For Quick Alerts
ALLOW NOTIFICATIONS  
For Daily Alerts

ಕಾಯಿಲೆ ನಿವಾರಣೆಗೆ ಸಂಗೀತವೆಂಬ ದಿವ್ಯ ಔಷಧಿ

|
Music Therapy To Cure Pain
ಭಾಷೆಗೆ ಗಡಿಯಿದೆ, ಆದರೆ ಸಂಗೀತಕ್ಕೆ ಗಡಿಯೆಂಬುದು ಇಲ್ಲ, ಸಂಗೀತವನ್ನು ಕೇಳುತ್ತಿದ್ದರೆ ಆ ಭಾಷೆ ಗೊತ್ತಿರಬೇಕಾಗಿಲ್ಲ, ಅದರ ರಾಗವೆ ಮನಸ್ಸಿಗೆ ಒಂಥಾರ ಮುದವನ್ನು ನೀಡುತ್ತದೆ. ಆದ್ದರಿಂದ ಸಂಗೀತ ಎಲ್ಲರಿಗೆ ಅರ್ಥವಾಗುವ ಒಂದು ಸಾರ್ವತ್ರಿಕ ಭಾಷೆ ಅಂದರೆ ತಪ್ಪಾಗಲಾರದು.

ತುಂಬಾ ದುಃಖ ಆದಾಗ ಅಥವಾ ಸಂತೋಷ ಆದಾಗ ಸಂಗೀತವನ್ನು ಕೇಳುತ್ತಿದ್ದರೆ ಅದು ಕೂಡ ನಮ್ಮ ಭಾವನೆಗೆ ಸ್ಪಂದಿಸುತ್ತಿರುವಂತೆ ಭಾಸವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.ಸಂಗೀತ ಮನರಂಜನೆ ಅಥವಾ ಮನ ನೆಮ್ಮದಿಯನ್ನು ಮಾತ್ರ ಸೀಮಿತವಾಗಿಲ್ಲ ಕಾಯಿಲೆಗಳನ್ನು ಹೋಗಲಾಡಿಸುವ ದಿವ್ಯ ಮಂತ್ರವಾಗಿ ಕೆಲಸ ಮಾಡುತ್ತದೆ ಎಂದು ತಿಳಿದು ಬಂದಿದೆ.

ಈ ರೀತಿ ಸಂಗೀತದಿಂದ ಕಾಯಿಲೆ ಗುಣಪಡಿಸುವ ವಿಧಾನವನ್ನು ಮ್ಯೂಸಿಕ್ ಥೆರಪಿ ಎಂದು ಕರೆಯಲಾಗಿದೆ.ಕಾಲು-ಕೈಗಳಲ್ಲಿನ ನೋವು, ನರ ಸೆಳತ, ಕೀಲು ನೋವು ನಿವಾರಣೆ ಚಿಕಿತ್ಸೆಯಲ್ಲಿ ಸಂಗೀತ ಥೆರಪಿ ತುಂಬಾ ಸಹಕಾರಿಯಾಗಿದೆ ಎಂದು ಮೂಳೆ ತಜ್ಞರು ಕೂಡ ಒಪ್ಪುತ್ತಾರೆ.

ಸಂಗೀತವನ್ನು ಕೇಳುವಾಗ ಮನುಷ್ಯ ಅದರ ರಾಗ, ತಾಳಕ್ಕೆ ಸ್ಪಂದಿಸಲಾರಂಭಿಸುತ್ತಾನೆ. ಇದರಿಂದ ದುಬಾರಿ ಔಷಧಿಗೆ ಗುಣವಾಗದ ಅನೇಕ ಕಾಯಿಲೆಗಳು ಸಂಗೀತದಿಂದ ಗುಣವಾಗಿದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಅನೇಕ ಕಾಯಿಲೆಗಳನ್ನು ಗುಣಪಡಿಸಲು ಸಂಗೀತವನ್ನು ಬಳಸುತ್ತಾರೆ. ಭೈರವಿ, ಕಲ್ಯಾಣ್, ಯಮನ್ ಮುಂತಾದ ರಾಗಗಳನ್ನು ಮೂಳೆ ಸಂಬಂಧಿ ರೋಗಳನ್ನು ಗುಣಪಡಿಸಲು ಬಳಸುತ್ತಾರೆ. ತಬಲ, ಡೋಲು, ತಮಟೆ ಇವುಳನ್ನು ಖಿನ್ನತೆ ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುವುದು. ಕೊಳಲು, ಗಿಟಾರ್, ಸಿತಾರ್ ಮಾನಸಿಕ ಸಮತೋಲನ ಕಳೆದು ಕೊಂಡ ಜನರಿಗೆ ಇದನ್ನು ಕೇಳಿಸಿದರೆ ಅವರು ಮಾನಸಿಕವಾಗಿ ಸದೃಢವಾಗಲು ಸಹಾಯ ಮಾಡುತ್ತದೆ.

ಸಂಗೀತವನ್ನು ಕೇಳುತ್ತಿದ್ದರೆ ಮೆದುಳಿನಲ್ಲಿ ಎಂಡ್ರೊಪಿನ್ಸ್ ಬಿಡುಗಡೆ ಮಾಡುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. ಮನಶಾಸ್ತ್ರಜ್ಞರು ಸಂಗೀತವು ಅನೇಕ ಗುಣಪಡಿಸಲಾಗದ ಮಾನಸಿಕ ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಇದೆ ಎಂದು ಹೇಳುತ್ತಾರೆ.

ಇದರ ಬಗ್ಗೆ ನಡೆಸಿದ ಅಧ್ಯಯನದಲ್ಲಿ ಕೂಡ ಸಂಗೀತಕ್ಕೆ ಕಾಯಿಲೆ ಗುಣ ಪಡಿಸುವಶಕ್ತಿ ಇದೆ ಎಂದು ದೃಢ ಪಟ್ಟಿದೆ. ಹಾಗಂತ ಹಾಡು ಪ್ಲೇ ಮಾಡಿ ಕೇಳಿದರೆ ಮಾತ್ರ ಸಾಲದು ಜೊತೆಗೆ ವೈದ್ಯರು ಸೂಚಿಸಿದ ಔಷಧಿಗಳನ್ನು ಸೇವಿಸಿ, ಈ ಸಂಗೀತ ಥೆರಪಿ ಮಾಡುವುದರಿಂದ ಕಾಯಿಲೆಯನ್ನು ಶಮನ ಮಾಡಬಹುದು.

English summary

Music Therapy To Cure Pain | Effect Of music On Health | ನೋವು ನಿವಾರಣೆಗೆ ಮ್ಯಾಸಿಕ್ ಥೆರಪಿ | ಆರೋಗ್ಯದ ಮೇಲೆ ಸಂಗೀತದ ಪ್ರಭಾವ

Music therapy for arthritis is a well-accepted medical treatment and plays an effective role in healing various ailments and relaxing the muscles. Music is a universal language and is not necessary for one to understand music to gain positive effects of the therapy.
Story first published: Thursday, December 15, 2011, 10:54 [IST]
X
Desktop Bottom Promotion