For Quick Alerts
ALLOW NOTIFICATIONS  
For Daily Alerts

ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾದ ಆಹಾರಗಳು

|

ಕೆಲವೊಂದು ಆಹಾರಗಳು ನಮ್ಮಲ್ಲಿ ಕಂಡು ಬರುವ ಚಿಕ್ಕ ಪುಟ್ಟ ಕಾಯಿಲೆಗಳನ್ನು ದೂರ ಮಾಡುವಲ್ಲಿ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಉದಾಹರಣೆಗೆ ಪ್ರಯಾಣ ಮಾಡುವಾಗ ವಾಂತಿ ಬರುವ ಅನುಭವ ಉಂಟಾದರೆ ನಿಂಬೆ ಹಣ್ಣನ್ನು ಮೂಸಿದರೆ ಸಾಕು. ಅದರ ವಾಸನೆಗೆ ವಾಂತಿ ಬರುವುದಿಲ್ಲ.

ಹೀಗೆ ನಾವು ದಿನ ನಿತ್ಯ ಬಳಸುವ ಅನೇಕ ಆಹಾರಗಳು ಔಷಧೀಯ ಗುಣವನ್ನು ಹೊಂದಿರುತ್ತವೆ. ಇಲ್ಲಿ ನಾವು ಕೆಲವು ಆಹಾರಗಳ ಬಗ್ಗೆ ಹೇಳಲಾಗಿದೆ. ಸಣ್ಣ ಪುಟ್ಟ ಕಾಯಿಲೆಗಳನ್ನು ನಿವಾರಿಸುವಲ್ಲಿ ಅವು ನಿಮ್ಮ ಸಹಕಾರಿಯಾಗುತ್ತವೆ.

ಶುಂಠಿ

ಶುಂಠಿ

ಅಜೀರ್ಣ ಸಮಸ್ಯೆಯಿದ್ದರೆ, ಕೆಮ್ಮು ಕಾಣಿಸಿಕೊಂಡರೆ ಒಂದು ಚಮಚ ಶುಂಠಿ ರಸ ಕುಡಿದರೆ ಸಾಕು ಗುಣಮುಖವಾಗುವುದು. ತುಂಬಾ ಕೆಮ್ಮುತ್ತಿದ್ದರೆ ಒಂದು ತುಂಡು ಶುಂಠಿಯನ್ನು ಕತ್ತರಿಸಿ ಬಾಯಿಯಲ್ಲಿ ಇಟ್ಟುಕೊಂಡರೆ ಕೆಮ್ಮು ಸ್ವಲ್ಪ ಕಮ್ಮಿಯಾಗುತ್ತದೆ.

ಜೇನು

ಜೇನು

ಗಾಯವಾದರೆ ಆ ಭಾಗಕ್ಕೆ ಜೇನು ಹಚ್ಚಿದರೆ ಸಾಕು ತಕ್ಷಣ ಗುಣಮುಖವಾಗುವುದು. ಜೇನಿನಲ್ಲಿ antiseptic ಗುಣವಿದೆ.

ಮೆಣಸು

ಮೆಣಸು

ಮೆಣಸಿನಲ್ಲಿರುವ capciasin ಅಂಶ ಸಂಧಿನೋವು ಗುಣಪಡಿಸುತ್ತದೆ. ದೇಹದ ತೂಕ ಕಡಿಮೆ ಮಾಡುತ್ತೆ. ಹಾಗಂತ ತುಂಬಾ ಖಾರ ತಿಂದರೆ ಹೊಟ್ಟೆ ಉರಿ ಕಾಣಿಸಿಕೊಳ್ಳಬಹುದು.

ಹಾಗಾಲಕಾಯಿ

ಹಾಗಾಲಕಾಯಿ

ಹಾಗಾಲಕಾಯಿ ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಸರಿಯಾದ ರೀತಿಯಲ್ಲಿ ಇರುವಂತೆ ನೋಡಿಕೊಳ್ಳುತ್ತದೆ. ಮಧುಮೇಹಿಗಳು ಇದನ್ನು ತಮ್ಮ ಆಹಾರದಲ್ಲಿ ತಪ್ಪದೇ ಸೇರಿಸಿಕೊಂಡರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಆಲೀವ್ ಎಣ್ಣೆ

ಆಲೀವ್ ಎಣ್ಣೆ

ಆಲೀವ್ ಎಣ್ಣೆಯನ್ನು ತಲೆ ಬುಡಕ್ಕೆ ಹಚ್ಚಿ ಮಸಾಜ್ ಮಾಡಿದರೆ ತಲೆ ತುರಿಕೆ ಸಮಸ್ಯೆಯನ್ನು ಹೋಗಲಾಡಿಸಬಹುದು.

ಬಾಳೆ ಹಣ್ಣು

ಬಾಳೆ ಹಣ್ಣು

ಚರ್ಮದ ಮೇಲೆ ಚಿಕ್ಕ-ಚಿಕ್ಕ ಗಂಟು (ನರೂಲಿ) ಕಂಡು ಬಂದರೆ ತ್ವಚೆ ತನ್ನ ಸೌಂದರ್ಯವನ್ನು ಕಳೆದುಕೊಳ್ಳುವುದು. ಬಾಳೆ ಹಣ್ಣನ್ನು ದಿನಾ ಆ ಭಾಗಕ್ಕೆ ಹಚ್ಚುತ್ತಾ ಬಂದರೆ ಸಂಪೂರ್ಣವಾಗಿ ಗುಣ ಪಡಿಸಬಹುದು.

ಟೀ

ಟೀ

ಕೆಲವರ ಪಾದ ವಿಪರೀತ ಬೆವರಿ ದುರ್ಗಂಧ ಬೀರುತ್ತದೆ. ಇದು ಹಾರ್ಮೋನಲ್ ವ್ಯತ್ಯಾಸದಿಂದ ಕೂಡ ಉಂಟಾಗುತ್ತದೆ. ಅಂತಹವರು ಬ್ಲ್ಯಾಕ್ ಟೀ ಮಾಡಿ ಅದರಲ್ಲಿ ಸ್ವಲ್ಪ ಹೊತ್ತು ಇಟ್ಟರೆ ಆ ರೀತಿ ಪಾದ ದುರ್ನಾತ ಬೀರುವುದನ್ನು ತಡೆಗಟ್ಟಬಹುದು.

ನಿಂಬೆ ಹಣ್ಣು

ನಿಂಬೆ ಹಣ್ಣು

ವಾಂತಿ ಬರುವಂತೆ ಅನಿಸಿದರೆ ನಿಂಬೆ ಹಣ್ಣಿನ ವಾಸನೆ ಗ್ರಹಿಸಿದರೆ ಸಾಕು ವಾಂತಿ ಬರುವುದಿಲ್ಲ. ಸುಸ್ತಾದಾಗ ಒಂದು ಲೋಟ ನಿಂಬೆ ಪಾನಕ ಕುಡಿದರೆ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ.

ಹಾಲು

ಹಾಲು

ಸನ್ ಟ್ಯಾನ್ ಉಂಟಾದರೆ ಹಾಲನ್ನು ಮುಖಕ್ಕೆ ಹಚ್ಚಿ ಸ್ವಲ್ಪ ಹೊತ್ತು ಮುಖ ತೊಳೆದರೆ ಸಾಕು ಬೇಗನೆ ಸನ್ ಟ್ಯಾನ್ ಕಡಿಮೆಯಾಗುವುದು.

ಕಲ್ಲಂಗಡಿ

ಕಲ್ಲಂಗಡಿ

ನಿರ್ಜಲೀಕರಣ ಉಂಟಾದರೆ ಕಲ್ಲಂಗಡಿ ಹಣ್ಣನ್ನು ತಿಂದರೆ ಸಾಕು ದೇಹದಲ್ಲಿ ನೀರಿನಂಶವನ್ನು ಕಾಪಾಡಿಕೊಳ್ಳಬಹುದು.

ಬೆಂಡೆ ಕಾಯಿ

ಬೆಂಡೆ ಕಾಯಿ

ಮಧುಮೇಹಿಗಳಿಗೆ ಬೆಂಡೆ ಕಾಯಿ ಬೆಸ್ಟ್ ಔಷಧಿ. ಬೆಂಡೆಕಾಯಿಯನ್ನು ಕತ್ತರಿಸಿ ಅದರಿಂದ ಬರುವ ಬಿಳಿ ಹಾಲನ್ನು ಒಂದು ಲೋಟ ನೀರಿಗೆ ಹಾಕಿ ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಕುಡಿದರೆ ಇನ್ಸುಲಿನ್ ಪ್ರಮಾಣವನ್ನು ನಿಯಂತ್ರಣದಲ್ಲಿಡಬಹುದು.

English summary

11 Foods With Medicinal Properties | Tips For Health | ಸಣ್ಣ ಪುಟ್ಟ ಕಾಯಿಲೆಗಳಿಗೆ ರಾಮಬಾಣವಾದ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Food is not just for filling your stomach and giving you the energy essential to do your routine jobs. There are many uses of foods that you may not have even considered. For example, did you ever imagine that food could have medicinal uses.
X
Desktop Bottom Promotion