For Quick Alerts
ALLOW NOTIFICATIONS  
For Daily Alerts

ಬೆಣ್ಣೆ ಹಣ್ಣು ತಿನ್ನಿ, ವೈದ್ಯರಿಂದ ದೂರವಿರಿ!

By Super
|

ಮೆಡಿಟೇರಿನಿಯನ್ ಮೂಲದ ಹಣ್ಣಾಗಿರುವ ಆವಕಾಡೊ(ಬೆಣ್ಣೆ ಹಣ್ಣು)ದಲ್ಲಿ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ. ಪೇರಲೆ ಹಣ್ಣು ಅಥವಾ ಗೋಲಾಕಾರದಲ್ಲಿ ಬೆಣ್ಣೆಹಣ್ಣು ಇರುತ್ತದೆ. ಇದು ಕಾಯಿಯಾಗಿದ್ದಾಗ ಹಸಿರು ಮತ್ತು ಹಣ್ಣಾದಾಗ ಕಂದು ಬಣ್ಣವನ್ನು ಹೊಂದುತ್ತದೆ. ಆವಕಾಡೊವನ್ನು ಸಾಮಾನ್ಯವಾಗಿ ನೇರವಾಗಿ ಸೇವಿಸಬಹುದು ಅಥವಾ ಅಡುಗೆಯಲ್ಲೂ ಬಳಸಬಹುದು. ಇದನ್ನು ಸಸ್ಯಾಹಾರಿ ಅಡುಗೆಗಳಲ್ಲಿ ಮಾಂಸದ ಬದಲಿಗೆ ಬಳಸಲಾಗುತ್ತದೆ ಮತ್ತು ಮಿಲ್ಕ್ ಶೇಕ್ ಮತ್ತು ಐಸ್ ಕ್ರೀಂ ಗಳಲ್ಲಿ ಡೆಸರ್ಟ್ ವಸ್ತುವನ್ನಾಗಿ ಬಳಸಲಾಗುತ್ತದೆ.

ಅಗಾಧ ಪ್ರಮಾಣದ ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣಿನಲ್ಲಿ ವಿಟಮಿನ್ ಎ, ಬಿ ಮತ್ತು ಇ ಸಮೃದ್ಧವಾಗಿದೆ. ಇದರಲ್ಲಿ ನಾರಿನಾಂಶ ಮತ್ತು ಪ್ರೋಟೀನ್ ಹೇರಳವಾಗಿದೆ. ಬೆಣ್ಣೆಹಣ್ಣಿನಲ್ಲಿ ಹೆಚ್ಚಿನ ಕೊಬ್ಬಿನಾಂಶವಿದೆ. ಇದರಲ್ಲಿ ಗರಿಷ್ಠ ಪ್ರಮಾಣದ ಕ್ಯಾಲರಿಗಳಿವೆ. ಇದರಲ್ಲಿರುವ ಕೊಬ್ಬು ಪ್ರಕೃತಿದತ್ತವಾಗಿರುವ ಕಾರಣ ಇದು ಆರೋಗ್ಯಕರ.

Amazing Health Benefits Of Avocado

ಪ್ರೋಟೀನ್, ವಿಟಾಮಿನ್, ನಾರಿನಾಂಶ ಮತ್ತು ಖನಿಜಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಇದು ಅತ್ಯಂತ ಆರೋಗ್ಯ ಪ್ರಯೋಜನಕಾರಿ ಹಣ್ಣು. ಇದು ಹಲವಾರು ರೋಗ ನಿವಾರಣ ಶಕ್ತಿ ಹೊಂದಿದೆ. ಬೆಣ್ಣೆಹಣ್ಣಿನ ಕೆಲವೊಂದು ಆರೋಗ್ಯಕರ ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ.

1. ತೂಕ ಹೆಚ್ಚಿಸಲು
ಬೆಣ್ಣೆ ಹಣ್ಣಿನಲ್ಲಿ ಕ್ಯಾಲರಿ ಮತ್ತು ಆರೋಗ್ಯಕರ ಕೊಬ್ಬು ಸಮೃದ್ಧವಾಗಿದೆ. ಇದರಿಂದ ಇದು ತೂಕ ಹೆಚ್ಚಿಸಿಕೊಳ್ಳಲು ತುಂಬಾ ಸಹಕಾರಿ ಎಂದು ಪರಿಗಣಿಸಲಾಗಿದೆ. ಈ ಹಣ್ಣು ಕಾರ್ಬ್ ಮತ್ತು ಕೊಬ್ಬಿಗೆ ಒಳ್ಳೆಯ ಮೂಲ. 100 ಗ್ರಾಂ ಬೆಣ್ಣೆ ಹಣ್ಣಿನಲ್ಲಿ 60-80ರಷ್ಟು ಕ್ಯಾಲರಿಯಿದೆ. ಇದರಿಂದಾಗಿ ತೂಕ ಹೆಚ್ಚಿಸಿಕೊಳ್ಳಲು ಆರೋಗ್ಯ ಕ್ರಮದಲ್ಲಿ ಬೆಣ್ಣೆ ಹಣ್ಣನ್ನು ಉಪಯೋಗಿಸಿಕೊಳ್ಳಿ.

2. ಹೃದಯ ಸ್ನೇಹಿ
ಬೆಣ್ಣೆಹಣ್ಣು ಬಿ6 ಮತ್ತು ಫೊಲಿಕ್ ಆ್ಯಸಿಡ್ ನ ಸಮೃದ್ಧ ಮೂಲ. ಹೃದಯಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಇವು ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಬೆಣ್ಣೆಹಣ್ಣು ತುಂಬಾ ಲಾಭಕಾರಿಯೆಂದು ಪರಿಗಣಿಸಲಾಗಿದೆ. ಪ್ರಕೃತಿದತ್ತ ಕೊಬ್ಬನ್ನು ಹೊಂದಿರುವ ಕಾರಣ ಇದು ಹೃದಯಕ್ಕೆ ಒಳ್ಳೆಯದು ಮತ್ತು ಹೃದಯಾಘಾತವನ್ನು ತಡೆಯುತ್ತದೆ.

3. ಚರ್ಮಕ್ಕೆ ಒಳ್ಳೆಯದು
ಬೆಣ್ಣೆಹಣ್ಣಿನ ಎಣ್ಣೆ ಚರ್ಮದ ರಚನೆ ಮತ್ತು ಗುಣಮಟ್ಟವನ್ನು ಸುಧಾರಿಸಲು ಒಂದು ಅತ್ಯುತ್ತಮ ಎಣ್ಣೆ. ಒಣ ಚರ್ಮದ ಮೇಲೆ ಎಣ್ಣೆ ಹಚ್ಚುವುದರಿಂದ ಒರಟಾದ ಪಟ್ಟೆಗಳನ್ನು ಸುಧಾರಿಸುತ್ತದೆ ಮತ್ತು ಚರ್ಮಕ್ಕೆ ಹೊಳಪು ನೀಡಿ ಸುಂದರವಾಗಿಸುತ್ತದೆ. ಇದರಿಂದಾಗಿ ಬೆಣ್ಣೆಹಣ್ಣಿನ ಎಣ್ಣೆಯನ್ನು ಹಲವಾರು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ.

4. ರಕ್ತದ ಸಕ್ಕರೆ ಅಂಶ ನಿಯಂತ್ರಿಸಲು
ಬೆಣ್ಣೆ ಹಣ್ಣಿನಲ್ಲಿರುವ ಗರಿಷ್ಠ ಪ್ರಮಾಣದ ಕೊಬ್ಬುವಿನಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಕೊಬ್ಬು ದೇಹದಲ್ಲಿ ಇನ್ಸುಲಿನ್ ಉತ್ಪಾದನಾ ಮಟ್ಟವನ್ನು ನಿಯಂತ್ರಿಸುತ್ತದೆ. ಕಡಿಮೆ ಸಕ್ಕರೆ ಅಂಶದ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಬೆಣ್ಣೆಹಣ್ಣು ತುಂಬಾ ಲಾಭದಾಯಕ

5. ನೋವು ನಿವಾರಕ
ಸಂಧಿವಾತಕ್ಕೆ ಬೆಣ್ಣೆಹಣ್ಣು ನೋವುನಿವಾರಕ. ಇದು ಉರಿಯೂತ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಸಂಧಿವಾತದಿಂದ ಆಗುವ ಕೀಲು ಉರಿಯೂತ ನೋವಿಗೆ ಇದು ಪ್ರಯೋಜನಕಾರಿ. ಕೊಬ್ಬು, ವಿಟಮಿನ್ ಮತ್ತು ಕಬ್ಬಿಣ ಮತ್ತು ಪೊಟಾಸಿಯಂನಂತಹ ಪೌಷ್ಠಿಕಾಂಶಗಳನ್ನು ಹೊಂದಿರುವ ಬೆಣ್ಣೆಹಣ್ಣು ನೋವು ನಿವಾರಕ ಗುಣಗಳನ್ನು ಹೊಂದಿದೆ. ಬೆಣ್ಣೆಹಣ್ಣುಎಣ್ಣೆಯಿಂದ ದೀರ್ಘಕಾಲಿನ ನೋವುಗಳನ್ನು ನಿವಾರಿಸಬಹುದು.

ಇವುಗಳು ಬೆಣ್ಣೆಹಣ್ಣಿನ ಕೆಲವೊಂದು ಅದ್ಭುತ ಲಾಭಗಳು. ಚರ್ಮಕ್ಕೆ ಹೊಸತನ ನೀಡಿ ಹದಿಹರೆಯದವರಂತೆ ಕಾಣುವಂತೆ ಮಾಡುವ ಗುಣಲಕ್ಷಣಗಳು ಬೆಣ್ಣೆಹಣ್ಣಿನಲ್ಲಿದೆ. ಬೆಣ್ಣೆ ಹಣ್ಣು ಕ್ಯಾನ್ಸರ್ ನ್ನು ತಡೆಗಟ್ಟುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ. ಹೃದಯ, ಚರ್ಮ ಮತ್ತು ಸ್ನಾಯುಗಳಿಗೆ ಸಂಬಂಧಿಸಿದ ರೋಗಗಳ ನಿವಾರಣೆಯಲ್ಲಿ ಬೆಣ್ಣೆಹಣ್ಣು ಪ್ರಮುಖ ಪಾತ್ರ ನಿರ್ವಹಿಸುತ್ತದೆ.

ಮೇಲಿನ ಎಲ್ಲಾ ಅಂಶಗಳಿಂದ ಬೆಣ್ಣೆಹಣ್ಣು ತುಂಬಾ ಆರೋಗ್ಯಕರ ಮತ್ತು ಪ್ರಯೋಜಕಾರಿಯೆಂದು ಪರಿಗಣಿಸಲಾಗಿದೆ. ಮುಂದಿನ ಸಲ ನಿಮ್ಮ ಆರೋಗ್ಯ ಕ್ರಮದಲ್ಲಿ ಈ ಹಣ್ಣನ್ನು ಸೇರಿಸಲು ಮರೆಯದಿರಿ. ನಿಯಮಿತವಾಗಿ ಈ ಹಣ್ಣಿನ ಸೇವನೆಯಿಂದ ಚರ್ಮವನ್ನು ಕಾಂತಿಯುತವನ್ನಾಗಿ ಮಾಡಿ, ತೂಕವನ್ನು ನಿಯಂತ್ರಿಸುತ್ತದೆ ಮತ್ತು ನೀವು ಹದಿಹರೆಯದವರು ಹಾಗೂ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಮಧುಮೇಹ ಮತ್ತು ಸಂಧಿವಾತದಂತಹ ಕಾಯಿಲೆಗಳಿಂದ ಇದು ನಿಮ್ಮನ್ನು ದೂರವಿಡುತ್ತದೆ. ದಿನಕ್ಕೊಂದು ಸೇಬು ವೈದ್ಯರನ್ನು ನಿಮ್ಮಿಂದ ದೂರವಿರುತ್ತದೆ ಎನ್ನಲಾಗುತ್ತದೆ. ಆದರೆ ದಿನಕ್ಕೊಂದು ಬೆಣ್ಣೆಹಣ್ಣು ಸೇವನೆಯಿಂದ ಖಂಡಿತವಾಗಿಯೂ ವೈದ್ಯರನ್ನು ದೂರವಿಡಬಹುದು. ಈ ಹಣ್ಣಿನ ಎಲ್ಲಾ ಲಾಭಗಳನ್ನು ಪಡೆದು ಇದನ್ನು ಇಷ್ಟಪಡುತ್ತೀರಿ ಎನ್ನುವ ಆಶಯವಿರಿಸಿಕೊಂಡಿದ್ದೇವೆ.

English summary

Amazing Health Benefits Of Avocado

Avacados are rich in nutrients and have a high content of Vitamins like A,B and E. They are also rich in fibres and proteins. Avacado is also one of the most fat containing fruit. It contains high calories. But the fat content is healthy as it is monosaturated in nature.
X
Desktop Bottom Promotion