For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಕಾಡುವ ಡೆಂಗ್ಯೂ ಬಗ್ಗೆ ಎಚ್ಚರ

|
Be Careful About Dengue
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತವಾಗಿರಬೇಕು. ಆಹಾರಕ್ರಮದಲ್ಲಿ ಎಚ್ಚರಿಕೆವಹಿಸಬೇಕು. ಚಳಿಜ್ವರದಂತಹ ಕೆಲವೊಂದು ಕಾಯಿಲೆಗಳು ಸಾಮಾನ್ಯವಾಗಿ ಕಂಡರೂ ಪ್ರಾಣಕ್ಕೆ ಅಪಾಯತರಬಹುದು. ಅಂಟು ಕಾಯಿಲೆ ಬಂದರಂತೂ ರೋಗಿ ಮತ್ತು ಮನೆಯವರು ತುಂಬಾ ಎಚ್ಚರಿಕೆವಹಿಸಬೇಕು. ಮನೆಯಲ್ಲಿ ಒಬ್ಬರಿಗೆ ಜ್ವರ ಬಂದರೂ ಕೂಡ ಇಡೀ ಮನೆಯವರು ಅದು ಬರದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು.

ಮಳೆಗಾಲದಲ್ಲಿ ಡೆಂಗ್ಯೂ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ. ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೂ ಕೂಡ ಅಪಾಯ ಉಂಟಾಗಬಹುದು.ಡೆಂಗ್ಯೂ ಕಾಯಿಲೆ ಸೊಳ್ಳೆಗಳಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತದೆ. ಆದ್ದರಿಂದ ಮನೆ ಸುತ್ತ ಮುತ್ತಲಿನ ಪರಿಸರವನ್ನು ಶುದ್ಧವಾಗಿ ಇಟ್ಟುಕೊಳ್ಳಬೇಕು.

ಡೆಂಗ್ಯೂ ಬಂದರೆ ಆ ಜ್ವರದಿಂದ ಸುಧಾರಿಸಿಕೊಳ್ಳಲು ಕನಿಷ್ಠವೆಂದರೂ 10-11 ದಿನಗಳು ಬೇಕಾಗುತ್ತದೆ. ಜ್ವರ ತುಂಬಾ ಜಾಸ್ತಿಯಾದರೆ ಬಾಯಿ, ವಸಡು ಮತ್ತು ಮೂಗಿನಿಂದ ರಕ್ತ ಬರಲಾರಭಿಸುತ್ತದೆ. ಡೆಂಗ್ಯೂ ಕಾಯಿಲೆಗೆ ವಯಸ್ಸಾದಾವರು ಮತ್ತು ಮಕ್ಕಳು ಬೇಗನೆ ತುತ್ತಾಗುತ್ತಾರೆ. ಡೆಂಗ್ಯೂ ಕಾಯಿಲೆ ಬಂದರೆ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಬೇಕು, ಈ ಕಾಯಿಲೆ ಬಂದರೆ ಸಾಕಷ್ಟು ನೀರು ಕುಡಿಯಬೇಕು, ನಂತರ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು.

ಡೆಂಗ್ಯೂ ಕಾಯಿಲೆಯ ಲಕ್ಷಣಗಳು:
* 105 ಡಿಗ್ರಿಗಿಂತ ಅಧಿಕ ಜ್ವರ
* ತಲೆನೋವು ಮತ್ತು ಮೈಕೈ ನೋವು
* ಮೈಯೆಲ್ಲಾ ತುರಿಕೆ ಮತ್ತು ಚರ್ಮದಲ್ಲಿ ಕೆಂಪು ಗುಳ್ಳೆಗಳು ಕಂಡುಬರುವುದು
* ಕಣ್ಣಿನಲ್ಲಿ ತುಂಬಾ ನೋವು ಕಂಡುಬರುವುದು
* ಸ್ನಾಯು ಮತ್ತು ಮೊಣ ಕಾಲು ಮತ್ತು ಮೊಣಕೈಗಳಲ್ಲಿ ನೋವು
* ವಾಂತಿ ಮತ್ತು ಬೇಧಿ


ಡೆಂಗ್ಯೂ ನಿವಾರಣೆ ಹೇಗೆ?

1. ಮೊದಲು ಸೊಳ್ಳೆಗಳು ಮೊಟ್ಟೆ ಹಾಕಿ ಮರಿ ಮಾಡಲು ಅವಕಾಶ ಕೊಡದಿರುವುದು, ಅಂದರೆ ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಎಲ್ಲೂ ಕೊಳಚೆ ನೀರು ನಿಲ್ಲದಂತೆ ನೋಡಿಕೊಳ್ಳುವುದು, ಕಸದ ರಾಶಿ ಹಾಕದೆ ಇರುವುದು, ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿ ಇದ್ದರೆ ಸೊಳ್ಳೆಗಳು ಬರುವುದಿಲ್ಲ.

2. ಮನೆಯಲ್ಲಿ ಕುಡಿಯುವ ನೀರಿನ ಪಾತ್ರೆ ಮತ್ತು ಟ್ಯಾಂಕಿಯನ್ನು ಸದಾ ಮುಚ್ಚಿರಬೇಕು. ಕುದಿಸಿ ಆರಿಸಿದ ನೀರು ಅಥವಾ ಅಕ್ವಾಗಾರ್ಡ್ ನೀರು ಮಾತ್ರ ಕುಡಿಯಬೇಕು.

3. ಮನೆಯಲ್ಲಿ ಸೊಳ್ಳೆ ಬರದಿರಲು ಕಾಯಿಲ್ ಬಳಸಿ. ಮಲಗುವಾಗ ಸೊಳ್ಳೆ ಪಪರದೆಗಳನ್ನು ಹಾಕಿ ಮಲಗಿದರೆ ಒಳ್ಳೆಯದು. ಕಿಟಕಿಗಳನ್ನು ರಾತ್ರಿ ಹೊತ್ತು ತೆಗದಿಡಬೇಡಿ.

4. ಡೆಂಗ್ಯೂ ಸೊಳ್ಳೆ ಸಾಮಾನ್ಯವಾಗಿ ಸಂಜೆ 6 ರಿಂದ ರಾತ್ರಿ 9ರವರೆಗೆ ಮತ್ತು ಬೆಳಗ್ಗೆ 4 ರಿಂದ 6 ಗಂಟೆಯ ಸಮಯದಲ್ಲಿ ಹೆಚ್ಚು ಚಟುವಟಿಕೆಯಿಂದ ಇರುತ್ತದೆ.

5. ತುಂಬಾ ಕತ್ತಲಿನಲ್ಲಿ ಈ ಸೊಳ್ಳೆ ಕಚ್ಚುವುದಿಲ್ಲ. ಆದ್ದರಿಂದ ರಾತ್ರಿ ಮಲುಗುವಾಗ ಬೆಡ್ ಲ್ಯಾಂಪ್ ಕೂಡ ಆರಿಸಿದರೆ ಒಳ್ಳೆಯದು.

6. ಜ್ವರ ಬಂದರೆ ಸ್ವಚಿಕಿತ್ಸೆ ಮಾಡದೆ ಜ್ವರ ಜಾಸ್ತಿಯಾಗುವ ಮೊದಲು ವೈದ್ಯರನ್ನು ಕಾಣಿ.

English summary

Be Careful About Dengue | Tips For Health | ಡೆಂಗ್ಯೂ ಕಾಯಿಲೆಯ ಬಗ್ಗೆ ಎಚ್ಚರ | ಆರೋಗ್ಯಕ್ಕಾಗಿ ಕೆಲ ಸಲಹೆಗಳು

Dengue is a mosquito-borne infection.A reaction usually appears 3 to 4 days after the start of the fever. The illness can stay up to 10 days, but complete recovery may take almost a month.
X
Desktop Bottom Promotion