For Quick Alerts
ALLOW NOTIFICATIONS  
For Daily Alerts

ಬಿಗಿಯಾದ ಬಟ್ಟೆಯಿಂದ ಅನಾರೋಗ್ಯ ಗ್ಯಾರಂಟಿ

|
Effects Of Wearing Skin Tight Clothes On Health
ಸಡಿಲವಾದ ಬಟ್ಟೆಗಿಂತ ಬಿಗಿಯಾದ ಬಟ್ಟೆಯನ್ನು ಧರಿಸಲು ಹದಿಹರೆಯದವರು ಹೆಚ್ಚಾಗಿ ಇಷ್ಟಪಡುತ್ತಾರೆ. ಆದರೆ ಈ ರೀತಿ ಬಿಗಿಯಾದ ಮತ್ತು ಮೈಗಂಟಿದ ಬಟ್ಟೆ ಧರಿಸುವುದರಿಂದ ಆರೋಗ್ಯದ ಮೇಲಾಗುವ ದುಷ್ಪಾರಿಣಾಮದ ಬಗ್ಗೆ ತಿಳಿದುಕೊಂಡಿರುವುದಿಲ್ಲ. ಬಿಗಿಯಾದ ಬಟ್ಟೆ ಯಾವೆಲ್ಲಾ ರೀತಿಯ ಸಮಸ್ಯೆ ತರುತ್ತದೆ ಎಂದು ತಿಳಿಯಲು ಮುಂದೆ ಓದಿ.

1. ತೊಡೆ ನೋವು: ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ತೊಡೆಯಲ್ಲಿ ನರ ಸೆಳತ ಉಂಟಾಗಿ ನೋವು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದನ್ನು ನಿವಾರಿಸ ಬೇಕೆಂದರೆ ಸಡಿಲವಾದ ಪ್ಯಾಂಟ್ ಧರಿಸುವುದೊಂದೆ ಪರಿಹಾರ.

2. ಬೆನ್ನು ನೋವು: ಬಿಗಿಯಾದ ಪ್ಯಾಂಟ್ ಧರಿಸಿದರೆ ಬೆನ್ನು ನೋವು ಕೂಡ ಕಂಡು ಬರುತ್ತದೆ. ಆದ್ದರಿಂದ ಜೀನ್ಸ್ ಪ್ಯಾಂಟ್ ಕೊಳ್ಳುವಾಗ ತುಂಬಾ ಬಿಗಿಯಾದ ಪ್ಯಾಂಟ್ ಕೊಳ್ಳದಿರುವುದೆ ಉತ್ತಮ.

3. ಉಸಿರಾಟದ ತೊಂದರೆ: ತುಂಬಾ ಬಿಗಿಯಾದ ಉಡುಪುಗಳನ್ನು ಧರಿಸಿದರೆ ಉಸಿರಾಡಲು ಕಷ್ಟವಾಗುತ್ತದೆ. ಅಲ್ಲದೆ ಕಾಲುಗಳನ್ನು ಸುಲಭವಾಗಿ ಮಡಚಲು ಅಥವಾ ಬಗ್ಗಲು ಸಾಧ್ಯವಿಲ್ಲ. ಕುತ್ತಿಗೆಗೆ ತುಂಬಾ ಬಿಗಿಯಾಗಿ ನಿಲ್ಲವಂತಹ ಟಿ ಶರ್ಟ್ ಕೂಡ ಧರಿಸಬಾರದು.


4. ಎದೆ ಉರಿ ಮತ್ತು ಹೊಟ್ಟೆಯಲ್ಲಿ ನೋವು: ತುಂಬಾ ಬಿಗಿಯಾದ ಪ್ಯಾಂಟ್ ಧರಿಸುವುದರಿಂದ ಹೊಟ್ಟೆಯಲ್ಲಿ ನೋವು ಉಂಟಾಗುತ್ತದೆ, ಎದೆ ಉರಿ ಕಾಣಿಸಿಕೊಳ್ಳುತ್ತದೆ , ಬಾಯಿಯಲ್ಲಿ ಕಹಿ ನೀರು ಬರಲಾರಂಭಿಸುತ್ತದೆ. ಆದ್ದರಿಂದ ದಿನವೂ ಬಿಗಿಯಾದ ಉಡುಪು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.

English summary

Effects Of Wearing Skin Tight Clothes On Health | Tips for Health | ಬಿಗಿಯಾದ ಉಡುಪು ಧರಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ | ಆರೋಗ್ಯಕ್ಕೆ ಕೆಲ ಸಲಹೆ

People are tempted to wear those size zero jeans but the tight outfits actually suffocate your skin making it very uncomfortable. Apart from the breathing difficulties, there are lot health related issues because of wearing tight clothes.
Story first published: Saturday, December 17, 2011, 12:08 [IST]
X
Desktop Bottom Promotion