For Quick Alerts
ALLOW NOTIFICATIONS  
For Daily Alerts

ಗ್ಯಾಸ್ಟ್ರಿಕ್ ಅಲ್ಸರ್ ತರಬಹುದೇ ಕ್ಯಾನ್ಸರ್ ?

|

ಗ್ಯಾಸ್ಟ್ರಿಕ್ ಸಮಸ್ಯೆ ವಯಸ್ಸಾದವರಿಗಷ್ಟೇ ಅಲ್ಲ, ಈಗೆಲ್ಲಾ ಚಿಕ್ಕ ಪ್ರಾಯದವರಲ್ಲೂ ಕಂಡು ಬರುತ್ತಿದೆ. ಹೊತ್ತಿಗೆ ಸರಿಯಾಗಿ ತಿನ್ನದಿರುವುದು, ಆರೋಗ್ಯಕರವಲ್ಲದ ಜೀವನ ಶೈಲಿ ಇವೆಲ್ಲಾ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಲು ಕಾರಣವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾದರೆ ಗ್ಯಾಸ್ಟ್ರಿಕ್ ಅಲ್ಸರ್ ಉಂಟಾಗುವುದು.ಗ್ಯಾಸ್ಟ್ರಿಕ್ ಅಲ್ಸರ್ ಎಂದರೆ ಜಠರದ ಹುಣ್ಣು ಎಂದರ್ಥ. ಇದನ್ನು ಹಾಗೇ ಬಿಟ್ಟರೆ ಹೊಟ್ಟೆಯಲ್ಲಿ ಕ್ಯಾನ್ಸರ್ ಉಂಟಾಗುವುದು ಎಂದು ಇತ್ತೀಚಿಗೆ ನಡೆಸಿದ ಸಂಶೋಧನೆಯಿಂದ ತಿಳಿದು ಬಂದಿದೆ.

Gastric Ulcer

ಗ್ಯಾಸ್ಟ್ರಿಕ್ ಅಲ್ಸರ್ ಕ್ಯಾನ್ಸರ್ ಬರಲು ಹೇಗೆ ಕಾರಣವಾಗುತ್ತದೆ ಎಂದು ತಿಳಿಯೋಣ ಬನ್ನಿ.

ಗ್ಯಾಸ್ಟ್ರಿಕ್ ಅಲ್ಸರ್ ಹೆಲಿಕೊಬಾಕ್ಟರ್(helicobacter) ಎಂಬ ಬ್ಯಾಕ್ಟೀರಿಯದಿಂದ ಉಂಟಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿದ್ದರೆ ಬೇಗನೆ ಜಠರದಲ್ಲಿ ಸೋಂಕು ತರುತ್ತದೆ ಇದರಿಂದ ದೇಹದಲ್ಲಿ DNAಕ್ಕೆ ಹಾನಿ ಉಂಟು ಮಾಡುತ್ತದೆ. ಈ ಬ್ಯಾಕ್ಟೀರಿಯಾದಿಂದ ಹೊಟ್ಟೆಗೆ ಸೋಂಕು ಉಂಟಾದರೆ ಸುಲಭವಾಗಿ ನಿವಾರಿಸಲು ಸಾಧ್ಯವಿಲ್ಲ. ಇದರಿಂದ ಹೊಟ್ಟೆಯಲ್ಲಿ ಉರಿ ಕಂಡುಬರುತ್ತದೆ. ಅದನ್ನು ಚಿಕಿತ್ಸೆ ಮಾಡದೆ ಹಾಗೇ ಬಿಟ್ಟರೆ ಕ್ಯಾನ್ಸರ್ ಬರಬಹುದು.

ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಂಡರೆ ಆಸ್ಪಿರಿನ್ ಅಥವಾ ಇತರ ಉರಿನಿವಾರಕ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆಯದೆ ತೆಗೆದುಕೊಳ್ಳಬಾರದು. ಈ ಮಾತ್ರೆ ಸೇವಿಸುತ್ತಿದ್ದರೆ ಹೊಟ್ಟೆಯಲ್ಲಿರುವ ಅಂಗಗಳು ತನ್ನ ಕಾರ್ಯವನ್ನು ನಿಧಾನವಾಗಿ ಮಾಡಲಾರಂಭಿಸುತ್ತದೆ. ಅಲ್ಲದೆ ಈ ಮಾತ್ರೆಗಳು ದೇಹದಲ್ಲಿ ರಕ್ತ ಸಂಚಾರವನ್ನು ಕಡಿಮೆ ಮಾಡುತ್ತದೆ, ಇದರಿಂದ ಕ್ಯಾನ್ಸರ್ ಕಣಗಳು ಬೆಳೆಯಲು ಅವಕಾಶ ನೀಡಿದಂತಾಗುವುದು.

ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗಲು ಕಾರಣವಾಗುವ ಅಂಶಗಳು: ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುವವರು ಮದ್ಯಪಾನ, ತಂಬಾಕು ಸೇವನೆ, ಧೂಮಪಾನ ಇವುಗಳು ಹೊಟ್ಟೆಯಲ್ಲಿ ಆಸಿಡ್ ಹೆಚ್ಚು ಮಾಡುವುದರಿಂದ ಇಂತಹ ವಸ್ತುಗಳನ್ನು ಮುಟ್ಟಲು ಹೋಗಬಾರದು. ಒಂದು ವೇಳೆ ನಿಮಗೆ ಹೊಟ್ಟೆಯಲ್ಲಿ ಉರಿ, ವಾಂತಿ, ನೋವು ಕಾಣಿಸಿಕೊಂಡರೆ ಕೂಡಲೇ ವೈದ್ಯರನ್ನು ಕಂಡು ಪರೀಕ್ಷೆ ಮಾಡಿಸಿಕೊಳ್ಳಿ. ಏಕೆಂದರೆ ಇವೆಲ್ಲವೂ ಕ್ಯಾನ್ಸರ್ ನ ಲಕ್ಷಣಗಳು ಆಗಿದ್ದು ಯಾವುದಕ್ಕೂ ಪರೀಕ್ಷೆ ಮಾಡಿಸುವುದು ಒಳ್ಳೆಯದು. ಪ್ರಾಣಾಯಾಮ ಮಾಡಿ, ಇದು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆಯಾಗಲು ಸಹಕಾರಿಯಾಗಿದೆ.

ಗ್ಯಾಸ್ಟ್ರಿಕ್ ಅಲ್ಸರ್ ಇದ್ದರೆ ಹೆದರಬೇಡಿ, ಚಿಕಿತ್ಸೆ ಮಾಡಿದರೆ ಗುಣಮುಖವಾಗುವುದು, ಆದರೆ ಇದು ಬಂದರೆ ನಿರ್ಲಕ್ಷ್ಯ ಮಾತ್ರ ಮಾಡಬೇಡಿ.

English summary

Gastric Ulcer Can Lead To Cancer | Tips For Health | ಗ್ಯಾಸ್ಟ್ರಿಕ್ ಅಲ್ಸರ್ ತರಬಹುದೇ ಕ್ಯಾನ್ಸರ್ | ಆರೋಗ್ಯಕ್ಕಾಗಿ ಕೆಲ ಸಲಹೆ

A gastric or peptic ulcer is a sore that can develop on the walls of the stomach. When the protective lining in our stomach stops working it leads to inflammation or stomach ulcer.
X
Desktop Bottom Promotion