ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ

Posted By:
Subscribe to Boldsky

ಥೈರಾಯ್ಡ್ ಸಮಸ್ಯೆ ಈಗ ಹೆಚ್ಚಿನವರಲ್ಲಿ ಕಂಡು ಬರುತ್ತಿದೆ. ಈ ಕಾಯಿಲೆ ಭಯಪಡುವಂತಹ ಕಾಯಿಲೆ ಅಲ್ಲದಿದ್ದರೂ ಇದಕ್ಕೆ ಚಿಕಿತ್ಸೆ ಸರಿಯಾಗಿ ತೆಗೆದುಕೊಳ್ಳದಿದ್ದರೆ ಅಪಾಯ.

Natural Remedies For Thyroid Problem

ಸಂಶೋಧನೆ ಪ್ರಕಾರ ನಾನ್ ಸ್ಟಿಕ್ ಬಾಣಲೆಯನ್ನು ಕೆರೆದು ತುಂಬಾ ಗೆರೆ ಬಿದ್ದಂತಹ ಬಾಣಲೆಯಲ್ಲಿ ಅಡುಗೆ ಮಾಡಿ ತಿಂದರೆ ನಾನ್ ಸ್ಟಿಕ್‌ ತಯಾರಿಸುವಾಗ ಪರ್‌‌ಫ್ಲೋರೊಟೇನ್ ಸಲ್ಫೇಟ್‌ನಂತಹ (perfluoroctane sulphate) ರಾಸಾಯನಿಕ ದೇಹವನ್ನು ಸೇರುವುದಿಂದ ಥೈರಾಯ್ಡ್ ಸಮಸ್ಯೆ ಉಂಟಾಗುತ್ತದೆ.

ಸಲಹೆ: ಅದಕ್ಕಾಗಿ ನಾನ್ ಸ್ಟಿಕ್ ಬಳಕೆ ನಿಲ್ಲಿಸಬೇಕಾಗಿಲ್ಲ. ಬಾಣಲೆಯಲ್ಲಿರುವ ವಸ್ತುಗಳನ್ನು ತೆಗೆಯಲು ಉಪಯೋಗಿಸುವ ಸೌಟ್ ಸ್ಟೀಲ್‌ಗಿಂತ ಪ್ಲಾಸ್ಟಿಕ್ ಆಗಿರುವುದು ಒಳ್ಳೆಯದು.

ಕೆಲವು ಮಹಿಳೆಯರಿಗೆ ಗರ್ಭ ನಿರೋಧಕ ಮಾತ್ರೆ ತೆಗೆದುಕೊಳ್ಳುವುದರಿಂದ ಕೂಡ ಈ ರೀತಿಯ ಸಮಸ್ಯೆ ಉಂಟಾಗುವುದು. ಗರ್ಭನಿರೋಧಕ ಮಾತ್ರೆ ಸೇವಿಸಲು ಪ್ರಾರಂಭಿಸಿದ ಒಂದು ತಿಂಗಳನಲ್ಲಿಯೆ ತಲೆಸುತ್ತು, ಸುಸ್ತು ಕಾಣಿಸಿಕೊಂಡರೆ ಅದು ಥೈರಾಯ್ಡ್ ಸಮಸ್ಯೆ ಆಗಿರಬಹುದು.

ಅಧಿಕ ಒತ್ತಡದ ಹಾರ್ಮೋನ್‌ಗಳು ಬಿಡುಗಡೆಯಾಗುವುದರಿಂದ ಕೂಡ ಥೈರಾಯ್ಡ್ ಸಮಸ್ಯೆ ಉಂಟಾಗುವುದು. ಆದ್ದರಿಂದ ದಿನ ಅರ್ಧಗಂಟೆ ಪ್ರಾಣಯಾಮ ಅಥವಾ ವ್ಯಾಯಾಮ ಮಾಡುವುದರಿಂದ ದೇಹದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.

ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಕೆಲ ಸಲಹೆಗಳು:

ಅಶ್ವಗಂಧ: ಥೈರಾಯ್ಡ್ ಸಮಸ್ಯೆ ಕಾಣಿಸಿಕೊಂಡರೆ ಶೇ. 90ರಷ್ಟು ಮಹಿಳೆಯರಿಗೆ ತಲೆ ಸುತ್ತು, ಒತ್ತಡ, ನಿದ್ದೆ ಹೀನತೆ, ಕುತ್ತಿಗೆ ಬಳಿ ನೋವು ಕಾಣಿಸಿಕೊಳ್ಳುತ್ತದೆ. ಅಶ್ವಗಂಧ ಈ ಎಲ್ಲಾ ಸಮಸ್ಯೆ ನಿವಾರಣೆ ಮಾಡುವಲ್ಲಿ ತುಂಬಾ ಪರಿಣಾಮಕಾರಿಯಾದ ಔಷಧಿಯಾಗಿದೆ.

ಬ್ರೊಕೋಲಿ: ಬ್ರೊಕೋಲಿಯಲ್ಲಿ ಗ್ವಾಯಟ್ರೊಜಿನ್ ಅಂಶವಿದ್ದು ಇದು ಥೈರಾಯ್ಡ್ ಅಯೋಡಿನ್ ಹೀರಿಕೊಳ್ಳುವುದನ್ನು ತಡೆಗಟ್ಟುತ್ತದೆ. ಅಯೋಡಿನ್ ಇಲ್ಲ ಅಂದರೆ ದೇಹದಲ್ಲಿ ಥೈರಾಯ್ಡ್ ಹಾರ್ಮೋನ್ ಉತ್ಪತ್ತಿ ಆಗಲು ಸಾಧ್ಯವಿಲ್ಲ. ಆದ್ದರಿಂದ ಥೈರಾಯ್ಡ್ ಸಮಸ್ಯೆ ನಿವಾರಣೆಗೆ ಬ್ರೊಕೋಲಿ ಒಳ್ಳೆಯ ಆಹಾರವಾಗಿದೆ.

ಪ್ರೊಟೀನ್ : ಆಹಾರಕ್ರಮದಲ್ಲಿ ಈ ಕೆಳಗಿನ ಅಂಶಗಳನ್ನು ಸೇರಿಸುವುದು ಒಳ್ಳೆಯದು.

* 2 ಚಮಚ peanut butter ( ಶೇಂಗಾದಿಂದ ತಯಾರಿಸಿದ ಬೆಣ್ಣೆ)

* ಸ್ವಲ್ಪ ನಟ್ಸ್ ಅಥವಾ ಚೀಸ್

* 2 ಮೊಟ್ಟೆ

* ಒಂದು ಕಪ್ ಹಾಲು ಅಥವಾ ಮೊಸರು

* ಮಾಂಸಾಹಾರ ಅಥವಾ ಮೀನು

English summary

Natural Remedies For Thyroid Problem | Tips For Health | ಥೈರಾಯ್ಡ್ ಸಮಸ್ಯೆಗೆ ನೈಸರ್ಗಿಕ ಪರಿಹಾರ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Under active thyroid problem is very common in nowadays. But it not a dangerous diseases, but we should handle it in very carefully. Here is a few reasons and remedies for thyroid problem.
Story first published: Tuesday, May 8, 2012, 10:47 [IST]
Please Wait while comments are loading...
Subscribe Newsletter