For Quick Alerts
ALLOW NOTIFICATIONS  
For Daily Alerts

ಈ ರೀತಿಯ ಗಾಯ ತುಂಬಾ ಅಪಾಯಕಾರಿ!

|
Should Not Neglect These Type Of Bruises
ಜೋರಾಗಿ ಬಿದ್ದಾಗ ತರಚು ಗಾಯಗಳಾಗಿ ರಕ್ತ ಬರುವುದು ಸಹಜ. ಆ ರೀತಿ ಉಂಟಾದರೆ ಸ್ವಲ್ಪ ಹೊತ್ತು ರಕ್ತ ಹರಿದು ನಂತರ ನಿಂತು ಹೋಗುತ್ತದೆ. ಆದರೆ ಕೆಲವರಿಗೆ ಗಾಯವಾದರೆ ರಕ್ತ ಹರಿಯುವುದು ನಿಲ್ಲುವುದಿಲ್ಲ. ದೇಹದ ಆರೋಗ್ಯದಲ್ಲಿ ಏನಾದರೂ ಸಮಸ್ಯೆ ಇದ್ದರೆ, ದೇಹದಲ್ಲಿ ರಕ್ತಸಂಚಾರ ಸರಿಯಾಗಿರದೆ ಸ್ವಲ್ಪ ತಾಗಿದರೂ ರಕ್ತ ಬಂದು ಬಿಡುತ್ತದೆ ಮತ್ತು ಸುಲಭದಲ್ಲಿ ನಿಲ್ಲುವುದಿಲ್ಲ.

ಮತ್ತೆ ಕೆಲವರ ದೇಹದಲ್ಲಿ ಗಾಯ ಕಂಡುಬರುತ್ತದೆ ಆದರೆ ಆ ಗಾಯ ಉಂಟಾಗಿರುವುದಕ್ಕೆ ಕಾರಣ ಮಾತ್ರ ಗೊತ್ತಿರುವುದಿಲ್ಲ, ತನ್ನಿಷ್ಟಕ್ಕೆ ಗಾಯ ಕಂಡುಬಂದಿರುತ್ತದೆ. ಈ ರೀತಿ ಸಮಸ್ಯೆ ಕಂಡುಬಂದರೆ ಈ ಕೆಳಗಿನ ಕಾಯಿಲೆಗಳು ಪ್ರಮುಖ ಕಾರಣವಾಗಿವೆ.

ವಿಟಮಿನ್ ಕೆಯ ಕೊರತೆ: ವಿಟಮಿನ್ ಕೆ ಕೊರತೆ ತುಂಬಾ ಇದ್ದರೆ ದೇಹದಲ್ಲಿ ಚರ್ಮದ ಕೆಳ ಭಾಗದಲ್ಲಿ ರಕ್ತ ಹೆಪ್ಪು ಗಟ್ಟುವುದರಿಂದ ಈ ರೀತಿಯ ಕಾಯಿಲೆ ಕಂಡು ಬರುತ್ತದೆ. ಆಗ ಗಾಯವಾದಾಗ ತುಂಬಾ ರಕ್ತ ಹರಿಯುತ್ತದೆ. ಈ ಸಮಸ್ಯೆಯ್ನನು ತಡೆಗಟ್ಟಲು ವಿಟಮಿನ್ ಕೆ ಇರುವ ಆಹಾರ ತಿನ್ನಬೇಕು.

ಸೊಪ್ಪು-ತರಕಾರಿಗಳು, ಪಾಲಾಕ್, ಬಾಳೆ ಗಿಡದಿಂದ ತಯಾರಿಸುವ ಖಾದ್ಯ, ಎಲೆಕೋಸು, ಬ್ರೊಕೋಲಿ, ಅಣಬೆ ಇವುಗಳಲ್ಲಿ ವಿಟಮಿನ್ ಕೆ ಅಂಶವಿರುತ್ತದೆ.

ಕಡಿಮೆ ಪ್ರಮಾಣದ ಕಿರುಬಿಲ್ಲೆ (Low Platelet): ದೇಹದಲ್ಲಿ ಯಾವುದಾದರೂ ದೊಡ್ಡ ಕಾಯಿಲೆ ಇದ್ದರೆ ದೇಹದಲ್ಲಿ ಕಿರುಬಿಲ್ಲೆಗಳ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಗಾಯವಾದರೆ ರಕ್ತ ಬೇಗನೆ ಹೆಪ್ಪುಗಟ್ಟುವುದಿಲ್ಲ.

ವಂಶಪಾರಂಪರ್ಯವಾಗಿ ಬಂದ ಕಾಯಿಲೆ: ಕೆಲವರಿಗೆ ಗಾಯವಾದರೆ ರಕ್ತ ಬೇಗನೆ ಹೆಪ್ಪುಗಟ್ಟುವುದಿಲ್ಲ. ಈ ರೀತಿಯ ಕಾಯಿಲೆ ವಂಶಪಾರಂಪರ್ಯವಾಗಿ ಬಂದಿರುತ್ತದೆ. ಇಂತಹವರು ಆದಷ್ಟು ಗಾಯವಾಗದಂತೆ ಎಚ್ಚರವಹಿಸಬೇಕು.

ವಯಸ್ಸಾದಾಗ: ವಯಸ್ಸಾದಂತೆ ದೇಹ ದುರ್ಬಲವಾಗುತ್ತದೆ. ಆ ಸಮಯದಲ್ಲಿ ಚಿಕ್ಕ ಗಾಯವಾದರೂ ಸಾಕಷ್ಟು ರಕ್ತ ಹರಿಯುತ್ತದೆ.

ಬ್ಲಡ್ ಕ್ಯಾನ್ಸರ್: ರಕ್ತದಲ್ಲಿ ಕ್ಯಾನ್ಸರ್ ಕಣಗಳಿದ್ದರೆ ಮೂಗು ಮತ್ತು ದವಡೆಯಲ್ಲಿ ರಕ್ತ ಬರಲಾರಂಭಿಸುತ್ತದೆ.

ತನ್ನಿಷ್ಟಕ್ಕೆ ಗಾಯವಾದರೆ ಅಥವಾ ಗಾಯವಾಗಿ ರಕ್ತ ಹೆಪ್ಪುಗಟ್ಟದಿದ್ದರೆ ಚಿಕಿತ್ಸೆ ಹೇಗೆ ಮಾಡಬೇಕೆಂದು ತಿಳಿಯಲು ಮುಂದೆ ಓದಿ.

English summary

Should Not Neglect These Type Of Bruises | Tips For Health | ಈ ರೀತಿಯ ಗಾಯ ಕಂಡು ಬಂದರೆ ನಿರ್ಲಕ್ಷ್ಯ ಮಾಡಬಾರದು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

When the clotting of your blood is not proper, then it can result in easy bruises.Here are some of reasons why you could be getting bruises easily on your skin.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more