For Quick Alerts
ALLOW NOTIFICATIONS  
For Daily Alerts

ಕಾಫಿ ಕೆಫಿನ್ ಸಾವಿಗೆ ಆಹ್ವಾನ ನೀಡಿದಂತೆ !

|
Caffin
ಬೆಳಿಗ್ಗೆ ಉದಾಸೀನದಿಂದ ಎದ್ದಾಗ ಒಂದು ಲೋಟ ಬಿಸಿ ಕಾಫಿ ಕುಡಿದರೆ ದೇಹಕ್ಕೆ ಉತ್ಸಾಹ, ನಮ್ಮ ನಿತ್ಯ ಚಟುವಡಿಕೆಗಳಲ್ಲಿ ತೊಡಗಿಸಿಕೊಳ್ಳವ ಹುರುಪು ಬರುತ್ತದೆ. ಇದು ಕಾಫಿಯಲ್ಲಿರುವ ಕೆಫಿನ್ ಅಂಶ ದೇಹಕ್ಕೆ ಹುರುಪುನ್ನು ತುಂಬುತ್ತದೆ. ಆದರೆ ಅದೇ ಕಾಫಿಯನ್ನು ಅತಿ ಹೆಚ್ಚು ಕುಡಿಯುವುದರಿಂದ ಕೆಫಿನ್ ಅಂಶ ದೇಹದಲ್ಲಿ ಅಧಿಕವಾಗಿ ಸಾವು ಕೂಡ ಉಂಟಾಗಬಹುದು.

ದೇಹಕ್ಕೆ ಕೆಫಿನ್ ವಿಷ:

ಕಾಫಿ ಕುಡಿಯುವುರಿಂದ ಮಾತ್ರ ದೇಹದಲ್ಲಿ ಕೆಫಿನ್ ಅಂಶ ಸೇರುವುದಿಲ್ಲ, ಕೆಲವು ಚಾಕಲೇಟ್, ಆಹಾರ, ಕೆಲವು ಮೆಡಿಕಲ್ ಡ್ರಗ್ ಗಳಲ್ಲಿ ಸಹ ಈ ರೀತಿಯ ಕೆಫಿನ್ ಅಂಶ ಇರುತ್ತದೆ. ಆದ್ದರಿಂದ ಆಹಾರ ವಸ್ತುಗಳನ್ನು ತೆಗೆಯುವಾಗ ಈ ರೀತಿಯ ಕೆಫಿನ್ ಅಂಶವಿರುವ ಆಹಾರದ ಕಡೆಗೆ ಗಮನಹರಿಸುವುದು ಒಳ್ಳೆಯದು.

ಕೆಫಿನ್ ವಿಷವನ್ನು ಗುರುತಿಸುವುದು ಹೇಗೆ?

ಕೆಫಿನ್ ಅಂಶ ದೇಹದಲ್ಲಿ ಇರುವಿಕೆಗೆ ಲಕ್ಷಣಗಳನ್ನು ನಿಗದಿತವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಈ ಕೆಳಗಿನ ಅಂಶಗಳಿಂದ ದೇಹದಲ್ಲಿ ಕೆಫಿನ್ ವಿಷವಾಗಿದೆ ಎಂದು ಅಂದಾಜು ಮಾಡಬಹುದಾಗಿದೆ.

1. ಕೈಗಳಲ್ಲಿ ನಡುಕ ಉಂಟಾಗಿ ಯಾವುದೇ ವಸ್ತಗಳನ್ನು ಕೈಯಲ್ಲಿ ಹಿಡಿಯಲು ಸಾಧ್ಯವಾಗದಿರುವುದು.

2. ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಳ್ಳುವುದು.

3. ವಾಂತಿ ಮಾಡಿದಾಗ ಅದರಲ್ಲಿ ಒಂದು ರೀತಿಯ ಕಪ್ಪು ದ್ರವ ಕಂಡುಬರುವುದು.

4. ಹೃದಯ ಬಡಿತ ಸಾಮಾನ್ಯಕ್ಕಿಂತ ಹೆಚ್ಚಾಗುವುದು.

5. ಒಂಥರಾ ಭ್ರಾಂತಿ ಉಂಟಾಗುವುದು, ನಿಮಗೆ ಸರಿಯಾಗಿ ಯೋಚಿಸಲು ಸಾಧ್ಯವಾಗದಿರುವುದು. ಇದೆಲ್ಲ ಕೆಫಿನ್ ನಿಮ್ಮ ತಲೆಯ ನರದ ಮೇಲೆ ಬೀರಿರುವ ಪರಿಣಾಮದಿಂದ ಈ ರೀತಿ ಉಂಟಾಗುತ್ತದೆ.

6. ಡಯೆರಿಯಾ ಕೂಡ ಅದರ ಒಂದು ಲಕ್ಷಣವಾಗಿದೆ.

7. ತೀವ್ರವಾದ ಬಾಯಾರಿಕೆ ಮತ್ತು ಪದೆ ಪದೆ ಮೂತ್ರ ವಿಸರ್ಜನೆ ಹೋಗಬೇಕೆನಿಸುವುದು ಸಹ ಕೆಫಿನ್ ವಿಷ ದೇಹದ ಮೇಲೆ ಬೀರುವ ಪರಿಣಾಮವಾಗಿದೆ.

ಈ ರೀತಿಯ ಲಕ್ಷಣಗಳು ಕಂಡು ಬಂದಲ್ಲಿ ವೈದ್ಯರನ್ನು ಸಂಪರ್ಕಿಸಿ, ಅವರು ನಿಮ್ಮನ್ನು ವಾಂತಿ ಮಾಡುವಂತೆ ಮಾಡಿ ಅಥವಾ ಹೊಟ್ಟೆಯನ್ನು ಕ್ಲೀನ್ ಮಾಡುವುದರಿಂದ ಈ ಕೆಫಿನ್ ವಿಷವನ್ನು ತೆಗೆಯುತ್ತಾರೆ. ಒಮ್ಮೆ ಕೆಫಿನ್ ವಿಷವನ್ನು ತೆಗೆದ ಮೇಲೆ ಮತ್ತೊಮ್ಮೆ ಕೆಫಿನ್ ಅಂಶವನ್ನು ತೆಗೆದುಕೊಳ್ಳುವುದು ಅಪಾಯವನ್ನು ಆಹ್ವಾನಿಸಿದಂತೆ.

English summary

Caffeine Poission Will Cause Death | Coffee And Caffeine Poison | ಕೆಫಿನ್ ನಿಂದ ಸಾವು ಉಂಟಾಗುವುದು | ಕಾಫಿ ಮತ್ತು ಕೆಫಿನ್ ವಿಷ

There is a medical condition for caffeine overdose; it is called Caffeine Poisoning. This condition has very serious consequences and can even lead to death! It is chemically no better than any other drug. Like all other stimulants caffeine too has negative effects. Take a look.
Story first published: Friday, October 14, 2011, 15:37 [IST]
X
Desktop Bottom Promotion