರುವ ದೇಹಕ್ಕಾಗಿ ಅತಿಯಾಗಿ ಸೇವಿಸುತ್ತಿರುವ ತಲೆನೋವು, ಖಿನ್ನತೆ, ನೋವುನಿವಾರಕ ಮಾತ್ರೆಗಳನ್ನು ದೂಷಿಸಬಹುದು. ಆದರೆ, ತೂಕ ಹೆಚ್ಚಾಗುವುದು ಸ್ಟಿರಾಯಿಡ್, ಮಾನಸಿಕ ಕ್ಲೇಷ ವಿರೋಧಿ ಔಷಧಿ, ಆಂಟಿ-ಮೈಗ್ರೇನ್ ಔಷಧಿಗಳಿಂದ.

ಮಧುಮೇಹಕ್ಕೆ ನೀಡಲಾಗುವ ಔಷಧಿಗಳಾದ ಇನ್ಸುಲಿನ್ ಹಾಗೂ ಇತರ ಮಾತ್ರೆಗಳು ಕೂಡ ತೂಕ ಹೆಚ್ಚಿಸುವಲ್ಲಿ ಕಾರಣವಾಗುತ್ತವೆ. ಇವನ್ನು ಹೊರತುಪಡಿಸಿ, ಉಳಿದೆಲ್ಲ ಔಷಧಿಗಳಿಂದ ತೂಕ ಹೆಚ್ಚಾಗುತ್ತದೆ ಎಂದು ದೂಷಿಸಬಾರದು ಎಂದು ವೈದ್ಯರು ಹೇಳುತ್ತಾರೆ. ಮಾತ್ರೆಗಳು ದೇಹದ ತೂಕ ಹೆಚ್ಚಿಸುವಲ್ಲಿ ಹೇಗೆ ಕಾರಣವಾಗುತ್ತವೆ ಮುಂದೆ ಓದಿರಿ...

ಅಲರ್ಜಿ ಔಷಧಿ

ಅಲರ್ಜಿ ಔಷಧಿ

ಇದರಲ್ಲಿರುವ ಡಿಫನ್ ಹೈಡ್ರಮೈನ್ ತಕ್ಷಣ ತೂಕಡಿಕೆಗೆ ಕಾರಣವಾಗುತ್ತದೆ. ಸಾಧಾರಣವಾಗಿ ಕೆಮ್ಮಿನ ಔಷಧಿಗಳಲ್ಲಿ ಈ ಅಂಶಗಳಿದ್ದು, ನಮ್ಮ ಲವಲವಿಕೆಯನ್ನು ಕುಗ್ಗಿಸುತ್ತವೆ. ಹಾಗಾಗಿ, ಇದನ್ನು ನಿಮ್ಮ ವೈದ್ಯರಿಗೆ ತಿಳಿಸಿ, ಆಂಟಿಹಿಸ್ಟಮೈನ್ ಇರುವಂಥ ಜಿರ್ಟೆಕ್ ಔಷಧಿಯನ್ನು ಕೇಳಬೇಕು. ಇವುಗಳಲ್ಲಿ ನಿದ್ದೆ ತರಿಸುವ ಅಂಶ ಇರುವುದಿಲ್ಲ.

ಖಿನ್ನತೆ ನಿವಾರಕ ಔಷಧಿ

ಖಿನ್ನತೆ ನಿವಾರಕ ಔಷಧಿ

ಕೆಲ ಖಿನ್ನತೆ ತೊಲಗಿಸುವ ಔಷಧಿಗಳು ಹಸಿವನ್ನು ಹೆಚ್ಚಿಸುತ್ತವೆ. ಇದಕ್ಕೆ ಪರಿಹಾರವೆಂದರೆ, ಮನೋರೋಗ ತಜ್ಞರ ಸಹಾಯ ಪಡೆದು, ಜೈಬನ್ ಮತ್ತು ವೆಲ್ ಬುಟ್ರಿನ್ ನಂಥ ತೂಕ ಹೆಚ್ಚಿಸದಿರುವ ಖಿನ್ನತೆ ನಿವಾರಕ ಔಷಧಿಗಳನ್ನು ತೆಗೆದುಕೊಳ್ಳಬಹುದು.

ಗರ್ಭ ನಿಯಂತ್ರಕ ಮಾತ್ರೆ

ಗರ್ಭ ನಿಯಂತ್ರಕ ಮಾತ್ರೆ

ಹೆಚ್ಚು ಗರ್ಭನಿರೋಧಕ ಮಾತ್ರೆಗಳನ್ನು ಸೇವಿಸುವುದರಿಂದ ದೇಹದ ಉಬ್ಬುವಿಕೆಗೆ ಕಾರಣವಾಗಿ ತೂಕ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಲೋ-ಎಸ್ಟ್ರೋಜೆನ್ ಅಥವಾ ಪ್ರೋಜೆಸ್ಟಿನ್ ಮಾತ್ರೆಗಳನ್ನು ಸೇವಿಸಬಹುದು.

ನಿದ್ರಾಗುಳಿಗೆಗಳು

ನಿದ್ರಾಗುಳಿಗೆಗಳು

ನಿದ್ರಾಗುಳಿಗೆಗಳಾದ ಡೈಫೆನ್-ಹೈಡ್ರಮೈನ್, ಸೊಮಿನೆಕ್ಸ್ ಅಥವಾ ಟೈಲೆನಾಲ್ ಸಿಂಪ್ಲಿ ಸ್ಲೀಪ್ ನಂಥ ಮಾತ್ರೆಗಳು ತೂಕ ಹೆಚ್ಚುವಿಕೆಗೆ ಕಾರಣವಾಗುತ್ತವೆ. ನಿಮ್ಮ ವೈದ್ಯರ ಬಳಿ ದೀರ್ಘವಾಗಿ ಚರ್ಚಿಸಿ, ಅವರು ಸೂಚಿಸಿದಂಥ ಮಾತ್ರೆಗಳನ್ನು ಮಾತ್ರ ತೆಗೆದುಕೊಳ್ಳುವುದು ಒಳಿತು.

ಮೈಗ್ರೇನ್ ಔಷಧಿ

ಮೈಗ್ರೇನ್ ಔಷಧಿ

ಇವು ತಿನ್ನುವ ಬಯಕೆಯನ್ನು ಹೆಚ್ಚಿಸುವುದರ ಮೂಲಕ ಅತಿಯಾದ ತೂಕಕ್ಕೆ ಕಾರಣವಾಗುತ್ತವೆ. ಓಲಿಂಜಿಪೈನ್ ಮತ್ತು ಸೋಡಿಯಂ ವಾಲ್ ಪ್ರೋಟ್ ಮಾತ್ರೆಗಳು ತೂಕವನ್ನು ಹೆಚ್ಚಿಸುತ್ತವೆ. ಡಿಪಾಕೀನ್ ಮತ್ತು ಡಿಪಾಕೋಟ್ ನಂಥ ಮೈಗ್ರೇನ್ ಔಷಧಿಗಳಿಂದ ದೂರವಿದ್ದು, ವೈದ್ಯರನ್ನು ಸಂಪರ್ಕಿಸಿ ತೂಕ ಇಳಿಸುವ ಅಥವಾ ತೂಕ ಹೆಚ್ಚಲು ನೆರವಾಗದ ಔಷಧಿಗಳನ್ನು ಕೇಳಬೇಕು.

ಸ್ಟಿರಾಯಿಡ್

ಸ್ಟಿರಾಯಿಡ್

ಕೆಲ ಸ್ಟಿರಾಯಿಡ್ ಗಳು ನಿಮ್ಮ ಹಸಿವನ್ನು ತೀವ್ರವಾಗಿ ಹೆಚ್ಚಿಸುತ್ತವೆ. ನಿಮ್ಮ ಆಹಾರ ಸೇವನೆಯ ಅಪೇಕ್ಷೆಯನ್ನು ಹೆಚ್ಚಿಸಿ ತೂಕ ವೃದ್ಧಿಯಾಗುವಂತೆ ಮಾಡುತ್ತವೆ ಮತ್ತು ದೇಹ ಉಬ್ಬುವಿಕೆಗೂ ಕಾರಣವಾಗುತ್ತವೆ. ಇವುಗಳ ಸೇವನೆಯಿಂದ ದೇಹದಲ್ಲಿ ನೀರಿನಂಶ ಹೆಚ್ಚಾಗುವಿಕೆ ಮತ್ತು ಊದುವಿಕೆಯಂಥ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ವೈದ್ಯರನ್ನು ಕೇಳಿ NSAIDs ಪ್ರಿಸ್ಕ್ರೈಬ್ ಮಾಡುವಂತೆ ಕೇಳಿರಿ. ಆದರೆ, ನಿಮಗೆ ಅತಿಯಾದ ನೋವಿದ್ದು, ಪ್ರೆಡ್ನಿಸೋನ್ ನಂಥ ಸ್ಟಿರಾಯಿಡ್ ಅನ್ನೇ ಸೂಚಿಸಿದರೆ, ಹೆಚ್ಚಾಗಿ ತಿಂದರೂ ಕೂಡ ಅದನ್ನು ಕರಗಿಸಲು ಉತ್ತಮವಾಗಿ ವ್ಯಾಯಾಮ ಮಾಡುವುದನ್ನು ಮರೆಯಬೇಡಿ.

ಕಡೆಯ ಸಲಹೆ

ಕಡೆಯ ಸಲಹೆ

ಉತ್ತಮ ಆರೋಗ್ಯಕ್ಕೆ ಔಷಧಿ ಅಗತ್ಯವಾಗಿದ್ದಲ್ಲಿ ಅವನ್ನು ಖಂಡಿತವಾಗಿ ತೆಗೆದುಕೊಳ್ಳಬೇಕು ಮತ್ತು ಅದಕ್ಕೆ ಪ್ರತಿಯಾಗಿ ಬದಲಿ ಔಷಧಿಗಳನ್ನು ಕೂಡ ವೈದ್ಯರ ಸೂಕ್ತ ಸಲಹೆಯಂತೆ ಪಡೆದು ಸೇವಿಸಬೇಕು. ಹಲವು ರೋಗಿಗಳು ದೂರಿರುವ ಪ್ರಕಾರ, ವಿಟಾಮಿನ್ ಮತ್ತು ಕ್ಯಾಲ್ಶಿಯಂ ಔಷಧಿಗಳು ಕೂಡ ತೂಕ ಹೆಚ್ಚಿಸುತ್ತವೆ. ಆದರೆ ಇದು ಸುಳ್ಳು. ಸಾಮಾನ್ಯ ನೆಗಡಿ, ಕೆಮ್ಮು, ಶೀತ, ಸೋಂಕು ಜ್ವರ ಮತ್ತು ತ್ವಚೆ ಸೋಂಕುಗಳಿಗೆ ಬಳಸುವ ಔಷಧಿಗಳು ತೂಕ ಹೆಚ್ಚಿಸುವುದಿಲ್ಲ.

English summary

Can Medicines Make You Fat?

If you want the short answer, then yes - medicines can make you fat. But only a few of them. However, it's safe to blame your bulging waistline on your never-ending migraine, depression or pain medications.'Medicines which can cause weight gain are steroids, anti-psychotic drugs, anti-depressants, anti-seizure drugs, anti-migraine drugs.
X
Desktop Bottom Promotion