For Quick Alerts
ALLOW NOTIFICATIONS  
For Daily Alerts

ಸೊಂಟ ನೋವಿನ ಸಂಕಟಕ್ಕೆ ಪರಿಹಾರ

|
Natural Remedies For Waist Pain
ಸೊಂಟ ನೋವು ಬರಲು ಇಂಥದ್ದೇ ಕಾರಣ ಬೇಕಿಲ್ಲ. ಸುಮ್ಮನೆ ಕುಳಿತರೆ, ನಿಯಮಿತವಾಗಿ ವ್ಯಾಯಾಮ ಮಾಡದಿದ್ದರೆ, ದೇಹದಲ್ಲಿ ಬೊಜ್ಜು ಹೆಚ್ಚಾದರೆ ಸೊಮಟ ನೋವು ಕಾಣಿಸಿಕೊಳ್ಳುತ್ತದೆ.

ಸೊಂಟ ನೋವಿಗೆ ಮೆಡಿಕಲ್ ಔಷಧಿ ತಾತ್ಕಾಲಿಕ ಪರಿಹಾರ ನೀಡುತ್ತದೆ. ಆದರೆ ಇಂತಹ ಔಷದಿಯಿಂದ ಅಡ್ಡಪರಿಣಾಮವೇ ಹೆಚ್ಚು. ಸೊಂಟ ನೋವಿಗೆ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ಚಿಕಿತ್ಸೆ ಇಲ್ಲಿದೆ. ಇದು ಮನೆಮದ್ದು.

1. ಜ್ಯೂಸ್: ಕ್ಯಾರೆಟ್ ಜ್ಯೂಸ್, ನಿಂಬೆ ಹಣ್ಣಿನ ಪಾನೀಯ, ದ್ರಾಕ್ಷಿ ಜ್ಯೂಸ್ ಇವುಗಳನ್ನು ದಿನವೂ ಬೆಳಗ್ಗೆ ಸೇವಿಸಿದರೆ ಸೊಂಟ ನೋವು ಕಡಿಮೆಯಾಗುವುದು.

2. ಟೀ: ಗ್ರೀನ್ ಟೀ, ನಿಂಬೆ ಮತ್ತು ಜೇನು ಹಾಕಿ ತಯಾರಿಸಿದ ಟೀ, ಚಕ್ಕೆ ಟೀ ತಯಾರಿಸಿ ಕುಡಿಯುವುದರಿಂದ ಸೊಂಟ ನೋವು ಕಡಿಮೆಯಾಗುವುದು. 35 ವರ್ಷದ ನಂತರ ಸೊಂಟ ನೋವು ಹೆಚ್ಚು ಕಾಣಿಸಿಕೊಳ್ಳುವುದರಿಂದ ಅಂತಹ ನೋವು ನಿವಾರಣೆಗೆ ಟೀ ಕುಡಿಯುವುದು ಒಳ್ಳೆಯದು.

3. ಎಣ್ಣೆ: ಸಾಸಿವೆ ಎಣ್ಣೆ ಅಥವಾ ಆಲೀವ್ ಎಣ್ಣೆ ಬಿಸಿ ಮಾಡಿ ಮಸಾಜ್ ಮಾಡಿದರೆ ದೇಹದಲ್ಲಿ ರಕ್ತ ಸಂಚಲನ ಹೆಚ್ಚಿ ಸೊಂಟ ನೋವು ಬರದಂತೆ ತಡೆಯುತ್ತದೆ.

4. ಇತರ ನೈಸರ್ಗಿಕ ವಿಧಾನ: ಜೀರಿಗೆ ನೀರು ಕುಡಿಯುವುದು, ಅರಿಶಿಣ ಮತ್ತು ಶುಂಠಿ ಪೇಸ್ಟ್ ರೀತಿ ಮಾಡಿ ನೋವಿರುವ ಜಾಗಕ್ಕೆ ಹಚ್ಚಬಹುದು.

5. ವ್ಯಾಯಾಮ: ಯೋಗ ಅಥವಾ ಇತರ ವ್ಯಾಯಾಮ ಮಾಡುತ್ತಿದ್ದರೆ ಸೊಂಟ ನೋವು ಕಡಿಮೆಯಾಗುವುದು ಮತ್ತು ದೇಹದ ತೂಕವನ್ನು ಹತೋಟಿಯಲ್ಲಿಡಬಹುದು.

English summary

Natural Remedies For Waist Pain | Tips For Health | ಸೊಂಟ ನೋವಿಗೆ ನೈಸರ್ಗಿಕ ಪರಿಹಾರ | ಆರೋಗ್ಯಕ್ಕಾಗಿ ಕೆಲ ಸಲಹೆ

Body pain occur due to various reasons like obesity, lack of exercise, unhealthy lifestyles etc. For those who suffer from frequent body aches here are a few natural remedies.
Story first published: Wednesday, February 1, 2012, 15:04 [IST]
X
Desktop Bottom Promotion