For Quick Alerts
ALLOW NOTIFICATIONS  
For Daily Alerts

ತರಚು ಗಾಯಕ್ಕೆ ಪರಿಣಾಮಕಾರಿ ಮನೆಮದ್ದು

|
Should Not Neglect These Type Of Bruises
ತರಚು ಗಾಯವಾಗಿ ರಕ್ತ ಹರಿಯುತ್ತಿದ್ದರೆ ಈ ಕೆಳಗಿನ ಮನೆಮದ್ದು ಮಾಡಬಹುದು.

1. ಗಾಯವಾದ ಭಾಗಕ್ಕೆ ಐಸ್ ಪ್ಯಾಕ್ ಇಡಬೇಕು. ಈ ರೀತಿ 20ರಿಂದ 30 ನಿಮಿಷ ಇಡಬೇಕು. ಈ ರೀತಿ ಮಾಡಿದರೆ ಗಾಯದ ಉರಿ ಕಡಿಮೆಯಾಗಿ ರಕ್ತ ಹೆಪ್ಪುಗಟ್ಟುವುದು. ಆದರೆ ಈ ರೀತಿ ಐಸ್ ಪ್ಯಾಕ್ ಇಡುವಾಗ ಐಸ್ ತುಂಡುಗಳನ್ನು ನೇರವಾಗಿ ಗಾಯದ ಮೇಲೆ ಇಡಬಾರದು. ಐಸ್ ಅನ್ನು ಒಂದು ಟವಲ್ ನಲ್ಲಿ ಸುತ್ತಿ ನಂತರ ಗಾಯದ ಮೇಲೆ ಇಡಬೇಕು.

2. ಕಾಲು ಅಥವಾ ಕೈಗೆ ತರಚು ಗಾಯಗಳಾಗಿದ್ದರೆ ಆ ಭಾಗಗಳನ್ನು ಆದಷ್ಟು ಮೇಲಕ್ಕೆ ಎತ್ತಿ ಇಡಬೇಕು.

3. ಗಾಯಗಳಾದರೆ ಆಸ್ಪಿರಿನ್ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಏಕೆಂದರೆ ಆಸ್ಪಿರಿನ್ ರಕ್ತ ಬೇಗನೆ ಹೆಪ್ಪುಗಟ್ಟುವುದನ್ನು ತಡೆಯುತ್ತದೆ.

4. ಗಾಯವಾಗಿ 48 ಗಂಟೆಗಳ ಬಳಿಕ ಬಟ್ಟೆಯನ್ನು ಬಿಸಿ ಮಾಡಿ ಶಾಖ ಕೊಡಬೇಕು. ಈ ರೀತಿ ಮಾಡಿದರೆ ಆ ಭಾಗದಲ್ಲಿ ರಕ್ತ ಸಂಚಾರಕ್ಕೆ ಸಹಾಯಕವಾಗುತ್ತದೆ.

ವೈದ್ಯಕೀಯ ನೆರವು ಯಾವಾಗ ಪಡೆಯಬೇಕು?

1. ಗಾಯವಾಗಿ ಅದು ಬೇಗನೆ ಒಣಗದೆ ಆ ಭಾಗ ದಪ್ಪವಾಗಿ ತುಂಬಾ ನೋವಾಗುತ್ತಿದ್ದರೆ ವೈದ್ಯರನ್ನು ಕಂಡು ಚಿಕಿತ್ಸೆ ಪಡೆಯಬೇಕು.

2. ಯಾವುದೇ ಕಾರಣವಿಲ್ಲದೆ ಶರೀರದಲ್ಲಿ ಗಾಯ ಕಂಡುಬಂದರೆ ವೈದ್ಯರನ್ನು ಕಾಣಬೇಕು.

3. ಹೆಬ್ಬರಳು ಮತ್ತು ಕೈಬೆರಳುಗಳಲ್ಲಿ ಗಾಯ ಕಂಡು ಬಂದು ಆ ಭಾಗ ತುಂಬಾ ನೋಯುತ್ತಿದ್ದರೆ ವೈದ್ಯರನ್ನು ಕಂಡು ಪರೀಕ್ಷಿಸಬೇಕು.

4. ಗಾಯವಾಗಿ ಎರಡು ವಾರಗಳಾದರೂ ಗಾಯ ಒಣಗದಿದ್ದರೆ ಸುಮ್ಮನೆ ಇರದೆ ವೈದ್ಯರನ್ನು ಕಂಡು ಸಲಹೆ ಪಡೆಯಬೇಕು.

5. ಕೆಲವೊಮ್ಮೆ ತಲೆಯಲ್ಲಿ ಬಿದ್ದು ಗಾಯವಾದಂತೆ ಗಾಯ ಕಂಡು ಬರುತ್ತದೆ ಆದರೆ ಆ ವ್ಯಕ್ತಿ ಎಲ್ಲಿಯೂ ಬಿದ್ದಿರುವುದಿಲ್ಲ ಅಥವಾ ಯಾವುದೇ ಅಪಘಾತ ಉಂಟಾಗಿರುವುದಿಲ್ಲ ಆದರೂ ಗಾಯ ಕಂಡು ಬಂದಿರುತ್ತದೆ. ಈ ರೀತಿ ಕಂಡು ಬಂದರೆ ತಲೆಯಲ್ಲಿ ಯಾವುದೋ ಕಾಯಿಲೆ ಇರುತ್ತದೆ ಆದ್ದರಿಂದ ಈ ರೀತಿ ಉಂಟಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.

English summary

reatment For Bruise | Tips For Health | ಗಾಯವಾಗಿ ರಕ್ತ ಹೆಪ್ಪುಗಟ್ಟದಿದ್ದರೆ ಚಿಕಿತ್ಸೆ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

When the clotting of your blood is not proper, then it can result in easy bruises.Here are some of the home remedies for bruises.
X
Desktop Bottom Promotion