For Quick Alerts
ALLOW NOTIFICATIONS  
For Daily Alerts

ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳ ಬಗ್ಗೆ ಎಚ್ಚರ!

|
Be Careful About Hereditary Diseases
ವಂಶಪಾರಂಪರ್ಯವಾಗಿ ಬರುವ ಆಸ್ತಿಯಂತೆ ಕೆಲವೊಂದು ಕಾಯಿಲೆಗಳು ಕೂಡ ಅನುವಂಶೀಯವಾಗಿ ಬಂದು ಬಿಡುತ್ತವೆ. ಆದರೆ ವಂಶಪಾರಂಪರ್ಯವಾದ ಕಾಯಿಲೆಗಳು ಹಿರಿಯರಲ್ಲಿ ಇದ್ದಲ್ಲಿ ಅವರ ನಂತರದ ಪೀಳಿಗೆಯವರು ಸ್ವಲ್ಪ ಮುನ್ನಚ್ಚರಿಕೆಯ ಕ್ರಮ ಕೈಕೊಂಡರೆ ಆ ಕಾಯಿಲೆಗಳನ್ನು ಬರದಂತೆ ತಡೆಯಬಹುದು. ಈ ಕೆಳಗ್ಗೆ ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳ ಪಟ್ಟಿ ನೀಡಲಾಗಿದೆ. ಈ ಕಾಯಿಲೆಗಳು ನಿಮ್ಮ ಮನೆಯ ಹಿರಿಯರಲ್ಲಿ ಯಾರಿಗಾದರೂ ಇದ್ದರೆ, ಅ ಕಾಯಿಲೆ ಬರದಂತೆ ಮುನ್ನಚ್ಚರಿಕೆ ಕ್ರಮಗಳನ್ನು ನೀವು ಕೈಗೊಂಡರೆ ವಂಶಪಾರಂಪರ್ಯವಾದ ಕಾಯಿಲೆಗಳ ಭೀತಿ ಇಲ್ಲದೆ ಜೀವಿಸಬಹುದು.

ವಂಶಪಾರಂಪರ್ಯವಾಗಿ ಬರುವ ಕಾಯಿಲೆಗಳು:

1. ಒಬೆಸಿಟಿ: ಇವತ್ತು ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶದಲ್ಲಿ ಅತೀ ಹೆಚ್ಚಿನ ಜನರು ಒಬೆಸಿಟಿ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ ಜೀವನ ಶೈಲಿ. ಕೆಲವರಿಗೆ ವಂಶಪಾರಂಪರ್ಯವಾಗಿ ಬಂದಿದ್ದರೆ ಮತ್ತೆ ಕೆಲವರಿಗೆ ಅನಾರೋಗ್ಯಕರ ಆಹಾರ ಪದ್ಧತಿ, ವ್ಯಾಯಾಮ ಮಾಡದಿರುವುದು, ಕೂತಯಲ್ಲಿಯೇ ಕೂತು ಕೆಲಸ ಮಾಡುವುದರಿಂದ ಒಬೆಸಿಟಿ ಸಮಸ್ಯೆ ಹೆಚ್ಚಾಗುತ್ತದೆ. ಆದರೆ ಈ ಒಬೆಸಿಟಿ ಸಮಸ್ಯೆ ದೊಡ್ಡವರಿಗೆ ಮಾತ್ರವಲ್ಲದೆ ಚಿಕ್ಕ ಮಕ್ಕಳಲ್ಲಿ ಕೂಡ ಕಂಡು ಬರುತ್ತಿದ್ದು, ಇದಕ್ಕೆ ವಂಶಪಾರಂಪರ್ಯ ಒಂದು ಕಾರಣವಾಗಿದೆ. ತಂದೆ-ತಾಯಿಗೆ ಒಬೆಸಿಟಿ ಇದ್ದರೆ ಮಕ್ಕಳಿಗೂ ಈ ಸಮಸ್ಯೆ ಬರಬಹುದು. ಇದನ್ನು ಬರದಂತೆ ತಡೆಯಲು ದಿನನಿತ್ಯ ವ್ಯಾಯಾಮ ಮತ್ತು ಆರೋಗ್ಯಕರ ಆಹಾರಕ್ರಮ ಪಾಲಿಸಬೇಕು.

2. ಮಧುಮೇಹ: ಮಧುಮೇಹ ಒಮ್ಮೆ ಬಂದರೆ ಅದನ್ನು ನಿಯಂತ್ರಣದಲ್ಲಿಡಬಹುದೇ ಹೊರತು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಆದಷ್ಟು ಮಧುಮೇಹ ಕಾಯಿಲೆ ಬರದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ಈ ಕಾಯಿಲೆ ವಂಶಪಾಂಪರ್ಯವಾಗಿ ಕಂಡು ಬರುವು ಸಾಧ್ಯತೆ ಹೆಚ್ಚು. ಆದ್ದರಿಂದ ಮನೆಯಲ್ಲಿ ಯಾರಿಗಾದರೂ ಮಧುಮೇಹ ಇದ್ದರೆ ಕಿರಿಯರು ಆರೋಗ್ಯಕರ ಆಹಾರ ಪದ್ಧತಿ ಅನುಸರಿಸಿ ಮಧುಮೇಹ ಬರದಂತೆ ತಡೆಯಬಹುದು.

3. ಸ್ತನ ಕ್ಯಾನ್ಸರ್: ಎಲ್ಲಾ ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬರುವುದಿಲ್ಲ. ಆದರೆ ಸ್ತನ ಕ್ಯಾನ್ಸರ್ ವಂಶಪಾರಂಪರ್ಯವಾಗಿ ಬರುವ ಸಾದ್ಯತೆ ಹೆಚ್ಚು. ಮನೆಯಲ್ಲಿ ಅಜ್ಜಿ, ಅಥವಾ ತಾಯಿಗೆ ಸ್ತನ ಕ್ಯಾನ್ಸರ್ ಇದ್ದರೆ ಮಗಳು ಅಥವಾ ಮೊಮ್ಮಗಳಿಗೆ ಬರಬಹುದು. ಆದ್ದರಿಂದ 20 ವರ್ಷ ದಾಟಿದ ಮಹಿಳೆಯರು ಆಗಾಗ ತಮ್ಮ ಸ್ತನವನ್ನು ಸ್ವ ಪರೀಕ್ಷೆ ಮಾಡಿಕೊಳ್ಳಬೇಕು. ಸ್ತನದಲ್ಲಿ ಗೆಡ್ಡೆ ರೀತಿ ಕಂಡಬಂದರೆ ನಿರ್ಲಕ್ಷ್ಯ ಮಾಡದೆ ಕೂಡಲೇ ವೈದ್ಯರಿಗೆ ತೋರಿಸಬೇಕು. ಸ್ತನ ಕ್ಯಾನ್ಸರ್ ಮೊದಲನೆ ಹಂತದಲ್ಲಿ ಇದ್ದರೆ ಚಿಕಿತ್ಸೆ ಸುಲಭವಾಗುತ್ತದೆ.

4. ಕೀಲುನೋವು (ವಾತ): ಕೀಲು ನೋವು ಅಥವಾ ವಾತ ವಯಸ್ಸಾದವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆ ಇದ್ದರೆ ವಂಶಪಾರಂಪರ್ಯವಾಗಿ ಬರಬಹುದು. ಅದರಲ್ಲೂ ಮೆನೋಪಸ್ ನಂತರ ಈ ರೀತಿಯ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ದೇಹದಲ್ಲಿ ಕ್ಯಾಲ್ಸಿಯಂ ಕಮ್ಮಿಯಾಗುವುದು ಕೂಡ ಒಂದು ಕಾರಣ. ಆದ್ದರಿಂದ ಅಧಿಕವಿರುವ ಕ್ಯಾಲ್ಸಿಯಂ ಆಹಾರ ತಿನ್ನಬೇಕು.

5. ಹೃದಯಾಘಾತ: ಒಬೆಸಿಟಿ ಕೂಡ ಹೃದಯಾಘಾತಕ್ಕೆ ದೊಡ್ಡ ಕಾರಣವಾಗಿದೆ. ಹೃದ್ರೋಗ ಸಮಸ್ಯೆ ಕೂಡ ಒಂದು ವಂಶಪಾರಂಪರ್ಯವಾಗಿ ಬರುವಂತ ಕಾಯಿಲೆಯಾಗಿದೆ.

English summary

Be Careful About Hereditary Diseass | Tips For Health | ವಂಶಪಾರಂಪರ್ಯ ಕಾಯಿಲೆಗಳ ಬಗ್ಗೆ ಎಚ್ಚರ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Hereditary diseases are those health problems that we inherit as a part of our lineage. Prevention is always better than cure.
Story first published: Thursday, June 14, 2012, 12:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more